‘ಧ್ವನಿ ಸಂಪನ್ಮೂಲಗಳ ಪರಿಣಾಮಕಾರಿ ಅನ್ವಯ’ ರಜಾ – ಮಜಾ ಅಂಚೆ ಕಾರ್ಡ್ ಬರಹ…..

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ -ಧಾರವಾಡ – ಇದೊಂದು ಕ್ರಿಯಾಶೀಲ, ಪ್ರಾಯೋಗಿಕ ಅನ್ವೇಷಣಾತ್ಮಕ ಶೈಕ್ಷಣಿಕ ಗುಣಮಟ್ಟಕ್ಕೆ ಮಕ್ಕಳನ್ನು ಪ್ರೇರೇಪಿಸುತ್ತಿರುವ ಸಂಸ್ಥೆಯಾಗಿದೆ. ಇದರ ಆರಂಭ ಹಾಗೂ ಪೂರಣ ಅನ್ನೋದು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತಕ್ಕೆ ಜೋಡಿಕೊಂಡಿರುವ ಯೋಜನೆಗಳಾಗಿವೆ. ಕರ್ನಾಟಕದಾದ್ಯಂತ ಆಸಕ್ತ ಹಾಗೂ ಪ್ರಯೋಗಾತ್ಮಕ ಯೋಜನೆಗಳನ್ನು ಜೋಡಿಸಿ ಕೊಂಡಿರುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಯೋಜನೆಯ ಸಹಕಾರ- ಸಹಭಾಗಿತ್ವ ನೀಡುತ್ತಿರುವ ಧ್ವನಿ ಸಂಪನ್ಮೂಲ ಕೇಂದ್ರವು ಒಂದರಿಂದ ಏಳನೇ ತರಗತಿಯ ಪಠ್ಯ ವಿಷಯಗಳಿಗೆ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ಈ ಸಂಪನ್ಮೂಲಗಳು ಉತ್ತಮ ಗುಣಮಟ್ಟದವುಗಳಾಗಿದ್ದು, ವಿದ್ಯಾರ್ಥಿಗಳನ್ನು ವೈವಿಧ್ಯಮಯ ಕಲಿಕಾ ಸಾಧ್ಯತೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಎಲ್ಲಾ ಸಂಪನ್ಮೂಲಗಳ ಸದುಪಯೋಗ ಪಡೆದುಕೊಳ್ಳುತ್ತಿರುವ ತಾಲೂಕಿನ ಏಕೈಕ ಶಾಲೆ ನಮ್ಮಿ ವಿವೇಕಾನಂದ ಕನ್ನಡ ಶಾಲೆ.

ಸಂಪನ್ಮೂಲ ಕೇಂದ್ರದಿಂದ ವಾರ್ಷಿಕ ತರಬೇತಿ ಪಡೆಯುತ್ತಿರುವ ಶಾಲಾ ಶಿಕ್ಷಕರು ತಮ್ಮ ಬೋಧನಾ ವಿಷಯಕ್ಕೆ ಪಠ್ಯ ಸಂಪನ್ಮೂಲಗಳ ಸಹಕಾರ ಪಡೆಯುತ್ತಿದ್ದಾರೆ. ಕಥಾ ಮಂಟಪ, ಗೋಡೆ ಪತ್ರಿಕೆ, ಕಥಾಚಿತ್ರ ,ಚಿತ್ರಕಥೆ ,ಚಿಣ್ಣ -ಬಣ್ಣ ತುಂಬು -ಮುಂತಾದ ಚಟುವಟಿಕಾತ್ಮಕ ಸಂಪನ್ಮೂಲಗಳಲ್ಲಿ ಮಕ್ಕಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು , ಮುಂದಿನ ಬರುವಿಕೆಗಾಗಿ ಕಾಯುತ್ತಿರುತ್ತಾರೆ.

ಪೋಷಕರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಲಿಕಾ ನಿರಂತರತೆ ಹಾಗೂ ಸೃಜನಶೀಲತೆಗೆ ಇದು ಸಹಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

‘ರಜಾ-ಮಜ’ ಎಂಬುದು ಕೇಂದ್ರದ ಯೋಜನಾ ವಿಷಯಗಳಲ್ಲಿ ಒಂದಾಗಿದ್ದು ಪ್ರಸಕ್ತ ವರ್ಷದ ರಜಾ ಮಜಾ ವಿಷಯವನ್ನು ಅಂಚೆ ಕಾರ್ಡಿನಲ್ಲಿ ಬರೆದು ಸಂಭ್ರಮಿಸಿದ ಮಕ್ಕಳು ಕೇಂದ್ರಕ್ಕೆ ಧನ್ಯವಾದ ಸಮರ್ಪಿಸಿರುತ್ತಾರೆ.

ಸಂಪನ್ಮೂಲ ನಿರ್ವಹಣಾ ಆಯೋಜಕರಲ್ಲಿ ಓರ್ವರಾದ ಶಾಲಾ ಶಿಕ್ಷಕರಾದ ಶ್ರೀಯುತ ರಂಗಪ್ಪ ಇವರು ರಜಾ- ಮಜಾ ಅಂಚೆ ಕಾರ್ಡ್ ಬರಹಕ್ಕೆ ಮಕ್ಕಳಿಗೆ ಪ್ರೇರಣೆ ನೀಡಿರುತ್ತಾರೆ.

Highslide for Wordpress Plugin