ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಲೋವರ್‌ಗ್ರೇಡ್ ವಿಭಾಗದಲ್ಲಿ 4 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 11 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಭಾಗವಹಿಸಿದ್ದು 10 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 11 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಶೇರಾಇವರುತರಬೇತಿ ನೀಡಿದ್ದರು. ಲೋವರ್‌ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು: ಗೌತಮ್‌ಎಸ್. (ನೆಹರುನಗರ ನಿವಾಸಿ ಗಣೇಶ್ ಪೂಜಾರಿ ಮತ್ತು ಮಮತ ದಂಪತಿಗಳ ಪುತ್ರ), ಜನನಿ […]
ಬಾಲಭವನ ಸೊಸೈಟಿ ಕಬ್ಬನ್, ಉದ್ಯಾನವನ, ಬೆಂಗಳೂರು ಹಾಗೂ ಜಿಲ್ಲಾ ಬಾಲಭವನ ಸಮಿತಿ, ಬೆಳಗಾವಿ ಜಿಲ್ಲೆ ಇವರು ಬೆಳಗಾವಿ ಜಿಲ್ಲೆಯಲ್ಲಿ ನಡೆಸಿದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ರಾಮ್ ಪ್ರಸಾದ್ ಸೃಜನಾತ್ಮಕ ಕಲಾ ವಿಭಾಗದಲ್ಲಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಭವನ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಅಚಿಜಲಿ ನಿಂಬಾಳ್ಕರ್‌ರವರು ಪ್ರಶಸ್ತಿ ನೀಡಿ ಗೌರವಿಸಿದರು. ಇವರು ಕೆ.ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ ಪುತ್ರ ಇವರಿಗೆ ಶಾಲಾ […]
‘ಉತ್ತಮ ಪೂರ್ವ ತಯಾರಿಯೊಂದಿಗಿನ ಅಧ್ಯಯನವು ಪರೀಕ್ಷೆಯ ಬಗೆಗಿನ ಆತಂಕವನ್ನು ದೂರ ಮಾಡುತ್ತದೆ’ ಎಂದು ಸವಣೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ವಿ ಸೂರ್ಯನಾರಾಯಣ ಇವರು ನುಡಿದರು. ವಿವೇಕಾನಂದ ಕನ್ನಡ ಶಾಲಾ 10 ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಅಧ್ಯಯನದೊಂದಿಗೆ ದೈನಂದಿನ ಚಟುವಟಿಕೆಗಳ ಹಾಗೂ ಆಹಾರ ಕ್ರಮದ ಬಗ್ಗೆ ಗಮನ ಹರಿಸಬೇಕಾದ ಅಂಶಗಳನ್ನು ತಿಳಿಸಿದರು. ಮಕ್ಕಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪರೀಕ್ಷೆಯನ್ನು ಶತ್ರುವಂತೆ ಕಾಣದೆ ಮಿತ್ರನಂತೆ ಕಾಣಬೇಕು ಎನ್ನುವ ಕಿವಿ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಮಹಾರಾಷ್ಟ್ರರಾಜ್ಯದ ಪುಣೆ ನಗರದಲ್ಲಿ ಫೆಬ್ರವರಿ 4 ರಿಂದ 10 ರವರೆಗೆ ನಡೆಯುವ ರಾಷ್ಟ್ರಮಟ್ಟದ ಸ್ಕೂಲ್‌ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೃತಿ.ಜಿ.ಶೆಟ್ಟಿ (ದರ್ಬೆತ್ತಡ್ಕ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ಶೆಟ್ಟಿ ದಂಪತಿಗಳ ಪುತ್ರಿ), ಕು. ರುಚಿತಾ (ಪೆರ್ಲಂಪಾಡಿ ಕುದ್ಕುಳಿ ಮಂಜುನಾಥ ಮತ್ತು ಹರ್ಷಕುಮಾರಿ ದಂಪತಿಗಳ ಪುತ್ರಿ), ಗಾಯತ್ರಿ.ಕೆ.ಎನ್ (ಕೇಪು ಕಲ್ಲಪಾಪು ನಿರಂಜನ್ ಕೆ ಮತ್ತು ಸುನಂದ.ಕೆ.ಎನ್ ದಂಪತಿಗಳ ಪುತ್ರಿ), ವಿಭಾ ಯು.ಎಸ್ (ಶಿಶಿಲದ ಉಮೇಶ್‌ಕುಲಾಲ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ), ನಿಶ್ಮಿತಾ […]
ವಿವೇಕಾನಂದ ಕಾಲೇಜಿನ ’ಪಾಂಚಜನ್ಯ’ ಆಕಾಶವಾಣಿ ಕೇಂದ್ರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ’ಬಭ್ರುವಾಹನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ – ಭಾಗವತರಾಗಿ ಚಿನ್ಮಯ ಕಲ್ಲಡ್ಕ, ಚೆಂಡೆವಾದನದಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಅಚಿಂತ್ಯ ಕೃಷ್ಣ 8ನೇ ತರಗತಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಜುನನಾಗಿ – ಪ್ರಣಮ್ಯ 7ನೇ ತರಗತಿ, ಹಂಸಧ್ವಜನಾಗಿ – ಭವಿಷ್ 6ನೇ ತರಗತಿ, ಬಭ್ರುವಾಹನನಾಗಿ – ಶ್ರೀಹರಿ – 7ನೇ ತರಗತಿ, ಕೃಷ್ಣನಾಗಿ ಆದಿತ್ಯನಾರಾಯಣ 6ನೇ ತರಗತಿ, ಚಿತ್ರಾಂಗದೆಯಾಗಿ ಕು. ಧಾತ್ರಿ ಆರ್ ರೈ 5ನೇ […]
ಇಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ರಕ್ಷಿಸಲು ಕಲೆಗಳು ಸಹಾಯಮಾಡುತ್ತವೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗಾನ – ನೃತ್ಯ – ಯಕ್ಷ ಸಂಭ್ರಮ 2017 ರ ಅಧ್ಯಕ್ಷೀಯ ನೆಲೆಯಲ್ಲಿ ಮೇಲಿನ ಮಾತುಗಳನ್ನು ರಿಜಿಸ್ಟಾರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರಿನ ಶ್ರೀ ಚಂದ್ರಹಾಸ ರೈಯವರು ನುಡಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಚಿದಾನಂದ ಕಾಮತ್ ಹಾಗೂ ವಿದುಷಿ ಶ್ರೀಮತಿ ಶೋಭಿತಾ ಸತೀಶ್‌ರವರು ಸಂದರ್ಬೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ […]
ವಿವೇಕಾನಂದರ 154 ನೇ ಜನ್ಮ ದಿನಾಚರಣೆ ಗುರುವಾರ ನಡೆಯಿತು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ವಿದ್ಯಾ ಅನಿಲ್ ರವರು ದೀಪ ಪ್ರಜ್ವಲಿಸಿ, ಎಲ್ಲಾ ಶಿಕ್ಷಕರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಫಾರ್ಚನೆಗೈಯುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪ್ರಾಥಮಿಕ ಮುಖ್ಯಗುರುಗಳಾದ ನಳಿನಿ ಮಾತಾಜಿ, ಚಿತ್ರಕಲಾಶಿಕ್ಷಕರಾದ ಶ್ರೀ ರುಕ್ಮಯ, ಸಹಶಿಕ್ಷಕರಾದ ನಮಿತಾ ಹಾಗೂ ಮಮತಾ ಉಪಸ್ಥಿತರಿದ್ದರು. ವಿವೇಕಾನಂದರ ಬಾಲ್ಯ ಹಾಗೂ ಶಿಕ್ಷಣದ ಕುರಿತಾಗಿ ವಿದ್ಯಾರ್ಥಿಗಳು ಭಾಷಣ ಮಾಡಿದರು. 1 ನೇ ತರಗತಿಯ ಪುಟಾಣಿಗಳು ವಿವೇಕಾನಂದರ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿವೇಕಾನಂದರ ಜೀವನದ […]
ಮಂಗಳೂರಿನ ಕದ್ರಿ ಬಾಲಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಪ್ರಕ್ರಿಯೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಮ್ ಪ್ರಸಾದ್ (ಕೆ.ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ ಪುತ್ರ) ಸೃಜನಾತ್ಮಕ ಕಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಯೂತ್ ಯೋಗ ಫೆಡರೇಶನ್ ಹಾಗೂ ಶ್ರೀಲಂಕಾ ಯೂತ್ ಯೋಗ ಫೆಡರೇಶನ್‌ರವರ ಸಹಯೋಗದೊಂದಿಗೆ ಶ್ರೀಲಂಕಾದ ವಾರಿಯಪೋಲದಲ್ಲಿ ಏರ್ಪಡಿಸಿದ್ದ ಭಾರತ ಶ್ರೀಲಂಕಾ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರತೀಕ್ಷಾ ಆರ್ ರೈ (ಮದಕ ರಾಜೇಶ್ ರೈ ಮತ್ತು ಪ್ರಪುಲ್ಲ ರೈ ದಂಪತಿಗಳ ಪುತ್ರಿ) – ಪ್ರಥಮ, ಹೇಮಶ್ರೀ (ಮುದಲಾಜೆ ಪುರುಷೋತ್ತಮ ಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ)- ಪ್ರಥಮ, ಭವಿಷ್(ತಾರಿಗುಡ್ಡೆ ಬಾಲಕೃಷ್ಣ ಮತ್ತು ವೀಣಾ ದಂಪತಿಗಳ ಪುತ್ರ) – ದ್ವಿತೀಯ, ರಾಜೇಶ್ ಗೌಡ […]
ಪುತ್ತೂರಿನ ಶಿವರಾಮ ಕಾರಂತ ಬಾಲವನದಲ್ಲಿ ನಡೆದ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಪ್ರಶಸ್ತಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅರ್ಪಿತಾ ಸಿ.ಪಿ (ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ) – ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ – ಪ್ರಥಮ, ರಾಮ್ ಪ್ರಸಾದ್ (ಕೆ.ಮಲ್ಲೇಶ್‌ಕುಮಾರ್ ಮತ್ತುಅನುರಾಧ ಕೆ ದಂಪತಿಗಳ ಪುತ್ರ) – ಸೃಜನಾತ್ಮಕ ಕಲೆಯಲ್ಲಿ – ಪ್ರಥಮ, ಸಿಂಚನಾ ಟಿ. – (ಉರಿಮಜಲು ಬಾಲಸುಬ್ರಹ್ಮಣ್ಯ ಭಟ್ ಮತ್ತು ರೇಶ್ಮಾದಂಪತಿಗಳ ಪುತ್ರಿ), ಸೃಜನಾತ್ಮಕ ಬರವಣಿಗೆಯಲ್ಲಿ -ಪ್ರಥಮ, […]
ಶಾಂತಿವನ ಟ್ರಸ್ಟ್ ರಿ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಧರ್ಮಸ್ಥಳದಲ್ಲಿ ನಡೆಸಿದ ’ಜ್ಞಾನ ಸುಧಾ’ ಪುಸ್ತಕ ಆಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿರಾಮ್ ಪ್ರಸಾದ್ (ಕೆ.ಮಲ್ಲೇಶ್‌ಕುಮಾರ್ ಮತ್ತು ಅನುರಾಧ ಕೆ. ದಂಪತಿಗಳ ಪುತ್ರ) ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ತರಬೇತಿ ನೀಡಿರುತ್ತಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಶರ್ಮ (ಸಾಲ್ಮರ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿಗಳ ಪುತ್ರ) 17ರ ವಯೋಮಾನದ ವಿಭಾಗದ 45 ಕೆ.ಜಿ. ಕುಮಿಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ವಿಘ್ನೇಶ್ ಆರ್. (ಬಪ್ಪಳಿಗೆ ರಾಮಕೃಷ್ಣ ಹಾಗೂ ಜಯಲಕ್ಷ್ಮೀ ದಂಪತಿಗಳ ಪುತ್ರ) 17 ರ ವಯೋಮಾನದ ವಿಭಾಗದ 60 ಕೆ.ಜಿ. ಕುಮಿಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಇವರಲ್ಲಿ ಸಾತ್ವಿಕ್ ಶರ್ಮ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುವ ಸ್ಕೂಲ್ ಗೇಮ್ಸ್ […]
ಎಳವೆಯಿಂದಲೇ ನಿರ್ದಿಷ್ಟ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಬದ್ಧತೆ, ಸಮಯಪಾಲನೆ, ಆರೋಗ್ಯವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ನಿವೃತ್ತ ಯುವಜನ ಮತ್ತು ಸೇವಾ ಕ್ರೀಡಾಧಿಕಾರಿಯಾದ ಶ್ರೀ.ಬಿ.ಕೆ ಮಾಧವ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಶಾಲೆಯ ಶ್ರೀಡಾಕೂಟದ ಉದ್ಫಾಟಕರಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಉದ್ಫಾಟಕರಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಂದನಾ ಸ್ವೀಕಾರ ಮಾಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಬಾಲಚಂದ್ರ ಬಾರ್ತಿಕುಮೇರು ಇವರು ಈ ಶಾಲೆಯ ಕ್ರೀಡಾಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಸಾಧನೆಗೈದು ಗುರುತಿಸಿಕೊಂಡಿರುವುದು ನಮಗೆಲ್ಲರಿಗೂ […]
ಸಮಾಜದಲ್ಲಿ ಇತರರು ತಮ್ಮನ್ನು ಗುರುತಿಸುವಂತಾಗಲು ವಿದ್ಯಾರ್ಥಿಗಳು ಕುಶಲತೆ ಮತ್ತು ಪರಿಶ್ರಮವೆರಡನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಸ್ತುತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು. ನಿಖಿಲ ಸುಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಮುಖ್ಯಾತಿಥಿಯಾಗಿ ಆಗಮಿಸಿ ಮಾತನಾಡಿದರು. ಇನ್ನೊರ್ವ ಮುಖ್ಯ ಅತಿಥಿಯಾದ ದ.ಕ ಜಿಲ್ಲಾ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಮಾತನಾಡುತ್ತಾ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಸಾಧಕರಿಗೆ ವೇದಿಕೆ […]
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ವಿವೇಕ ಉದ್ಯೋಗ ಮೇಳ 2017ನ್ನು ಆಯೋಜಿಸಿದೆ. ಇದರಲ್ಲಿ 100 ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯೋಗ ಸಂಸ್ಥೆಗಳು ಭಾಗವಹಿಸಲಿವೆ. ಉದ್ಯೋಗಾಕಾಂಕ್ಷಿಗಳ ನೋಂದಣಿ ಕಛೇರಿಯು ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 3-12-2017 ನೇ ಶನಿವಾರದಂದು ಅಪರಾಹ್ನ 2.30ಕ್ಕೆ ಉದ್ಫಾಟನೆಗೊಳ್ಳಲಿದೆ. ಉದ್ಯೋಗಾಕಾಂಕ್ಷಿಗಳು ತಮ್ಮ ಸೂಕ್ತ ದಾಖಲೆ ಪತ್ರಗಳೊಂದಿಗೆ ಶನಿವಾರ ಅಪರಾಹ್ನ 2.30 ಕ್ಕೆ ಶಾಲಾ ಆವರಣದಲ್ಲಿ ಉಪಸ್ಥಿತರಿರಬೇಕಾಗಿ ವಿನಂತಿ.
ಯಕ್ಷ ಚಿಣ್ಣರ ಬಳಗ ತೆಂಕಿಲ ಪುತ್ತೂರು ಇಲ್ಲಿನ ಯಕ್ಷಗಾನ ತಂಡವು ಮಂಗಳೂರಿನ ಬೊಳಾರಿನ ಸಿಟಿ ಬೀಚ್‌ನಲ್ಲಿ ಭಾರತೀಯ ನೌಕದಳದ ನಿವೃತ್ತ ಯೋಧರ ಸಂಘದ ಕಾರ್ಯಕ್ರಮದಲ್ಲಿ ’ಮಹಿಷ ಮರ್ಧಿನಿ’ ಎಂಬ ಪುಣ್ಯಭಾಗವನ್ನು ಆಡಿ ತೋರಿಸಿದರು. ತಂಡದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ನಾಟ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರು ಸಹಕರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಮಂಗಳೂರಿನ ಕಪಿತಾನಿಯೋ ಶಾಲೆಯಲ್ಲಿ ನಡೆಸಿದ ಜಿಲ್ಲಾಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ಇವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 19-11-2016 ರಂದು ನಡೆದ ವಿವೇಕಾನಂದ ಕನ್ನಡ, ಆಂಗ್ಲ, ಶ್ರೀರಾಮ ಕಲ್ಲಡ್ಕ, ಶ್ರೀದೇವಿ ಪುಣಚ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ‘ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರ’ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀರಾಮಕೃಷ್ಣ ಪ್ರೌಢಶಾಲಾ ಸಹಶಿಕ್ಷಕಿಯಾದ ಶ್ರೀಮತಿ ವಸಂತಿಯವರು ಮಾತನಾಡಿ ಶಿಕ್ಷಕರಿಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಆಯೋಜಿಸಿದ ಕಾರ್ಯ ಶ್ಲಾಘನೀಯ. ಶಿಕ್ಷಕರ ನಿರಂತರ ಕಲಿಕೆ ಅತೀ ಅವಶ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ. ಯವರು […]
ಅಖಿಲ ಭಾರತ ಯೋಗ ಸಾಂಸ್ಕೃತಿಕ ಫೆಡರೇಶನ್ (ಆಯುಷ್) ಇವರು ಚೆನ್ನೈನಲ್ಲಿ ದಿನಾಂಕ 13-11-2016 ರಂದು ಅಖಿಲ ಭಾರತ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಸದ್ರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಈ ಕೆಳಕಂಡ ಮಕ್ಕಳು ಅಖಿಲ ಭಾರತ ಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಲ್ಲದೆ ಶಾಲೆಗೆ ಸಮಗ್ರ ಪ್ರಶಸ್ತಿ ತಂದಿರುತ್ತಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು : ವೈಶಾಲಿ (ಕೃಷ್ಣಪ್ಪ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ), ಹೇಮಶ್ರೀ- ( ಮುದಲಾಜೆ ನಿವಾಸಿ ಪುರುಷೋತ್ತಮ […]
ಎಂ.ಎಸ್ ಪೌಂಡೇಶನ್ ಮತ್ತುಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಬಿರುಮಲೆ ಬೆಟ್ಟದಲ್ಲಿ ನಡೆದ’ಪುಟಾಣಿ ಮೇಳ’ದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 8 ರಿಂದ 10 ನೇ ತರಗತಿ ವಿಭಾಗದಲ್ಲಿ ಅರ್ಪಿತಾ ಸಿ.ಪಿ. (ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.)- ದೇಶಭಕ್ತಿಗೀತೆ – ಪ್ರಥಮ, ಕೀರ್ತಿಕುಡ್ವ (ಕೂರ್ನಡ್ಕ ವಾಸುದೇವ ಪ್ರಭು, ವಂದನಾ ಕುಡ್ವ ದಂಪತಿಗಳ ಪುತ್ರಿ)- ತೃತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಶ್ವಂಭರ (ಪೋಳ್ಯ ನಿವಾಸಿ ಶ್ರೀ ಕೃಷ್ಣ ಭಟ್ ಮತ್ತು […]
ಕರ್ನಾಟಕ ಗಮಕ ಸಾಹಿತ್ಯ ಪರಿಷತ್ತು ಪುತ್ತೂರು ವಿಭಾಗದ ಆಶ್ರಯದಲ್ಲಿ ಬೆಳಿಯೂರುಕಟ್ಟೆ ಪದವಿ ಪೂರ್ವ ಕಾಲೇಜು ಇಲ್ಲಿ ’ಗಮಕ ವಾಚನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮೋಹನ್ ಕಲ್ಲೂರಾಯ ಮಧೂರು ಮತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರವರು ಉಪಸ್ಥಿತರಿದ್ದು ಗಮಕ ವಾಚನದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ’ಕರ್ಣಪರ್ವ’ದಿಂದ ಆಯ್ದ ’ಕೌರವೇಂದ್ರನ ಕೊಂದೆ ನೀನು’ ಎಂಬ ಕಥಾ ಭಾಗದ ವಾಚನ, ಪ್ರವಚನ ನಡೆಯಿತು. ವಾಚನವನ್ನು ವಿವೇಕಾನಂದ […]
ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಸುಳ್ಯದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ಒಟ್ಟು 23 ಪ್ರಶಸ್ತಿಗಳನ್ನು 13 ಕ್ರೀಡಾಪಟುಗಳು ಪಡೆದು 10 ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಮತ್ತೊಮ್ಮೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದರೊಂದಿಗೆ ಪುತ್ತೂರು ತಾಲೂಕಿನ ಗರಿಮೆಯನ್ನು ಹೆಚ್ಚಿಸಿದೆ. ಇವರಿಗೆ ಶ್ರೀ ಪ್ರೇಮನಾಥ್ ಶೆಟ್ಟಿ, ಶ್ರೀ ದಾಮೋದರ್, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಮಮತಾ ತರಬೇತಿ ನೀಡಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ […]
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೈಂಟ್ ವಿಕ್ಟರ್‍ಸ್ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ – ರುಕ್ಮಯ – ಪ್ರಥಮ, ಮತ್ತು ಪ್ರಾಥಮಿಕ ವಿಭಾಗದ ವಿಜ್ಞಾನ ರಸಪ್ರಶ್ನೆಯಲ್ಲಿ ಶ್ರೀಮತಿ ಅನುಷಾ – ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಪ್ರಾಥಮಿಕ ವಿಭಾಗದ ಗಾಯನ ಸ್ಪರ್ಧೆಯಲ್ಲಿ -ಚಂದ್ರಶೇಖರ್ – ದ್ವಿತೀಯ, ಪ್ರಾಥಮಿಕ ವಿಭಾಗದ ಪಾಠೋಪಕರಣಗಳ ತಯಾರಿಕೆ ವಿಭಾಗದಲ್ಲಿ -ಕು. ಲಕ್ಷ್ಮೀ- ತೃತೀಯ, ಪ್ರೌಢಶಾಲಾ ವಿಭಾಗದ […]
ವಿದ್ಯಾಭಾರತಿ ಆಶ್ರಯದಲ್ಲಿ ಮಧ್ಯಪ್ರದೇಶದ ಮಸ್ಸುರ್ ನಗರದಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್ 50 ಮೀ ಬ್ರೆಸ್ಟ್ ಸ್ಟ್ರೋಕ್ – ಪ್ರಥಮ ಮತ್ತು 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಪ್ರಥಮ ಹಾಗೂ 200 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಪಡೆದು ಗುಜರಾತಿನ ರಾಚ್‌ಕೋಟ್‌ನಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ಇವನು ಪರ್ಲಡ್ಕ ನಿವಾಸಿ ಶಿವ ಗೌಡ ಮತ್ತು ನಳಿನಿ ದಂಪತಿಗಳ ಪುತ್ರ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೀದರ್‌ನಲ್ಲಿ ನಡೆದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗಾಯತ್ರಿ (ಉರಿಮಜಲು ಲಿಂಗಪ್ಪ ಗೌಡ ಮತ್ತು ಭವಾನಿ ದಂಪತಿಗಳ ಪುತ್ರಿ) ಮತ್ತು ವಿನುಶ್ರೀ (ಬಲ್ನಾಡು ವೀರಪ್ಪ ಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ) ಪ್ರೌಢಶಾಲಾ ವಿಭಾಗದಿಂದ ಮತ್ತು ಯಶಸ್ವಿ (ಸಾಜ ರಮೇಶ್ ನಾಯಕ್ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ) ಮತ್ತು ಧನ್ಯಶ್ರೀ (ಆಲಂಕಾರು ಪಜ್ಜಡ್ಕ ರಾಮಕೃಷ್ಣ ಗೌಡ ಮತ್ತು ಮೋಹಿನಿ ದಂಪತಿಗಳ ಪುತ್ರಿ) ಪ್ರಾಥಮಿಕ ಶಾಲಾ […]
ಧರ್ಮಸ್ಥಳ ಶಾಂತಿವನ ಟ್ರಸ್ಟ್ ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಶ್ರಯದಲ್ಲಿ ಜ್ಞಾನ ಗಂಗಾ/ಜ್ಞಾನ ಸುಧಾ ನೈತಿಕ ಮೌಲ್ಯಾಧಾರಿತ ಪುಸ್ತಕ ಆಧಾರಿತ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮುಖೇಶ್ ಕೃಷ್ಣ(ಬಪ್ಪಳಿಗೆ ಕೃಷ್ಣಪ್ಪ ಗೌಡ ಮತ್ತು ಭಾರತಿ ದಂಪತಿಗಳ ಪುತ್ರ) ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ -ಪ್ರಥಮ, ರಾಮ್ ಪ್ರಸಾದ್(ರಾಧಾಕೃಷ್ಣ ಮಂದಿರದ ಬಳಿಯ ನಿವಾಸಿ ಕೆ.ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ ಪುತ್ರ.) ಪ್ರೌಢಶಾಲಾ ವಿಭಾಗದ ಚಿತ್ರಕಲೆಯಲ್ಲಿ […]
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆರೋಗ್ಯ ವಿಷಯದಲ್ಲಿ ಆಶ್ರಯ್ ಪಿ.ವಿ (ನೈತಾಡಿ ವಿಶ್ವನಾಥಗೌಡ ಮತ್ತು ರೇವತಿ ಬಿ. ದಂಪತಿಗಳ ಪುತ್ರ) ಮತ್ತು ಅಕ್ಷಯ್ ರೈ (ನೀರ್ಪಾಡಿ ಜಗನ್ನಾಥ ರೈ ಮತ್ತು ಮೋಹಿನಿ ಜೆರೈ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಮತ್ತು ನಿತ್ಯಜೀವನದಲ್ಲಿ ಗಣಿತದ ಪರಿಹಾರ ವಿಷಯದಲ್ಲಿ ತೀರ್ಥರಾಜ್ (ನರಿಮೊಗರು ಶಿವರಾಮ ಗೌಡ ಮತ್ತು ರೇವತಿ ದಂಪತಿಗಳ […]
ವಿದ್ಯಾಭಾರತಿ ಕರ್ನಾಟಕ ಮತ್ತು ರಾಷ್ಟ್ರೋತ್ತಾನ ವಿದ್ಯಾಕೇಂದ್ರ ಧಾರವಾಡ ಇದರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಮತ್ತು ದಕ್ಷಿಣ ಕ್ಷೇತ್ರೀಯ ಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ 17 ರ ವಯೋಮಾನದ ಬಾಲಕಿಯರ ಮತ್ತು 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದು 20 ವಿದ್ಯಾರ್ಥಿಗಳು ಅಖಿಲಾ ಭಾರತೀಯ ವಿದ್ಯಾಭಾರತಿಯ ಕ್ರೀಡಾಕೂಟ ಒರಿಸ್ಸಾದ ಭುವನೇಶ್ವರದಲ್ಲಿ ನವೆಂಬರ್ 23 ರಿಂದ 27 ರವರೆಗೆ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳು, ಶ್ರದ್ಧಾ ಎಂ. (ನೆಹರುನಗರ ನಿವಾಸಿ ಮನೋಜ್‌ಕುಮಾರ್ ಮತ್ತು […]
ದಿನಾಂಕ 15-10-2016 ಹಾಗೂ 16-10-2016 ರಂದು ನಡೆದ ವಿದ್ಯಾಭಾರತಿಯ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯು ಬೆಂಗಳೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ -ನವಮಿ ಡಿ. (ದಾಮೋದರ್ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ), ವೈಶಾಲಿ (ಕೃಷ್ಣಪ್ಪಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ), ಭರತ್ (ಪುಷ್ಪರಾಜ್ ಮತ್ತು ವಾರಿಜ ದಂಪತಿಗಳ ಪುತ) ರಾಜೇಶ್ (ಬಾಬು ಗೌಡ ಮತ್ತು ರೇವತಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶದ ಗಜಿಯಾಬಾದ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ವಿದ್ಯಾಭಾರತಿಕರ್ನಾಟಕ ವತಿಯಿಂದ ನಡೆದರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದಿರುತ್ತಾರೆ. 17 ವರ್ಷದ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಂತಹ 8 ತಂಡಗಳಲ್ಲಿ ಈ ವಿಭಾಗ ಸ್ಪರ್ಧಿಸಿದ್ದು ಶಾಲಾ ತಂಡ ಪ್ರಥಮ ಸ್ಥಾನದೊಂದಿಗೆ ನವೆಂಬರ್ ನಲ್ಲಿಛತ್ತೀಸ್‌ಗಡ್‌ನಲ್ಲಿ ನಡೆಯಲಿರುವ ಸ್ಕೂಲ್‌ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ತರಬೇತುದಾರರಾಗಿ ಹಾಗೂ ಕ್ರೀಡಾಕೂಟದಲ್ಲಿ ಧನ್ಯಶ್ರೀ (ಅಜೇಯನಗರ ನಿವಾಸಿ […]
ತಿರುವನಂತಪುರಂ ಪಾರಶಾಲದ ಸರಸ್ವತಿ ವಿದ್ಯಾಪೀಠ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ರಾಷ್ಟ್ರಮಟ್ಟದ ೧೪ರ ಕೆಳಗಿನ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ. ಭಾರತದ ವಿವಿಧ ರಾಜ್ಯಗಳಿಂದ ಬಂದಂತಹ 8 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಒಲಿಂಪಿಯನ್ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಉದ್ಫಾಟಕರಾಗಿ ಆಗಮಿಸಿದ್ದರು. ತಂಡದಲ್ಲಿ ದೀಕ್ಷಿತಾ, ಶರಣ್ಯ, ಧನ್ಯಶ್ರೀ, ಸಿಂಚನಾ, ಧನ್ಯಶ್ರೀ, ರಚನಾ, ಶ್ವೇತಾ, ಮೋಕ್ಷಿತಾ, ರಶ್ಮಿ, ಯಶಸ್ವಿ, ಸನ್ಮಿತಾ ಭಾಗವಹಿಸಿದ್ದು ನವೆಂಬರ್ […]
ಮಂಗಳೂರಿನ ಮಂಗಳ ಈಜುಕೊಳದಲ್ಲಿ ನಡೆದಂತಹ ವಿದ್ಯಾಭಾರತಿ ಪ್ರಾಂತೀಯ ಮಟ್ಟದ ಈಜು ಸ್ಪರ್ಧೆ ಮತ್ತು ಕ್ಷೇತ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್ 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಚಿನ್ನದ ಪದಕ ಹಾಗೂ 200 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಚಿನ್ನದ ಪದಕ ಹಾಗೂ 100 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಚಿನ್ನದ ಪದಕವನ್ನು ಪಡೆದು ಮುಂದೆ ನಡೆಯುವಂತಹ ವಿದ್ಯಾಭಾರತಿ ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆ ಆಗಿರುತ್ತಾನೆ. ಇವನು ಪರ್ಲಡ್ಕ ನಿವಾಸಿ ಶಿವಗೌಡ ಮತ್ತು ನಳಿನಿ ದಂಪತಿಗಳ ಪುತ್ರ.
ಭಾರತೀಯ ಸಂಸ್ಕೃತಿಯ ಅಡಿಪಾಯವೇ ಸುಸಂಸ್ಕೃತ, ಸಂಸ್ಕಾರಯುತವಾದ ಕುಟುಂಬ. ದಂಪತಿಗಳಿಗೆ ಅಗತ್ಯವಾದ ಸೂಕ್ತ ಮಾರ್ಗದರ್ಶನವು ಹಿರಿಯರಿಂದ ದೊರೆತಾಗ ಸುಖೀ ಸಂಸಾರವು ಸಮಾಜದಲ್ಲಿ ನೆಲೆಗೊಳ್ಳುತ್ತದೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ನವದಂಪತಿ ಸಮಾವೇಶ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸು. ರಾಮಣ್ಣ ಇವರು ನುಡಿದರು. ಇವರು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖ್. ಅಕ್ಟೋಬರ್ 2 ರಂದು ನಡೆದ ಈ ಸಮಾವೇಶವನ್ನು ಹಿರಿಯ ದಂಪತಿ ನೆಲೆಯಲ್ಲಿ ಆಗಮಿಸಿದ ಹಿರಿಯ ಸಾಹಿತಿ ಶ್ರೀಯುತ ವಿ.ಬಿ. ಅರ್ತಿಕಜೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ, […]
ವಿದ್ಯಾ ಭಾರತಿ ಅಖಿಲ ಭಾರತೀಯ ಕಬಡ್ಡಿ ಪಂದ್ಯಾಟವು ಚೆನ್ನೈಯಲ್ಲಿ ನಡೆಯಲಿದ್ದು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲಾ ಬಾಲಕಿಯರ ವಿಭಾಗ ಆಯ್ಕೆಯಾಗಿ ವೇಣೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತದೆ. ಇವರಿಗೆ ಶ್ರೀ ಮಾಧವ ಬಿ. ಕೆ ( ಎನ್.ಐ.ಎಸ್‌ತರಬೇತುದಾರರು) ತರಬೇತಿ ನೀಡಿರುತ್ತಾರೆ. ಶಾಲಾ ತಂಡದಲ್ಲಿ, ಗಾಯತ್ರೀ (ಲಿಂಗಪ್ಪಗೌಡ, ಭವಾನಿ ದಂಪತಿಗಳ ಪುತ್ರಿ), ವಿನುಶ್ರೀ (ವೀರಪ್ಪ, ಸುಶೀಲ ದಂಪತಿಗಳ ಪುತ್ರಿ), ಕಾವ್ಯ ಹೆಚ್.ಟಿ (ತಮ್ಮಯ್ಯ, ಜಾನಕಿ ದಂಪತಿಗಳ […]
ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲಾಘಟಕ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ವಿಭಾಗದ 14ರ ವಯೋಮಾನದ ಬಾಲಕಿಯರು ಮತ್ತು ಬಾಲಕರು ಹಾಗೂ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಂಡ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರು ಮತ್ತು ಶ್ರೀ ಪ್ರೇಮನಾಥ ಶೆಟ್ಟಿ ಎಡಪದವು ಇವರು ತರಬೇತಿ ನೀಡಿರುತ್ತಾರೆ.
ಅತ್ತಾವರ ಸರೋಜಿನಿ ಮಧುಸೂದನ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿ, ಸೆ. 24 ರಂದು ನಡೆದ 2016-17 ನೇ ಸಾಲಿನ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಣವ. ಕೆ (ಕೆದಿಲ ನಿವಾಸಿ ಕೇಶವ ಪ್ರಸಾದ್ ಮತ್ತು ಪ್ರತಿಮಾ.ಕೆ ದಂಪತಿಗಳ ಪುತ್ರ) ಮತ್ತು ತೀರ್ಥರಾಜ್.ಕೆ (ನರಿಮೊಗರು ನಿವಾಸಿ ಶಿವರಾಮ ಗೌಡ ಮತ್ತು ರೇವತಿ ದಂಪತಿಗಳ ಪುತ್ರ) ರವರ ತಂಡವು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಜಿಲ್ಲಾಮಟ್ಟಕ್ಕೆ ಮತ್ತು ವಿದ್ಯಾಭಾರತಿಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ತಂಡ ಮತ್ತು ವಿದ್ಯಾಭಾರತಿಯ 14 ವರ್ಷದೊಳಗಿನ 8 ನೇ ತರಗತಿಯ ಬಾಲಕಿಯರ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ತಂಡ. ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಮತ್ತು ವಿದ್ಯಾಭಾರತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಖೋ-ಖೋ ತಂಡ.
ದಿನಾಂಕ 19-9-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೂತನ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆ ನಡೆಯಿತು. ಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿ ಇವರು ಮಾತನಾಡಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಜೊತೆಯಾಗಿ ಶ್ರಮಿಸಬೇಕು ಎಂದು ಹೇಳಿದರು. ಶಾಲೆಯ ನೂತನ ಸಂಚಾಲಕರಾಗಿ ಆಯ್ಕೆಯಾದ ವಿನೋದ್ ಕುಮಾರ್ ರೈ ಗುತ್ತು ಇವರು ಮಾತನಾಡುತ್ತಾ ವಿವೇಕಾನಂದ ವಿದ್ಯಾವರ್ಧಕ ಸಂಘ ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇನೆ ಮತ್ತು ಅದಕ್ಕಾಗಿ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ […]