Author Archive

ಜ್ಞಾನ - ವಿಜ್ಞಾನ ಮೇಳ : ರಾಜ್ಯಮಟ್ಟದಲ್ಲಿ ಪ್ರಥಮ

ಜ್ಞಾನ – ವಿಜ್ಞಾನ ಮೇಳ : ರಾಜ್ಯಮಟ್ಟದಲ್ಲಿ ಪ್ರಥಮ

Wednesday, October 23rd, 2019

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಜೈ ಗೋಪಾಲ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಣವ ಎಂ. ಭಟ್ ಮತ್ತು ಪ್ರಮಥ ಎಮ್. ಭಟ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮತ್ತು 10 ನೇ ತರಗತಿ ವಿದ್ಯಾರ್ಥಿ ಶಿಶಿರ್ ಗಣಿತ ಮಾದರಿ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ದಕ್ಷಿಣ ಮಧ್ಯ ಕ್ಷೇತ್ರೀಯದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ.

ವಿಜ್ಞಾನ ಮಾದರಿ ಸ್ಪರ್ಧೆ : ಜಿಲ್ಲಾಮಟ್ಟಕ್ಕೆ ಆಯ್ಕೆ

ವಿಜ್ಞಾನ ಮಾದರಿ ಸ್ಪರ್ಧೆ : ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, October 22nd, 2019

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸಂತ ವಿಕ್ಟರ್ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಣವ ಭಟ್ ವಿಜ್ಞಾನ ಮಾದರಿಯಲ್ಲಿ ಪ್ರಥಮ ಮತ್ತು 10 ನೇ ತರಗತಿಯ ಶಿಶಿರ್ ಮತ್ತು ಆದರ್ಶ ಗಣಿತ ಮಾದರಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Friday, October 4th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 4-10-2019 ರಂದು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಯರಾಮ್ ಭಟ್ ನೇತೃತ್ವದಲ್ಲಿ ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಪೂಜಾ ವಿಧಿ – ವಿಧಾನಗಳನ್ನು ನೆರವೇರಿದವು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಸುಮಾರು ಪುಟಾಣಿಗಳು ಶುಭ ಮೂಹೂರ್ತವಿರಿಸಿದರು. ಮಕ್ಕಳಿಗೆ ಆರತಿ ಎತ್ತಿ ಶಾರದ ಮಾತೆಗೆ ಪುಷ್ಫ ನಮನವನ್ನು ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯ ಗುರುಗಳೂ, ಶಿಕ್ಷಕ- ಶಿಕ್ಷಕೇತರ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನವದಂಪತಿ ಸಮಾವೇಶ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನವದಂಪತಿ ಸಮಾವೇಶ

Tuesday, October 1st, 2019

ಬದಲಾಗುತ್ತಿರುವ ಕುಟುಂಬ ಚಿತ್ರಣದಲ್ಲಿ ಸಕರಾತ್ಮಕ ನಂಬಿಕೆ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅನ್ಯಾನ್ಯ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ನವದಂಪತಿ ಸಮಾವೇಶ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಹಿರಿಯ ದಂಪತಿ ಕೆ. ಸುಬ್ರಹ್ಮಣ್ಯ ಭಟ್ ಹಾಗೂ ಹೇಮಾವತಿ ಕೆ.ಎಸ್. ಭಟ್ ದಂಪತಿ ಹಾರಾರ್ಪಣೆ ಮಾಡಿಕೊಳ್ಳುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ನವದಂಪತಿಗಳನ್ನು ಕಾಲಿಗೆ ನೀರು ಹಾಕಿ ಹಣೆಗೆ ಅರಸಿನ ಕುಂಕುಮ ಹಚ್ಚಿ ಸ್ವಾಗತಿಸಲಾಯಿತು. […]

ಪ್ರತಿಭಾ ಕಾರಂಜಿ - ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿ – ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Saturday, September 21st, 2019

ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ತಾಲೂಕು ಮಟ್ಟದ ’ಪ್ರತಿಭಾ ಕಾರಂಜಿ’ ಯಕ್ಷಗಾನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಯಕ್ಷ ಚಿಣ್ಣರು’ ಭಾಗವಹಿಸಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವೈಯಕ್ತಿಕ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಧನುಷ್, ಹಿರಿಯ ವಿಭಾಗದಲ್ಲಿ ಕು.ಅವನಿ ಬೆಳ್ಳಾರೆ, ಪ್ರೌಢವಿಭಾಗದಲ್ಲಿ ಕು. ಶ್ರೇಯಾ ಆಚಾರ್ ಸ್ಪರ್ಧಿಸಿದ್ದರು. ಅದೇ ರೀತಿ ಗುಂಪು ವಿಭಾಗ ಸ್ಪರ್ಧೆಯಲ್ಲಿ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. […]

ವಿದ್ಯಾರ್ಥಿಗಳಿಗೆ ಭಾವನಾತ್ಮಕ ದೃಷ್ಟಿಯಿಂದ ಶಿಕ್ಷಣ ನೀಡುವುದಕ್ಕಾಗಿ ರೂಪಿಸಲ್ಪಟ್ಟ ಶಾಲೆ ನಮ್ಮ ವಿದ್ಯಾ ಮಂದಿರ- ವಸಂತ ಸುವರ್ಣ

ವಿದ್ಯಾರ್ಥಿಗಳಿಗೆ ಭಾವನಾತ್ಮಕ ದೃಷ್ಟಿಯಿಂದ ಶಿಕ್ಷಣ ನೀಡುವುದಕ್ಕಾಗಿ ರೂಪಿಸಲ್ಪಟ್ಟ ಶಾಲೆ ನಮ್ಮ ವಿದ್ಯಾ ಮಂದಿರ- ವಸಂತ ಸುವರ್ಣ

Wednesday, September 18th, 2019

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಪುತ್ತೂರು ವೃತ್ತಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2019-20 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿಷ್ಣು ಪ್ರಸಾದ್ ಸಿ. ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯ ವಸಂತ ಸುವರ್ಣ ಮಾತನಾಡಿ ಗುರು ಪರಂಪರೆಗೆ ಮೊದಲ ಗೌರವ. ಗುರುವಿನ ಮುಖೇನ ಕಲಿತ ಕಲಿಕೆ ಶುದ್ಧ ಹಾಗೂ ಶಾಶ್ವತವಾಗುವುದು ಎಂದರು. […]

ಜಿಲ್ಲಾ ಮಟ್ಟದ ಜ್ಞಾನ - ವಿಜ್ಞಾನ ಮೇಳ : ಶಾಲೆಗೆ ಪ್ರಶಸ್ತಿ

ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ : ಶಾಲೆಗೆ ಪ್ರಶಸ್ತಿ

Tuesday, September 17th, 2019

ವಿದ್ಯಾಭಾರತಿ ಕರ್ನಾಟಕ, ದ.ಕ. ಜಿಲ್ಲೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಶಿಶುವರ್ಗ – ವಿಜ್ಞಾನ ಪ್ರದರ್ಶನ : ಚಿರಂತನ ಕೆ.ವಿ (ಪ್ರಥಮ), ನಿಸರ್ಗ ತೋಟರ್ (ತೃತೀಯ), ವಿಜ್ಞಾನ ರಸಪ್ರಶ್ನೆ – ಸ್ಕಂದ ಬಳಕ್ಕುರಾಯ, ಶಿವಾನಿ ಎಸ್‌ರೈ, ಪವನ್ ಪಿ.ಎ. ( ಪ್ರಥಮ), ವಿಜ್ಞಾನ ಪ್ರಯೋಗ-ಅರ್ಜುನ್ ಡಿ. (ಪ್ರಥಮ) ಬಾಲವರ್ಗ- ವಿಜ್ಞಾನ ಪ್ರದರ್ಶನ – ಪ್ರಣ […]

ಪುತ್ತೂರು ವೃತ್ತಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ - ಶಾಲೆಗೆ ಸಮಗ್ರ ಪ್ರಶಸ್ತಿ

ಪುತ್ತೂರು ವೃತ್ತಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ – ಶಾಲೆಗೆ ಸಮಗ್ರ ಪ್ರಶಸ್ತಿ

Monday, September 16th, 2019

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇವರ ಸಹಯೋಗದಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವವು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಶಾಲೆಯು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡ ಭಾಷಣ- ಸಿಂಚನಾ ಟಿ (ಪ್ರಥಮ), ಹಿಂದಿ ಭಾಷಣ-ಅನಘಾ ಭಟ್(ಪ್ರಥಮ),ಸಂಸ್ಕೃತ ಭಾಷಣ- ಪಲ್ಲವಿ (ತೃತೀಯ), ತೆಲುಗು ಭಾಷಣ- ಕೌಸಲ್ಯ ಎನ್. (ಪ್ರಥಮ), ತಮಿಳು ಭಾಷಣ- ಪ್ರಜೀತ್ (ಪ್ರಥಮ), ತುಳು ಭಾಷಣ […]

ಖೋ-ಖೋ ಪಂದ್ಯಾಟ- ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

ಖೋ-ಖೋ ಪಂದ್ಯಾಟ- ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

Saturday, September 14th, 2019

ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಇದರ ವತಿಯಿಂದ ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟವು ಬಂಟ್ವಾಳ ತಾಲೂಕಿನ ಮೂಡು ಪಡುಕೋಡಿಯಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕ-ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಶ್ನಿಸುವ ಗುಣ ವೈಜ್ಞಾನಿಕ ಮನೋಭಾವದ ತಳಹದಿಯಾಗಿದೆ- ಪುರಂದರ ಭಟ್ ಕಾಯರ

ಪ್ರಶ್ನಿಸುವ ಗುಣ ವೈಜ್ಞಾನಿಕ ಮನೋಭಾವದ ತಳಹದಿಯಾಗಿದೆ- ಪುರಂದರ ಭಟ್ ಕಾಯರ

Tuesday, September 10th, 2019

ವಿದ್ಯಾರ್ಥಿಗಳು ಜೀವನದಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ವೈಜ್ಞಾನಿಕ ಯೋಚನಾ ಸಾಮರ್ಥ್ಯ ವೃದ್ಧಿಯಾಗುವುದು. ಆ ಮೂಲಕ ನಮ್ಮನ್ನು ನಾವು ಬೆಳೆಸಲು ಸಾಧ್ಯ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರಾದ ಶ್ರೀ ಪುರಂದರ ಭಟ್ ಕಾಯರ ಇವರು ನುಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ- ಗಣಿತ ಮೇಳದ ಉದ್ಘಾಟಕರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿಗಳಾದ ಶ್ರೀ ಲೋಕಯ್ಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ 2018-19 ನೇ […]

ಯೋಗಾಸನ ಸ್ಪರ್ಧೆ - ವಿಭಾಗಮಟ್ಟಕ್ಕೆ ಆಯ್ಕೆ

ಯೋಗಾಸನ ಸ್ಪರ್ಧೆ – ವಿಭಾಗಮಟ್ಟಕ್ಕೆ ಆಯ್ಕೆ

Thursday, August 29th, 2019

ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಸರ್‌ಗದ್ದೆ ಬೆಳುವಾಯಿ ಇವರ ಸಹಯೋಗದಲ್ಲಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಸರ್‌ಗದ್ದೆ ಬೆಳುವಾಯಿ ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸುಚಿತಾ ಕೆ.ಎಸ್(9ನೇ ತರಗತಿ), ಹೇಮಶ್ರೀ (10ನೇ ತರಗತಿ), ಲಿಖಿತ್ ಗೌಡ (10ನೇ ತರಗತಿ), ಪುನೀತ್ ರಾಜ್ (10ನೇ ತರಗತಿ) ಭಾಗವಹಿಸಿರುತ್ತಾರೆ. ಇದರಲ್ಲಿ ಪ್ರೌಢಶಾಲಾ ಗುಂಪು ವಿಭಾಗದಲ್ಲಿ 10೦ನೇ ತರಗತಿ […]

ತ್ರೋಬಾಲ್ - ರಾಜ್ಯಮಟ್ಟಕ್ಕೆ ಆಯ್ಕೆ

ತ್ರೋಬಾಲ್ – ರಾಜ್ಯಮಟ್ಟಕ್ಕೆ ಆಯ್ಕೆ

Monday, August 26th, 2019

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಹಾಗೂ ಶುಭೋದಯ ವಿದ್ಯಾಲಯ ವಾಮಂಜೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟವು ಶುಭೋದಯ ವಿದ್ಯಾಲಯ ವಾಮಂಜೂರು ಮಂಗಳೂರು ಇಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕಿಯರು ಪ್ರಥಮ ಸ್ಥಾನ ಪಡೆದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಮತ್ತು ಪ್ರೌಢಶಾಲಾ ಬಾಲಕರಲ್ಲಿ ಚರಣ್ (10ನೇ ತರಗತಿ), ವಿನಾಯಕ (10ನೇ ತರಗತಿ) ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಪ್ರಾಥಮಿಕ ವಿಭಾಗದ ಬಾಲಕರು […]

ಖೋ-ಖೋ ಪಂದ್ಯಾಟ - ರಾಜ್ಯಮಟ್ಟಕ್ಕೆಆಯ್ಕೆ

ಖೋ-ಖೋ ಪಂದ್ಯಾಟ – ರಾಜ್ಯಮಟ್ಟಕ್ಕೆಆಯ್ಕೆ

Monday, August 26th, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟ ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕಿಯರು ಹಾಗೂ ಬಾಲಕರು ಪ್ರಥಮ ಮತ್ತು ಪ್ರಾಥಮಿಕ ವಿಭಾಗದ ಬಾಲಕಿಯರು ಪ್ರಥಮ ಸ್ಥಾನ ಪಡೆದು ಅಮೃತ ಭಾರತಿ ವಿದ್ಯಾಲಯ ಹೆಬ್ರಿ, ಉಡುಪಿ ಜಿಲ್ಲೆ ಇಲ್ಲಿ ನಡೆಯುವ ರಾಜ್ಯಮಟ್ಟದ ಖೋ-ಖೋ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ದೈಹಿಕ […]

ಜಿಲ್ಲಾಮಟ್ಟದ ಇಂಡಿಪೆಂಡೆಂಟ್‌ ಕಪ್- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ

ಜಿಲ್ಲಾಮಟ್ಟದ ಇಂಡಿಪೆಂಡೆಂಟ್‌ ಕಪ್- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ

Tuesday, August 20th, 2019

ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಇಂಡಿಪೆಂಡೆಂಟ್‌ ಕಪ್ – 2019 ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನವನ್ನು 2ನೇ ಬಾರಿ ಪಡೆದುಕೊಂಡಿರುತ್ತದೆ.

ಯೋಗಾಸನ ಸ್ಪರ್ಧೆ - ಸಮಗ್ರತಂಡ ಪ್ರಶಸ್ತಿ

ಯೋಗಾಸನ ಸ್ಪರ್ಧೆ – ಸಮಗ್ರತಂಡ ಪ್ರಶಸ್ತಿ

Tuesday, August 20th, 2019

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಲಿಖಿತ್‌ಗೌಡ ಮತ್ತು ಪುನೀತ್‌ರಾಜ್‌ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ ಎಂ ಮತ್ತು ಸುಚಿತಾ ಕೆ. ಎಸ್‌. ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮತ್ತು ಪ್ರೌಢಶಾಲಾ ವಿಭಾಗದ ಬಾಲಕರು ಹಾಗೂ […]

ಜನರು ಸಂಘಟಿತರಾದಾಗ ಸದೃಢ ದೇಶವನ್ನು ಕಟ್ಟಬಹುದು - ಶ್ರೀಯುತ ಕರುಣಾಕರ ಉಪಾಧ್ಯಾಯ

ಜನರು ಸಂಘಟಿತರಾದಾಗ ಸದೃಢ ದೇಶವನ್ನು ಕಟ್ಟಬಹುದು – ಶ್ರೀಯುತ ಕರುಣಾಕರ ಉಪಾಧ್ಯಾಯ

Saturday, August 17th, 2019

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ರಕ್ಷೆಯ ರಚನೆಯಲ್ಲಿ ನಾವು ಕಾಣಬಹುದು. ರಕ್ಷೆಯನ್ನು ಕಟ್ಟುವುದರಿಂದ ಪರಸ್ಪರರಲ್ಲಿ ಸಹೋದರತ್ವ ಅದನ್ನು ಪರಿಹರಿಸಲು ಧಾವಿಸುವ ಗುಣಗಳು ಜಾಗೃತಗೊಳ್ಳುತ್ತವೆ. ಜನರ ನಡುವೆ ಒಮ್ಮತವಿದ್ದು ಸಂಘಟಿತರಾದಾಗ ಸದೃಢ ದೇಶವನ್ನು ಕಟ್ಟಬಹುದು ಎನ್ನುತ್ತಾ ರಕ್ಷೆಯ ಮಹತ್ವ ಸಾರುವ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ಉದಾಹರಿಸಿದವರು ಯೋಗ ಶಿಕ್ಷಕರಾದ ಶ್ರೀಯುತ ಕರುಣಾಕರ ಉಪಾಧ್ಯಾಯ ಇವರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀಯ್ತ ಅಚ್ಯುತ […]

73 ನೇ ಸ್ವಾತಂತ್ರ್ಯ ದಿನಾಚರಣೆ

73 ನೇ ಸ್ವಾತಂತ್ರ್ಯ ದಿನಾಚರಣೆ

Friday, August 16th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ತುಳುನಾಡ ಕನ್‌ಸ್ಟ್ರಕ್ಷನ್‌ನಲ್ಲಿ ಸಿವಿಲ್ ಇಂಜಿನಿಯರ್‌ ಆಗಿರುವ ಶ್ರೀಯುತ ತುಷಾರ್‌ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಅಭಿರಾಮ್ ಭಟ್ ಮಾತನಾಡಿ ನಮ್ಮ ದೇಶ ಬೆಳೆದು ಬಂದ ಹಾದಿ, ಯುದ್ಧದ ಸಂದರ್ಭದಲ್ಲಿ ಭಾರತ ಮೆರೆದ ಶೌರ್ಯತೆ, ಮತ್ತು ಭಾರತ ವಿಶ್ವಗುರು ಹೇಗೆ ಆಗಬಲ್ಲದು ಎಂಬ ಬಗ್ಗೆ ಸ್ಪಷ್ಟ ಅರಿವನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಾರ್ಯ […]

ಯೋಗಾಸನ ಮತ್ತು ಕರಾಟೆ ಸ್ಪರ್ಧೆ - ಅಖಿಲ ಭಾರತ ಮಟ್ಟಕ್ಕೆ ಆಯ್ಕೆ

ಯೋಗಾಸನ ಮತ್ತು ಕರಾಟೆ ಸ್ಪರ್ಧೆ – ಅಖಿಲ ಭಾರತ ಮಟ್ಟಕ್ಕೆ ಆಯ್ಕೆ

Monday, August 12th, 2019

ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಯೋಗಾಸನ ಮತ್ತು ಕರಾಟೆ ಸ್ಪರ್ಧೆ ಜೆ.ಜಿ.ಆರ್.ವಿ.ಕೆ ಶಾಲೆ ರಾಮಮೂರ್ತಿ ನಗರ ಬೆಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಿತೇಶ್ (10ನೇ ತರಗತಿ) ಮತ್ತು ಪ್ರಮಥ ಎಂ. ಭಟ್ (6ನೇ ತರಗತಿ) ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಖಿಲ ಭಾರತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ಯೋಗಾಸನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಪುನೀತ್, ರಕ್ಷಿತ್, ಕೌಶಿಕ್, ಲಿಖಿತ್, ಕಾರ್ತಿಕ್‌ ದ್ವಿತೀಯ ಸ್ಥಾನ ಪಡೆದಿರುತ್ತಾರೆ. […]

ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ

Saturday, August 10th, 2019

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಶಾಲೆಯ ಸಂಚಾಲಕರಾದ ಶ್ರೀ ರವಿ ನಾರಾಯಣರವರು ನೆರವೇರಿಸಿ ಶಿಕ್ಷಕರು ನಿರಂತರವಾಗಿ ಹೊಸದಾದ ವಿಚಾರಗಳಿಗೆ ತೊಡಗಿಸಿಕೊಳ್ಳಬೇಕು ಎಂದರು. ನಂತರ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರು ಶಿಕ್ಷಕರಿಗಾಗಿ ‘ಸಾಂಸ್ಕೃತಿಕ ಪರಿಕಲ್ಪನೆಯ ಬೋಧನಾ ವಿಧಾನ’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶೃತಿ, ತಾಳ, ಹಸ್ತ, ದೈಹಿಕ ಚಲನೆ ಮತ್ತು ಭಾವಾಭಿನಯಗಳೊಂದಿಗೆ ಪಠ್ಯ ವಿಷಯವನ್ನು ಮಕ್ಕಳಿಗೆ […]

ತಂತ್ರಜ್ಞಾನ ಆಧಾರಿತ ಶಿಕ್ಷಣದ ಉದ್ಘಾಟನೆ

ತಂತ್ರಜ್ಞಾನ ಆಧಾರಿತ ಶಿಕ್ಷಣದ ಉದ್ಘಾಟನೆ

Saturday, August 3rd, 2019

ಖ್ಯಾತ ಸೌರವಿಜ್ಞಾನಿ ಡಾ. ಹರೀಶ್ ಹಂದೆಯವರಿಂದ ಸ್ಥಾಪನೆಯಾದ ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿಮಿಟೆಡ್ ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿನ ಜನರ ಜೀವನಮಟ್ಟವನ್ನು ಉತ್ತಮವಾಗಿಸಲು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನೆರವಾಗುವಂತಹ ಸೋಲಾರ್‌ಚಾಲಿತ ಯಂತ್ರಗಳನ್ನು ಒದಗಿಸುತ್ತ ಬಂದಿದೆ. ’ಇಶಾಲಾ’ ಎಂಬ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. 2000 ಕ್ಕಿಂತಲೂ ಅಧಿಕ ಶಾಲೆಗಳಲ್ಲಿ ಸೆಲ್ಕೋ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ಸಾಧನಗಳನ್ನು ಅಳವಡಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಇದೇ ನಿಟ್ಟಿನಲ್ಲಿ ಸೆಲ್ಕೋ ಸಂಸ್ಥೆಯು […]

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟ - ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟ – ರಾಜ್ಯಮಟ್ಟಕ್ಕೆ ಆಯ್ಕೆ

Wednesday, July 31st, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರು ಮತ್ತು ಕಿಶೋರವರ್ಗದ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಕಿಶೋರವರ್ಗದ ಬಾಲಕರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲವರ್ಗದ ಬಾಲಕರ ವಿಭಾಗದಲ್ಲಿ ಧನುಷ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡಗಳೆರಡೂ ಮುಂಡಾಜೆಯಲ್ಲಿ ನಡೆಯುವ ಪ್ರಾಂತ (ರಾಜ್ಯ)ಮಟ್ಟ ಪ್ರತಿನಿಧಿಸಲಿದ್ದಾರೆ. ಇವರಿಗೆ ಶ್ರೀ ಮನೋಹರ್ ನುಳಿಯಾಲು ಮತ್ತು ಶಾಲಾ […]

ಕ್ರೀಡಾ ಶಿಕ್ಷಣದ ಜೊತೆಗೆ ನೈತಿಕ ವಿಚಾರ ಅಳವಡಿಸಿಕೊಂಡಾಗ ಸಾಧನೆಗೆ ಗೌರವ ಹಾಗೂ ಮನ್ನಣೆ

ಕ್ರೀಡಾ ಶಿಕ್ಷಣದ ಜೊತೆಗೆ ನೈತಿಕ ವಿಚಾರ ಅಳವಡಿಸಿಕೊಂಡಾಗ ಸಾಧನೆಗೆ ಗೌರವ ಹಾಗೂ ಮನ್ನಣೆ

Monday, July 29th, 2019

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನದ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ನಡೆದ ದಕ್ಷಿಣ ಮಧ್ಯಕ್ಷೇತ್ರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ದರ್ಬೆ ಅಧಿಕಾರಿಗಳ ಕ್ಲಬ್‌ನಲ್ಲಿ ಪುತ್ತೂರು ಉಪವಿಭಾಗದ ಅಧಿಕಾರಿಗಳಾದ ಶ್ರೀ ಎಚ್. ಕೆ. ಕೃಷ್ಣಮೂರ್ತಿ ಉದ್ಘಾಟಿಸಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುವುದು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಇನ್ನೂ ಹೆಚ್ಚಿನ ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು. ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣವನ್ನು ಅಳವಡಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ […]

ಕೆದಿಲ ಗ್ರಾಮದಲ್ಲಿ ವೃಕ್ಷಾರೋಪಣ

ಕೆದಿಲ ಗ್ರಾಮದಲ್ಲಿ ವೃಕ್ಷಾರೋಪಣ

Saturday, July 27th, 2019

ನಮ್ಮ ಸುತ್ತಲಿನ ಪರಿಸರ ಭಗವಂತನ ಸೃಷ್ಠಿ ಈ ಪರಿಸರವನ್ನು ಉಳಿಸಿದರೆ ಮಾತ್ರ ಮಾನವನು ಭವಿಷ್ಯದಲ್ಲಿ ಉತ್ತಮವಾಗಿರಲು ಸಾಧ್ಯ. ಮಾನವನ ಸ್ವಾರ್ಥಕ್ಕಾಗಿ ನಾಶಪಡಿಸಿದ ಪರಿಸರದ ಮುಖ್ಯ ಭಾಗವಾಗಿರುವ ಮರ-ಗಿಡಗಳನ್ನು ಪುನಃ ಬೆಳೆಸುವ ಉದ್ದೇಶದಿಂದ ತನ್ಮೂಲಕ ಸುಂದರ ನೆಮ್ಮದಿಯ ನಾಳೆಯನ್ನು ಪಡೆಯಬೇಕು. ಅಲ್ಲದೇ ನಮ್ಮ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಉಂಟಾಗಬೇಕು ಎಂಬ ಸತ್‌ಚಿಂತನೆಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು ಗ್ರಾಮ ವಿಕಾಸ ಯೋಜನೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ ‘ವೃಕ್ಷಾರೋಪಣ’ ಕಾರ್ಯಕ್ರಮ. ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ […]

ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು -ರಾಧಾಕೃಷ್ಣ ಬೋರ್ಕರ್

ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು -ರಾಧಾಕೃಷ್ಣ ಬೋರ್ಕರ್

Saturday, July 27th, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬಾಲವರ್ಗ, ಕಿಶೋರ ವರ್ಗ ಮತ್ತು ತರುಣ ವರ್ಗದ ಪ್ರಾಂತ ಮತ್ತು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಅಧಿಕಾರಿಗಳ ಕ್ಲಬ್‌ ದರ್ಬೆಯಲ್ಲಿ ಉದ್ಘಾಟನೆಗೊಂಡಿತು. ಮನಸ್ಸು ಇಚ್ಛೆಯ ತುತ್ತತುದಿಯನ್ನೇರಿದಾಗ ಸಾಫಲ್ಯತೆ ಸಾಧ್ಯ. ಸ್ಪರ್ಧೆಯ ಮಾನಸಿಕ ಸ್ಥಿತಿ ಗೆಲುವೇ ಆಗಿರಬೇಕು. ಸೋತಾಗ ದುಡುಕುತನ ಬೇಡ. ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು ಎಂದು ಉದ್ಘಾಟಕರ ನೆಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್‌ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ […]

ಕಾರ್ಗಿಲ್ ವಿಜಯ ಸುಲಭದಲ್ಲಿ ಸಿಕ್ಕಿದ್ದಲ್ಲ - ಶ್ರೀ ಸುರೇಶ್

ಕಾರ್ಗಿಲ್ ವಿಜಯ ಸುಲಭದಲ್ಲಿ ಸಿಕ್ಕಿದ್ದಲ್ಲ – ಶ್ರೀ ಸುರೇಶ್

Friday, July 26th, 2019

ಕಾರ್ಗಿಲ್ ವಿಜಯೋತ್ಸವ- 20 ರ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ- ತೆಂಕಿಲದಲ್ಲಿ ನಡೆದ’ಯೋಧರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅಭ್ಯಾಗತರ ನೆಲೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖರಾದ ಶ್ರೀ ಸುರೇಶ್‌ ಇವರು ’ಕಾರ್ಗಿಲ್ ವಿಜಯವು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ ವಿಜಯವಾಗಿದೆ. ಇದು ಸುಲಭದಲ್ಲಿ ದೊರೆತದ್ದಲ್ಲ. ಇದರ ಹಿಂದಿನ ಮುಂದಿನ ತ್ಯಾಗ, ಬಲಿದಾನ, ಮನೋಸ್ಥೈರ್ಯವು ನಮಗೆ ಮಾದರಿಯಾಗಿದೆ’ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತನಾಯಕ್, ಸಂಚಾಲಕರಾದ ಶ್ರೀ ರವಿ […]

ಚಿತ್ರಕಲಾ ಸ್ಪರ್ಧೆ -ಪ್ರಶಸ್ತಿ

ಚಿತ್ರಕಲಾ ಸ್ಪರ್ಧೆ -ಪ್ರಶಸ್ತಿ

Wednesday, July 17th, 2019

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿಜಯ ಕರ್ನಾಟಕ ದಿನಪತ್ರಿಕೆಯವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಡೆಸಿದ ಚಿತ್ರಕಲಾ ಸ್ಪರ್ಹೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಶಿಶಿರ್ (ಸುಂದರ ಪೂಜಾರಿ ಮತ್ತು ಮಮತಾ ಪಿ ದಂಪತಿಗಳ ಪುತ್ರ) -10ನೇ ತರಗತಿ ವಿಭಾಗದಲ್ಲಿ – ದ್ವಿತೀಯ, ಅಗಮ್ಯ (ಗಣೇಶ್ ಪೂಜಾರಿ ಮತ್ತು ಮಂಜುಳಾ ಗಣೇಶ್ ದಂಪತಿಯ ಪುತ್ರಿ) – 7ನೇ ತರಗತಿ ವಿಭಾಗದಲ್ಲಿ – ತೃತೀಯ ಸ್ಥಾನ ಪಡೆದಿದ್ದಾರೆ.

ಸಮರ್ಪಣಾ ಭಾವದಿಂದಲೇ ರಾಷ್ಟ್ರದ ಉನ್ನತಿ - ಮೀನಾಕ್ಷಿ ಮಾತಾಜಿ

ಸಮರ್ಪಣಾ ಭಾವದಿಂದಲೇ ರಾಷ್ಟ್ರದ ಉನ್ನತಿ – ಮೀನಾಕ್ಷಿ ಮಾತಾಜಿ

Tuesday, July 16th, 2019

ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂದು ಅರಿವಾದಾಗ ಸಮರ್ಪಣಾ ಭಾವ ಜಾಗೃತವಾಗುತ್ತದೆ. ಇದರಿಂದಲೇ ರಾಷ್ಟ್ರದ ಉನ್ನತಿ ಸಾಧ್ಯ. ಭಾರತದೇಶವು ಪ್ರತಿಯೊಂದು ಮನೆಯ ಮಾತೆಯಿಂದ ಪ್ರಾರಂಭಿಸಿ ಹಲವಾರು ದೇಶಭಕ್ತರ ವೀರಯೋಧರ ತ್ಯಾಗ ಬಲಿದಾನಗಳಿಂದಲೇ ಇಂದು ಸ್ವತಂತ್ರ ಹಾಗೂ ಶ್ರೇಷ್ಠ ದೇಶವೆನಿಸಿಕೊಂಡಿರುವುದು. ಇಂತಹ ತ್ಯಾಗಗಳ ಬಗ್ಗೆ ತಿಳಿದುಕೊಳ್ಳುತ್ತಾ ಜೀವನ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ನಮ್ಮ ರಾಷ್ಟ್ರ ಸರ್ವಾಂಗೀಣವಾಗಿ ಬೆಳೆಯುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಸಂಸ್ಕಾರ ಪರಿವೀಕ್ಷಣಾ ಪ್ರಮುಖರಾದ ಮೀನಾಕ್ಷಿ ಮಾತಾಜಿ ಇವರು ವಿವೇಕಾನಂದ […]

ಶಿಕ್ಷಕ- ರಕ್ಷಕ ಸಂಘ ಹಾಗೂ ಮಾತೃಭಾರತಿ - ಪದಗ್ರಹಣ ಸಮಾರಂಭ

ಶಿಕ್ಷಕ- ರಕ್ಷಕ ಸಂಘ ಹಾಗೂ ಮಾತೃಭಾರತಿ – ಪದಗ್ರಹಣ ಸಮಾರಂಭ

Tuesday, July 16th, 2019

ಶಾಲಾ ಮಾತೃಭಾರತಿಯ ಮೂಲಕ ವೇದಿಕೆಯಲ್ಲಿ ನಿಂತು ಮಾತನಾಡುವ ಧೈರ್ಯ ಬಂದಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಪೋಷಕರನ್ನು ಜೋಡಿಸುತ್ತಾ ನಮ್ಮಲ್ಲೂ ಸಂಸ್ಕಾರವನ್ನು ತರುವ ಇಲ್ಲಿನ ರೀತಿಯು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ನುಡಿದವರು ಶಾಲಾ ಮಾತೃಭಾರತಿಯ ಕಳೆದ ಸಾಲಿನ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಇವರು ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕ-ರಕ್ಷಕ ಸಂಘ, ಮಾತೃಭಾರತಿಯ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಯುತ ಹರಿಕೃಷ್ಣ ಹಾಗೂ ರೇಖಾ ಇವರು ಈ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಕೃಷ್ಣ ಭಟ್ ಹಾಗೂ ಮಾತೃಭಾರತಿಯ ಅಧ್ಯಕ್ಷರಾಗಿ […]

ಯೋಗಾಸನ ಸ್ಪರ್ಧೆ - ಜಿಲ್ಲಾಮಟ್ಟದಲ್ಲಿ ಪ್ರಥಮ

ಯೋಗಾಸನ ಸ್ಪರ್ಧೆ – ಜಿಲ್ಲಾಮಟ್ಟದಲ್ಲಿ ಪ್ರಥಮ

Monday, July 15th, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ ಜಾಲ್ಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಪ್ರೌಢ ಶಾಲಾ ವಿಭಾಗದ ಬಾಲಕರು ಹಾಗೂ ಬಾಲಕಿಯರು ಸಮಗ್ರ ತಂಡ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ ಪುನೀತ್ ರಾಜ್, ಲಿಖಿತ್, ಕೌಶಿಕ್, ರಕ್ಷಿತ್ ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ, ಸುಚಿತಾ, ಸೌಜನ್ಯ, ರಶ್ಮಿ, ದೇವಿಕಾ ಮತ್ತು ಬಾಲಕರ ವೈಯಕ್ತಿಕ […]

ಶಾಲಾ ಮಂತ್ರಿಮಂಡಲ 2019

ಶಾಲಾ ಮಂತ್ರಿಮಂಡಲ 2019

Tuesday, July 2nd, 2019

ಶಾಲಾ ನಾಯಕ ಶಿಶಿರ್ ಎಸ್. ಶಾಲಾ ಉಪನಾಯಕ ಸುಹಾಸ್ ಪ್ರಭು ಪ್ರಾಥಮಿಕ ಶಾಲಾ ನಾಯಕ ಅಕ್ಷಯ್ ಪ್ರಾಥಮಿಕ ಶಾಲಾ ಉಪನಾಯಕಿ ಅಭೀಕ್ಷ ಪ್ರತಿಪಕ್ಷ ನಾಯಕ ರಾಮನಾಥ ಪ್ರತಿಪಕ್ಷ ನಾಯಕಿ ಶ್ರೇಯಾ ಆಚಾರ್ ಸಭಾಪತಿ ಅನುಷಾ ಗೃಹಮಂತ್ರಿ ಹೇಮಶ್ರೀ ಯಂ. ನೈರ್ಮಲ್ಯ ಮಂತ್ರಿ ರಕ್ಷಿತ್ ಸಾಂಸ್ಕೃತಿಕ ಮಂತ್ರಿ ಪ್ರಣಮ್ಯ ಕಾನೂನು ಮಂತ್ರಿ ಸಿಂಚನಾ ಟಿ. ಸಾರಿಗೆ ಮಂತ್ರಿ ಪ್ರೀತೇಶ್ ಕುಮಾರ್ ನೀರಾವರಿ ಮಂತ್ರಿ ಯತೀನ್ ವಾರ್ತಾ ಮಂತ್ರಿ ಕ್ಷಮಾ ಅಂಬೆಕಲ್ಲು ಆರೋಗ್ಯ ಮಂತ್ರಿ ಅನುಜ್ಞಾ ವೈ. ಟಿ. ವಿದ್ಯಾಮಂತ್ರಿ […]

ಪೋಷಕರು ಶಿಕ್ಷಕರಾಗಬೇಕು, ಶಿಕ್ಷಕರು ಪೋಷಕರಾಗಬೇಕು - ನಾರಾಯಣ ಭಟ್

ಪೋಷಕರು ಶಿಕ್ಷಕರಾಗಬೇಕು, ಶಿಕ್ಷಕರು ಪೋಷಕರಾಗಬೇಕು – ನಾರಾಯಣ ಭಟ್

Wednesday, June 26th, 2019

ಮಾತೃಭಾಷೆಯನ್ನೇ ಸರಿಯಾಗಿ ಬಳಸಲು ಬಾರದ ನಾವು ಆಂಗ್ಲಭಾಷೆಗೆ ಜೋತು ಬೀಳುವುದೇಕೆ? ನಮ್ಮ ಮಾತೃಭಾಷೆ ಮಾತನಾಡುವ ಜೊತೆಗೆ ಹಿರಿಯರ ಬಗ್ಗೆ ಪ್ರೀತಿ, ಗೌರವ ಮೂಡುವಂತೆ ಮಕ್ಕಳನ್ನು ಬೆಳೆಸಿದಾಗ ವಯಸ್ಸಾದ ತಂದೆ-ತಾಯಿಯರು ’ವೃದ್ಧಾಶ್ರಮ’ ಸೇರುವುದನ್ನು ತಪ್ಪಿಸಬಹುದು. ಪ್ರರಿಶ್ರಮ, ಪ್ರಾಮಾಣಿಕತೆ, ಸಂಸ್ಕಾರಗಳಂತಹ ಸದ್ಗುಣಗಳು ಎಳೆಯ ಪ್ರಾಯದಲ್ಲೇ ದೊರೆತಾಗ ತಮ್ಮ ತಾಯ್ನಾಡಲ್ಲೇ ಬೇಕಾದ ಸಂಪತ್ತನ್ನು ಗಳಿಸಬಹುದು. ಮಕ್ಕಳ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿ, ಹುರಿದುಂಬಿಸಿ, ಪ್ರೋತ್ಸಾಹಿಸಿ, ಮನೆಯಲ್ಲಿ ಕಲಿಕಾ ಪರಿಸರ ನಿರ್ಮಿಸಿ ಸಾಮರ್ಥ್ಯಕ್ಕೆ ತಕ್ಕ ಕನಸನ್ನು ಕಾಣಬೇಕು. ಕಷ್ಟ ಎದುರಿಸುವ ತರಬೇತಿ ನೀಡಬೇಕು. ಪೋಷಕರು […]

ಹಿಂದಿ ಪರೀಕ್ಷೆ -ಅನ್ವಿತ್ ರೈಗೆ ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್

ಹಿಂದಿ ಪರೀಕ್ಷೆ -ಅನ್ವಿತ್ ರೈಗೆ ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್

Monday, June 24th, 2019

ಫೆಬ್ರವರಿ ತಿಂಗಳಲ್ಲಿ ನಡೆದ ’ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ’ಹಿಂದಿ ಪ್ರಾಥಮಿಕ’ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಟ್ಟು ೨೨ ವಿದ್ಯಾರ್ಥಿಗಳು ಹಾಜರಾಗಿದ್ದು ಶೇ. 100 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 9ನೇ ತರಗತಿಯ ವಿದ್ಯಾರ್ಥಿ ಅನ್ವಿತ್ ರೈ ಇವರು ರಾಜ್ಯಮಟ್ಟದಲ್ಲಿ ೨ನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ. ಇವರಿಗೆ ’ದಕ್ಷಿಣ ಭಾರ್‌ತ ಹಿಂದಿ ಪ್ರಚಾರ ಸಭಾ’ದ ಪ್ರಚಾರಕಿ ಶ್ರೀಮತಿ ಪ್ರಫುಲ್ಲಾ ಹಾಗೂ ಹಿಂದಿ ಶಿಕ್ಷಕಿ ದಾಕ್ಷಾಯಿಣಿ ಮಾರ್ಗದರ್ಶನ ನೀಡಿರುತ್ತಾರೆ. ಇವರು ಶಶಿಧರ್ ರೈ ಮತ್ತು ಶ್ರೀಮತಿ ಭಾರತಿ […]

ಯೋಗವು ಸ್ವ- ಅನುಶಾಸನವಾಗಿದೆ - ಜಯರಾಂ ಭಟ್

ಯೋಗವು ಸ್ವ- ಅನುಶಾಸನವಾಗಿದೆ – ಜಯರಾಂ ಭಟ್

Friday, June 21st, 2019

ಯೋಗವು ಪುರಾತನ ಭಾರತದ ಅಮೂಲ್ಯ ಕೊಡುಗೆ. ಇದು ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ ಐಕ್ಯತೆ ಸಾಧಿಸುವ ಯೋಗ ವಿಜ್ಞಾನವು ನಾವು ನಮ್ಮೊಳಗೆ ಮತ್ತು ಪ್ರಕೃತಿಯೊಡನೆ ಒಂದಾಗಿ ಕಾಣುವುದಕ್ಕೆ ಸಹಕಾರಿಯಾಗಿದೆ. ಇದನ್ನರಿತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪಠ್ಯವಿಷಯದೊಂದಿಗೆ ಯೋಗಾಭ್ಯಾಸವನ್ನು ಜೋಡಿಸಿರುತ್ತೇವೆ ಎಂದು ನುಡಿದವರು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಜಯರಾಂ ಭಟ್ ಇವರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ನಡೆದ ಸಾಮೂಹಿಕ ಅಗ್ನಿಹೋತ್ರ, ಸೂರ್ಯನಮಸ್ಕಾರ, ಚಿಕಿತ್ಸಾತ್ಮಕ ಸರಳ ಆಸನಗಳು ಹಾಗೂ ಪ್ರಾಣಾಯಾಮ […]

ಬಯಸಿದ್ದು ಸಿಗದಿದ್ದಲ್ಲಿ ಬಂದದ್ದನ್ನು ಸ್ವೀಕರಿಸಿ ಸಂತೋಷವಾಗಿರಬೇಕು. ಸಣ್ಣ-ಸಣ್ಣ ವಿಷಯಗಳಲ್ಲೂ  ಖುಷಿ ಕಾಣುವಂತಾಗಲಿ- ಡಾ| ಸುಧಾ ರಾವ್

ಬಯಸಿದ್ದು ಸಿಗದಿದ್ದಲ್ಲಿ ಬಂದದ್ದನ್ನು ಸ್ವೀಕರಿಸಿ ಸಂತೋಷವಾಗಿರಬೇಕು. ಸಣ್ಣ-ಸಣ್ಣ ವಿಷಯಗಳಲ್ಲೂ  ಖುಷಿ ಕಾಣುವಂತಾಗಲಿ- ಡಾ| ಸುಧಾ ರಾವ್

Thursday, June 20th, 2019

ಬದುಕಿನಲ್ಲಿ ನಾವು ಎಣಿಸದಂತೆ ನಡೆಯದಿರುವ ಅದೆಷ್ಟೋ ಸಂದರ್ಭಗಳಿವೆ. ಅದಕ್ಕಾಗಿ ಕೊರಗುತ್ತಾ ಕೂರುವುದಲ್ಲ. ಬದಲಾಗಿ ಬಂದಂತಹ ವಿಷಯಗಳಲ್ಲಿ ಖುಷಿ ಕಾಣುವಂತಾಗಬೇಕು ಎಂದು ಡಾ| ಸುಧಾರಾವ್ ಹತ್ತನೇ ತರಗತಿ ಮಕ್ಕಳಿಗೆ ಹೇಳಿದರು. ಇವರು ವಿವೇಕಾನಂದ ಕನ್ನಡ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಮೇಲಿನ ನುಡಿಗಳನ್ನಾಡಿದರು. ಈ ಸಂದರ್ಭ ಶಾಲಾ ವಿದ್ಯಾನಿಧಿಗೆ 2 ಮಕ್ಕಳ ಪ್ರವೇಶ ಶುಲ್ಕ ನೀಡಿದ ಅನೀಶ್ ಬಡೆಕ್ಕಿಲ ಹಾಗೂ ಪೋಷಕರೂ ಆಟೋ ಚಾಲಕರೂ ಆದ ಮೋಹನ್ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಬದುಕಿನ ಕಾಲೇಜು ಹಂತದಲ್ಲಿರುವ ಮಕ್ಕಳಲ್ಲಿ ಸಾಮಾಜಿಕ ಸನ್ಮಂಗಳದ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Wednesday, June 19th, 2019

ಳವೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಲು ಶಾಲಾ ಚುನಾವಣೆಯು ಉತ್ತಮ ವೇದಿಕೆಯಾಗಿದೆ. ನಾಯಕತ್ವದ ಗುಣವು ವೈಯಕ್ತಿಕ ಮತ್ತು ಸಾಮಾಜಿಕ ಒಳಿತಿಗೆ ಪ್ರೇರಕವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳು ತಮ್ಮ ಜವಾಬ್ದಾರಿ ತಿಳಿದು ನಿರಂತರ ಕಾರ್ಯೋನ್ಮುಖರಾಗಿರಬೇಕು ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ತಿಳಿಸುತ್ತಾ ಪ್ರಮಾಣವಚನ ಮಾಡಿಸಿದರು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಶಿಶಿರ್ ಎಸ್. ಮತ್ತು ಉಪನಾಯಕನಾಗಿ ಸುಹಾಸ್ ಪ್ರಭು ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅಕ್ಷಯ್ […]

ಮನೆಯು ಸಂಸ್ಕಾರದ ಕೆಂದ್ರ ಬಿಂದು -ಕಜಂಪಾಡಿ ಸುಬ್ರಹ್ಮಣ್ಯ ಭಟ್

ಮನೆಯು ಸಂಸ್ಕಾರದ ಕೆಂದ್ರ ಬಿಂದು -ಕಜಂಪಾಡಿ ಸುಬ್ರಹ್ಮಣ್ಯ ಭಟ್

Wednesday, June 19th, 2019

ಸಂಸ್ಕಾರಯುತ ಮತ್ತು ಮಾತೃಭಾಷೆಯ ಶಿಕ್ಷಣ ದೊರೆತಲ್ಲಿ ಮಗುವಿನ ಸರ್ವಾಂಗೀಣ ಏಳಿಗೆ ಸಾಧ್ಯ. ಭಾರತೀಯ ಪರಿಕಲ್ಪನೆ ಹೊಂದಿರುವ, ವೈಜ್ಞಾನಿಕ ಭಾಷೆಯಾದ ಕನ್ನಡ ಭಾಷೆಯು ಅರ್ಥಪೂರ್ಣವಾದ ಸಂಬಂಧಗಳನ್ನು ಬೆಸೆಯುವ ಹೃದಯದ ಭಾಷೆಯಾಗಿದೆ. ಮಾತೃ ಭಾಷೆಯ ಶಿಕ್ಷಣದಿಂದ ಮಗುವಿನಲ್ಲಿ ಆನಂದದ ಕಲಿಕೆ ಸಾಧ್ಯ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷೀಯ […]

ಯಕ್ಷಗಾನ ನಾಟ್ಯ ತರಗತಿ ಪ್ರಾರಂಭ

ಯಕ್ಷಗಾನ ನಾಟ್ಯ ತರಗತಿ ಪ್ರಾರಂಭ

Tuesday, June 4th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 2019-20 ನೇ ಸಾಲಿನ ಯಕ್ಷಗಾನ ನಾಟ್ಯ ತರಗತಿ ಪ್ರಾರಂಭವಾಯಿತು. ಯಕ್ಷಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಶ್ರೀ ಚಂದ್ರಶೇಖರ ಸುಳ್ಯಪದವು ಇವರ ಸಂಯೋಜನೆಯಲ್ಲಿ ಈ ತರಗತಿಗಳು ನಡೆಯಲಿವೆ. ದಿನಾಂಕ 8-6-2019 ರಂದು ಯಕ್ಷಗಾನ ಹಿಮ್ಮೇಳ ತರಗತಿ (ಭಾಗವತಿಕೆ, ಚೆಂಡೆ) ಗಳು ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀ ಇವರ ನಿರ್ದೇಶನದಲ್ಲಿ ಆರಂಭವಾಗಲಿದೆ. ಆಸಕ್ತರು ಸೇರಲು ಅವಕಾಶವಿದೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವ

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Tuesday, May 28th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ 27-05-2019 ರಂದು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಮಾತಾಜಿಯವರು ತಿಲಕವಿಟ್ಟು ಸಿಹಿ ನೀಡಿ ಸ್ವಾಗತಿಸಿದರು. ಎಲ್ಲಾ ಮಕ್ಕಳೂ ಭಾರತಾಂಬೆಯ ಚರಣಗಳಿಗೆ ನಮಸ್ಕರಿಸಿ ಪುಷ್ಪಾರ್ಚನೆಗೈದು ತಮ್ಮ ಮುಂದಿನ ವಿದ್ಯಾರ್ಜನೆಗೆ ಶುಭಾರಂಭಗೈದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ -ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು – ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

2018-19 ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮಕ್ಕಳಿಗೆ ಅಭಿನಂದನೆಗಳು

2018-19 ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮಕ್ಕಳಿಗೆ ಅಭಿನಂದನೆಗಳು

Wednesday, May 1st, 2019
2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ

2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ

Tuesday, April 30th, 2019

2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಅನುಷಾ ಲಕ್ಷ್ಮೀ ಎಂ.ಎಸ್ 603 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಸತ್ಯಪ್ರಸಾದ್ ಎಂ. ಮತ್ತು ಉಮಾಶಂಕರಿ ಎಂ.ಎಸ್. ದಂಪತಿಗಳ ಪುತ್ರಿ. ಶರಣ್‌ ಎಸ್. ಶೆಟ್ಟಿ- 593 (ಗೆಣಸಿನ ಕುಮೇರು ತೋಟ ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಜಿ. ಲಕ್ಷ್ಮೀ ಎಸ್. ಶೆಟ್ಟಿ ದಂಪತಿಗಳ ಪುತ್ರ), ಪಿ. ಪ್ರತೀಕ್‌ ಗಣಪತಿ- 584 (ಡಾ. ರಾಮಚಂದ್ರ ಪಿ. ಮತ್ತು ಚೈತ್ರಾ ರಾಮಚಂದ್ರ ಪಿ. […]

ವಿದ್ಯಾದದಾತಿ ವಿನಯಂ -ಶ್ರೀ ಕೃಷ್ಣಪ್ರಸಾದ್

ವಿದ್ಯಾದದಾತಿ ವಿನಯಂ -ಶ್ರೀ ಕೃಷ್ಣಪ್ರಸಾದ್

Monday, April 8th, 2019

ಪಡೆದ ಶಿಕ್ಷಣ ಮನೆ, ಶಾಲೆ ಸಮಾಜವನ್ನು ಬೆಳಗುವಂತಾಗಬೇಕು. ಪ್ರಾಮಾಣಿಕತೆ ಇರಬೇಕು. ವಿದ್ಯೆಯಿಂದ ಸದ್ಗುಣ ಸಂಪನ್ನ, ಶೀಲವಂತರಾಗಬೇಕು. ವಿದ್ಯೆಯು ಸಂಸ್ಕಾರ, ವಿವೇಚನೆ ನೀಡುತ್ತದೆ ಅದೇ ರೀತಿ ಉತ್ತಮವಾದದ್ದನ್ನು ಆರಿಸಿಕೊಳ್ಳುವ, ಕೆಟ್ಟದನ್ನು ತ್ಯಜಿಸುವ ಗುಣವನ್ನು ನೀಡುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 10 ನೇ ತರಗತಿ ವಿದ್ಯಾರ್ಥಿಗಳ ’ದೀಕ್ಷಾಂತ’ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಪ್ರಸಾದ್ ನುಡಿದರು. ಇವರು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಈ ಮಾತುಗಳನ್ನಾಡಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಪೋಷಕರ […]

ಅನ್ವೇಷಣೆ ಸಂಶೋಧನೆಯ ತಾಯಿ - ಡಾ. ಕೃಷ್ಣ ಭಟ್‌ ಕೊಂಕೋಡಿ

ಅನ್ವೇಷಣೆ ಸಂಶೋಧನೆಯ ತಾಯಿ – ಡಾ. ಕೃಷ್ಣ ಭಟ್‌ ಕೊಂಕೋಡಿ

Friday, April 5th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಅಟಲ್‌ ಟಿಂಕರಿಂಗ್‌ ಉತ್ಸವ- 2019’ ಕಾರ್ಯಕ್ರಮವನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸತೀಶ್‌ರವರು ಉದ್ಘಾಟಿಸಿ ಶುಭ ಹಾರೈಸಿದರು. ಸಭಾಧ್ಯಕ್ಷರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳೂ ಆದ ಡಾ. ಕೃಷ್ಣ ಭಟ್‌ ಕೊಂಕೋಡಿಯವರು ಮಾತನಾಡಿ ಅನ್ವೇಷಣೆ ಎಂಬುದು ಸಂಶೋಧನೆಯ ತಾಯಿ. ನಿತ್ಯ ಜೀವನದಲ್ಲಿ ಅಗತ್ಯವಾದ ಸಣ್ಣಪುಟ್ಟ ಕೌಶಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ಪ್ರಶ್ನಿಸುವ ಮನೋಭಾವ, ಕುತೂಹಲ ಪ್ರವೃತ್ತಿ, ಪರಿಶ್ರಮ, ಆಧುನಿಕ ಸೌಲಭ್ಯಗಳ ಬಳಕೆಯ ಜೊತೆಗೆ ಆತ್ಮವಿಶ್ವಾಸದಿಂದ ಹಂತಹಂತವಾಗಿ ಮೇಲೇರಿದಾಗ ಜೀವನದಲ್ಲಿ […]

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಶಿಬಿರಗಳೇ ಉತ್ತಮ ವೇದಿಕೆ- ಅಶೋಕ್

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಶಿಬಿರಗಳೇ ಉತ್ತಮ ವೇದಿಕೆ- ಅಶೋಕ್

Wednesday, March 27th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ 6 ದಿನಗಳ ’ಕಲರವ’ ಮತ್ತು ಬಣ್ಣ’ ಈ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಯುತ ಅಶೋಕ್ ಮಾತನಾಡಿ, ‘ಮಕ್ಕಳ ಬೆಳವಣಿಗೆಗೆ ಒಬ್ಬ ಉತ್ತಮ ಗುರುವಿನ ಪ್ರೇರಣೆ ಅತೀ ಅಗತ್ಯ. ಶಿಬಿರಗಳಂತಹ ವೇದಿಕೆಗಳು ದೊರೆತಾಗ ಮಕ್ಕಳ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಅವರಲ್ಲಿ ಆತ್ಮವಿಶ್ವಾಸ, ಧೈರ್ಯ, ಉತ್ತಮ ಚಟುವಟಿಕೆಗಳ ಅಭ್ಯಾಸಗಳು ಬೆಳೆಯುತ್ತವೆ’ ಎಂದು ನುಡಿದರು. ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಮಾತನಾಡಿ, ’ಮಗುವಿನ ಬೆಳವಣಿಗೆಗೆ ಹಿರಿಯರ […]

ಆಸಕ್ತಿದಾಯಕ ಚಟುವಟಿಕೆಗಳಿಂದ ರಜಾಕಾಲದ ಸದುಪಯೋಗ ಸಾಧ್ಯ - ಶ್ರೀಮತಿ ಮಂಗಳ ಗೌರಿ

ಆಸಕ್ತಿದಾಯಕ ಚಟುವಟಿಕೆಗಳಿಂದ ರಜಾಕಾಲದ ಸದುಪಯೋಗ ಸಾಧ್ಯ – ಶ್ರೀಮತಿ ಮಂಗಳ ಗೌರಿ

Wednesday, March 20th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಒಂದು ವಾರದ ’ಕಲರವ’ಮತ್ತು’ಬಣ್ಣ’ಎಂಬ ಎರಡು ವಿಭಾಗಗಳಲ್ಲಿ ಬೇಸಿಗೆ ಶಿಬಿರಗಳನ್ನು ಮಾರ್ಚ್ 20 ರಿಂದ ಆರಂಭಿಸಲಾಯಿತು. ಈ ಶಿಬಿರದ ಉದ್ಘಾಟನೆಗೈದು ಮಾತನಾಡಿದ ಶಾಲಾ ಪೋಷಕರಾದ ಶ್ರೀಮತಿ ಮಂಗಳ ಗೌರಿ ಮಾತನಾಡಿ ಮಕ್ಕಳು ದೂರದರ್ಶನ, ಮೊಬೈಲ್ ಇತ್ಯಾದಿಗಳಿಂದ ದೂರವಿದ್ದು, ಬೇಸಿಗೆ ಶಿಬಿರಗಳಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಸಕ್ತಿಯುತ ಕಲಿಕೆಯನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯ ವಿಚಾರವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಕಳ ಸಾಹಿತಿ ಉಲ್ಲಾಸ್ ಪೈ (ಉಲ್ಲಾಸಣ್ಣ) ಶಿಬಿರಗಳು ಮಕ್ಕಳಲ್ಲಿ ಹೆಚ್ಚಿನ ಜ್ಞಾನಾಭಿವೃದ್ಧಿಗೆ […]

ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ

ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ

Tuesday, March 5th, 2019

ಮಂಗಳೂರಿನ ಇಸ್ಕಾನ್ ಸಂಸ್ಥೆಯವರು ನಡೆಸಿದ ಗೋ-ಲೋಕ ಶೇಡ್ಸ್‌ ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗೌತಮ್ ಎಸ್. ಪ್ರಥಮ ಸ್ಥಾನ, 6 ನೇ ತರಗತಿಯ ಅಗಮ್ಯ-ತೃತೀಯ ಸ್ಥಾನ ಮತ್ತು 3ನೇ ತರಗತಿಯ ಅನುಷ ಬಿ. ಎಸ್. ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.

Highslide for Wordpress Plugin