ಸಾಧನೆ ಮತ್ತು ಪ್ರಶಸ್ತಿಗಳು

ಶಾಲೆಯಲ್ಲಿ ಚಿಗುರುತ್ತಿರುವ ಯುವ ಮನಸ್ಸುಗಳು ಶಾಲೆಯ ಶಿಸ್ತು, ಸ್ಚಶಿಸ್ತು ನಿಯಮಗಳಿಗೆ ಬದ್ಧರಾಗಿದ್ದು ಪಠ್ಯಪೂರಕ ಕ್ಷೇತ್ರಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಶಾಲೆಯ ಕೀರ್ತಿಯನ್ನು ಮೆರೆದಿದ್ದಾರೆ.
ನಮ್ಮ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ಈಶ್ವರ ಸಂದೇಶ ರವರು ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ಪ್ರತಿಭಾ ಕಾರಂಜಿ ಸ್ಪರ್ಧೆಯ ಶಾಸ್ತ್ರೀಯ ಸಂಗೀತ ದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾನೆ.

ಭದ್ರಾವತಿಯಲ್ಲಿ ನಡೆದ ೩ನೇ ರಾಜ್ಯಮಟ್ಟದ ಮುಕ್ತ ಚೆಸ್ ಸ್ಪರ್ಧೆಯಲ್ಲಿ ೧೪ ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ನಮ್ಮ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿ ಚಂದನ್.ಎ ತೃತೀಯ ಸ್ಥಾನ ಪಡೆದಿರುತ್ತಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ನವೆಂಬರ್ ತಿಂಗಳಿನಲ್ಲಿ ನಡೆಸಿದ ಚಿತ್ರಕಲೆ ಹೈಯರ್ ಮತ್ತು ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೪೨ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ ೧೦೦ ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ೨೭ ವಿದ್ಯಾರ್ಥಿಗಳಲ್ಲಿ ೧೬ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , ೧೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ೧೬ ವಿದ್ಯಾರ್ಥಿಗಳಲ್ಲಿ ಪವನ್ ಮತ್ತು ಅಕ್ಷತಾ ವಿಶಿಷ್ಟ ಶ್ರೇಣಿಯಲ್ಲಿ, ೧೪ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ. ಬಿ ಇವರು ಮಾರ್ಗದರ್ಶನ ನೀಡಿದ್ದರು.

ಅದೇ ರೀತಿ ಕ್ರೀಡೆಯಲ್ಲಿ ಕೂಡ ನಮ್ಮ ಮಕ್ಕಳು ಉತ್ತಮ ಮೇಲುಗೈಯನ್ನು ಸಾಧಿಸಿದ್ದಾರೆ.

 

Highslide for Wordpress Plugin