Author Archive

ಎಸ್‌ಎಸ್‌ಎಲ್‌ಸಿ 2022 - ವಿದ್ಯಾರ್ಥಿಗಳಿಗೆ ಅಭಿನಂದನೆಗಳು

ಎಸ್‌ಎಸ್‌ಎಲ್‌ಸಿ 2022 – ವಿದ್ಯಾರ್ಥಿಗಳಿಗೆ ಅಭಿನಂದನೆಗಳು

Friday, May 20th, 2022
ಕನ್ನಡ ಮನ – ಮಾತು - ಮಾಧ್ಯಮ - ಒಂದು ಅವಲೋಕನ ಹಾಗೂ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮ

ಕನ್ನಡ ಮನ – ಮಾತು – ಮಾಧ್ಯಮ – ಒಂದು ಅವಲೋಕನ ಹಾಗೂ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮ

Thursday, April 14th, 2022

ಶಾಲಾ ಕನ್ನಡ ಸಂಘ ‘ಮಹತಿ’ಯ ಆಶ್ರಯದಲ್ಲಿ ಕನ್ನಡಮನೆ-ಮಾತು-ಮಾಧ್ಯಮ ವಿಷಯಾಧಾರಿತ ಸಂವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಪ್ರಸಕ್ತ ಶೈಕ್ಷಣಿಕ ಸಾಲಿನ 9 ಹಾಗೂ 10ನೇ ತರಗತಿ ಮಕ್ಕಳು ಹಾಗೂ ಅವರ ಪೋಷಕರು, ಮುಖ್ಯ ಅಭ್ಯಾಗತರಾಗಿ ಆಹ್ವಾನಿತರಾದ ಪದಶ್ರೀ ಪುರಸ್ಕೃತ, ಆಧುನಿಕ ಭಗೀರಥ ಎಂದೇ ಕರೆಯಲ್ಪಡುತ್ತಿರುವ ಕೃಷಿ ಕ್ಷೇತ್ರದ ಸರಳ ಸಜ್ಜನಿಕೆಯ ಸಾಧಕ ಶ್ರೀಯುತ ಮಹಾಲಿಂಗ ನಾಯ್ಕ ಅವರು ಗೌರವ ಸನ್ಮಾನ ಸ್ವೀಕರಿಸಿ “ನನಗೆ ವಿಧ್ಯಾಭ್ಯಾಸವಿಲ್ಲ. ನನ್ನ ಕೆಲಸವನ್ನು ಹಳ್ಳಿಯಿಂದ ದಿಲ್ಲಿಯವರೆಗಿನ ಜನರು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಇದು ನನಗೆ ದೊರೆತ […]

10th Std. 2021-22

10th Std. 2021-22

Friday, March 18th, 2022
'ಧ್ವನಿ ಸಂಪನ್ಮೂಲಗಳ ಪರಿಣಾಮಕಾರಿ ಅನ್ವಯ' ರಜಾ - ಮಜಾ ಅಂಚೆ ಕಾರ್ಡ್ ಬರಹ.....

‘ಧ್ವನಿ ಸಂಪನ್ಮೂಲಗಳ ಪರಿಣಾಮಕಾರಿ ಅನ್ವಯ’ ರಜಾ – ಮಜಾ ಅಂಚೆ ಕಾರ್ಡ್ ಬರಹ…..

Monday, February 28th, 2022

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ -ಧಾರವಾಡ – ಇದೊಂದು ಕ್ರಿಯಾಶೀಲ, ಪ್ರಾಯೋಗಿಕ ಅನ್ವೇಷಣಾತ್ಮಕ ಶೈಕ್ಷಣಿಕ ಗುಣಮಟ್ಟಕ್ಕೆ ಮಕ್ಕಳನ್ನು ಪ್ರೇರೇಪಿಸುತ್ತಿರುವ ಸಂಸ್ಥೆಯಾಗಿದೆ. ಇದರ ಆರಂಭ ಹಾಗೂ ಪೂರಣ ಅನ್ನೋದು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತಕ್ಕೆ ಜೋಡಿಕೊಂಡಿರುವ ಯೋಜನೆಗಳಾಗಿವೆ. ಕರ್ನಾಟಕದಾದ್ಯಂತ ಆಸಕ್ತ ಹಾಗೂ ಪ್ರಯೋಗಾತ್ಮಕ ಯೋಜನೆಗಳನ್ನು ಜೋಡಿಸಿ ಕೊಂಡಿರುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಯೋಜನೆಯ ಸಹಕಾರ- ಸಹಭಾಗಿತ್ವ ನೀಡುತ್ತಿರುವ ಧ್ವನಿ ಸಂಪನ್ಮೂಲ ಕೇಂದ್ರವು ಒಂದರಿಂದ ಏಳನೇ ತರಗತಿಯ ಪಠ್ಯ ವಿಷಯಗಳಿಗೆ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ಈ ಸಂಪನ್ಮೂಲಗಳು ಉತ್ತಮ ಗುಣಮಟ್ಟದವುಗಳಾಗಿದ್ದು, […]

ಪೋಷಕರ ಸಭೆ

ಪೋಷಕರ ಸಭೆ

Monday, February 28th, 2022

ದಿನಾಂಕ 18 -2 -2022 ಶನಿವಾರದಂದು ಪ್ರಸಕ್ತ ಶೈಕ್ಷಣಿಕ ಸಾಲಿನ ನಾಲ್ಕನೇ ಹಂತದ ಪೋಷಕರ ಸಭೆ ಕರೆಯಲಾಗಿತ್ತು. FA-4 ಪರೀಕ್ಷೆಯ ಪ್ರಗತಿ ಪರಿಶೀಲನೆಗೆ ಕರೆಯಲಾದ ಸಭೆಗೆ ಕ್ಲಪ್ತ ಸಮಯಕ್ಕೆ ಬಂದು ತಮ್ಮ ಮಕ್ಕಳ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ಅವಲೋಕನದಲ್ಲಿ ಪೋಷಕರು ಭಾಗವಹಿಸಿದರು. ವಿಭಾಗಶಃ ಕರೆಯಲಾದ ಈ ಸಭೆ ಆಯಾ ತರಗತಿಯಲ್ಲಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ನಡೆಯಿತು.1ರಿಂದ 9ನೇ ತರಗತಿವರೆಗೆ ಮಕ್ಕಳ ಪೋಷಕರು ವ್ಯಕ್ತಪಡಿಸಿದ ಅಭಿಪ್ರಾಯ ಸಲಹೆಗಳು ಈ ಕೆಳಗಿನಂತಿವೆ. ಅಭಿಪ್ರಾಯ ???? ಒಂದೊಂದು […]

'ವೃತಿಕಾ' ವಿಜ್ಞಾನ ಸಂಘದಿಂದ - ʼನಮ್ಮ ಶಾಲೆ - ಹಸಿರು ಶಾಲೆʼ ಕಾರ್ಯಕ್ರಮ

‘ವೃತಿಕಾ’ ವಿಜ್ಞಾನ ಸಂಘದಿಂದ – ʼನಮ್ಮ ಶಾಲೆ – ಹಸಿರು ಶಾಲೆʼ ಕಾರ್ಯಕ್ರಮ

Tuesday, February 22nd, 2022

ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಯೋಜನೆಗಳಲ್ಲಿ ಒಂದಾದ ‘ಹಸಿರು – ಶಾಲಾ’ ಪರಿಕಲ್ಪನೆಗೆ ವರ್ಷಾರಂಭದಲ್ಲಿ ಚಾಲನೆ ದೊರೆತಿತ್ತು. ಈ ಹಿಂದೆ ಮಕ್ಕಳು ತಮ್ಮ ಹುಟ್ಟುಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ ವರ್ಷ ಮಗು ತನ್ನ ಹುಟ್ಟು ಹಬ್ಬದಂದು ಶಾಲಾ ವೃತಿಕಾ ವಿಜ್ಞಾನ ಸಂಘಕ್ಕೆ ಒಂದು ಗಿಡ ನೀಡಿ ಹಸಿರು ಶಾಲೆ ಯೋಜನೆಗೆ ಕೈಜೋಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವು ಪೋಷಕರು ಹೂವು, ತರಕಾರಿ, ಅಡಿಕೆ, ಬಾಳೇ ಸಸಿಗಳನ್ನು […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು

ವಿದ್ಯಾಧ್ವನಿ – ಶೈಕ್ಷಣಿಕ ಅರಿವು

Wednesday, February 16th, 2022

ಶಾಲಾ ಶೈಕ್ಷಣಿಕ ಯೋಜನಾ ಅರಿವು – ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ 10 ನೇ ತರಗತಿಯ ಮಕ್ಕಳಿಗೆ ಮುಂದಿನ ಹಂತದ ಶೈಕ್ಷಣಿಕ ವಿಷಯ ಆಯ್ಕೆಯ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ ಬಂದಂತಹ ಪ್ರಾಧ್ಯಾಪಕ ವೃಂದದವರಿಂದ ಪದವಿಪೂರ್ವ ಹಾಗೂ ತಾಂತ್ರಿಕ ತರಗತಿ ಸಂಬಂಧಿ ಆಯ್ಕಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಾಗಾರದಲ್ಲಿ ಮುಂದಿನ ಹಂತದ ವೃತ್ತಿಪರ ಉನ್ನತ ವಿದ್ಯಾಭ್ಯಾಸದ ಬಗ್ಗೆಯೂ ಮಾಹಿತಿ ನೀಡಲಾಯಿತು. ಶಾಲಾ ಸಹ ಶಿಕ್ಷಕ ವೃಂದದವರೂ […]

ಸಾನಿಧ್ಯ - ಸಹ ಸ್ಪಂದನ ಯೋಜನೆ

ಸಾನಿಧ್ಯ – ಸಹ ಸ್ಪಂದನ ಯೋಜನೆ

Wednesday, February 16th, 2022

ಶಾಲಾ 8 ನೇ ತರಗತಿಯ ವಿದ್ಯಾರ್ಥಿಯಾದ ಧನುಷ್ ಸುಮಾರು 3 ತಿಂಗಳಿಂದ ಮೆದುಳು ಜ್ವರದಿಂದ ಅಸ್ವಸ್ಥ ಸ್ಥಿತಿಯಲ್ಲಿ ಇದ್ದು ಈತನ ಚಿಕಿತ್ಸೆಯ ವೆಚ್ಚಕ್ಕಾಗಿ ಶಾಲಾ ವತಿಯಿಂದ ಪೋಷಕರಲ್ಲಿ ಆರ್ಥಿಕ ರೂಪದ ಸಹಕಾರ ಕೇಳಲಾಗಿತ್ತು. ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿಯ ಮಕ್ಕಳ ಪೋಷಕರು ತತ್ಸಬಂಧಿ ವಿಷಯಕ್ಕೆ ನೀಡಿದ ಸ್ಪಂದನ ಸಹಕಾರ ಸದಾ ಸ್ಮರಣೀಯವಾಗಿದ್ದು, ಪ್ರತಿ ತರಗತಿಯಿಂದ ಸಂಗ್ರಹವಾದ ಹಣದ ಮೊತ್ತದ ವಿವರವನ್ನು ಆಡಳಿತ ಮಂಡಳಿ, ಪೋಷಕರಿಗೆ ನೀಡಲಾಯ್ತು. ತರಗತಿಗಳ ಸಂಗ್ರಹದ ಮೊತ್ತ, ವಿವೇಕಾನಂದ ವಿದ್ಯಾವರ್ಧಕ ಸಂಘ, ಶಾಲಾ ಆಡಳಿತ […]

ಪುತ್ತೂರಿನಲ್ಲಿ ಗಮಕ ಕಲಾ ಪರಿಷತ್ತಿನ ಕಾರ್ಯ ಚಟುವಟಿಕೆ ಆರಂಭ

ಪುತ್ತೂರಿನಲ್ಲಿ ಗಮಕ ಕಲಾ ಪರಿಷತ್ತಿನ ಕಾರ್ಯ ಚಟುವಟಿಕೆ ಆರಂಭ

Wednesday, February 16th, 2022

ಕರ್ನಾಟಕ ಗಮಕ ಕಲಾ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಪದಗ್ರಣ ಸಮಾರಂಭವು ನಡೆಯಿತು. ಇಲ್ಲಿನ ತೆಂಕಿಲ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2021- 22 ನೆ ಸಾಲಿನ ಗಮಕ ಕಲಾ ಪರಿಷತ್ತು ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರವು ನೆರವೇರಿತು.ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ ಬಾರ್ಯ.ಉಪಾಧ್ಯಕ್ಷರಾಗಿ ಈಶ್ವರ ಭಟ್ ಗುಂಡ್ಯಡ್ಕ. ಕಾರ್ಯದರ್ಶಿಯಾಗಿ ಆಶಾ ಬೆಳ್ಳಾರೆ. ಉಪ ಕಾರ್ಯದರ್ಶಿಯಾಗಿ ಅಪೂರ್ವಗುಂಡ್ಯಡ್ಕ. ಸಂಚಾಲಕರಾಗಿ ಹರಿಣಾಕ್ಷಿ ಜೆ ಶೆಟ್ಟಿ. ಕಾರ್ಯಕ್ರಮ ಸಂಯೋಜಕರಾಗಿ ಶಾಲಾ ಸಹ ಶಿಕ್ಷಕರಾದ ವೀಣಾ ಸರಸ್ವತಿ, ಚಂದ್ರಶೇಖರ್, […]

'ಸಾನಿಧ್ಯ'  : ಮನೆ - ಮನ ಭೇಟಿಗೊಂದು ವೇದಿಕೆಗೆ ಚಾಲನೆ

‘ಸಾನಿಧ್ಯ’  : ಮನೆ – ಮನ ಭೇಟಿಗೊಂದು ವೇದಿಕೆಗೆ ಚಾಲನೆ

Wednesday, February 16th, 2022

“ಸಮಯವಿದ್ದಾಗ ಆಪ್ತರನ್ನು ಕಾಣಲು ಮಾತನಾಡಿಸಲು ಹೋಗುವ ಜನರ ಬಗೆಯೊಂದಾದರೆ, ಸಮಯ ಹೊಂದಿಸಿಕೊಂಡು ಸಹಸಂಬಂಧ ಗಟ್ಟಿಗೊಳಿಸುವವರು ಒಂದಷ್ಟು ಮಂದಿ. ನಮ್ಮ ಶಾಲೆಯಿಂದ ಮಕ್ಕಳ ಭೇಟಿ ಈ ಉದ್ದೇಶದಿಂದ ನಡೆಯಬೇಕಿದೆ. ಶಾಲೆ ಸಮಾಜದ ಬಹುಮುಖ್ಯ ಅಂಗ. ನಮ್ಮಿ ಶಾಲೆಯಲ್ಲಿ ಕಲಿತು ತೆರಳುವ ಮಕ್ಕಳು ಇಲ್ಲಿನ ಕಾರ್ಯಚಟುವಟಿಕೆಗಳ ಪ್ರತಿಬಿಂಬದಂತೆ. ವಿದ್ಯಾರ್ಥಿಯ ಜೀವನದಲ್ಲಿ ಪೋಷಕರೂ, ಶಿಕ್ಷಕರೂ, ಸಮಾಜವೂ ಪ್ರಮುಖ ಪಾತ್ರವಹಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಗಮನಿಸುತ್ತಾ, ಅವರ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಈ ದಿಶೆಯಿಂದ […]

ರಥಸಪ್ತಮಿ ಕಾರ್ಯಕ್ರಮ ಆಚರಣೆ

ರಥಸಪ್ತಮಿ ಕಾರ್ಯಕ್ರಮ ಆಚರಣೆ

Thursday, February 10th, 2022

ರಥಸಪ್ತಮಿಯಂದು ನಮ್ಮ ಮೈಸೋಕುವ ಬಿಸಿಲಿಗೆ ವಿಶೇಷ ಶಕ್ತಿಯಿದ್ದು ಇದು ಶಾರೀರಿಕ ಸುಸ್ಥಿತಿಗೆ ಸಹಕಾರಿಯಾಗಿದೆ. ಆದ್ದರಿಂದ ಈ ದಿನದ ಸೂರ್ಯ ನಮಸ್ಕಾರಕ್ಕೆ ವಿಶೇಷ ಪ್ರಾಶಸ್ತ್ಯವಿರುತ್ತದೆ – ವಸಂತ ಸುವರ್ಣ, ಶಾಲಾ ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಿತು. ಶಾಲಾ ದೈಹಿಕ ಹಾಗೂ ಯೋಗಾಭ್ಯಾಸ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ರಂಗಪ್ಪ, ಗಣೇಶ್, ವೀಣಾಸರಸ್ವತಿ ಇವರ ಸಂಯೋಜನೆಯಲ್ಲಿ ದಿನಾಂಕ 31.01.2022ರಂದು ಶಾಲಾ ಏಕಲವ್ಯ ಕ್ರೀಡಾ ಪ್ರಕಲ್ಪದ ಆಯೋಜನೆಯಲ್ಲಿ ಆರಂಭಗೊಂಡು […]

73ನೇ ಗಣರಾಜ್ಯೋತ್ಸವ ಆಚರಣೆ

73ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2022

ದಿನಾಂಕ 26-01-2022ನೇ ಬುಧವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ತೆಂಕಿಲ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 73ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನಿಕ ಮೇಜರ್ ಸುಬೆದಾರ್ ಶ್ರೀ ಚಂದ್ರಶೇಖರ ಅವರ ಗಣರಾಜ್ಯೋತ್ಸವದ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ’ಇಂದು ನಾವು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ, ಭಾರತದ ಪ್ರಜೆಗಳಿಗಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಸಂವಿಧಾನವನ್ನು ರೂಪಿಸಿದ ದಿನವಾಗಿದೆ. ಇದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ರಾಜೇಂದ್ರಪ್ರಸಾದ್ರವರು ನೀಡಿದ ಕೊಡುಗೆ ಅತ್ಯಂತ […]

ವಿದ್ಯಾ ಸ್ಪಂದನ

ವಿದ್ಯಾ ಸ್ಪಂದನ

Monday, January 24th, 2022

ವಿಶೇಷ ಆಹ್ವಾನಿತರ ಶಾಲಾ ಭೇಟಿ ಕಾರ್ಯಕ್ರಮದಲ್ಲಿ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಪುತ್ತೂರಿನವರಾದ ಶ್ರೀಯುತ ವಿನಾಯಕ ಕುಡ್ವ ಇವರು ನಮ್ಮ ಶಾಲೆಗೆ ಭೇಟಿ ನೀಡಿದ್ದು ಶಾಲಾ ಪ್ರಾರ್ಥನೆ ಸರಸ್ವತಿ ವಂದನೆಯಲ್ಲಿ ಪಾಲ್ಗೊಂಡರು. ಅನಂತರ ಶಾಲಾ ಭೌತಿಕ ವ್ಯವಸ್ಥೆಯನ್ನು ಅವಲೋಕಿಸಿ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿ ಸಲಹೆ – ಮಾರ್ಗದರ್ಶನ ನೀಡಿದರು.

ECO Zone ತರಬೇತಿ

ECO Zone ತರಬೇತಿ

Wednesday, January 19th, 2022

ಕಿರ್ಲೋಸ್ಕರ್ ಮೋಟರ್ಸ್ ಕೈಗಾರಿಕಾ ವಲಯ ಬಿಡದಿ ವತಿಯಿಂದ ನಡೆದ Eco Zone ತರಬೇತಿ ಕಾರ್ಯಾಗಾರ ವಿವೇಕಾನಂದ ಕನ್ನಡ ಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. ಸಹಶಿಕ್ಷಕಿ ಪುಷ್ಪಾವತಿ ಮತ್ತು ಗೌತಮಿ ಇವರ ಸಂಯೋಜನೆಯಲ್ಲಿ ಜರುಗಿದ ತರಬೇತಿಯನ್ನು ಇಕೋ-ಝೋನ್‌ನ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು. ತರಬೇತಿಯಲ್ಲಿ ಚಿಟ್ಟೆಗಳ ಜೀವನ ಚಕ್ರ, ಆಹಾರ ಸರಪಳಿ, ಔಷಧೀಯ ಸಸ್ಯಗಳು, ಸಸ್ಯ-ಪ್ರಾಣಿ ವೈವಿಧ್ಯತೆಯನ್ನು ನಾವು ಶಾಲೆಗಳಲ್ಲಿ ಹೇಗೆ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು. ಅನಂತರ ಮಕ್ಕಳು ನಾವು ಪಡೆದ ಮಾಹಿತಿಗೆ ಅನುಗುಣವಾಗಿ ಔಷಧೀಯ ಸಸ್ಯಗಳನ್ನು ನೆಡುವುದರೊಂದಿಗೆ […]

ಮಕರ ಸಂಕ್ರಾಂತಿ ಆಚರಣೆ

ಮಕರ ಸಂಕ್ರಾಂತಿ ಆಚರಣೆ

Friday, January 14th, 2022

ಇಂದು ಮಕರ ಸಂಕ್ರಮಣ….ಪರ್ವಕಾಲ….. ಭಾರತೀಯರಲ್ಲಿ ಹಬ್ಬಗಳ ಆಚರಣಾ ಸಂಭ್ರಮಕ್ಕೆ ವೈಜ್ಞಾನಿಕ….ಧಾರ್ಮಿಕ…. ಸಾಂಸ್ಕೃತಿಕ…..ಮಹತ್ವವಿದೆ. ಎಲ್ಲಾ ಶಕ್ತಿಗಳ ಮೂಲ ಸೂರ್ಯನನ್ನು ಒಳಗೊಂಡಂತೆ ಪ್ರಕೃತಿಯ ಆರಾಧನೆಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನ ನೀಡುವುದರೊಂದಿಗೆ ಸಂರಕ್ಷಣಾ ಜವಾಬ್ದಾರಿ ಇರುವ ಮನುಷ್ಯನಿಗೆ ಈ ಎಲ್ಲಾ ಆಚರಣೆಗಳೂ ಸಂತೋಷದ ಜೊತೆಗೆ ಒಂದು ಪ್ರಾಕೃತಿಕ ಎಚ್ಚರಿಕೆ ನೀಡುತ್ತಿರುವುದು ಉಲ್ಲೇಖನೀಯ. ಚಿಕ್ಕಂದಿನಿಂದಲೇ ನಮ್ಮಲ್ಲಿ ಈ ಬಗೆಯ ಪ್ರಜ್ಞೆ ಮೂಡಬೇಕು.ಈ ದಿಶೆಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲೂ ಮಕರ ಸಂಕ್ರಾಂತಿ ಆಚರಿಸಲಾಯಿತು. ಸೂರ್ಯನ ಬೆಳಗ್ಗಿನ ಪ್ರಶಾಂತ ಕಿರಣಗಳಿಗೆ ಮೈ ಒಡ್ಡುವ […]

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ಸ್ಪರ್ಧೆ

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ಸ್ಪರ್ಧೆ

Friday, January 14th, 2022

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಲೆಯಲ್ಲಿ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು. ಇದರಲ್ಲಿ ವಿವೇಕಾನಂದ ಭಾವ ಚಿತ್ರ ಬಿಡಿಸುವುದರಲ್ಲಿ ಶ್ರೀ ಗಣೇಶ – ಪ್ರಥಮ, ರಮ್ಯ ಎನ್ – ದ್ವಿತೀಯ ಭಾಷಣ ಸ್ಪರ್ಧೆ – ಆಶಾ.ಕೆ – ಪ್ರಥಮ, ರಮ್ಯ ಎನ್ – ದ್ವಿತೀಯ ಪ್ರಬಂಧ – ಆಶಾ.ಕೆ – ಪ್ರಥಮ, ಪ್ರಸನ್ನ ಕುಮಾರಿ – ದ್ವಿತೀಯ ಕವನ ರಚನೆ – ಸುಲೋಚನ – ಪ್ರಥಮ, ರಮ್ಯ ಎನ್ – ದ್ವಿತೀಯ ಕಥಾ […]

ವಿವೇಕಾನಂದ ಜಯಂತಿ 

ವಿವೇಕಾನಂದ ಜಯಂತಿ 

Wednesday, January 12th, 2022

ವಿಶ್ವದಲ್ಲಿ ಭಾರತದ ಬಗೆಗಿನ ನಕಾರಾತ್ಮಕ ದೃಷ್ಟಿಕೋನಕ್ಕೆ ವೈಚಾರಿಕವಾಗಿ ಸಕಾರಾತ್ಮಕ  ಉತ್ತರ ನೀಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದ. ಬಾಲ್ಯದಿಂದಲೇ ಅವರ ಈ ಬಗೆಯ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮೀ ಆಚರಣೆಗೆ ಮಹತ್ವ ಬರಬೇಕು ಎಂದು ನುಡಿದವರು ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಇವರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಜನವರಿ 12 ರಂದು ಆಚರಿಸಲಾದ ವಿವೇಕಾನಂದ ಜಯಂತಿಯಂದು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.  ಶಾಲಾ ಮಕ್ಕಳ ವಿವೇಕವಾಣಿ, ಬಾಲ್ಯದ ಕಥೆ, ಚಾಗಿ […]

10 ನೇ ತರಗತಿಯ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ

10 ನೇ ತರಗತಿಯ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ

Monday, January 10th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ಮಕ್ಕಳಿಗೆ ಆಯೋಜಿಸಲಾಗಿದ್ದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರ ಸಭಾ ಅಧ್ಯಕ್ಷರಾದ ಶ್ರೀಯುತ ಜೀವಂದರ್ ಜೈನ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಲಸಿಕಾ ಅಭಿಯಾನದ ಮಹತ್ವ ತಿಳಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿರಾದ ಶ್ರೀಮತಿ ನಿಶಾ ಹಾಗೂ ಶ್ರೀಮತಿ ಮೀನಾಕ್ಷಿ, ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.    

ಭಜನಾ ಕಾರ್ಯಕ್ರಮ

ಭಜನಾ ಕಾರ್ಯಕ್ರಮ

Wednesday, January 5th, 2022

ವಿದ್ಯಾರ್ಥಿಗಳು ಕೆದಿಲ ಗ್ರಾಮದಲ್ಲಿರುವ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ದಿನಾಂಕ 25-12-2021 ಮತ್ತು ಶ್ರೀರಾಮ ಭಜನಾ ಮಂದಿರದಲ್ಲಿ 1-1-2022 ರಂದು ನಡೆದ ಶನೀಶ್ವರ ಪೂಜೆಯ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 40 ವಿದ್ಯಾರ್ಥಿಗಳು, 2 ಶಿಕ್ಷಕರೂ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಶಿಸ್ತು ಬದ್ಧವಾಗಿ ಭಜನೆ ಹಾಡಿ ಅಲ್ಲಿ ನೆರೆದ ಭಕ್ತ ಬಾಂಧವರ ಗಮನ ಸೆಳೆದರು.

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

Thursday, December 30th, 2021

ಡಿಪಾರ್ಟ್‌ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ಇನ್‌ಸ್ಪೈರ್ ಅವಾರ್ಡ್ ಮಾನಕ್ 2021-22 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಚಿನ್ಮಯ ಮಜಿ ಮತ್ತು ತನ್ಮಯ್ ಕೃಷ್ಣ ಆಯ್ಕೆಯಾಗಿದ್ದಾರೆ.  

ಸದೃಢ ಭಾರತ

Friday, December 17th, 2021
ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

Thursday, December 16th, 2021

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಿದ್ದು ಶಿಕ್ಷಕರಿಗೂ, ಪೋಷಕರಿಗೂ ಸಮಾಧಾನ ತಂದಿದೆ. ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳಿಗೆ ಪೂರಕವಾದ ಆರೋಗ್ಯಕರ, ಸ್ವಚ್ಚ ಕಲಿಕಾ ವಾತಾವರಣವನ್ನು ಪುನನಿರ್ಮಾಣ ಮಾಡುವಲ್ಲಿ ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಶಿಕ್ಷಣದೊಂದಿಗೆ ಆಸಕ್ತ ಮಕ್ಕಳಿಗೆ ವಿಶೇಷ ತರಗತಿಗಳಾದ ಭರತನಾಟ್ಯ, ಸಂಗೀತ ಚಿತ್ರಕಲೆ, ಯಕ್ಷಗಾನ, ಕರಾಟೆ ಮುಂತಾದವುಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿದೆ ಎಂದು ವಿದುಷಿ ಪ್ರೀತಿಕಲಾ – ನಿರ್ದೇಶಕಿ ಮೂಕಾಂಬಿಕಾ ನೃತ್ಯ ಕಲಾ ಶಾಲೆ ಪುತ್ತೂರು ತಿಳಿಸಿದರು. ಶಾಲೆಯಲ್ಲಿ ವಿದ್ವಾನ್ ದೀಪಕ್ ಕುಮಾರ್, […]

ದೌರ್ಜನ್ಯ ಮುಕ್ತಿ - ಕಾರ್ಯಕ್ರಮ

ದೌರ್ಜನ್ಯ ಮುಕ್ತಿ – ಕಾರ್ಯಕ್ರಮ

Thursday, December 16th, 2021

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಲಾದ ಉಪಗ್ರಹ ಆಧಾರಿತ ತರಬೇತಿ ’ದೌರ್ಜನ್ಯ ಮುಕ್ತಿ’ ಕಾರ್ಯವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವೀಕ್ಷಿಸಿ, ಕಾರ್ಯಕ್ರಮದಲ್ಲಿ ಹದಿಹರೆಯ ಮತ್ತು ಯುವ ಸಮುದಾಯದ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ದೌರ್ಜನ್ಯದ ಕುರಿತು ತಿಳುವಳಿಕೆ ಹಾಗೂ ದೌರ್ಜನ್ಯದಿಂದ ಮುಕ್ತರಾಗುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶವನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಸಭೆ

ಶ್ರದ್ಧಾಂಜಲಿ ಸಭೆ

Tuesday, December 7th, 2021

ಪುತ್ತೂರು ಅಲ್ಲದೆ ಹತ್ತೂರಿಗೂ ಪರಿಚಿತರಾದ ಶ್ರೀ ರಾಂ ಭಟ್ ಅವರ ಸಾರ್ಥಕ್ಯದ ಬದುಕು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಪುತ್ತೂರಿನ ಶೈಕ್ಷಣಿಕ ಮೈಲುಗಲ್ಲಾದ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಮುನ್ನಡೆಸಿದ ಹಿರಿಯರಿವರು. ಇಂದು ನಮ್ಮನ್ನಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ- ಶ್ರೀ ವಸಂತ ಸುವರ್ಣ – ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀಯುತ ರಾಂ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಖಜಾಂಚಿಯಾದ ಶ್ರೀಯುತ […]

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

Tuesday, December 7th, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳ ವಿಭಾಗಶಃ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ರಜಾ ನಂತರದ ಮಕ್ಕಳ ಶಾಲಾ ಮತ್ತು ಮನೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂವಾದ ನಡೆಯಿತು. ಕಲಿಕಾ ಚಟುವಟಿಕೆಗಳಿಗೆ ಇದೀಘ ಒಂದು ಬಗೆಯ ವೇಗ ದೊರೆತಿದ್ದು ಮಕ್ಕಳು ಹಾಗೂ ಪೋಷಕರು ಈ ದಿಶೆಯಲ್ಲಿ ಸಂತೋಷ ವ್ಯಕ್ತಪಡಿಸಿದರು. ವಿಷಯವಾರು ಶಿಕ್ಷಕರು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡದಿಂದ ಶಾಲೆಗೆ ನೀಡುತ್ತಿರುವ ಕಲಿಕಾ-ಪೂರಕ ಸಾಮಾಗ್ರಿಗಳ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. […]

’ವಿವೇಕ ಸಂಗಮ’ - ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

’ವಿವೇಕ ಸಂಗಮ’ – ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

Saturday, December 4th, 2021

ವಿದ್ಯಾರ್ಥಿ ಬದುಕಿನಲ್ಲಿ ನಾವು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಗುರಿ ಹೊಂದಬೇಕು. ಈ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ನಡೆಯಬೇಕು. ಆ ಬಗ್ಗೆ ಸರಿಯಾದ ಮತ್ತು ಸ್ಪಷ್ಟವಾದ ಮಾಹಿತಿಯ ಅಗತ್ಯವಿದೆ. – ಪೃಥ್ವಿನಾರಾಯಣ – ಹಿರಿಯ ವಿದ್ಯಾರ್ಥಿ ವಿವೇಕಾನಂದ ಕನ್ನಡ ಶಾಲೆಯ 10 ನೇ ತರಗತಿ ಮಕ್ಕಳಿಗೆ ಈ ದಿಶೆಯಲ್ಲಿ ವಿಭಿನ್ನ ವೃತ್ತಿಯಲ್ಲಿರುವ ಶಾಲಾ ಹಿರಿಯ ವಿದ್ಯಾರ್ಥಿಗಳು ವೃತ್ತಿಪರಶಿಕ್ಷಣದ ಮಾರ್ಗದರ್ಶನ ನೀಡಿದರು. ಸ್ವ ಉದ್ಯೋಗದ ಬಗ್ಗೆ ಜಿಮ್ ತರಬೇತುದಾರರಾದ ಆದರ್ಶ ಸುವರ್ಣ, ಚಾರ್ಟಡ್ ಅಕೌಂಟನ್ಸಿಯ ಬಗ್ಗೆ ಕಾರ್ತಿಕ್ ಎಸ್, […]

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) - ತರಬೇತಿ

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) – ತರಬೇತಿ

Tuesday, November 30th, 2021

“ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆ ಬರೆಯಲು ಸಿಗುತ್ತಿರುವ ತರಬೇತಿ ಹಾಗೂ ಅವಕಾಶವು ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ” – ಶ್ರೀ ಸತೀಶ್ ಭಟ್ ಬಿಳಿನೆಲೆ ಮುಖ್ಯಶಿಕ್ಷಕರು ಶ್ರೀರಾಮಕುಂಜೇಶ್ವರ ಪ್ರೌಢಶಾಲೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಿದ ಶ್ರೀಯುತರು ಈ ಪರೀಕ್ಷೆ ಬರೆಯಲಿರುವ ಪ್ರತಿ ಒಬ್ಬ ವಿದ್ಯಾರ್ಥಿ ತನ್ನ ಸಮಯ ಮತ್ತು ಕಲಿಕಾ ಸಾಮರ್ಥ್ಯವನ್ನು ತಯಾರಿಯ ಕಡೆ ನೀಡಬೇಕು ಎಂದರು.

’ಸಂವಿಧಾನ ದಿನಾಚರಣೆ’

’ಸಂವಿಧಾನ ದಿನಾಚರಣೆ’

Friday, November 26th, 2021

ಒಂದು ಮನೆಯು ಸುಸೂತ್ರವಾಗಿ ನಡೆಯಲು ಕೆಲವಾರು ಪ್ರಗತಿಪರ ನಿಯಮಗಳಿವೆ. ಒಂದು ಶಾಲೆ ಉತ್ತಮವಾಗಿ ನಡೆಯಲು ಹಲವಾರು ಶಾಲಾ ನಿಯಮಗಳಿಗೆ ಬದ್ಧರಾಗಿ ನಡೆಯಬೇಕಾಗುತ್ತದೆ. ಅದೇ ರೀತಿ ನಮ್ಮೀ ಭಾರತ ದೇಶ ವ್ಯವಸ್ಥಿತ ಹಾಗೂ ಅಭಿವೃದ್ಧಿಯತ್ತ ಮುನ್ನಡೆಯಲು ನಮ್ಮ ಸಂವಿಧಾನವೇ ನಮಗೆ ಕೈಮರವಾಗಿದೆ. ಇದು ಸರಕಾರ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಮೂಡಿಸುವ ಸೇತು ಆಗಿದೆ. – ತನ್ಮಯ್ ಕೃಷ್ಣ – ವಿದ್ಯಾರ್ಥಿ ನವಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. ಡಾ. ಬಿ.ಆರ್ ಅಂಬೇಡ್ಕರ್ […]

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Tuesday, November 23rd, 2021

2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕ ಇದರ ವತಿಯಿಂದ ಜರುಗಿದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವು ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಉತ್ತೀರ್ಣರಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮಿಥುನ್ ವಿ.ಕೆ (ಬಲ್ನಾಡು ನಿವಾಸಿ ಕೃಷ್ಣಪ್ಪಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ), ಅರ್ಚನಾ ಪಿ.ಕೆ ( ನಗರ ನಿವಾಸಿ ಪ್ರಭಾಕರ ಮತ್ತು ಲೀಲಾವತಿ ದಂಪತಿಗಳ ಪುತ್ರಿ), ಸಂಹಿತಾ ಶರ್ಮ ಬಿ.ಎಸ್ (ಸಾಲ್ಮರ ನಿವಾಸಿ ರಾಜೇಶ್ ಶರ್ಮ […]

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

Tuesday, November 23rd, 2021

ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಹೆಗ್ಗುರುತು ಇಲ್ಲಿ ನೀಡುವ ಗುಣಾತ್ಮಕ ಶಿಕ್ಷಣವಾಗಬೇಕು. ಈ ದಿಶೆಯಲ್ಲಿ ಸೇವಾ ಮನೋಭಾವದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ನುರಿತರಾದ ಸಾಮಾಜಿಕವಾಗಿ ಗುರುತಿಸಲ್ಪಡುತ್ತಿರುವ ವ್ಯಕ್ತಿಗಳು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ನಿತ್ಯ-ನಿರಂತರ ಶ್ರಮ ಹಾಗೂ ಪೋಷಕರ ಸಹಕಾರದೊಂದಿಗೆ ನಮ್ಮೀ ಶೈಕ್ಷಣಿಕಗುರಿ ಸಾಫಲ್ಯ ಹೊಂದಬೇಕು ಎಂದು ಡಾ. ಕೃಷ್ಣ ಭಟ್‌ಕೊಂಕೋಡಿ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ಆಡಳಿತ ಮಂಡಳಿ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಶ್ರೀಯುತರು […]

’ಕಲಾ ಸಾನಿಧ್ಯ’ - ಚಿತ್ರಕಲಾ ವೇದಿಕೆಯಿಂದ ಜರುಗಿದ ಕಲಾ ಪ್ರದರ್ಶನ

’ಕಲಾ ಸಾನಿಧ್ಯ’ – ಚಿತ್ರಕಲಾ ವೇದಿಕೆಯಿಂದ ಜರುಗಿದ ಕಲಾ ಪ್ರದರ್ಶನ

Tuesday, November 23rd, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಕಲಾ ಸಾನಿಧ್ಯ’ಚಿತ್ರಕಲಾ ವೇದಿಕೆಯಿಂದ ಮಕ್ಕಳ ರಜಾ ಸಮಯದ ಕಾರ್ಯಚಟುವಟಿಕೆಗಳು ಪ್ರದರ್ಶನಗೊಂಡವು ಮಕ್ಕಳ ತರಗತಿ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಂತೆ ಚಿತ್ರರಚನೆ, ಪೇಪರ್‌ಕ್ರಾಪ್ಟ್, ಕಸದಿಂದ ರಸ, ಹೊಲಿಗೆ ಮುಂತಾದವುಗಳು ತೊಡಗಿಕೊಂಡಿದ್ದ ಮಕ್ಕಳ ಕಲಾ ಪ್ರದರ್ಶನವನ್ನು ವೀಕ್ಷಿಸಿದ ಪೋಷಕರು ಹರ್ಷ ವ್ಯಕ್ತಪಡಿಸಿದರು. ಮಕ್ಕಳ ರಜಾ ಕಾರ್ಯ ನೋಡಿ ಖುಷಿಯಾಯಿತು. ರಜಾ ದಿನಗಳಲ್ಲಿ ಪಠ್ಯ ಕಲಿಕೆಯೊಂದಿಗೆ ಕರಕುಶಲ ಕಲೆ, ಚಿತ್ರರಚನೆಯಲ್ಲಿ ನನ್ನ ಮಕ್ಕಳು ತೊಡಗಿದ್ದು ನೋಡಿ ಸಮಾಧಾನವೆನಿಸಿತ್ತು. ಇಂದು ಈ ರೀತಿ ಅವರ ಕಾರ್ಯಗಳು ಪ್ರದರ್ಶನಗೊಳ್ಳುತ್ತಿರುವುದು […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿದ್ಯಾಧ್ವನಿ – ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

Tuesday, November 23rd, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ 6 ರಿಂದ 9 ನೇ ತರಗತಿಯ ಮಕ್ಕಳ ಪೋಷಕರ ಸಭೆಯನ್ನು ವಿಭಾಗಶಃ ಆಯಾ ತರಗತಿಗಳಲ್ಲಿ ನಡೆಯಿತು. ಪ್ರಸ್ತುತ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆ, ಮನೆ ಕಾರ್ಯಗಳನ್ನು ಮಾಡಲು ನೀಡುತ್ತಿರುವ ಸಮಯ ಶಾಲಾ ಪಠ್ಯಗಳಲ್ಲಿ ಅವರಿಗೆ ನೀಡುತ್ತಿರುವ ಸಮಯ, ಶಾಲಾ ಪಠ್ಯಗಳಲ್ಲಿ ಅವರಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಂತರ ಅಮಧ್ಯಾವಧಿ ಪರೀಕ್ಷೆಯ ಉತ್ತರ ಪತ್ರಿಕೆ ಹಾಗೂ ಪ್ರಗತಿ ಪತ್ರವನ್ನು ಪೋಷಕರಿಗೆ ನೀಡಲಾಯಿತು. ಶಾಲಾ ದಿನಗಳು ಪುನರಾರಂಭಗೊಂಡು, ಶೈಕ್ಷಣಿಕ ವಿಚಾರಗಳು […]

ಕನಕ ಜಯಂತಿ ಆಚರಣೆ

ಕನಕ ಜಯಂತಿ ಆಚರಣೆ

Monday, November 22nd, 2021

“ದಾಸವರೇಣ್ಯರಲ್ಲಿ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವವರು ಕನಕದಾಸರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಹಾಗೂ ಮುಂಡಿಗೆಗಳು ಸಂಗೀತ ಪ್ರಪಂಚದ ಅಮೋಘರತ್ನಗಳಾಗಿವೆ” ಕುಮಾರಿ ಸಂಹಿತಶರ್ಮ ವಿದ್ಯಾರ್ಥಿನಿ. ವಿವೇಕಾನಂದ ಕನ್ನಡ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕನಕಜಯಂತಿ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಟ್ಟಿತು. ಇನ್ನೋರ್ವ ವಿದ್ಯಾರ್ಥಿನಿ ಮಾತನಾಡುತ್ತಾ “ಕನಕದಾಸರ ಬಾಲ್ಯ, ಆಧ್ಯಾತ್ಮಿಕ, ಸಾಮಾಜಿಕ ಕಳಕಳಿ ಅನುಕರಣೀಯವಾದುದು. ‘ನಾನು’ ಎಂಬ ಅಹಂಕಾರ ಭಾವ ಹೋದಾಗ ಒಬ್ಬ ವ್ಯಕ್ತಿ ನೈಜ ವ್ಯಕ್ತಿಯಾಗುತ್ತಾನೆ. ಕನಕದಾಸರ ಸರಳ ಭಾಷಾಶೈಲಿ ಪ್ರಸ್ತುತ […]

ಸಾಂಸ್ಕೃತಿಕ ಸಮನ್ವಯ ಪ್ರತಿಭಾ ದಿನಾಚರಣೆ

ಸಾಂಸ್ಕೃತಿಕ ಸಮನ್ವಯ ಪ್ರತಿಭಾ ದಿನಾಚರಣೆ

Sunday, November 14th, 2021

ವಿದ್ಯಾರ್ಥಿ ಬದುಕಿನಲ್ಲಿ ಶೈಕ್ಷಣಿಕ ಚಟುವಟಿಗಳಷ್ಟೇ ಪ್ರಾಮುಖ್ಯತೆ ಹೊಂದಿರುವ ವ್ಯಕ್ತಿತ್ವ ವಿಕಸನ ಭಾಗವೇ ಸಾಂಸ್ಕೃತಿಕ ಚಟುವಟಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ವೈವಿಧ್ಯತೆಯ ಪರಿಚಯ ಮಾಡಿಸುವ ಶಾಲಾ ಪ್ರಯತ್ನ ಶ್ಲಾಘನೀಯ ಎಂದು ಶ್ರೀಮತಿ ಕೃಷ್ಣವೇಣಿ ಮುಳಿಯ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸಮನ್ಯಯ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದರು. ಇವರ ಜೊತೆ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ನಿರ್ದೇಶಕಿ ವಿದುಷಿ ಪ್ರೀತಿಕಲಾ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಜನಾರ್ಧನ ಅರಿಯಡ್ಕ […]

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Tuesday, November 2nd, 2021

ಕನ್ನಡ ರಾಜ್ಯೋತ್ಸವದಂದು ಶಾಲಾ ಕನ್ನಡ ಸಂಘ ವಿದ್ಯಾಧ್ವನಿಯ ಆಯೋಜನೆಯಲ್ಲಿ ಪಠ್ಯ-ಪದ್ಯಗಳ ಸಾಹಿತ್ಯಿಕ ಹಿನ್ನಲೆ ಹಾಗೂ ರಾಗ ಸಂಯೋಜಿತ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಮುಖ್ಯಗುರುಗಳಾದ ಶ್ರೀಮತಿ ರೂಪಕಲಾ ಇವರು ಪ್ರೌಢಶಾಲಾ ಮಕ್ಕಳಿಗೆ ಮಾತನಾಡಿ ಕನ್ನಡ ಪಠ್ಯದ ಪದ್ಯ ಭಾಗವು ಭಾಷಾ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಬೇಕು. ಸಾಹಿತ್ಯಾಸಕ್ತಿ ಬೆಳೆದಾಗ ಕನ್ನಡ ಭಾಷಾ ಸಂಪತ್ತಿನ ಬಗ್ಗೆ ನಮ್ಮಲ್ಲಿ ಅರಿವು ಮೂಡಲು ಸಾಧ್ಯ ಎಂದರು. ಅನಂತರ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ಕನ್ನಡ ಹಾಡುಗಳ ಗಾಯನದೊಂದಿಗೆ […]

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Tuesday, October 12th, 2021

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-10-2021 ರಂದು ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಪೂಜಾ ವಿಧಿ – ವಿಧಾನಗಳನ್ನು ನೆರವೇರಿದವು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಸುಮಾರು ಪುಟಾಣಿಗಳು ಶುಭ ಮೂಹೂರ್ತವಿರಿಸಿದರು. ಮಕ್ಕಳಿಗೆ ಆರತಿ ಎತ್ತಿ ಶಾರದ ಮಾತೆಗೆ ಪುಷ್ಫ ನಮನವನ್ನು ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯ ಗುರುಗಳೂ, ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

'ಉಚಿತ ಕಾನೂನು ಅರಿವು' ಕಾರ್ಯಕ್ರಮ

‘ಉಚಿತ ಕಾನೂನು ಅರಿವು’ ಕಾರ್ಯಕ್ರಮ

Tuesday, October 5th, 2021

ವಿವೇಕಾನಂದಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ಥಳೀಯ ವಕೀಲರುಗಳಾದ ಶ್ರೀಮತಿ ಹರಿಣಾಕ್ಷಿಜೆ ಶೆಟ್ಟಿ ಹಾಗೂ ರಾಜೇಶ್ವರಿಇವರು ಆಗಮಿಸಿ ಮಕ್ಕಳ ಹಕ್ಕುಗಳು ಹಾಗೂ ಉಚಿತ ಕಾನೂನಿನ ನೆರವಿನ ಬಗ್ಗೆ ಮಾಹಿತಿ ನೀಡುವುದರಜೊತೆಗೆ ಯಾರೆಲ್ಲಾ ಈ ಉಚಿತ ಕಾನೂನಿನ ನೆರವು ಪಡೆಯಬಹುದು ಎಂಬ ವಿಚಾರವನ್ನು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸುತ್ತಾಅವರ ಸಂದೇಹಗಳನ್ನು ಬಗೆಹರಿಸಿ ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್ ಬಗ್ಗೆ ವಿಚಾರ ತಿಳಿಸಿದರು. ಇಲ್ಲಿ ವಿದ್ಯಾರ್ಥಿಗಳು ಕಾನೂನಿನ ಬಗೆಗಿನ ಹೆಚ್ಚಿನ ವಿಚಾರವನ್ನು ತಿಳಿದುಕೊಂಡರು. ಹತ್ತನೇ ತರಗತಿಯ […]

ಗಾಂಧಿ ಜಯಂತಿ -ಲಾಲ್ ಬಹದ್ದೂರ್ ಶಾಸ್ತ್ರೀ ನುಡಿ ನಮನ

ಗಾಂಧಿ ಜಯಂತಿ -ಲಾಲ್ ಬಹದ್ದೂರ್ ಶಾಸ್ತ್ರೀ ನುಡಿ ನಮನ

Saturday, October 2nd, 2021

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಯೋಜಿಸಿದ ವಿದ್ಯಾಧ್ವನಿ ಶೈಕ್ಷಣಿಕ ಅರಿವು ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಆಚರಿಸಲಾಯಿತು. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಮೌಲ್ಯಗಳು, ನೈತಿಕ ಪ್ರಜ್ಞೆ ಇತ್ಯಾದಿಗಳ ಬಗ್ಗೆ ಪ್ರಸ್ತುತ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯತೆ ಅತ್ಯವಶ್ಯಕವಾಗಿದೆ. ರಾಷ್ಟ್ರಪಿತ ಗಾಂಧೀಜಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆಸಿದ ಆದರ್ಶ ಜೀವನವು ಎಲ್ಲರಿಗೂ ಮಾರ್ಗದರ್ಶನ ನೀಡಬಲ್ಲದು. ’ಮಾಡಿ ಇಲ್ಲವೇ ಮಡಿ’ ಎಂಬಂತಹ ದಿಟ್ಟ ನಿರ್ಧಾರಗಳು ’ಜೈ ಜವಾನ್ […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು

ವಿದ್ಯಾಧ್ವನಿ – ಶೈಕ್ಷಣಿಕ ಅರಿವು

Tuesday, September 14th, 2021

ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಕಾರ್ಯಾಗಾರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 14-09-2021 ರಂದು ’ವಿದ್ಯಾಧ್ವನಿ – ಶೈಕ್ಷಣಿಕ ಅರಿವು’ ಎಂಬ ಯೋಜನೆಯಡಿಯಲ್ಲಿ ಎನ್.ಟಿ.ಎಸ್.ಇ ಪರೀಕ್ಷೆಯ ಮಾಹಿತಿ ನೀಡುವ ಕಾರ್ಯಾಗಾರವು ನಡೆಯಿತು. ಎನ್.ಟಿ.ಎಸ್.ಇ ಪರೀಕ್ಷೆಯ ರೂಪುರೇಷೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚಿನ್ಮಯಿ ಮಯ್ಯರವರು ನೀಡಿದರು. ಪರೀಕ್ಷೆ ತಯಾರಿ ಹಾಗೂ ಸಮಯದ ಹೊಂದಾಣಿಕೆಯ ಬಗ್ಗೆ ಎನ್.ಟಿ.ಎಸ್.ಇ ಪರೀಕ್ಷೆಯ ಮೊದಲ ಹಂತದಲ್ಲಿ ರಾಜ್ಯಕ್ಕೆ 20ನೇ ಸ್ಥಾನ ಗಳಿಸಿದ ಆಶ್ರಯ.ಪಿ ಇವರು ವಿದ್ಯಾರ್ಥಿಗಳಿಗೆ ತಮ್ಮ ಅನುಭವದೊಂದಿಗೆ […]

ಆರೋಗ್ಯಮಿತ್ರ : ಕೋವಿಡ್ - 19 ರ ಮಾಹಿತಿ ಕಾರ್ಯಾಗಾರ

ಆರೋಗ್ಯಮಿತ್ರ : ಕೋವಿಡ್ – 19 ರ ಮಾಹಿತಿ ಕಾರ್ಯಾಗಾರ

Wednesday, September 8th, 2021

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯೋಜನೆಗಳಲ್ಲಿ ಒಂದಾದ ಆರೋಗ್ಯಮಿತ್ರ ಪರಿಕಲ್ಪನೆಯಲ್ಲಿ ಕೋವಿಡ್- 19 ರ ಜಾಗೃತಿ ಕಾರ್ಯಾಗಾರವು ದಿನಾಂಕ 6-9-2021 ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮೊದಲ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ವಿಜಯ ಸರಸ್ವತಿ ಸಂಯೋಜಕರು, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ […]

’ವೃತಿಕಾ’ ಹಸಿರು ಯೋಜನೆ

’ವೃತಿಕಾ’ ಹಸಿರು ಯೋಜನೆ

Thursday, August 26th, 2021

2020-21 ನೇ ಸಾಲಿನಲ್ಲಿ ಶಾಲೆ ’ವೃತಿಕಾ’ ಹಸಿರು ಯೋಜನೆ ಹಮ್ಮಿಕೊಂಡಿದ್ದು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿ- ಪೋಷಕರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ಮಿತಿ ಮೀರುತ್ತಿರುವ ಭೂಮಿಯ ತಾಪಮಾನವನ್ನು ನಿಯಂತ್ರಣದಲ್ಲಿರುವ ಕ್ರಮಗಳಲ್ಲಿ ಪ್ರಮುಖವಾಗಿ ನೆಲ ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂಬ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಅಪೇಕ್ಷೆಯಂತೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದಿನಿಂದ ಶಾಲಾ ಆವರಣದಲ್ಲಿ ಸುಮಾರು 15 ಬಗೆಯ ಬಾಳೆಗಿಡಗಳನ್ನು ನೆಟ್ಟು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸಕ್ತ ವರ್ಷ ಇದನ್ನು ಇನ್ನಷ್ಟು […]

ಭರತ ವರ್ಷಾಮೃತ ಸ್ವತಂತ್ರ ಭಾರತ 75 ರ ಸಂಭ್ರಮ 

ಭರತ ವರ್ಷಾಮೃತ ಸ್ವತಂತ್ರ ಭಾರತ 75 ರ ಸಂಭ್ರಮ 

Sunday, August 15th, 2021

ಭಾರತ – ಪ್ರಾಚೀನ ನಾಗರೀಕತೆ ಹೊಂದಿದದೇಶ. ವಿಶ್ವಕ್ಕೆ ಜ್ಞಾನದ ಬೆಳಕು ಪಸರಿಸಿದ ಕೀರ್ತಿ ನಮ್ಮೀ ದೇಶದ ಹೆಗ್ಗುರುತು. ಭೌಗೋಳಿಕ ಸಾಂಸ್ಕೃತಿಕ , ಸಾಮಾಜಿಕ, ಧಾರ್ಮಿಕತೆಯಿಂದ ಸಂಪನ್ನಗೊಂಡ ನಮ್ಮೀ ದೇಶದ ಹಿರಿಮೆ ಗರಿಮೆಯ ಪರಿಚಯ ಸರಣಿ ಕಾರ್ಯಕ್ರಮವೇ ಭರತ ವರ್ಷಾಮೃತ ಸ್ವಾತಂತ್ರ್ಯ ಸಂಭ್ರಮದ 75 ನೇ ವರ್ಷದ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಬಾನುಲಿ ಕೇಂದ್ರದಿಂದ 15 ದಿನಗಳ ಸರಣಿ ಕಾರ್ಯಕ್ರಮ ಪ್ರಸಾರವಾಯಿತು. ಮಾತೃಸ್ವರೂಪಿ ಭಾರತ, ಸ್ವತಂತ್ರ ಪೂರ್ವ […]

ಎಸ್.ಎಸ್.ಎಲ್.ಸಿ ಫಲಿತಾಂಶ

ಎಸ್.ಎಸ್.ಎಲ್.ಸಿ ಫಲಿತಾಂಶ

Wednesday, August 11th, 2021

2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಜಾಹ್ನವಿ.ಸಿ.ಶೆಟ್ಟಿ 614 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಿತ್ತೂರು ಏಮಾಜೆ ನಿವಾಸಿ ಕೆ.ಚಿದಾನಂದ ಶೆಟ್ಟಿ ಮತ್ತು ರಾಜೀವಿ ದಂಪತಿಗಳ ಪುತ್ರಿ. ಪವಿತ್ರಾ ಭಟ್- 608 (ಸಂಪ್ಯ ನಿವಾಸಿ ಶಂಕರನಾರಾಯಣ ಭಟ್ ಮತ್ತು ಗೀತಾಲಕ್ಷ್ಮೀ ಕೆ ದಂಪತಿಗಳ ಪುತ್ರಿ), ಅನ್ವಿತಾ ವಿ- 603 (ಕೆದಿಲ ನಿವಾಸಿ ಧರ್ನಪ್ಪಗೌಡ ಮತ್ತು ಸರೋಜ ದಂಪತಿಗಳ ಪುತ್ರಿ) , ಅರ್ಚನಾ ಪಿ.ಕೆ- 603  (ನಗರ ನಿವಾಸಿ ಪ್ರಭಾಕರ […]

ಗೃಹ ಮಿಲನ ಕಾರ್ಯಕ್ರಮ

ಗೃಹ ಮಿಲನ ಕಾರ್ಯಕ್ರಮ

Tuesday, July 20th, 2021

ಪ್ರಸ್ತುತ ಸಮಯದದ ನಿರ್ವಹಣೆ ನಮಗೆಲ್ಲರಿಗೂ ಸವಾಲಾಗಿದೆ. ಮನೆಯೇ ಸಂಪೂರ್ಣ ಪಾಠಶಾಲೆಯಾಗಿದೆ. ಇಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಲು ಹಲವಾರು ಸಾಧ್ಯತೆಗಳು ನಮ್ಮ ಮುಂದಿವೆ. ಈ ದಿಶೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಹೆತ್ತವರು ಶಿಕ್ಷಕರು ಮತ್ತು ಮಕ್ಕಳು ವಿಭಿನ್ನ (ಶೈಕ್ಷಣಿಕ) ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರಾರು ಇತ್ಯಾತ್ಮಕ ಆಲೋಚನೆ ಮತ್ತು ಆಯೋಜನೆಗಳಲ್ಲಿ ಒಂದಾದ ಗೃಹ ಮಿಲನ- ಕೌಟುಂಬಿಕ ಸಹಮಿಲನ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿದೆ ಅನ್ನುವುದು ಹೆತ್ತವರ ಅಭಿಮತ. ಭಾರತೀಯ ’ಐಕ್ಯತಾ ಮಂತ್ರ ವಸುದೈವ ಕುಟುಂಬಕಂ’ ಪರಿಕಲ್ಪನೆಯ […]

ವಿಶ್ವಯೋಗ ದಿನಾಚರಣೆ

ವಿಶ್ವಯೋಗ ದಿನಾಚರಣೆ

Monday, June 21st, 2021

’ಯೋಗ’ ಅಂದರೆ ಜೋಡಣೆ, ಸಮ್ಯೋಗ, ಸಹಬಂಧ ಎಂಬೆಲ್ಲಾ ಅರ್ಥ ನೀಡುವ ಶಬ್ಧ ಮಾತ್ರವಲ್ಲ. ಈ ಶಬ್ದಾರ್ಥದೊಂದಿಗೆ ಭಾರತೀಯರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಭಾವನೆಗಳು ಬೆಸೆದುಕೊಂಡಿದೆ. ಯೋಗ- ಕೇವಲ ವ್ಯಾಯಾಮ, ಪ್ರಾಣಾಯಾಮ ಅನ್ನುವ ಪರಿಕಲ್ಪನೆಗೆ ಸೀಮಿತವಾಗಿಲ್ಲ. ಭಾರತೀಯರ ಭಾವನೆಗಳೊಂದಿಗೆ ಯೋಗ ಬೆರೆತು ಹೋಗಿದೆ. ಬೌದ್ಧಿಕ, ಮಾನಸಿಕ, ಶಾರೀರಕ, ತನ್ಮೂಲಕ ಸಾಮಾಜಿಕ ಅಧ್ಯಾತ್ಮಿಕ ಬೆಳವಣಿಗೆಗೆ ಯೋಗದ ಮಹತ್ತರ ಯೋಗದಾನವಿದೆ. ಯೋಗ – ಬದುಕುವ ವಿಧಾನವಾಗಿದೆ. ಭಾರತೀಯ ಬದುಕಿನ ಪರಿಚಯ ಪ್ರಾಚೀನ ಕಾಲದಿಂದಲೂ ವಿಶ್ವಕ್ಕೇ ಮಾದರಿಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಭಾರತೀಯರ […]

Highslide for Wordpress Plugin