ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಿದ್ದು ಶಿಕ್ಷಕರಿಗೂ, ಪೋಷಕರಿಗೂ ಸಮಾಧಾನ ತಂದಿದೆ. ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳಿಗೆ ಪೂರಕವಾದ ಆರೋಗ್ಯಕರ, ಸ್ವಚ್ಚ ಕಲಿಕಾ ವಾತಾವರಣವನ್ನು ಪುನನಿರ್ಮಾಣ ಮಾಡುವಲ್ಲಿ ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಶಿಕ್ಷಣದೊಂದಿಗೆ ಆಸಕ್ತ ಮಕ್ಕಳಿಗೆ ವಿಶೇಷ ತರಗತಿಗಳಾದ ಭರತನಾಟ್ಯ, ಸಂಗೀತ ಚಿತ್ರಕಲೆ, ಯಕ್ಷಗಾನ, ಕರಾಟೆ ಮುಂತಾದವುಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿದೆ ಎಂದು ವಿದುಷಿ ಪ್ರೀತಿಕಲಾ – ನಿರ್ದೇಶಕಿ ಮೂಕಾಂಬಿಕಾ ನೃತ್ಯ ಕಲಾ ಶಾಲೆ ಪುತ್ತೂರು ತಿಳಿಸಿದರು.




ಶಾಲೆಯಲ್ಲಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರನ್ನೊಳಗೊಂಡ ಭರತನಾಟ್ಯ ತರಗತಿಗಳು ಮತ್ತು ಶ್ರೀಯುತ ಚಂದ್ರಶೇಖರ್ ನಡೆಸುತ್ತಿರುವ ಯಕ್ಷಗಾನ ತರಗತಿಗಳು, ಶ್ರೀ ರುಕ್ಮಯ ಮತ್ತು ಶ್ರೀ ರಂಗಪ್ಪ ಇವರು ನಡೆಸುತ್ತಿರುವ ಚಿತ್ರಕಲಾ ತರಗತಿಗಳು ಹಾಗೂ ಮಂಗಳೂರಿನ ಶ್ರೀ ನಿತಿನ್ ಇವರು ನಡೆಸುತ್ತಿರುವ ಕರಾಟೆ ತರಗತಿಗಳು ಈ ಎಲ್ಲಾ ಗುರುಗಳ ಉಪಸ್ಥಿತಿಯಲ್ಲಿ ಪುನರಾರಂಭಗೊಂಡಿದೆ.