ಭಾಷೆಯು ವ್ಯವಹಾರಕ್ಕೆ ಒಂದು ಪ್ರಮುಖ ಮಾಧ್ಯಮ. ಅದರಲ್ಲಿ ಸಂಸ್ಕೃತ ಭಾಷೆಯು ಸರಳ, ಸುಂದರ, ಮಧುರವಾದ ದೇವ ಭಾಷೆಯಾಗಿದೆ. ಈ ಭಾಷೆಯು ಭಾರತೀಯ ಭಾಷೆಗಳಲ್ಲದೆ ವಿದೇಶೀಯ ಭಾಷೆಗಳ ಮೇಲೂ ಪ್ರಭಾವ ಬೀರಿದೆ. ಹಾಗೂ ಇದು ಅತ್ಯಂತ ವೈಜ್ಞಾನಿಕವಾದ ಭಾಷೆಯಾಗಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಸಪ್ತಾಹ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮೂರ್ಕಜೆ ಗುರುಕುಲದ ವಿದ್ಯಾರ್ಥಿನಿಯಾದ ಕು. ಶೈಲಶ್ರೀಯವರು ಹೇಳಿದರು.
ಶಾಲಾ ಸ್ಮೃತಿ-ಸಂಸ್ಕೃತ ಸಂಘದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮವು ಮೈತ್ರೇಯಿ ಗುರುಕುಲದ ಪೂರ್ಣಿಮ ಮಾತಾಜಿ ಇವರಿಂದ ಭಾರತಮಾತೆಯ ಪುಷ್ಪಾರ್ಚನೆಯೊಂದಿಗೆ ಆರಂಭಗೊಂಡಿತು. ಸಹಶಿಕ್ಷಕಿಯಾದ ಅನುರಾಧ ಪ್ರಾರ್ಥಿಸಿ, ಉಮಾಮೋಹನ್ ಕಾರ್ಯಕ್ರಮ ನಿರ್ವಹಿಸಿದರು.






