“ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆ ಬರೆಯಲು ಸಿಗುತ್ತಿರುವ ತರಬೇತಿ ಹಾಗೂ ಅವಕಾಶವು ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ” – ಶ್ರೀ ಸತೀಶ್ ಭಟ್ ಬಿಳಿನೆಲೆ ಮುಖ್ಯಶಿಕ್ಷಕರು ಶ್ರೀರಾಮಕುಂಜೇಶ್ವರ ಪ್ರೌಢಶಾಲೆ.


ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಿದ ಶ್ರೀಯುತರು ಈ ಪರೀಕ್ಷೆ ಬರೆಯಲಿರುವ ಪ್ರತಿ ಒಬ್ಬ ವಿದ್ಯಾರ್ಥಿ ತನ್ನ ಸಮಯ ಮತ್ತು ಕಲಿಕಾ ಸಾಮರ್ಥ್ಯವನ್ನು ತಯಾರಿಯ ಕಡೆ ನೀಡಬೇಕು ಎಂದರು.