Author Archive

ಕಬಡ್ಡಿ ಪಂದ್ಯಾವಳಿ -ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಬಡ್ಡಿ ಪಂದ್ಯಾವಳಿ -ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tuesday, September 13th, 2022

ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಾಂತೀಯ ಮತ್ತು ಕ್ಷೇತ್ರಿಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು.  

ಕಬಡ್ಡಿ ಪಂದ್ಯಾಟ - ದ್ವಿತೀಯ ಸ್ಥಾನ

ಕಬಡ್ಡಿ ಪಂದ್ಯಾಟ – ದ್ವಿತೀಯ ಸ್ಥಾನ

Tuesday, September 13th, 2022

ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು, ಪುತ್ತೂರು. ಇಲ್ಲಿ ನಡೆದ ವಲಯ ಮಟ್ಟದ ಬಾಲಕ- ಬಾಲಕಿಯರ(ಪ್ರಾಥಮಿಕ) ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ.

ಕಬಡ್ಡಿ ಪಂದ್ಯಾಟ - ರಾಜ್ಯ ಮಟ್ಟಕ್ಕೆ ಆಯ್ಕೆ

ಕಬಡ್ಡಿ ಪಂದ್ಯಾಟ – ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, September 13th, 2022

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಾಥಮಿಕ ಬಾಲಕಿಯರು, ಪ್ರೌಢಶಾಲಾ ಬಾಲಕರು ಮತ್ತು ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಖೋ-ಖೋ ಪಂದ್ಯಾಟ - ರಾಜ್ಯ ಮಟ್ಟಕ್ಕೆ ಆಯ್ಕೆ

ಖೋ-ಖೋ ಪಂದ್ಯಾಟ – ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, September 13th, 2022

ಶ್ರೀದೇವಿ ಶಾಲೆ ಪುಣಚದಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ಬಾಲಕಿಯರ ತಂಡ.

ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Tuesday, September 13th, 2022

ದಿವಂಗತ ಡಾ|ಕೆ.ಪಿ ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ ಸುಳ್ಯಪದವಿನಲ್ಲಿ ನಡೆದ ತಾಲೂಕು ಮಟ್ಟದ ಅಂತರ್ ಪ್ರೌಢಶಾಲಾ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಅಗಮ್ಯ ತೃತೀಯ 1200  ರೂ ನಗದು ಮತ್ತು ಚಿನ್ಮಯಿ ಮಜಿ ಪ್ರೋತ್ಸಾಹಕ ಬಹುಮಾನ ರೂಪಾಯಿ 1000 ಪಡೆದಿರುತ್ತಾರೆ.

ಗಣಿತ-ಪ್ರಯೋಗಾತ್ಮಕ ಬೋಧನೆ ಕಾರ್ಯಾಗಾರ

ಗಣಿತ-ಪ್ರಯೋಗಾತ್ಮಕ ಬೋಧನೆ ಕಾರ್ಯಾಗಾರ

Tuesday, September 13th, 2022

ಗಣಿತ ಬೋಧನೆ ಪ್ರಯೋಗಾತ್ಮಕ ಹಾಗೂ ಚಟುವಟಿಕಾತ್ಮಕ ಆದಲ್ಲಿ ಕಲಿಕೆ ಪರಿಣಾಮಕಾರಿಯಾಗುತ್ತದೆ-ಶ್ರೀ ಸುಬ್ರಹ್ಮಣ್ಯ ಭಟ್ ಆಡಳಿತ ಮಂಡಳಿ ಸದಸ್ಯರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ಆವರ್ತ-ಗಣಿತ ಸಂಘದ ವತಿಯಿಂದ ಏರ್ಪಡಿಸಲಾದ ಗಣಿತ-ಪ್ರಯೋಗಾತ್ಮಕ ಬೋಧನೆ ಎಂಬ ವಿಷಯದಲ್ಲಿ ಗಣಿತ ವಿಷಯ ಬೋಧಕ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಶ್ರೀಯುತ ಸುಬ್ರಹ್ಮಣ್ಯ ಭಟ್ ಕೆದಿಲ ಇವರು ಗಣಿತ ಕಲಿಕೋಪಕರಣ ತಯಾರಿ ಬಗ್ಗೆ ಅವಧಿ ನಡೆಸಿಕೊಟ್ಟರು. ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಮಾಡುವ ಯೋಜನೆಯಂತೆ ವಿಭಿನ್ನ […]

ಮಕ್ಕಳ ಸಮಗ್ರ ತಪಾಸಣಾ ಶಿಬಿರ

ಮಕ್ಕಳ ಸಮಗ್ರ ತಪಾಸಣಾ ಶಿಬಿರ

Tuesday, September 13th, 2022

ಮಕ್ಕಳಲ್ಲಿ ಕಲಿಕಾ ವೈವಿಧ್ಯತೆ ಸಾಮಾನ್ಯವಾಗಿದ್ದು, ಪೋಷಕರು-ಶಿಕ್ಷಕರು ಇದನ್ನು ಗುರುತಿಸಿ ಪರಿಣಿತರ ಸಹಕಾರ ಪಡೆದು ಸಕಾಲಕ್ಕೆ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿದೆ-ಡಾ| ಕೃಷ್ಣ ಭಟ್ ಕೊಂಕೋಡಿ. ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಅಸಮರ್ಪಕ ಹಾಗೂ ನಿಧಾನಗತಿಯ ಕಲಿಕಾ ಮಕ್ಕಳ ಸಮಗ್ರ ತಪಾಸಣಾ ಶಿಬಿರಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ| ಕೃಷ್ಣ ಭಟ್ ಕೊಂಕೋಡಿಯವರು ಈ ಬಗೆಯ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದು, ಶಾಲೆ-ಶಿಕ್ಷಕರು-ಪೋಷಕರು ಹಾಗೂ ವಿದ್ಯಾವರ್ಧಕ ಸಂಘ […]

ಓಣಂ ಹಬ್ಬ ಆಚರಣೆ

ಓಣಂ ಹಬ್ಬ ಆಚರಣೆ

Friday, September 9th, 2022

“ಓಣಂ ಹಬ್ಬ ಸಮೃದ್ಧಿಯ ಸಂಕೇತ” – ವೀಣಾ ಸರಸ್ವತಿ. ಸಹ ಶಿಕ್ಷಕಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹ ಶಿಕ್ಷಕಿ ವೀಣಾ ಸರಸ್ವತಿ ಇವರು ಬಲಿಚಕ್ರವರ್ತಿಯ ಕಥೆಯೊಂದಿಗೆ ಓಣಂ ಹಬ್ಬದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಶ್ಯಾನ್ ಬಾಗ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮಾದರಿ ಪ್ರದರ್ಶನ ವೀಕ್ಷಣೆ

ಮಾದರಿ ಪ್ರದರ್ಶನ ವೀಕ್ಷಣೆ

Tuesday, September 6th, 2022

“ಪ್ರಾಯೋಗಿಕ ಮಾದರಿಯ ಕಲಿಕಾ ವಿಧಾನ ಮಕ್ಕಳಲ್ಲಿ ಆಸಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿರುತ್ತದೆ”- ಶ್ರೀ ಚಂದ್ರಕುಮಾರ್, ಪ್ರಾಂಶುಪಾಲರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ನೆಹರು ನಗರ. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಿಂದ ಆಯೋಜಿಸಲಾದ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಮಾದರಿ ಪ್ರದರ್ಶನ ವೀಕ್ಷಿಸಲು ತೆರಳಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಕಾಲೇಜು ಪ್ರಾಧ್ಯಾಪಕ ವೃಂದದವರು ಮಾದರಿಗಳ ಬಗೆಗಿನ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು.

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Tuesday, September 6th, 2022

51 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮ ನಗರ ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 15,000 ನಗದು ಹಾಗೂ ಫಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು.

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ - ಸ್ಪರ್ಧೆಯಲ್ಲಿ ವಿಜೇತರು

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ – ಸ್ಪರ್ಧೆಯಲ್ಲಿ ವಿಜೇತರು

Tuesday, September 6th, 2022

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ವಿವೇಕಾನಂದ ಶಿಶುಮಂದಿರ ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಶಂಖನಾದ-ಗಗನ್ ದೀಪ್ ಹತ್ತನೇ ತರಗತಿ- ದ್ವಿತೀಯ, ಭಗವದ್ಗೀತೆ ಗೀತೆ ಕಂಠಪಾಠ- ಶ್ರೀ ನಂದನ್ ಒಂಬತ್ತನೇ ತರಗತಿ- ಪ್ರಥಮ, ಪ್ರಾರ್ಥನ ಶ್ಲೋಕ – ಕೃತಿಕಾ 6ನೇ ತರಗತಿ- ಪ್ರಥಮ, ವೈಷ್ಣವಿ 5ನೇ ತರಗತಿ- ದ್ವಿತೀಯ.  

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

Monday, September 5th, 2022

ವಿದ್ಯಾರ್ಥಿ ಶಿಕ್ಷಕರಾದಾಗ ಪಡೆಯುವ ಆನಂದ, ಪ್ರೌಢಿಮೆ, ಜ್ಞಾನ, ಕೌಶಲಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿ ಅನುಷ್ಠಾನಕ್ಕೆ ತಂದಿರುವ ಯೋಜನೆಯೇ ’ಶಿಕ್ಷಕ-ಪರ್ವ’. ಇದರ ಅನುಷ್ಠಾನ ಅವಧಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ವಿಭಿನ್ನ ಪಠ್ಯ ವಿಷಯಗಳ ಪರಿಕಲ್ಪನೆ ನೀಡಲಾಗಿತ್ತು. ಕಲಿಕಾ ಉಪಕರಣಗಳನ್ನು ತಯಾರುಗೊಳಿಸಿ, ಸಾಮೂಹಿಕ ಜಾಲತಾಣಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ, ಚರ್ಚಾ ವಿಧಾನ, ಪ್ರಯೋಗಾತ್ಮಕ ವಿಧಾನಗಳ ಮೂಲಕ ಚಿಕ್ಕ ತರಗತಿಯ ಮಕ್ಕಳಿಗೆ ತಮಗೆ ನೀಡಲಾದ ವಿಷಯ ಬೋಧನೆ ನಡೆಸಿಕೊಟ್ಟರು. ಶಾಲೆಯು ಈ ಹಿಂದಿನಿಂದಲೇ ಈ […]

Shaikshanika Karyagara 2022

Shaikshanika Karyagara 2022

Sunday, August 28th, 2022
ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

Saturday, August 27th, 2022

ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ಷಣ್ಮುಖದೇವ ಹಾಗೂ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 27-08-2022 ರಂದು ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ನಿರ್ದೇಶಕರಾಗಿರುವ ಶ್ರೀ ಮುರಳೀಧರ ಕೆ. ಇವರು ನೆರವೇರಿಸಿದರು. ಕಾರ್ಯಾಗಾರದ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಮುನಿರಾಜ ರೆಂಜಾಳರವರು ಮಾತನಾಡುತ್ತಾ ಶಿಕ್ಷಕನಿಗಿರುವ ಜವಾಬ್ದಾರಿ, ಪರಿಣಾಮಕಾರಿ ಬೋಧನೆ, ವೃತ್ತಿಯಲ್ಲಿ ಪಕ್ವತೆಯನ್ನು ತರುವಲ್ಲಿ ಶಿಕ್ಷಕರಾಗಿ ನಮ್ಮ ಕರ್ತವ್ಯ, ದೇಶವನ್ನು ಕಟ್ಟಿ […]

Independence Day 2022

Independence Day 2022

Monday, August 15th, 2022
ಅಮೃತ ಭಾರತಿಗೆ ಕನ್ನಡದಾರತಿ - ಸ್ವಾತಂತ್ರ್ಯ ದಿನಾಚರಣೆ 

ಅಮೃತ ಭಾರತಿಗೆ ಕನ್ನಡದಾರತಿ – ಸ್ವಾತಂತ್ರ್ಯ ದಿನಾಚರಣೆ 

Monday, August 15th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅಭ್ಯಾಗತರಾಗಿ ಆಗಮಿಸಿ ಶ್ರೀಯುತ ವಿಜಯಕುಮಾರ್ ಇವರು ಶುಭ ಹಾರೈಸಿದರು. ನಿವೃತ್ತ ಸೇನಾನಿ ಎನ್ ಆರ್ ವಿಜಯಕುಮಾರ್ ಅವರು ಮಾತನಾಡಿ, ದೇಶ ರಕ್ಷಣೆ ಅನ್ನುವುದು ಸೈನ್ಯದಲ್ಲಿದ್ದವರು ಮಾತ್ರ ಮಾಡಬೇಕಾದ ಕೆಲಸ ಎಂದೇನಿಲ್ಲ, ಅದಕ್ಕೆ ವಯಸ್ಸು- ಅಂತಸ್ತಿನ ಅಂತರವಿಲ್ಲ ಪ್ರತಿಯೊಬ್ಬ ಪ್ರಜೆಯೂ ತಮ್ಮ ದೈನಂದಿನ ಕಾರ್ಯ ವಿಧಾನಗಳಲ್ಲೇ ಸ್ವ- ಪ್ರಜ್ಞೆಯೊಂದಿಗೆ ದೇಶರಕ್ಷಣೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಅಮೃತ ಮಹೋತ್ಸವ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತರಿಗೆ ವಿದ್ವಾನ್ ಗಿರೀಶ್ ಕುಮಾರ್ […]

ಹರ್ ಘರ್ ತಿರಂಗಾ ಅಭಿಯಾನ - ಧ್ವಜಾರೋಹಣ ಕಾರ್ಯಕ್ರಮ

ಹರ್ ಘರ್ ತಿರಂಗಾ ಅಭಿಯಾನ – ಧ್ವಜಾರೋಹಣ ಕಾರ್ಯಕ್ರಮ

Saturday, August 13th, 2022

ದಿನಾಂಕ 13-08-2022ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹರ್ ಘರ್ ತಿರಂಗಾ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ, ವೃತ್ತಿಯಲ್ಲಿ ವಕೀಲರು ಆದ ವಿರೂಪಾಕ್ಷ ಇವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಇವರು ಧ್ವಜಕ್ಕೆ ಕೊಡುವ ಗೌರವ ಅದರ ನೀತಿ ಸಂಹಿತೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ವಂದೇ ಮಾತರಂನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಾಲೆಗೆ ಆಗಮಿಸಿದ ದಿಶಾ-ಭಾರತ ಆಜಾದಿ ಕಾ ಅಮೃತ ಮಹೋತ್ಸವ ರಥ

ಶಾಲೆಗೆ ಆಗಮಿಸಿದ ದಿಶಾ-ಭಾರತ ಆಜಾದಿ ಕಾ ಅಮೃತ ಮಹೋತ್ಸವ ರಥ

Friday, August 12th, 2022

ದಿಶಾ-ಭಾರತ ಬೆಂಗಳೂರು ಆಯೋಜಿಸಲಾದ ಅನೇಕ ಕಾರ್ಯಕ್ರಮಗಳಲ್ಲಿ ಒಂದಾದ ಭಾರತದ ಅಮೃತ ಮಹೋತ್ಸವ ರಥ ಶಾಲಾ ಆವರಣಕ್ಕೆ ಆಗಮಿಸಿತು. ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ರಾಷ್ಟ್ರೀಯ ಧ್ವಜವನ್ನು ಹಾಕಿಸಿದರು. ವೀರ ಪುರುಷರ ಜೀವನಗಾಥಾ ಚಿತ್ರಣ, ಸ್ವತಂತ್ರ ಮಹೋತ್ಸವ ಸ್ಪರ್ಧೆಗಳು, ಭಾರತೀಯ ಸಾಧನಾ ಪರಿಚಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ದಿಶಾಭಾರತ ಪ್ರಚಾರಕರೂ, ವೃತ್ತಿಯಲ್ಲಿ ಇಂಜಿನಿಯರ್ ಆದ ಶ್ರೀಯುತ ಸುನಿಲ್ ಕುಮಾರ್ ಮಾಹಿತಿ ನೀಡಿದರು. ಸಾಮೂಹಿಕ ಘೋಷಣೆಯೊಂದಿಗೆ […]

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಅಮೃತ ನಡಿಗೆ ದೇಶದ ಕಡೆಗೆ’ ಬೃಹತ್ ಮೆರವಣಿಗೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಅಮೃತ ನಡಿಗೆ ದೇಶದ ಕಡೆಗೆ’ ಬೃಹತ್ ಮೆರವಣಿಗೆ

Friday, August 12th, 2022

ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸ್ವಾತಂತ್ರ್ಯ ದ ಅಮೃತೋತ್ಸವದ ಪ್ರಯುಕ್ತ ’ಅಮೃತ ನಡಿಗೆ ದೇಶದ ಕಡೆಗೆ’ ಎಂಬ ಧ್ಯೇಯದೊಂದಿಗೆ ಬೃಹತ್ ಮೆರವಣಿಗೆಯನ್ನು ಆ. 12 ರಂದು ನಡೆಯಿತು. ಪುತ್ತೂರಿನ ನೆಹರುನಗರದ ಆವರಣದಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆಗಳು ಮತ್ತು ತೆಂಕಿಲದಲ್ಲಿರುವ ವಿವೇಕಾನಂದ ಸಮೂಹ ಸಂಸ್ಥೆಗಳ ಸುಮಾರು 8000 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದರು. ಭಾರತ ಮಾತೆಯ ಭಾವಚಿತ್ರ, ರಾಷ್ಟ್ರಜಾಗೃತಿಯ ಉತ್ತೇಜನ ಗೊಳಿಸುವ ಸ್ತಬ್ಧಚಿತ್ರಗಳು, ಪ್ರತಿ ವಿದ್ಯಾರ್ಥಿಯ ಕೈಯಲ್ಲೂ ತ್ರಿವರ್ಣ ಧ್ವಜ, ಎಪ್ಪತ್ತೈದು […]

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ

Friday, August 12th, 2022

ರೇಡಿಯೋ ಪಾಂಚಜನ್ಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಮತ್ತು ಶ್ರೀವತ್ಸ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಹುಮಾನ

ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಹುಮಾನ

Friday, August 12th, 2022

ಪುತ್ತೂರು ತಾಲೂಕು ಸಂಸ್ಕಾರ ಭಾರತಿ ವತಿಯಿಂದ ನಡೆದ ತಾಲೂಕು ಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆಯ 1 ರಿಂದ 4 ನೇ ತರಗತಿ ವಿಭಾಗದಲ್ಲಿ ನಮ್ಮ ಶಾಲಾ ಮಕ್ಕಳು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅಜಾದಿ ಕಾ ಅಮೃತ್ ಮಹೋತ್ಸವ - ಸ್ಪರ್ಧೆಗಳಲ್ಲಿ ವಿಜೇತರು

ಅಜಾದಿ ಕಾ ಅಮೃತ್ ಮಹೋತ್ಸವ – ಸ್ಪರ್ಧೆಗಳಲ್ಲಿ ವಿಜೇತರು

Thursday, August 11th, 2022

ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಪ್ರಬಂಧ : ಅವನಿ ಬೆಳ್ಳಾರೆ- ಪ್ರಥಮ ಚಿತ್ರಕಲೆ : ಅಗಮ್ಯ- ಪ್ರಥಮ ಭಾಷಣ : ಧಾತ್ರಿ- ಪ್ರಥಮ ದೇಶ ಭಕ್ತಿ ಗೀತೆ : ಹರಿಣಿ ಮತ್ತು ತಂಡ- ತೃತೀಯ

ವಿಜ್ಞಾನ ಪುನಶ್ಚೇತನ ಕಾರ್ಯಾಗಾರ

ವಿಜ್ಞಾನ ಪುನಶ್ಚೇತನ ಕಾರ್ಯಾಗಾರ

Wednesday, August 10th, 2022

ವಿವೇಕಾನಂದ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ನೆಹರು ನಗರ ಶಾಲೆಯಿಂದ ಆಯೋಜಿಸಲಾದ ವಿಜ್ಞಾನ ಪುನಶ್ಚೇತನ ಕಾರ್ಯಾಗಾರದಲ್ಲಿ  ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು ಹಾಗೂ ಸಹಶಿಕ್ಷಕರು ಭಾಗವಹಿಸಿದರು. ಕಾರ್ಯಾಗಾರದಲ್ಲಿ IRISನ ಬೆಂಗಳೂರು ವಲಯದ ಸಂಯೋಜಕರಾದ ಶ್ರೀಮತಿ ಆನ್ನಾ ಮುರುಗನ್ ಅವರು ವಿಜ್ಞಾನ ಕಾರ್ಯಯೋಜನೆಗಳನ್ನು ಮಾಡುವ ವಿಧಾನ, ಆಯ್ಕೆಯ ವಿಷಯಗಳು ಹಾಗೂ ಅವುಗಳ ಪ್ರಸ್ತುತತೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನಿರ್ವಾಹಕರಾದ ಸಹಶಿಕ್ಷಕಿ ಪುಷ್ಪಾವತಿ ಹಾಗೂ ಕೀರ್ತನ್ ಇವರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಸಂಸ್ಕೃತ ಭಾಷೆ ವೈಜ್ಞಾನಿಕ ಭಾಷೆ - ಕು. ಶೈಲಶ್ರೀ

ಸಂಸ್ಕೃತ ಭಾಷೆ ವೈಜ್ಞಾನಿಕ ಭಾಷೆ – ಕು. ಶೈಲಶ್ರೀ

Tuesday, August 9th, 2022

ಭಾಷೆಯು ವ್ಯವಹಾರಕ್ಕೆ ಒಂದು ಪ್ರಮುಖ ಮಾಧ್ಯಮ. ಅದರಲ್ಲಿ ಸಂಸ್ಕೃತ ಭಾಷೆಯು ಸರಳ, ಸುಂದರ, ಮಧುರವಾದ ದೇವ ಭಾಷೆಯಾಗಿದೆ. ಈ ಭಾಷೆಯು ಭಾರತೀಯ ಭಾಷೆಗಳಲ್ಲದೆ ವಿದೇಶೀಯ ಭಾಷೆಗಳ ಮೇಲೂ ಪ್ರಭಾವ ಬೀರಿದೆ. ಹಾಗೂ ಇದು ಅತ್ಯಂತ ವೈಜ್ಞಾನಿಕವಾದ ಭಾಷೆಯಾಗಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಸಪ್ತಾಹ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮೂರ್ಕಜೆ ಗುರುಕುಲದ ವಿದ್ಯಾರ್ಥಿನಿಯಾದ ಕು. ಶೈಲಶ್ರೀಯವರು ಹೇಳಿದರು. ಶಾಲಾ ಸ್ಮೃತಿ-ಸಂಸ್ಕೃತ ಸಂಘದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮವು ಮೈತ್ರೇಯಿ ಗುರುಕುಲದ ಪೂರ್ಣಿಮ ಮಾತಾಜಿ ಇವರಿಂದ ಭಾರತಮಾತೆಯ […]

ಹಿರಿಯ ವಿದ್ಯಾರ್ಥಿ ಸಭೆ

ಹಿರಿಯ ವಿದ್ಯಾರ್ಥಿ ಸಭೆ

Tuesday, August 9th, 2022

ಅಕ್ಟೋಬರ್ 2 ನೇ ದಿನಾಂಕದಂದು ನಡೆಯಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಸಮಾವೇಶದ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿ ಸಭೆಯಲ್ಲಿ ಸಭಾ ಪ್ರಸ್ತುತತೆಯ ಬಗ್ಗೆ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮಾತನಾಡಿದರು. 2002-03 ರಿಂದ 2021-22 ರವರೆಗಿನ ಹಿರಿಯ ವಿದ್ಯಾರ್ಥಿಗಳನ್ನು ಸೇರಲಿರುವ ಸಮಾವೇಶ ಇದಾಗಿದ್ದು ಪ್ರತೀ ಬ್ಯಾಚ್‌ನ ಮಕ್ಕಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ ಎಂದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಘಟಕ ಸಂಯೋಜಕರಾದ ಸಹಶಿಕ್ಷಕ ರಾಮ ನಾಯ್ಕ್ ಹಾಗೂ ಸಹಶಿಕ್ಷಕಿ ಲೀಲಾವತಿ […]

ಕಲಬುರಗಿಯ ಸೇಡಂನಲ್ಲಿ ಪ್ರಾಂತ ಸಾಧಾರಣಾ ಸಭಾ ಬೈಠಕ್‌

ಕಲಬುರಗಿಯ ಸೇಡಂನಲ್ಲಿ ಪ್ರಾಂತ ಸಾಧಾರಣಾ ಸಭಾ ಬೈಠಕ್‌

Monday, August 8th, 2022

ವಿದ್ಯಾಭಾರತಿ ಶಿಕ್ಷಾಸಂಸ್ಥಾನ ವತಿಯಿಂದ ಕಲಬುರಗಿಯ ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾದ ಪ್ರಾಂತ ಸಾಧಾರಣಾ ಸಭಾ ಬೈಠಕ್‌ನಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾಗವಹಿಸಿದರು. ಎರಡು ದಿನಗಳವರೆಗೆ ನಡೆದ ಈ ಕಾರ್ಯಾಗಾರದಲ್ಲಿ ವಿದ್ಯಾಭಾರತಿಯ ವಿಭಿನ್ನ ಪ್ರಕಲ್ಪಗಳ ಕಾರ್ಯಯೋಜನೆ ಹಾಗೂ ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಯಿತು. 17 ಜಿಲ್ಲೆಗಳಿಂದ 158 ಮಂದಿ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಜಿಲ್ಲಾ ಪ್ರಾಂತ ಜವಾಬ್ದಾರಿ ಪ್ರತಿನಿಧಿಗಳು ಭಾಗವಹಿಸಿದ ಕಾರ್ಯಾಗಾರದಲ್ಲಿ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ವಿದ್ಯಾಭಾರತಿಯ ಕಾರ್ಯಚಟುವಟಿಕೆಗಳ ವಿವಿಧ ಮಜಲುಗಳ ಬಗ್ಗೆ ವಿಷಯ […]

ಭಗವಂತನ ಗೀತೆ ಭಗವದ್ಗೀತೆ - ಶ್ರೀಯುತ ವಿಘ್ನೇಶ್ ಭಟ್

ಭಗವಂತನ ಗೀತೆ ಭಗವದ್ಗೀತೆ – ಶ್ರೀಯುತ ವಿಘ್ನೇಶ್ ಭಟ್

Friday, July 29th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಂಸ್ಕೃತ ಭಾಷಾ ಸಂಘ ‘ಸುರಭಿ’ಯಿಂದ ಆಯೋಜಿಸಲಾದ ಭಗವದ್ಗೀತಾ ಪಠನಾಭ್ಯಾಸದ ತರಗತಿ ಉದ್ಘಾಟನೆಗೆ ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ವಿಘ್ನೇಶ್ ಭಟ್ ಅವರು ಸಂಸ್ಕೃತ ಭಾಷೆ ಪ್ರಾಚೀನ ಹಾಗೂ ವೈಜ್ಞಾನಿಕ ಭಾಷೆಯಾಗಿದ್ದು ಎಳವೆಯಿಂದಲೇ ಸಂಸ್ಕೃತ ಭಾಷಾಭ್ಯಾಸ ಸಂಸ್ಕೃತಿ-ಸಂಸ್ಕಾರವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಶಾಲಾ ಭಗವದ್ಗೀತಾ ಪಠನಾಭ್ಯಾಸ ತರಗತಿಗೆ ಶ್ರೀಯುತರು ಮಾರ್ಗದರ್ಶಕರಾಗಿ ಆಗಮಿಸಿ ಭಗವದ್ಗೀತೆಯು ಭಗವಂತನ ಗೀತೆಯಾಗಿದ್ದು, ಬದುಕಿನ ಸಾರವನ್ನು ತಿಳಿಸುತ್ತದೆ. ಶಾಲೆಯಿಂದ ಎಲ್ಲಾ ಮಕ್ಕಳಿಗೂ ಭಗವದ್ಗೀತಾ ಪಠನಾಭ್ಯಾಸ ಮೂಡಿಸುತ್ತಿರುವುದು ಉತ್ತಮ ಸಂಗತಿ ಎಂದರು. […]

ಹಿಂದಿ ಭಾಷೆಯು ದೇಶದ ಸಂಸ್ಕೃತಿ, ಏಕತೆ, ಉನ್ನತಿಗೆ ಪೂರಕವಾಗಿದೆ - ಶ್ರೀಮತಿ ಪ್ರಫುಲ್ಲಾ

ಹಿಂದಿ ಭಾಷೆಯು ದೇಶದ ಸಂಸ್ಕೃತಿ, ಏಕತೆ, ಉನ್ನತಿಗೆ ಪೂರಕವಾಗಿದೆ – ಶ್ರೀಮತಿ ಪ್ರಫುಲ್ಲಾ

Friday, July 29th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಸುರಭಿ’ ಹಿಂದಿ ಭಾಷಾ ಸಂಘದಿಂದ ಆಯೋಜಿಸಲ್ಪಟ್ಟ ರಾಷ್ಟ್ರಭಾಷಾ ಪರೀಕ್ಷಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಪ್ರಫುಲ್ಲಾ ಇವರು ಹಿಂದಿ ಪ್ರಚಾರ ಸಭಾ ವತಿಯಿಂದ ನಡೆಸಲ್ಪಡುವ ವಿವಿಧ ಪದವಿ ಕೋರ್ಸುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುತ್ತಾ ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಹಿಂದಿ ಭಾಷಾ ಸಂಘದ ಸಂಯೋಜಕಿ ಶ್ರೀಮತಿ ದಾಕ್ಷಾಯಿಣಿಯವರು ಕಾರ್ಯಕ್ರಮ ಸಂಘಟಿಸಿದರು.

’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ - ಸತ್ಯಮೂರ್ತಿ ಹೆಬ್ಬಾರ್

’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ – ಸತ್ಯಮೂರ್ತಿ ಹೆಬ್ಬಾರ್

Tuesday, July 26th, 2022

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂಧಿಸಿದ ಚಟುವಟಿಕಾ ಕಾರ್ಯಗಾರದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುತ್ತಾ ಗಣಿತ ತರಗತಿಯು ಚಟುವಟಿಕೆಯುಕ್ತವಾಗಿ, ಇದ್ದಾಗ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಸಣ್ಣ ಪರಿಕಲ್ಪನೆಯನ್ನು ವಿವಿಧ ಮಜಲುಗಳಲ್ಲಿ ಆಲೋಚಿಸಿ ಅಭ್ಯಾಸ ನಡೆಸಿದಾಗ ಗಣಿತವೆಂದರೆ ಕಠಿಣವಲ್ಲ. ಅದು ಸಂತಸದ ರಸದೂಟ ಎಂದೆನಿಸುತ್ತದೆಯೆಂದು ಸತ್ಯಮೂರ್ತಿ ಹೆಬ್ಬಾರ್ ನುಡಿದರು. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ಪೈಥಾಗೊರಸ್ ಪ್ರಮೇಯಕ್ಕೆ ಸಂಬಂಧಿಸಿದ ಮಾದರಿ, ಥೇಲ್ಸ್ ಪ್ರಮೇಯ ಆಧಾರಿತ ಕಲಿಕಾ ಉಪಕರಣ, ಸ್ಪರ್ಶಕಗಳ ರಚನೆ, ತ್ರಿಕೋನಮಿತಿ ಅನುಪಾತಗಳು, ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಬೆಲೆ […]

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ - ಕು.ಹೇಮಸ್ವಾತಿ

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ – ಕು.ಹೇಮಸ್ವಾತಿ

Tuesday, July 26th, 2022

ಉತ್ತಮ ಜೀವನ ಮೌಲ್ಯಗಳೊಂದಿಗೆ ಶಿಸ್ತನ್ನು ಅಳವಡಿಸಿಕೊಂಡು ಶಾಲಾ ದಿನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮುಂದೆ ದೇಶ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ವಿಜಯೋತ್ಸವವು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವು ನಮ್ಮ ದೇಶಕ್ಕಾಗಿ ಹುತಾತ್ಮರಾದ ಅನೇಕ ಸೈನಿಕರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮನ್ನು ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದು ವಿವೇಕಾನಂದ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಕುಮಾರಿ ಹೇಮಸ್ವಾತಿ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಕಾರ್ಗಿಲ್ ವಿಜಯೋತ್ಸವ’ […]

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

Saturday, July 23rd, 2022

2022-23 ನೇ ಶೈಕ್ಷಣಿಕ ವರ್ಷದ ಜಿಲ್ಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಒಂದು ದಿನದ ಕಾರ್‍ಯಾಗಾರವು 22-7-2022 ರಂದು ಸಹ್ಯಾದ್ರಿ ಇಂಜೀನಿಯರಿಂಗ್ ಕಾಲೇಜು ಅಡ್ಯಾರು, ಮಂಗಳೂರು ಇಲ್ಲಿ ನಡೆದಿರುತ್ತದೆ. ಇದು ಶೈಕ್ಷಣಿಕ ವರ್ಷದ 2ನೇ ಕಾರ್‍ಯಾಗಾರವಾಗಿದೆ. ಈ ಕಾರ್‍ಯಾಗಾರದಲ್ಲಿ Exploring Circuitory and Coding with Arduino ದ ಬಗ್ಗೆ ಇಂಜೀನಿಯರಿಂಗ್ ಪದವಿ ಮುಗಿಸಿ ಡ್ರೀಮ್‌ಕಿಟ್ ಲ್ಯಾಬ್‌ನ್ನು ನಿರ್ವಹಿಸುತ್ತಿರುವ ಪದವೀಧರರು ಪ್ರಾಯೋಗಿಕವಾಗಿ ಮಾಹಿತಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿರುತ್ತಾರೆ.

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

Wednesday, July 20th, 2022

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಒಳಾಂಗಣ ಆಫೀಸರ್‍ಸ್ ಕ್ಲಬ್ ಪರ್ಲಡ್ಕದಲ್ಲಿ ನಡೆದ ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೋಕೇಶ್ ಎಸ್. ಆರ್ ಅವರು ಕ್ರೀಡಾ ಮನೋಭಾವ ವ್ಯಕ್ತಿ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೋಲು-ಗೆಲುವುಗಳನ್ನು ಸಮಾನ ಮನಸ್ಕತೆಯಿಂದ ಸ್ವೀಕರಿಸುವ ಗುಣ ಕ್ರೀಡೆಯಲ್ಲಿ ಮನ್ನಡೆಯಲು ಸಹಕಾರಿಯಾಗಲಿದೆ ಎಂದರು. ಪಂದ್ಯಾಟದ ಸಭಾಧ್ಯಕ್ಷತೆ ವಹಿಸಿ ಶಾಲಾ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಇವರು ಕ್ರೀಡಾ ಕ್ಷೇತ್ರದಲ್ಲಿ ನಿರಂತರತೆ […]

ಶೈಕ್ಷಣಿಕ ಸಂದರ್ಶನ

ಶೈಕ್ಷಣಿಕ ಸಂದರ್ಶನ

Monday, July 18th, 2022

ಶಾಲಾ ವೃತ್ತಿಕಾ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಸಂದರ್ಶನದ ಅಂಗವಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿಗೆ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳು ಭೇಟಿ ನೀಡಿದರು. ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಚಂದ್ರಕುಮಾರ್ ಇವರು ಕಾಲೇಜು ಶೈಕ್ಷಣಿಕ ಸ್ವರೂಪ ಹಾಗೂ ಆಸಕ್ತಿದಾಯಕ ವಿಷಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು. ಅನಂತರ ಕಾಲೇಜಿನ ಕಂಪ್ಯೂಟರ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಅಟೋಮೊಬೈಲ್ ಪ್ರಯೋಗ ಶಾಲೆಗಳಿಗೆ ಭೇಟಿಯನ್ನಿತ್ತ ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಪ್ರಾಧ್ಯಾಪಕರು ಪ್ರಯೋಗಾಲಯದ ಪ್ರಾಯೋಗಿಕ ಅನ್ವಯಗಳ ಬಗ್ಗೆ ಮಾಹಿತಿ ನೀಡಿದರು.

ಗುರುನಮನ-ಅಭಿನಂದನಾ ಕಾರ್ಯಕ್ರಮ

ಗುರುನಮನ-ಅಭಿನಂದನಾ ಕಾರ್ಯಕ್ರಮ

Monday, July 18th, 2022

ದೈಹಿಕ ಶಿಕ್ಷಕನಾಗಿ ಹತ್ತಾರು ವರುಷಗಳಲ್ಲಿ ನಾನು ತರಬೇತುಗೊಳಿಸಿದ ವಿದ್ಯಾರ್ಥಿಗಳು ರಾಷ್ಟ್ರ-ಅಂತಾರಾಷ್ಟ್ರ ಮಟ್ಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ನಮ್ಮಲ್ಲಿ ರೂಢಿಸಿಕೊಳ್ಳುವ ಶಿಸ್ತು-ಸಮಯ ಪ್ರಜ್ಞೆ,ವೃತ್ತಿ ಕಾಳಜಿ ಬದುಕನ್ನು ಅರ್ಥಪೂರ್ಣವಾಗಿಸುತ್ತದೆ – ದಯಾನಂದ ರೈ ಕೋರ್ಮಂಡ. ವಿವೇಕಾನಂದ ಕನ್ನಡ ಶಾಲಾ ಮಹತಿ-ಕನ್ನಡ ಸಂಘದ ವತಿಯಿಂದ 10 ನೇ ತರಗತಿಯ ಮಕ್ಕಳು ಆಯೋಜಿಸಿದ ’ಗುರು-ಅಭಿನಂದನೆ’ ಸ್ವೀಕರಿಸಿ ಶ್ರೀಯುತರು ನನ್ನ ಬದುಕಿನಲ್ಲಿ ಈ ದಿನ ಮರೆಯಲಾಗದ ದಿನ. ನನ್ನ ಮನೆಗೆ ಬಂದು ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನನ್ನ ಮನೆ-ಮನ ಪಾವನವಾದ ಅನುಭವವಾಗುತ್ತಿದೆ ಎಂದರು. ಬೆಟ್ಟಂಪಾಡಿಯ ನವೋದಯ […]

ಗುರುಪೂರ್ಣಿಮೆ -ಗುರುವಂದನೆ

ಗುರುಪೂರ್ಣಿಮೆ -ಗುರುವಂದನೆ

Saturday, July 16th, 2022

ಗುರುಪೂರ್ಣಿಮೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಸಮನ್ವಯ-ಸಮಾಜ ವಿಜ್ಞಾನ ಸಂಘದಿಂದ ’ಗುರುವಂದನಾ’ ಕಾರ್ಯಕ್ರಮ ನೆರವೇರಿತು. ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮವನ್ನು ಶಾಲಾ 9 ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದರು. ಪ್ರಶಿಕ್ಷಣ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಬಗೆಗಿನ ಹಾಡು, ನೃತ್ಯ, ಭಾಷಣ, ನೃತ್ಯರೂಪಕಗಳನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅನಂತರ ಮಕ್ಕಳು ಹೂಗುಚ್ಚ ಹಾಗೂ ಅಭಿನಂದನಾ ಪತ್ರ ನೀಡಿ ಸಮೂಹ ಗೀತೆ ಹಾಡಿದರು. ಶಾಲಾ ಆಡಳಿತ ಮಂಡಳಿ […]

Jilla Shaikshanika Sahamilana 2022-23

Jilla Shaikshanika Sahamilana 2022-23

Thursday, July 14th, 2022
ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23

ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23

Thursday, July 14th, 2022

ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23 ಕಾರ್ಯಕ್ರಮವು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜನೆಗೊಂಡಿತ್ತು.  ಕಾರ್ಯಕ್ರಮ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿದರು. 2021-22ನೇ ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮತ್ತು ಶಾಲಾಮಟ್ಟದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ

Thursday, June 30th, 2022

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು- ಇವರ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಅಟಲ್ ಟಿಂಕರಿಂಗ್ ನೋಡಲ್ ಶಿಕ್ಷಕರ ಕಾರ್ಯಾಗಾರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸೃಜನ-ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರಾದ ಪುಷ್ಪಾವತಿ ಹಾಗೂ ಕೀರ್ತನ್ ಭಾಗವಹಿಸಿದರು. ಈ ಸಂದರ್ಭ ಟಿಂಕರಿಂಗ್ ಪ್ರಯೋಗಾಲಯದ ನಿರ್ವಹಣೆ, ತಾಂತ್ರಿಕ ಪರಿಚಯ, PFMS(Public Financial Management System)ನ ಕುರಿತು ಮಾಹಿತಿಯನ್ನು […]

ಶಾಲಾ ಮಂತ್ರಿಮಂಡಲ ರಚನೆ

ಶಾಲಾ ಮಂತ್ರಿಮಂಡಲ ರಚನೆ

Thursday, June 30th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23 ರ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಂತ್ರಿಮಂಡಲದ ರಚನೆ ಮತ್ತು ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಳಿನಿ ವಾಗ್ಲೆ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಧಾತ್ರಿ ಆರ್ ರೈ, ಉಪನಾಯಕಿಯಾಗಿ ಅವನಿ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ನಾಯಕನಾಗಿ ದವನ್ ಡಿ ಎ, ಉಪನಾಯಕನಾಗಿ ಧನುಷ್ ಡಿ ಜಿ ಆಯ್ಕೆಯಾಗಿ […]

ರಕ್ಷಕ-ಶಿಕ್ಷಕ ಸಮಿತಿ ರಚನೆ

ರಕ್ಷಕ-ಶಿಕ್ಷಕ ಸಮಿತಿ ರಚನೆ

Thursday, June 30th, 2022

‘ಪೋಷಕರು ಶಾಲೆಯ ಅವಿಭಾಜ್ಯ ಅಂಗ’ – ಶ್ರೀ ಕೃಷ್ಣ ಭಟ್ 2022-23 ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಭೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಕ್ಷಕ-ಶಿಕ್ಷಕ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಮಾತನಾಡಿ ’ ಶಾಲಾ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವವಾದುದು. ನಾವು ಯಾವುದೇ ಅಂಜಿಕೆಯಿಲ್ಲದೆ ಶಾಲಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ನುಡಿದರು. ಬಳಿಕ 2022-23 ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಗೆ […]

ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ

ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ

Tuesday, June 21st, 2022

ಶಾಲೆ ಮತ್ತು ಪೋಷಕರ ನಡುವೆ ಇರುವ ಉತ್ತಮ ಬಾಂಧವ್ಯ ಮಗುವಿನ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪೋಷಕರಾದ ನಮ್ಮಲ್ಲಿ ಯಾವಾಗಲೂ ಶಾಲೆ ಹಾಗೂ ಶಿಕ್ಷಕರ ಬಗ್ಗೆ ನಂಬಿಕೆ ಹಾಗೂ ಧೈರ್ಯವಿರಬೇಕು – ಗೋಪಾಲಕೃಷ್ಣ, ಕನ್ನಡ ಶಿಕ್ಷಕರು ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಭಾಗವಹಿಸಿ ಪೋಷಕರಿಗೆ ಮಕ್ಕಳ ಕುರಿತು ಇರಬೇಕಾದ ಕಾಳಜಿಯ […]

8 ರಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ

8 ರಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ

Tuesday, June 21st, 2022

ನಮ್ಮ ಮಗು ಕಲಿಯುತ್ತಿರುವ ವಿದ್ಯಾಸಂಸ್ಥೆಯ ಬಗ್ಗೆ ನಮಗೆ ಅಭಿಮಾನವಿರಬೇಕು – ಪ್ರೊ.ವಿ.ಜಿ.ಭಟ್, ಪ್ರಾಂಶುಪಾಲರು ವಿವೇಕಾನಂದ ಪದವಿ ಕಾಲೇಜು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ 8ನೇ ತರಗತಿಯಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಜಿ.ಭಟ್ ಮಾತನಾಡಿ ಭಾಷಾ ಕಲಿಕೆ ಸೃಜನಶೀಲತೆಯಿಂದ ಕೂಡಿರಬೇಕು. ಮಕ್ಕಳಲ್ಲಿ ಸೃಜನಶೀಲತೆಯ ಪ್ರಜ್ಞೆ ಬೆಳೆಸಲು ಪೋಷಕರಾದ ನಾವು ಒಂದಷ್ಟು ವಿಚಾರಗಳನ್ನು ಕಲಿತುಕೊಳ್ಳಬೇಕು ಹಾಗೂ ಶಾಲೆಯ ಜೊತೆ […]

5 ರಿಂದ 7 ನೇ ತರಗತಿಯವರೆಗಿನ ಪೋಷಕರ ಸಭೆ

5 ರಿಂದ 7 ನೇ ತರಗತಿಯವರೆಗಿನ ಪೋಷಕರ ಸಭೆ

Tuesday, June 21st, 2022

ಮಗುವಿನ ಕಲಿಕೆಯಲ್ಲಿ ಸಣ್ಣ-ಪುಟ್ಟ ವಿಷಯಗಳ ಕಡೆಗೆ ನಾವು ನೀಡುವ ಗಮನವು ಮಹತ್ತರ ಪಾತ್ರ ವಹಿಸುತ್ತದೆ -ಡಾ|ಶೋಭಿತಾ ಸತೀಶ್, ಪ್ರಾಂಶುಪಾಲರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ೫ನೇ ತರಗತಿಯಿಂದ ೭ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಆಗಮಿಸಿ ಮಾತನಾಡಿ ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳು ಸಮಾನ ಮಹತ್ವವನ್ನು ಹೊಂದಿದ್ದು ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿರುವ ಬಗ್ಗೆ ತಿಳಿಸಿದರು. ದೀಪ […]

ಸಾಧನಾಭಿವಂದನಾ ಕಾರ್ಯಕ್ರಮ 

ಸಾಧನಾಭಿವಂದನಾ ಕಾರ್ಯಕ್ರಮ 

Thursday, June 16th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿವಂದನಾ ಸಮಾರಂಭ ಸಾಧನಾಭಿವಂದನಾ ಜೂನ್ 11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ಸ್ವಾಭಿಮಾನದಿಂದ ಕನ್ನಡವನ್ನು ಕಲಿತು ಉಳಿಸಬೇಕೆಂದರು. ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಣಿಲ ಮಹಾದೇವ ಶಾಸ್ತ್ರೀ ಮಾತನಾಡಿ, ಬಡವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ […]

ಶಾಲಾ ಚುನಾವಣೆ 2022-23

ಶಾಲಾ ಚುನಾವಣೆ 2022-23

Saturday, June 4th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 4-6-2022 ನೇ ಶನಿವಾರದಂದು 2022-23 ನೇ ಶೈಕ್ಷಣಿಕ ಸಾಲಿನ ಚುನಾವಣೆಯು ನಡೆಯಿತು.ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ರೀತಿಯಲ್ಲೇ ನಡೆಸಲಾಯಿತು. ಕೈ ಗುರುತು, ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಧಾತ್ರಿ ರೈ ನಾಯಕಿಯಾಗಿ, ಅವನಿ ಬೆಳ್ಳಾರೆ ಉಪನಾಯಕಿಯಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ದವನ್ ನಾಯಕನಾಗಿ, ಧನುಷ್ ಉಪನಾಯಕನಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಶಿಕ್ಷಕರಾದ ಶ್ರೀ ರಾಮನಾಯ್ಕ ಹಾಗೂ ಚಂದ್ರಶೇಖರ ಸುಳ್ಯಪದವುರವರು ಕಾರ್ಯನಿರ್ವಹಿಸಿದರು. ಎಲ್ಲಾ ಶಿಕ್ಷಕ ವೃಂದದವರು ಚುನಾವಣಾ […]

Highslide for Wordpress Plugin