ಗೃಹ ಮಿಲನ ಕಾರ್ಯಕ್ರಮ

ಪ್ರಸ್ತುತ ಸಮಯದದ ನಿರ್ವಹಣೆ ನಮಗೆಲ್ಲರಿಗೂ ಸವಾಲಾಗಿದೆ. ಮನೆಯೇ ಸಂಪೂರ್ಣ ಪಾಠಶಾಲೆಯಾಗಿದೆ. ಇಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಲು ಹಲವಾರು ಸಾಧ್ಯತೆಗಳು ನಮ್ಮ ಮುಂದಿವೆ. ಈ ದಿಶೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಹೆತ್ತವರು ಶಿಕ್ಷಕರು ಮತ್ತು ಮಕ್ಕಳು ವಿಭಿನ್ನ (ಶೈಕ್ಷಣಿಕ) ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರಾರು ಇತ್ಯಾತ್ಮಕ ಆಲೋಚನೆ ಮತ್ತು ಆಯೋಜನೆಗಳಲ್ಲಿ ಒಂದಾದ ಗೃಹ ಮಿಲನ- ಕೌಟುಂಬಿಕ ಸಹಮಿಲನ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿದೆ ಅನ್ನುವುದು ಹೆತ್ತವರ ಅಭಿಮತ.

ಭಾರತೀಯ ’ಐಕ್ಯತಾ ಮಂತ್ರ ವಸುದೈವ ಕುಟುಂಬಕಂ’ ಪರಿಕಲ್ಪನೆಯ ಸಾರ್ಥಕ್ಯಕ್ಕೆ ಕೈ ಜೋಡಿಸಿದ ಪೋಷಕರು, ಕುಟುಂಬ ಸದಸ್ಯರು, ಶಿಕ್ಷಕರು ಹಾಗೂ ಮಕ್ಕಳ ಭಾಗವಹಿಸುವಿಕೆಯಲ್ಲಿ ಅಂತಿಮವಾಗಿ ಇದು’ಒಂದು ದಿನದ’ ಆಚರಣೆಗೆ ಸೀಮಿತವಾಗದೆ ನಮ್ಮ ದೈನಂದಿನ ಬದುಕಿನ ಭಾಗವಾಗಿರಲಿ ಎಂಬುದಾಗಿತ್ತು.

ಮನೆಮಂದಿ ದೀಪ ಮಂತ್ರದೊಂದಿಗೆ ದೇವರ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮವು ಅಮೃತವಚನ, ನಿತ್ಯಪಂಚಾಂಗ, ಮಂಕುತಿಮ್ಮನ ಕಗ್ಗ, ಸುಭಾಷಿತದೊಂದಿಗೆ ಆರಂಭಗೊಂಡಿತು. ಲಾಕ್‌ಡೌನ್ ಸಮಯದಲ್ಲಿ ನಾವು ರೂಢಿಸಿಕೊಂಡ ಹತ್ತಾರು ಉತ್ತಮ ವಿಷಯಗಳ ಬಗ್ಗೆ ಮಕ್ಕಳು ಹಾಗೂ ಪೋಷಕರು ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು. ಕಥೆ ಪುಸ್ತಕ ಓದುವಿಕೆ, ಚಿತ್ರರಚನೆ, ಕರಕುಶಲ ಕಲೆ, ಅಡುಗೆ ತಯಾರಿ, ಗಿಡ ನೆಟ್ಟು ಬೆಳೆಸುವುದು, ಕೈತೋಟರಚನೆ, ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಾವು ತೊಡಗಿಕೊಂಡ ಬಗೆ ಮತ್ತು ಅದರಲ್ಲಿನ ಖುಷಿಯನ್ನು ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಇಂತೀ ವ್ಯತ್ಯಸ್ಥ ಪರಿಸ್ಥಿತಿಯಲ್ಲೂ ತಮ್ಮ ಮುಂದಿರುವ ಹಲವಾರು ಕಲಿಕಾ ಸಾಧ್ಯತೆಗಳನ್ನು ಕಂಡುಕೊಂಡ ರೀತಿ ಶ್ಲಾಘನೀಯವಾಗಿದೆ.

Highslide for Wordpress Plugin