ಕಾರ್ಗಿಲ್ ವಿಜಯ ಸುಲಭದಲ್ಲಿ ಸಿಕ್ಕಿದ್ದಲ್ಲ – ಶ್ರೀ ಸುರೇಶ್

ಕಾರ್ಗಿಲ್ ವಿಜಯೋತ್ಸವ- 20 ರ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ- ತೆಂಕಿಲದಲ್ಲಿ ನಡೆದ’ಯೋಧರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅಭ್ಯಾಗತರ ನೆಲೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖರಾದ ಶ್ರೀ ಸುರೇಶ್‌ ಇವರು ’ಕಾರ್ಗಿಲ್ ವಿಜಯವು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ ವಿಜಯವಾಗಿದೆ. ಇದು ಸುಲಭದಲ್ಲಿ ದೊರೆತದ್ದಲ್ಲ. ಇದರ ಹಿಂದಿನ ಮುಂದಿನ ತ್ಯಾಗ, ಬಲಿದಾನ, ಮನೋಸ್ಥೈರ್ಯವು ನಮಗೆ ಮಾದರಿಯಾಗಿದೆ’ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತನಾಯಕ್, ಸಂಚಾಲಕರಾದ ಶ್ರೀ ರವಿ ನಾರಾಯಣ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಶೇಖರ್ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.

Kargil Vijayostava (3)

Kargil Vijayostava (1)

Kargil Vijayostava (2)

Highslide for Wordpress Plugin