’ವಿವೇಕ ಸಂಗಮ’ – ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

ವಿದ್ಯಾರ್ಥಿ ಬದುಕಿನಲ್ಲಿ ನಾವು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಗುರಿ ಹೊಂದಬೇಕು. ಈ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ನಡೆಯಬೇಕು. ಆ ಬಗ್ಗೆ ಸರಿಯಾದ ಮತ್ತು ಸ್ಪಷ್ಟವಾದ ಮಾಹಿತಿಯ ಅಗತ್ಯವಿದೆ. – ಪೃಥ್ವಿನಾರಾಯಣ – ಹಿರಿಯ ವಿದ್ಯಾರ್ಥಿ

ವಿವೇಕಾನಂದ ಕನ್ನಡ ಶಾಲೆಯ 10 ನೇ ತರಗತಿ ಮಕ್ಕಳಿಗೆ ಈ ದಿಶೆಯಲ್ಲಿ ವಿಭಿನ್ನ ವೃತ್ತಿಯಲ್ಲಿರುವ ಶಾಲಾ ಹಿರಿಯ ವಿದ್ಯಾರ್ಥಿಗಳು ವೃತ್ತಿಪರಶಿಕ್ಷಣದ ಮಾರ್ಗದರ್ಶನ ನೀಡಿದರು. ಸ್ವ ಉದ್ಯೋಗದ ಬಗ್ಗೆ ಜಿಮ್ ತರಬೇತುದಾರರಾದ ಆದರ್ಶ ಸುವರ್ಣ, ಚಾರ್ಟಡ್ ಅಕೌಂಟನ್ಸಿಯ ಬಗ್ಗೆ ಕಾರ್ತಿಕ್ ಎಸ್, ಮೆಕಾನಿಕಲ್ ಇಂಜಿನಿಯರಿಂಗ್ ಬಗ್ಗೆ ನಿಖಿಲ್ ಜಿ ಹಾಗೂ ಕಿರಣ್ ಎಸ್, ಮೆರೈನ್ ಜಿಯಾಲಜಿಯಾ ಬಗ್ಗೆ ಅಪೂರ್ವ ಗೌರಿ, ಯೋಗಿಕ್ ವಿಜ್ಞಾನದ ಬಗ್ಗೆ ಎ.ಕೆ. ಸುಮಾ, ಬಿಜಿನೆಸ್ ಮ್ಯಾನೇಜ್‌ಮೆಂಟ್ ಬಗ್ಗೆ ವರುಣ್ ಹಾಗೂ ಶಮ, ಎಲೆಕ್ಟ್ರೀಕಲ್ ಇಂಜಿನಿಯರಿಂಗ್ ಬಗ್ಗೆ ಪೃಥ್ವಿನಾರಾಯಣ, ಸ್ನಾತಕೋತ್ತರ ಭೌತಶಾಸ್ತ್ರದ ಬಗ್ಗೆ ಪವನ್ ಇವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹಿರಿಯ ವಿದ್ಯಾರ್ಥಿಗಳ ಈ ಬಗೆಯ ಆಲೋಚನೆ ಹಾಗ್ಯ್ ಕಾರ್ಯಚಟುವಟಿಕೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

Highslide for Wordpress Plugin