ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೀದರ್‌ನಲ್ಲಿ ನಡೆದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗಾಯತ್ರಿ (ಉರಿಮಜಲು ಲಿಂಗಪ್ಪ ಗೌಡ ಮತ್ತು ಭವಾನಿ ದಂಪತಿಗಳ ಪುತ್ರಿ) ಮತ್ತು ವಿನುಶ್ರೀ (ಬಲ್ನಾಡು ವೀರಪ್ಪ ಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ) ಪ್ರೌಢಶಾಲಾ ವಿಭಾಗದಿಂದ ಮತ್ತು ಯಶಸ್ವಿ (ಸಾಜ ರಮೇಶ್ ನಾಯಕ್ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ) ಮತ್ತು ಧನ್ಯಶ್ರೀ (ಆಲಂಕಾರು ಪಜ್ಜಡ್ಕ ರಾಮಕೃಷ್ಣ ಗೌಡ ಮತ್ತು ಮೋಹಿನಿ ದಂಪತಿಗಳ ಪುತ್ರಿ) ಪ್ರಾಥಮಿಕ ಶಾಲಾ ವಿಭಾಗದಿಂದ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದು, ಇವರಲ್ಲಿ ಗಾಯತ್ರಿ ರಾಷ್ಟ್ರೀಯ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಮಾಧವ ಬಿ.ಕೆ -ಎನ್.ಐ.ಎಸ್ ತರಬೇತಿದಾರ ಮತ್ತು ದಾಮೋದರ ಕಜೆ ತರಬೇತಿ ನೀಡಿದ್ದಾರೆ ಎಂದು ಶಾಲಾ ಮುಖ್ಯ ಗುರು ಶ್ರೀಮತಿ ಆಶಾ ಬೆಳ್ಳಾರೆ ತಿಳಿಸಿದ್ದಾರೆ.
