ಎಳವೆಯಿಂದಲೇ ನಿರ್ದಿಷ್ಟ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಬದ್ಧತೆ, ಸಮಯಪಾಲನೆ, ಆರೋಗ್ಯವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ನಿವೃತ್ತ ಯುವಜನ ಮತ್ತು ಸೇವಾ ಕ್ರೀಡಾಧಿಕಾರಿಯಾದ ಶ್ರೀ.ಬಿ.ಕೆ ಮಾಧವ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಶಾಲೆಯ ಶ್ರೀಡಾಕೂಟದ ಉದ್ಫಾಟಕರಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಉದ್ಫಾಟಕರಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.



ವಂದನಾ ಸ್ವೀಕಾರ ಮಾಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಬಾಲಚಂದ್ರ ಬಾರ್ತಿಕುಮೇರು ಇವರು ಈ ಶಾಲೆಯ ಕ್ರೀಡಾಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಸಾಧನೆಗೈದು ಗುರುತಿಸಿಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ನುಡಿದರು. ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪರಮೇಶ್ವರ ನಾಯ್ಕ ಇವರು ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ನಿಕಟಪೂರ್ವ ಆಡಳಿತಮಂಡಳಿಯ ಸದಸ್ಯರುಗಳು, ಶಾಲಾ ಬೆಳ್ಳಿಹಬ್ಬ ಸಮಿತಿಯ ಸದಸ್ಯರು, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ ರೈ ಉಪಸ್ಥಿತರಿದ್ದರು. ಆಕರ್ಷಕ ಪಥ ಸಂಚಲನದೊಂದಿಗೆ ಸುಭಾಷ್, ಶಿವಾಜಿ, ಪ್ರತಾಪ್, ತಿಲಕ್ ತಂಡಗಳು ಮುನ್ನಡೆಯುತ್ತಿದ್ದಂತೆ ಶಾಲಾ ಸ್ಕೌಟ್ಸ್ – ಗೈಡ್ ತಂಡಗಳು ಸಾಥ್ ನೀಡಿದವು. ಕಾರ್ಯಕ್ರಮವನ್ನು ಶ್ರೀಮತಿ ಅನುಷಾ, ಶ್ರೀಮತಿ ಭವ್ಯಾ, ಶ್ರೀ ಚಂದ್ರಶೇಖರ್ ನಿರೂಪಿಸಿ, ಮುಖ್ಯಗುರು ಆಶಾಬೆಳ್ಳಾರೆ ಸ್ವಾಗತಿಸಿ, ಶ್ರೀಮತಿ ಮಮತಾ ಮಾತಾಜಿ ವಂದಿಸಿದರು.