ಅನುಶಾಸನ:-
೧. ಎಲ್ಲಾ ಮಕ್ಕಳು ಬೆಳಗ್ಗೆ ಗಂಟೆ ೯.೦೦ಕ್ಕೆ ಶಾಲೆಯಲ್ಲಿ ಇರಬೇಕು.
೨. ಶಾಲಾ ಸಂಕೀರ್ಣದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕ/ಶಿಕ್ಷಕೇತರರೊಂದಿಗೆ ವಿದ್ಯಾರ್ಥಿಗಳು ಸೌಜನ್ಯದಿಂದ ವರ್ತಿಸಬೇಕು.
೩. ಪ್ರತಿಯೊಬ್ಬ ವಿದ್ಯಾರ್ಥಿಯು ಸೌಜನ್ಯ, ನಮ್ರತೆ,ಶಿಸ್ತು ಮತ್ತು ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಬೇಕು.
೪. ಅನುಚಿತವಾಗಿ ವರ್ತಿಸುವ ವಿದ್ಯಾರ್ಥಿಗಳ ಬಗ್ಗೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು.
೫. ವಿದ್ಯಾರ್ಥಿಗಳು ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.
೬. ವಾರದ ಎಲ್ಲಾ ದಿನಗಳಲ್ಲಿ ವಿದ್ಯಾರ್ಥಿಗಳು ಗೊತ್ತುಪಡಿಸಿದ ಶುಚಿಯಾದ ಸಮವಸ್ತ್ರವನ್ನು ಧರಿಸಬೇಕು. ಪ್ರಾಥಮಿಕ ಹುಡುಗರು ಕಡುಕೆಂಪು ಬಣ್ಣದ ಚಡ್ಡಿ ಮತ್ತು ಕಡುಕೆಂಪು – ಬಿಳಿ ಚೌಕಳಿಯುಳ್ಳ ಅಂಗಿಯನ್ನು, ಪ್ರಾಥಮಿಕ ಹುಡುಗಿಯರು ಬಿಳಿ ಕುಪ್ಪಸ ಮತ್ತು ಬಿಳಿ – ಕಡುಕೆಂಪು ಚೌಕಳಿಯ ಲಂಗವಲ್ಲದೆ ತಲೆಗೆ ಬಿಳಿ ಬಣ್ಣದ ರಿಬ್ಬನ್ ಧರಿಸಬೇಕು. ಪ್ರೌಢಶಾಲಾ ಹುಡುಗರು ಕಡುಕೆಂಪು ಬಣ್ಣದ ಪ್ಯಾಂಟ್ ಮತ್ತು ಕಡುಕೆಂಪು – ಬಿಳಿ ಚೌಕಳಿಯುಳ್ಳ ಅಂಗಿಯನ್ನು, ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ (ಕಡುಕೆಂಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಚೌಕಳಿಯ ಟಾಪ್, ಕಡುಕೆಂಪು ಬಣ್ಣದ ಶಾಲು, ಬಿಳಿ ರಿಬ್ಬನ್) ೫ ರಿಂದ ೧೦ನೇ ತರಗತಿಯ ಹುಡುಗಿಯರು ೨ ಜಡೆಯನ್ನು ಬಿಳಿ ರಿಬ್ಬನ್ ಹಾಕಿ ಮೇಲಕ್ಕೆ ಕಟ್ಟಬೇಕು.