ಅಕ್ಟೋಬರ್ 2 ನೇ ದಿನಾಂಕದಂದು ನಡೆಯಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಸಮಾವೇಶದ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿ ಸಭೆಯಲ್ಲಿ ಸಭಾ ಪ್ರಸ್ತುತತೆಯ ಬಗ್ಗೆ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮಾತನಾಡಿದರು.

2002-03 ರಿಂದ 2021-22 ರವರೆಗಿನ ಹಿರಿಯ ವಿದ್ಯಾರ್ಥಿಗಳನ್ನು ಸೇರಲಿರುವ ಸಮಾವೇಶ ಇದಾಗಿದ್ದು ಪ್ರತೀ ಬ್ಯಾಚ್‌ನ ಮಕ್ಕಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ ಎಂದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಘಟಕ ಸಂಯೋಜಕರಾದ ಸಹಶಿಕ್ಷಕ ರಾಮ ನಾಯ್ಕ್ ಹಾಗೂ ಸಹಶಿಕ್ಷಕಿ ಲೀಲಾವತಿ ವಿದ್ಯಾರ್ಥಿ ಸಮಾವೇಶ ದೃಷ್ಟಿಯಿಂದ ರೂಪಿಸಲಾದ ಯೋಜನೆಗಳ ಬಗ್ಗೆ ತಿಳಿಸಿದರು.