ಭಾರತೀಯ ಸಂಸ್ಕೃತಿಯ ಅಡಿಪಾಯವೇ ಸುಸಂಸ್ಕೃತ, ಸಂಸ್ಕಾರಯುತವಾದ ಕುಟುಂಬ. ದಂಪತಿಗಳಿಗೆ ಅಗತ್ಯವಾದ ಸೂಕ್ತ ಮಾರ್ಗದರ್ಶನವು ಹಿರಿಯರಿಂದ ದೊರೆತಾಗ ಸುಖೀ ಸಂಸಾರವು ಸಮಾಜದಲ್ಲಿ ನೆಲೆಗೊಳ್ಳುತ್ತದೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ನವದಂಪತಿ ಸಮಾವೇಶ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸು. ರಾಮಣ್ಣ ಇವರು ನುಡಿದರು. ಇವರು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖ್.

ಅಕ್ಟೋಬರ್ 2 ರಂದು ನಡೆದ ಈ ಸಮಾವೇಶವನ್ನು ಹಿರಿಯ ದಂಪತಿ ನೆಲೆಯಲ್ಲಿ ಆಗಮಿಸಿದ ಹಿರಿಯ ಸಾಹಿತಿ ಶ್ರೀಯುತ ವಿ.ಬಿ. ಅರ್ತಿಕಜೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ತಮ್ಮ ಅನುಭವಗಳನ್ನು ನವ ದಂಪತಿಗಳೊಂದಿಗೆ ಹಂಚಿಕೊಂಡು, ಶ್ರೀಮತಿ ಭಾಗ್ಯಲಕ್ಷ್ಮಿ ಸಮೇತರಾಗಿ ಉತ್ತಮ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಮ್ವೇ ಶ್ರೀ ವೆಂಕಟೇಶ್‌ರವರು ವಹಿಸಿದ್ದರು.
ಪುರುಷ ಹಾಗೂ ಮಹಿಳೆಯರಿಗಾಗಿ ಆಯೋಸಿದ ವಿಶೇಷ ಅವಧಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಟ್ಟಂಪಾಡಿ ಪ್ರಥಮ ಕಾಲೇಜಿನ ಪ್ರಾಶುಂಪಾಲರ ಶ್ರೀಯುತ ವರದರಾಜ ಚಂದ್ರಗಿರಿ ಹಾಗೂ ಪ್ರಗತಿ ಆಸ್ಪತ್ರೆಯ ವೈದ್ಯರಾದ ಡಾ| ಸುಧಾ.ಎಸ್ .ರಾವ್‌ರವರು ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮಾವೇಶವನ್ನು ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶೇಖರ ನಾರಾವಿಯವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರೂಪಲೇಖರವರು ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಸಹನಶ್ರೀ ಪ್ರಾರ್ಥಿಸಿ, ಶ್ರೀಮತಿ ಉಮಾ ಮೋಹನ ಕಾರ್ಯಕ್ರಮ ನಿರೂಪಿಸಿದರು.