ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳು

ಮಹಾರಾಷ್ಟ್ರರಾಜ್ಯದ ಪುಣೆ ನಗರದಲ್ಲಿ ಫೆಬ್ರವರಿ 4 ರಿಂದ 10 ರವರೆಗೆ ನಡೆಯುವ ರಾಷ್ಟ್ರಮಟ್ಟದ ಸ್ಕೂಲ್‌ಗೇಮ್ಸ್ ಫೆಡರೇಶನ್‌ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೃತಿ.ಜಿ.ಶೆಟ್ಟಿ (ದರ್ಬೆತ್ತಡ್ಕ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ಶೆಟ್ಟಿ ದಂಪತಿಗಳ ಪುತ್ರಿ), ಕು. ರುಚಿತಾ (ಪೆರ್ಲಂಪಾಡಿ ಕುದ್ಕುಳಿ ಮಂಜುನಾಥ ಮತ್ತು ಹರ್ಷಕುಮಾರಿ ದಂಪತಿಗಳ ಪುತ್ರಿ), ಗಾಯತ್ರಿ.ಕೆ.ಎನ್ (ಕೇಪು ಕಲ್ಲಪಾಪು ನಿರಂಜನ್ ಕೆ ಮತ್ತು ಸುನಂದ.ಕೆ.ಎನ್ ದಂಪತಿಗಳ ಪುತ್ರಿ), ವಿಭಾ ಯು.ಎಸ್ (ಶಿಶಿಲದ ಉಮೇಶ್‌ಕುಲಾಲ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ), ನಿಶ್ಮಿತಾ (ಭಕ್ತಕೋಡಿರಾಮಣ್ಣ ಶೆಟ್ಟಿ ಮತ್ತು ಮೋಹಿನಿ ದಂಪತಿಗಳ ಪುತ್ರಿ) ಶಿಲ್ಪಾಶ್ರೀ.ಬಿ.ಜೆ (ಬರೆಂಬೆಟ್ಟುಜತ್ತಪ್ಪ ಗೌಡ ಮತ್ತು ಜಯಶೀಲಾ ದಂಪತಿಗಳ ಪುತ್ರಿ), ದಿವ್ಯ (ಕೊಂಬಾರುರಾಮಣ್ಣಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ), ದೀಕ್ಷಾ.ಕೆ  (ಪೆರಿಗೇರಿ ಕಮಲಾಕ್ಷ ಗೌಡ ಮತ್ತು ಕಮಲಾಕ್ಷಿದಂಪತಿ ಪುತ್ರಿ), ಪ್ರಶಾಂತಿ (ಬಂದಾರು ಚೋಮ ಮುಗೇರ ಮತ್ತು ಕಮಲ ದಂಪತಿಗಳ ಪುತ್ರಿ) ಆಯ್ಕೆಯಾಗಿರುತ್ತಾರೆ.

ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಗಾಯತ್ರಿ (ಉರಿಮಜಲು ಲಿಂಗಪ್ಪಗೌಡ ಮತ್ತು ಭವಾನಿ ದಂಪತಿಗಳ ಪುತ್ರಿ) ರಾಷ್ಟ್ರಮಟ್ಟದಲ್ಲಿ 4ನೇ ಸ್ಥಾನವನ್ನು ಪಡೆದಿರುತ್ತಾಳೆ. ಪ್ರಸಕ್ತ ಶೈಕ್ಷಣಿಕ ವರ್ಷ 10 ಮಕ್ಕಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Kannada-medium-sports

Highslide for Wordpress Plugin