ಅಂತರಾಷ್ಟ್ರೀಯ ಯೂತ್ ಯೋಗ ಫೆಡರೇಶನ್ ಹಾಗೂ ಶ್ರೀಲಂಕಾ ಯೂತ್ ಯೋಗ ಫೆಡರೇಶನ್‌ರವರ ಸಹಯೋಗದೊಂದಿಗೆ ಶ್ರೀಲಂಕಾದ ವಾರಿಯಪೋಲದಲ್ಲಿ ಏರ್ಪಡಿಸಿದ್ದ ಭಾರತ ಶ್ರೀಲಂಕಾ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರತೀಕ್ಷಾ ಆರ್ ರೈ (ಮದಕ ರಾಜೇಶ್ ರೈ ಮತ್ತು ಪ್ರಪುಲ್ಲ ರೈ ದಂಪತಿಗಳ ಪುತ್ರಿ) – ಪ್ರಥಮ, ಹೇಮಶ್ರೀ (ಮುದಲಾಜೆ ಪುರುಷೋತ್ತಮ ಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ)- ಪ್ರಥಮ, ಭವಿಷ್(ತಾರಿಗುಡ್ಡೆ ಬಾಲಕೃಷ್ಣ ಮತ್ತು ವೀಣಾ ದಂಪತಿಗಳ ಪುತ್ರ) – ದ್ವಿತೀಯ, ರಾಜೇಶ್ ಗೌಡ (ಮುದಲಾಜೆ ಬಾಬು ಗೌಡ ಮತ್ತು ರೇವತಿ ದಂಪತಿಗಳ ಪುತ್ರ) – ದ್ವಿತೀಯ, ರಿತೇಶ್ .ಕೆ.ಕೆ (ಬಪ್ಪಳಿಗೆ ಕೃಷ್ಣ ಮತ್ತು ಜ್ಯೋತಿಲತಾ ದಂಪತಿಗಳ ಪುತ್ರ)-ತೃತೀಯ ಸ್ಥಾನ ಪಡೆದಿದ್ದಾರೆ.
