ಶಿಕ್ಷಕರಿಗೆ ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 19-11-2016 ರಂದು ನಡೆದ ವಿವೇಕಾನಂದ ಕನ್ನಡ, ಆಂಗ್ಲ, ಶ್ರೀರಾಮ ಕಲ್ಲಡ್ಕ, ಶ್ರೀದೇವಿ ಪುಣಚ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ‘ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರ’ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀರಾಮಕೃಷ್ಣ ಪ್ರೌಢಶಾಲಾ ಸಹಶಿಕ್ಷಕಿಯಾದ ಶ್ರೀಮತಿ ವಸಂತಿಯವರು ಮಾತನಾಡಿ ಶಿಕ್ಷಕರಿಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಆಯೋಜಿಸಿದ ಕಾರ್ಯ ಶ್ಲಾಘನೀಯ. ಶಿಕ್ಷಕರ ನಿರಂತರ ಕಲಿಕೆ ಅತೀ ಅವಶ್ಯ ಎಂದರು.

20161119_093940

20161119_101503

ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ. ಯವರು ಮಾತನಾಡಿ ಪ್ರತಿಯೊಬ್ಬ ಶಿಕ್ಷಕನು ಕಾಲಕಾಲದ ಮಾಹಿತಿಗಳನ್ನು ಸಮಗ್ರವಾಗಿ ಅರಿಯಬೇಕು. ಇಂತಹ ಕಾರ್ಯಾಗಾರದಲ್ಲಿ ಸಾಮಾಜಿಕ ಸಂಗತಿಗಳನ್ನು ಅಳವಡಿಸಬೇಕು ಎಂದರು.

ವಿವೇಕಾನಂದ ವಿದ್ಯಾಸಂಸ್ಥೆಗಳ ಪರಿವೀಕ್ಷಣಾಧಿಕಾರಿಯಾದ ಶ್ರೀಯುತ ರಘುರಾಜ್‌ ಉಬರಡ್ಕರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಶ್ರೀರಾಮ ಕಲ್ಲಡ್ಕ ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಯುತ ರಮೇಶ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಸಹಶಿಕ್ಷಕರಾದ ಶ್ರೀಯುತ ರಾಧಾಕೃಷ್ಣ ಹಾಗೂ ಸಂಘದ ಯೋಗ ಗುರುಗಳಾದ ಶ್ರೀಯುತ ಜಯರಾಮರವರು ಉಪಸ್ಥಿತರಿದ್ದರು.

20161119_100401

20161119_100019

20161119_140512

20161119_140159

20161119_123707

ತದನಂತರ ನಡೆದ ಮೂರು ಪ್ರಮುಖ ಅವಧಿಗಳಲ್ಲಿ ಕ್ರಮವಾಗಿ ಶ್ರೀಯುತ ಗೋಪಾಡ್ಕರ್ ಮತ್ತು ತಂಡ ‘ನೆನಪಿನ ಚಿಕಿತ್ಸೆ ಮತ್ತು ಸ್ವಕಲಿಕೆ’ ಹಾಗೂ ಶ್ರೀ ರಮೇಶ್ ಉಳಯರವರು ‘ಸ್ಪಷ್ಟಓದು ಮತ್ತು ಶುದ್ಧ ಬರಹ’ ಹಾಗೂ ಶ್ರೀಯುತ ನಾ.ಕಾರಾಂತ ಪೆರಾಜೆಯವರು ‘ಆಹಾರ ಮತ್ತು ಆರೋಗ್ಯ’ ಎಂಬ ವಿಷಯಗಳ ಬಗೆಗೆ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರವು ಶಾಲಾ ಸಮೂಹ ಪ್ರಾಥನೆಯೊಂದಿಗೆ ಆರಂಭವಾಯಿತು. ಮಾತಾಜಿ ಶ್ರೀಮತಿ ಉಮಾರವರು ನಿರೂಪಿಸಿ, ಶ್ರೀಮತಿ ಸೌಮ್ಯಶ್ರೀ ಸ್ವಾಗತಿಸಿ, ಶ್ರೀಮತಿ ದಾಕ್ಷಾಯಿಣಿಯವರು ವಂದಿಸಿದರು.

Highslide for Wordpress Plugin