ಭರತ ವರ್ಷಾಮೃತ ಸ್ವತಂತ್ರ ಭಾರತ 75 ರ ಸಂಭ್ರಮ 

ಭಾರತ – ಪ್ರಾಚೀನ ನಾಗರೀಕತೆ ಹೊಂದಿದದೇಶ. ವಿಶ್ವಕ್ಕೆ ಜ್ಞಾನದ ಬೆಳಕು ಪಸರಿಸಿದ ಕೀರ್ತಿ ನಮ್ಮೀ ದೇಶದ ಹೆಗ್ಗುರುತು. ಭೌಗೋಳಿಕ ಸಾಂಸ್ಕೃತಿಕ , ಸಾಮಾಜಿಕ, ಧಾರ್ಮಿಕತೆಯಿಂದ ಸಂಪನ್ನಗೊಂಡ ನಮ್ಮೀ ದೇಶದ ಹಿರಿಮೆ ಗರಿಮೆಯ ಪರಿಚಯ ಸರಣಿ ಕಾರ್ಯಕ್ರಮವೇ ಭರತ ವರ್ಷಾಮೃತ ಸ್ವಾತಂತ್ರ್ಯ ಸಂಭ್ರಮದ 75 ನೇ ವರ್ಷದ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಬಾನುಲಿ ಕೇಂದ್ರದಿಂದ 15 ದಿನಗಳ ಸರಣಿ ಕಾರ್ಯಕ್ರಮ ಪ್ರಸಾರವಾಯಿತು. ಮಾತೃಸ್ವರೂಪಿ ಭಾರತ, ಸ್ವತಂತ್ರ ಪೂರ್ವ ಭಾರತ, ಭಾರತದ ಸಂಘರ್ಷದ ಇತಿಹಾಸ, ಸಂಘರ್ಷದ ಇತಿಹಾಸದಲ್ಲಿ ಕವಿಭಾಷ್ಯ, ಭಾರತಿಯ ವೀರಾಗ್ರಣಿಯರು ಬ್ರಿಟಿಷ್ ಪೂರ್ವ ಶಿಕ್ಷಣ ಪದ್ಧತಿ ಬದಲಾದ ಬ್ರಿಟಿಷ್‌ ಕಾಲದ ಶಿಕ್ಷಣ ಪದ್ದತಿ, ನಮೋ ಭಾರತಾಂಬೆ ಎಂಬಿತ್ಯಾದಿ ವಿಷಯಗಳನ್ನು ಈ ಸರಣಿಯ ಭಾಗಗಳಾಗಿದ್ದುವು.

9-8-2021 ರಿಂದ 15-8-2021 ರವರೆಗೆ 1 ರಿಂದ 10 ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಸ್ವಂತಂತ್ರ ಭಾರತ ವೈಶಿಷ್ಟ್ಯ ಪರಿಚಯದೃಷ್ಟಿಯಿಂದಲೂ ಹಲವಾರು ಮಾಹಿತಿ ತುಣುಕುಗಳನ್ನು ಪ್ರಸಾರ ಮಾಡಲಾಯಿತು.

14 ನೇ ದಿನಾಂಕದಂದು ವಿಭಾಗಶಃ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. 15 ನೇ ದಿನಾಂಕದಂದು ವಿದ್ಯಾರ್ಥಿಗಳು ತಮ್ಮ ಮನೆಮಂದಿಯೊಂದಿಗೆ ಭಾರತಾಂಬೆಯ ಭಾವಚಿತ್ರವಿರಿಸಿ ವಂದೇ ಮಾತರಂಗೀತೆ ಹಾಡುವುದರ ಮೂಲಕ ಭಾರತ ಮಾತೆಗೆ ಪುಷ್ಫಾರ್ಚನೆ ನಡೆಸಿದರು. ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಕೀರ್ಣ ತೆಂಕಿಲದಲ್ಲಿ ವಿವೇಕಾನಂದ ಕನ್ನಡ, ಆಂಗ್ಲಮಾಧ್ಯಮ ಶಾಲೆ, ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ, ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ- ಪೂರಕ ಶಿಕ್ಷಕ ವೃಂದದವರ ಉಪಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ನಿವೃತ್ತ ಸೈನಿಕರಾದ ಶ್ರೀಯುತ ಸಂಜೀವ ಮೂಲ್ಯ ಇವರು ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭ ಹಾರೈಸಿದರು.

Highslide for Wordpress Plugin