ಕರ್ನಾಟಕ ಗಮಕ ಸಾಹಿತ್ಯ ಪರಿಷತ್ತು ಪುತ್ತೂರು ವಿಭಾಗದ ಆಶ್ರಯದಲ್ಲಿ ಬೆಳಿಯೂರುಕಟ್ಟೆ ಪದವಿ ಪೂರ್ವ ಕಾಲೇಜು ಇಲ್ಲಿ ’ಗಮಕ ವಾಚನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮೋಹನ್ ಕಲ್ಲೂರಾಯ ಮಧೂರು ಮತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರವರು ಉಪಸ್ಥಿತರಿದ್ದು ಗಮಕ ವಾಚನದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ’ಕರ್ಣಪರ್ವ’ದಿಂದ ಆಯ್ದ ’ಕೌರವೇಂದ್ರನ ಕೊಂದೆ ನೀನು’ ಎಂಬ ಕಥಾ ಭಾಗದ ವಾಚನ, ಪ್ರವಚನ ನಡೆಯಿತು. ವಾಚನವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ವ್ಯಾಖ್ಯಾನವನ್ನು ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ ನಿಡ್ವಣ್ಣಾಯರವರು ಮತ್ತು ಶೃತಿಯಲ್ಲಿ ಶ್ರೀ ಲಿಂಗಪ್ಪ ಗೌಡ ಪುತ್ತೂರುರವರು ಉಪಸ್ಥಿತರಿದ್ದರು.
