ಶ್ರದ್ಧಾಂಜಲಿ ಸಭೆ

ಪುತ್ತೂರು ಅಲ್ಲದೆ ಹತ್ತೂರಿಗೂ ಪರಿಚಿತರಾದ ಶ್ರೀ ರಾಂ ಭಟ್ ಅವರ ಸಾರ್ಥಕ್ಯದ ಬದುಕು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಪುತ್ತೂರಿನ ಶೈಕ್ಷಣಿಕ ಮೈಲುಗಲ್ಲಾದ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಮುನ್ನಡೆಸಿದ ಹಿರಿಯರಿವರು. ಇಂದು ನಮ್ಮನ್ನಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ- ಶ್ರೀ ವಸಂತ ಸುವರ್ಣ – ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀಯುತ ರಾಂ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಖಜಾಂಚಿಯಾದ ಶ್ರೀಯುತ ಅಶೋಕ್ ಕುಂಬ್ಲೆ, ಸದಸ್ಯರಾದ ರಘುನಾಥ್ ಬಿ ಹಾಗೂ ಶ್ರೀಮತಿ ವೀಣಾ ನಾಗೇಶ್ ತಂತ್ರಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Highslide for Wordpress Plugin