ನಮ್ಮ ಸುತ್ತಲಿನ ಪರಿಸರ ಭಗವಂತನ ಸೃಷ್ಠಿ ಈ ಪರಿಸರವನ್ನು ಉಳಿಸಿದರೆ ಮಾತ್ರ ಮಾನವನು ಭವಿಷ್ಯದಲ್ಲಿ ಉತ್ತಮವಾಗಿರಲು ಸಾಧ್ಯ. ಮಾನವನ ಸ್ವಾರ್ಥಕ್ಕಾಗಿ ನಾಶಪಡಿಸಿದ ಪರಿಸರದ ಮುಖ್ಯ ಭಾಗವಾಗಿರುವ ಮರ-ಗಿಡಗಳನ್ನು ಪುನಃ ಬೆಳೆಸುವ ಉದ್ದೇಶದಿಂದ ತನ್ಮೂಲಕ ಸುಂದರ ನೆಮ್ಮದಿಯ ನಾಳೆಯನ್ನು ಪಡೆಯಬೇಕು. ಅಲ್ಲದೇ ನಮ್ಮ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಉಂಟಾಗಬೇಕು ಎಂಬ ಸತ್ಚಿಂತನೆಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು ಗ್ರಾಮ ವಿಕಾಸ ಯೋಜನೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ ‘ವೃಕ್ಷಾರೋಪಣ’ ಕಾರ್ಯಕ್ರಮ.






ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಜೊತೆಗೆ ಕೆದಿಲ ಗ್ರಾಮದಲ್ಲಿರುವ ಶ್ರೀರಾಮ, ಶ್ರೀದೇವಿ ಮತ್ತು ಶ್ರೀಕೃಷ್ಣ ಭಜನಾ ಮಂದಿರದ ಸರ್ವಸದಸ್ಯರ ಕೂಡುವಿಕೆಯಿಂದ ಮೊದಲನೇ ಹಂತದ ಕಾರ್ಯಕ್ರಮವು ದಿನಾಂಕ 14-7-2019 ರ ಭಾನುವಾರ ಮತ್ತು ಎರಡನೇ ಹಂತದ ಕಾರ್ಯಕ್ರಮವು 21-7-2019 ಭಾನುವಾರದಂದು ಯಶಸ್ವಿಯಾಗಿ ನಡೆಯಿತು.
ಗ್ರಾಮದ ಸುಮಾರು 150 ಮನೆಗಳಿಗೆ ಒಂದು ಮನೆಗೆ ತಲಾ ಎರಡು ಗಿಡಗಳಂತೆ ಸುಮಾರು 300 ಗಿಡಗಳನ್ನು ನೆಡಲಾಯಿತು.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕಾರ್ಯಕರ್ತರ ತಂಡಗಳನ್ನು ರಚಿಸಿ ಗ್ರಾಮದ ಪ್ರತಿ ಮನೆಗಳಿಗೂ ತೆರಳಿ ವೃಕ್ಷ ಮಾತೆಯನ್ನು ನೆಟ್ಟು ಅದರ ಜವಾಬ್ದಾರಿಯ ಬಗ್ಗೆ ಮನೆಯವರಿಗೆ ತಿಳಿಸಲಾಯಿತು. ಮನೆ-ಮನಗಳಲ್ಲಿ ನಮ್ಮ ಪರಿಸರದ ಉಳಿವಿನ ಬಗ್ಗೆ ನಾವೇ ಚಿಂತಿಸಬೇಕಾದ ಅಗತ್ಯವಿದೆ ಎಂಬ ವಿಚಾರ ಮನದಟ್ಟಾಗಲಿ ಈ ಕಾರ್ಯಕ್ರಮವು ಬಹಳ ಪರಿಣಾಮ ಬೀರಿತು.