Author Archive

ಜ್ಞಾನ ಐಸಿರಿ ಸ್ಪರ್ಧೆ - ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಜ್ಞಾನ ಐಸಿರಿ ಸ್ಪರ್ಧೆ – ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, December 28th, 2017

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಧರ್ಮಸ್ಥಳ ಇವರು ಏರ್ಪಡಿಸಿದ ‘ಜ್ಞಾನ ಐಸಿರಿ’ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸ್ವಾತಿ ಎಸ್. ಭಟ್- ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ಗೌತಮ್‌ ಎಸ್. – ಪ್ರೌಢಶಾಲಾ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ’ಜ್ಞಾನ ಸಿರಿ’ ಪುಸ್ತಕಾಧಾರಿತ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ ಮುಖೇಶ್ ಕೃಷ್ಣ – ಪ್ರಥಮ ಸ್ಥಾನವನ್ನು ಪಡೆದು ಧರ್ಮಸ್ಥಳದಲ್ಲಿ ನಡೆಯುವ ಜಿಲ್ಲಾಮಟ್ಟದ […]

ಬಾಳೆ ತೋಟ ನಿರ್ಮಾಣ

ಬಾಳೆ ತೋಟ ನಿರ್ಮಾಣ

Wednesday, December 27th, 2017

ನಿಸರ್ಗ ಸ್ನೇಹಿ ಬದುಕು ನಮ್ಮದಾಗಲಿ – ಶಿಕ್ಷಣವು ಕೇವಲ ಶಾಲಾ ಕಟ್ಟಡದಲ್ಲಿ ನಾಲ್ಕು ಗೋಡೆಗಳ ನಡುವಣ ಪ್ರಕ್ರಿಯೆ ಆಗದೆ ನಿಸರ್ಗದೊಂದಿಗೆ ಕಲಿತು ಬೆರೆಯುವ ಅನುಭವವಾಗಬೇಕು ಎನ್ನುವ ಆಶಯದೊಂದಿಗೆ ವಿವೇಕಾನಂದ ಕನ್ನಡ ಶಾಲೆಯಲ್ಲಿ ಪೋಷಕರ ಸಹಕಾರದೊಂದಿಗೆ ’ಬಾಳೆ ತೋಟ’ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸುಮಾರು ಇಪ್ಪತ್ತು ವಿಧದ ಬಾಳೆಯ ಗಿಡಗಳನ್ನು ನೆಡಲಾಯಿತು. ಶಾಲಾ ಪೋಷಕರು, ಶಿಕ್ಷಕರು, ಮಕ್ಕಳು ಸೇರಿಕೊಂಡು ಇದರಲ್ಲಿ ಭಾಗವಹಿಸಿದರು.

ವಿದ್ಯಾಭಾರತಿ ವಿಜ್ಞಾನ ವಸ್ತು ಪ್ರದರ್ಶನ ಮಾದರಿ ಸ್ಪರ್ಧೆ :  ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ 

ವಿದ್ಯಾಭಾರತಿ ವಿಜ್ಞಾನ ವಸ್ತು ಪ್ರದರ್ಶನ ಮಾದರಿ ಸ್ಪರ್ಧೆ : ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ 

Monday, December 25th, 2017

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ನಡೆಸಿದ ಜ್ಞಾನ – ವಿಜ್ಞಾನ ಮೇಳ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತಣಿಸಂದ್ರ ಬೆಂಗಳೂರು ಇಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಶ್ರಯ್ ಪಿ.ವಿ. (ವಿಶ್ವನಾಥ ಗೌಡ ಪಟ್ಟೆ ಮತ್ತು ರೇವತಿ ದಂಪತಿಯ ಪುತ್ರ) ಮತ್ತು ರಕ್ಷಿತಾ ಡಿ. (ಡೊಂಬಯ ಗೌಡ ಪಂಜಳ ಮತ್ತು ದಾಕ್ಷಾಯಿಣಿ ದಂಪತಿಯ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ.

ಬಾಲ ಉದ್ಯಾನವನಕ್ಕೆ ಶಂಕುಸ್ಥಾಪನೆ

ಬಾಲ ಉದ್ಯಾನವನಕ್ಕೆ ಶಂಕುಸ್ಥಾಪನೆ

Wednesday, December 20th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಬಾಲ ಉದ್ಯಾನವನಕ್ಕೆ ಪುತ್ತೂರು ಸಚಿನ್ ಟ್ರೇಡಿಂಗ್ ಕಂ. ಇದರ ಮಾಲಕರಾದ ಶ್ರೀಯುತ ಸಚಿನ್ ಇವರು ಭೂಮಿ ಪೂಜೆಯೊಂದಿಗೆ ಚಾಲನೆ ನೀಡಿದರು. ಪ್ರಾಥಮಿಕ ವಿಭಾಗದ ಮಕ್ಕಳ ಶ್ಲೋಕದೊಂದಿಗೆ ದೀಪ ಪ್ರಜ್ವಲಿಸಿದ ಅವರು ಉದ್ಯಾನವನವು ಆಟದೊಂದಿಗೆ ಪಾಠದ ಸಂತೋಷವನ್ನು ನೀಡುವಂತೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ, ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಇ, ವಿವೇಕಾನಂದ ಪದವಿಪೂರ್ವ ಕಾಲೇಜಿನ […]

ಜನವರಿ 7 ರಂದು ವಿವೇಕೋತ್ಸವ

ಜನವರಿ 7 ರಂದು ವಿವೇಕೋತ್ಸವ

Thursday, December 14th, 2017
ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಖಂಡಿತ - ಶ್ರೀಮತಿ ಓಮನ ಎನ್.ಕೆ

ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಖಂಡಿತ – ಶ್ರೀಮತಿ ಓಮನ ಎನ್.ಕೆ

Monday, December 11th, 2017

ಜೀವನದಲ್ಲಿ ಪರಿಶ್ರಮ ಪಟ್ಟಾಗ ಯಶಸ್ಸು ಖಂಡಿತವಾಗಿಯೂ ಲಭಿಸುವುದು ಕಲಿಕೆಯ ಜೊತೆ ಕ್ರೀಡೆಯಲ್ಲಿಯೂ ಸಾಧನೆ ಮಾಡಿದಾಗ ಹೆಚ್ಚಿನ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕನಗರಾ, ತೆಂಕಿಲ ಇಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಧ್ವಜಾರೋಹಣಗೈದ, ಪುತ್ತೂರು ನಗರ ಠಾಣೆಯ ಮಹಿಳಾ ಪೋಲಿಸ್ ಉಪನಿರೀಕ್ಷಕರಾದ ಶ್ರೀಮತಿ ಓಮನ ಎನ್.ಕೆ ರವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಕ್ರೀಡಾಕೂಟವನ್ನು ಉದ್ಫಾಟಿಸಿದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ – ಕ್ರೀಡಾ ಪ್ರಮುಖರಾದ ಶ್ರೀ ಆನಂದ ಶೆಟ್ಟಿ ಇವರು ಮಾತನಾಡಿ ಕ್ರೀಡಾ […]

ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರಗಳು ಶಿಕ್ಷಕನಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಹಕಾರಿ- ಶ್ರೀ ಸತೀಶ ಭಟ್, ಬಿಳಿನೆಲೆ

ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರಗಳು ಶಿಕ್ಷಕನಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಹಕಾರಿ- ಶ್ರೀ ಸತೀಶ ಭಟ್, ಬಿಳಿನೆಲೆ

Tuesday, December 5th, 2017

ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರಗಳು ಪ್ರತಿಯೊಬ್ಬ ಶಿಕ್ಷಕನಿಗೂ ಹೆಚ್ಚಿನ ಕಲಿಕೆಗೆ ಹಾಗೂ ಆತ್ಮಾವಲೋಕನವನ್ನು ಮಾಡಿಕೊಳ್ಳಲು ಸಹಕಾರಿ ಎಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಬಿಳಿನೆಲೆ ಇವರು ಹೇಳಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ವಿವೇಕನಗರ, ತೆಂಕಿಲ ಇದರ ಸಹಯೋಗದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ಸಂಕುಲ ಮಟ್ಟದ ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ […]

ಗೌತಮ್‌ಗೆ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ

ಗೌತಮ್‌ಗೆ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ

Friday, November 17th, 2017

ಬಾಲಭವನ ಸೊಸೈಟಿ, ಕಬ್ಬನ್ ಉದ್ಯಾನವನ ಬೆಂಗಳೂರು ಇಲ್ಲಿ ಏರ್ಪಡಿಸಲಾದ ರಾಜ್ಯಮಟ್ಟದ ಮಕ್ಕಳ ’ಕಲಾಶ್ರೀ ಪ್ರಶಸ್ತಿ’ ಆಯ್ಕೆ ಶಿಬಿರದ ಸೃಜನಾತ್ಮಕ ಕಲೆ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್ ಎಸ್ (ನೆಹರೂ ನಗರ ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ)-ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಉಮಾಶ್ರೀ ಅವರಿಂದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಪ್ರತಿಯೊಂದು ಮಗುವೂ ಪ್ರತಿಭಾಶಾಲಿ - ಸತೀಶ್. ಕೆ

ಪ್ರತಿಯೊಂದು ಮಗುವೂ ಪ್ರತಿಭಾಶಾಲಿ – ಸತೀಶ್. ಕೆ

Tuesday, November 14th, 2017

ವಿವೇಕಾನಂದ ಕನ್ನಡ ಶಾಲೆ – ಪ್ರತಿಭಾ ದಿನಾಚರಣೆ ಪ್ರತಿಯೊಂದು ಮಗುವು ಪ್ರತಿಭಾಶಾಲಿಯೇ ಹೌದು. ಪ್ರತಿಭೆಗೆ ತಕ್ಕ ಪರಿಶ್ರಮ ಪಟ್ಟಾಗ ಸೂಕ್ತ ಪ್ರತಿಫಲ ಸಿಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಬೋಧಕರಾದ ಶ್ರೀ ಸತೀಶ್ ಕೆ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಶಾಲೆಯಲ್ಲಿ ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಫಾಟಕರ ನೆಲೆಯಲ್ಲಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕು. ಅದಿತಿ ಕೆ.ಟಿ ಇವರು […]

ವಿಜ್ಞಾನ ಮಾದರಿ ವಸ್ತು ಪ್ರದರ್ಶನ : ಜಿಲ್ಲಾಮಟ್ಟಕ್ಕೆ ಆಯ್ಕೆ

ವಿಜ್ಞಾನ ಮಾದರಿ ವಸ್ತು ಪ್ರದರ್ಶನ : ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, November 14th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಧನುಷ್ ಬಿ. ಮತ್ತು ಸ್ವಸ್ತಿಕ್ ಬಿ.ವಿ. ಇವರು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾಭಾರತಿ - ವಿಜ್ಞಾನ - ವಸ್ತು ಪ್ರದರ್ಶನ ಮಾದರಿ ಸ್ಪರ್ಧೆ : ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ – ವಿಜ್ಞಾನ – ವಸ್ತು ಪ್ರದರ್ಶನ ಮಾದರಿ ಸ್ಪರ್ಧೆ : ರಾಷ್ಟ್ರ ಮಟ್ಟಕ್ಕೆ ಆಯ್ಕೆ

Friday, November 10th, 2017

ವಿದ್ಯಾಭಾರತಿ ವತಿಯಿಂದ ಸರಸ್ವತಿ ಹೈದರಾಬಾದ್‌ನ ಸೈಯದ್‌ಬಾದ್‌ ಸರಸ್ವತಿ ವಿದ್ಯಾಲಯದಲ್ಲಿ ನಡೆದ ದಕ್ಷಿಣ ಪ್ರಾಂತೀಯ ಮಟ್ಟದ ಜ್ಞಾನ – ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಕ್ಷಿತಾ ಡಿ. (ಡೊಂಬಯ್ಯ ಗೌಡ ಪಂಜಳ ಮತ್ತು ದಾಕ್ಷಾಯಿಣಿ ದಂಪತಿ ಪುತ್ರಿ) ಮತ್ತು ಆಶ್ರಯ್ ಪಿ.ವಿ. (ವಿಶ್ವನಾಥ ಗೌಡ ಪಟ್ಟೆ ಮತ್ತು ರೇವತಿ ದಂಪತಿಯ ಪುತ್ರ) ಇವರು ತಯಾರಿಸಿದ ಶ್ರವಣಾತೀತ ತರಂಗಗಳು ಮತ್ತು ಅದರ ಅನ್ವಯಗಳು ಎಂಬ ವಿಷಯದ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿ […]

ಗೌತಮ್‌ ರಾಜ್ಯ ಮಟ್ಟಕ್ಕೆ ಆಯ್ಕೆ

ಗೌತಮ್‌ ರಾಜ್ಯ ಮಟ್ಟಕ್ಕೆ ಆಯ್ಕೆ

Wednesday, November 8th, 2017

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ, ಮಂಗಳೂರು ಇವರು ಜಿಲ್ಲಾ ಬಾಲಭವನ, ಕದ್ರಿ ಮಂಗಳೂರು ಇಲ್ಲಿ ಏರ್ಪಡಿಸಲಾದ ಜಿಲ್ಲಾಮಟ್ಟದ ಮಕ್ಕಳ ’ಕಲಾಶ್ರೀ ಪ್ರಶಸ್ತಿ’ ಆಯ್ಕೆ ಶಿಬಿರದ ಸೃಜನಾತ್ಮಕ ಕಲೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್‌ಎಸ್. – ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮತ್ತು ಉದಯವಾಣಿ ಆರ್ಟಿಸ್ಟ್ ಪಾರ್ಮ್(ರಿ) ಉದಯವಾಣಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲೂ ಈತ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾನೆ.

ತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ : ಶಾಲೆಗೆ ಹಲವು ಪ್ರಶಸ್ತಿ

ತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ : ಶಾಲೆಗೆ ಹಲವು ಪ್ರಶಸ್ತಿ

Friday, November 3rd, 2017

ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು, ತಾಲೂಕು ಬಾಲಭವನ ಸಮಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ನಡೆದತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದವರು: ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರದಲ್ಲಿ ಪ್ರತೀಕ್‌ ಗಣಪತಿ – ಪ್ರಥಮ, ಸೃಜನಾತ್ಮಕ ಪ್ರದರ್ಶನ ಕಲೆ -ಶ್ರೇಯಾ ಎಂ – ಪ್ರಥಮ, ಸೃಜನಾತ್ಮಕ ಬರವಣಿಗೆ […]

ಕನ್ನಡ ರಾಜ್ಯ್ಯೋತ್ಸವ

ಕನ್ನಡ ರಾಜ್ಯ್ಯೋತ್ಸವ

Thursday, November 2nd, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಗೀತಾ ಮಾತಾಜಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಗುರುಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಸ್ಕೂಲ್‌ ಗೇಮ್ಸ್ ಫೆಡರೇಶನ್‌ ಆಫ್ ಇಂಡಿಯಾಗೆ ಶಾಲೆಯ ಕ್ರೀಡಾಪಟುಗಳು ಆಯ್ಕೆ

ಸ್ಕೂಲ್‌ ಗೇಮ್ಸ್ ಫೆಡರೇಶನ್‌ ಆಫ್ ಇಂಡಿಯಾಗೆ ಶಾಲೆಯ ಕ್ರೀಡಾಪಟುಗಳು ಆಯ್ಕೆ

Tuesday, October 17th, 2017

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಧನುಷಾ.ಜಿ.ಶೆಟ್ಟಿ (ದರ್ಬೆತ್ತಡ್ಕ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ಶೆಟ್ಟಿ ದಂಪತಿಗಳ ಪುತ್ರಿ) ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ಮೀರತ್‌ನಲ್ಲಿ ನಡೆದ ಅಖಿಲಾ ಭಾರತೀಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೀಕ್ಷಾ.ಕೆ (ಪೆರಿಗೇರಿ ಕಮಲಾಕ್ಷಗೌಡ ಮತ್ತು ಕಮಲಾಕ್ಷಿ ದಂಪತಿ ಪುತ್ರಿ) 100 ಮೀ ಅಡೆತಡೆ ಓಟ – ಪ್ರಥಮ, 4100 ಮೀ ರಿಲೇಯಲ್ಲಿ ಪ್ರಥಮ ಸ್ಥಾನ, ಉದ್ದಜಿಗಿತ, ತ್ರಿವಿಧಜಿಗಿತ ದ್ವಿತೀಯ, ಗಾಯತ್ರಿ.ಕೆ.ಎನ್ (ಕೇಪು ಕಲ್ಲಪಾಪು ನಿರಂಜನ್ ಕೆ […]

ಸಂಸ್ಕಾರ, ಸಂಸ್ಕೃತಿಯುತ ಕುಟುಂಬಗಳಿಂದ ಭಾರತ ವಿಶ್ವಮಾನ್ಯವೆನಿಸಿದೆ - ಸು.ರಾಮಣ್ಣ

ಸಂಸ್ಕಾರ, ಸಂಸ್ಕೃತಿಯುತ ಕುಟುಂಬಗಳಿಂದ ಭಾರತ ವಿಶ್ವಮಾನ್ಯವೆನಿಸಿದೆ – ಸು.ರಾಮಣ್ಣ

Monday, October 16th, 2017

ವಿವಾಹ ಎನ್ನುವುದು ಕೇವಲ ಭೋಗಕ್ಕಾಗಿ ಅಲ್ಲ, ಎರಡು ಜೀವಗಳು ಬೆಸೆಯುವ ಈ ಸಂಬಂಧವು ಎರಡು ಕುಟುಂಬಗಳನ್ನು ಜೋಡಿಸುತ್ತದೆ. ದೈವಾನುಗ್ರಹದಿಂದ ಪಡೆದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ತಂದೆ ತಾಯಿಗಳಿಗಿರಬೇಕು. ಮಕ್ಕಳಲ್ಲಿ ಸಮಷ್ಠಿಯ ಬಗ್ಗೆ ಅಂದರೆ, ಸಮಸ್ತ ಸೃಷ್ಟಿ, ಜಗತ್ತು ವಿಶ್ವವನ್ನೇ ಪ್ರೀತಿಸಿ ಗೌರವಿಸುವ ಸಂಸ್ಕೃತಿ ಬೆಳೆಸಿದಾಗ ’ವಸುದೈವ ಕುಟುಂಬಕಮ್’ ಎಂಬ ಮಾತು ಸಾರ್ಥಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ನವದಂಪತಿಗಳ ಸಮಾವೇಶ’ ಎಂಬ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ […]

ಅ. 15 ರಂದು ನವದಂಪತಿ ಸಮಾವೇಶ

ಅ. 15 ರಂದು ನವದಂಪತಿ ಸಮಾವೇಶ

Saturday, October 14th, 2017
ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ : ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ : ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Monday, October 9th, 2017

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬಾಲ ಭಾರತಿ ಕೇಂದ್ರಿಯ ವಿದ್ಯಾಲಯ ಬಳ್ಳಾರಿ ಇಲ್ಲಿ ನಡೆದ ಪ್ರಾಂತೀಯ ಜ್ಞಾನ – ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆಶ್ರಯ್ ಪಿ.ವಿ ಮತ್ತು ರಕ್ಷಿತಾ. ಡಿ ಇವರ ತಂಡ ಪ್ರಥಮ ಸ್ಥಾನ ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರತೀಕ್ ಗಣಪತಿ – ದ್ವಿತೀಯ ಸ್ಥಾನ, ಧನುಷ್ ಬಿ ಮತ್ತು ಸ್ವಸ್ತಿಕ್ ಬಿ.ವಿ ಇವರ ತಂಡ ತೃತೀಯ ಸ್ಥಾನ ಪಡೆದಿರುತ್ತದೆ.

ಬಾಲಗೋಕುಲ ಕಾರ್ಯಾಗಾರ

ಬಾಲಗೋಕುಲ ಕಾರ್ಯಾಗಾರ

Saturday, October 7th, 2017

ಸಂಸ್ಕಾರಯುತ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಶಿಕ್ಷಕರ ಮನೆಯಲ್ಲಿ ಬಾಲಗೋಕುಲ ನಡೆಸುವ ಬಗ್ಗೆ ಮೈತ್ರೇಯಿ ಗುರುಕುಲದ ಶ್ರೀಮತಿ ಮಾತಾಜಿಯವರ ನೇತೃತ್ವದಲ್ಲಿ ಬಾಲಗೋಕುಲ ಶಿಬಿರ ನಡೆಯಿತು.

ತಾಲೂಕು ಮಟ್ಟದ ಕ್ರೀಡಾಕೂಟ  : ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

ತಾಲೂಕು ಮಟ್ಟದ ಕ್ರೀಡಾಕೂಟ : ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

Thursday, October 5th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪ್ರೌಢಶಾಲೆ ಕೆಯ್ಯೂರು ಇವರ ಸಹಯೋಗದಲ್ಲಿ ಕೆಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು 17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಮತ್ತು ಬಾಲಕಿಯರ ಎರಡು ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಇದರಲ್ಲಿ 20 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ

ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ

Saturday, September 30th, 2017

ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿ ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತದ ಸಂಸ್ಕಾರ, ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸನಾತನ ಧರ್ಮವೇ ನಮ್ಮೆಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಏಳಿಗೆಗೆ ತಳಹದಿ ಎಂದು ಸಾರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾಕ್ಟರ್ ಜೀಯವರು, ಸನಾತನ ಧರ್ಮವೇ ಈ ದೇಶದ ಜೀವಾಳವಾಗಿದ್ದು ಈ ಕಾರಣದಿಂದಲೇ ಭಾರತವು ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದಿದ್ದರು. ಇಂತಹ ಸಂಸ್ಕಾರ ಸುಧೆಯನ್ನು ಸ್ವೀಕರಿಸಿ ಹಿರಿಯರು […]

ಯಕ್ಷಚಿಣ್ಣರ ಬಳಗ ಮಠಂತಬೆಟ್ಟುವಿನಲ್ಲಿ

ಯಕ್ಷಚಿಣ್ಣರ ಬಳಗ ಮಠಂತಬೆಟ್ಟುವಿನಲ್ಲಿ

Thursday, September 28th, 2017

ಶ್ರೀಮಹೀಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರ ಬಳಗದಿಂದ ’ತಾಟಕಿ ಸಂಹಾರ- ಖರಾಸುರ ವಧೆ’ ಎಂಬ ಪುಣ್ಯಕಥಾ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಹಾಗೂ ಚಂದ್ರಶೇಖರ್ ಸುಳ್ಯಪದವು ಇವರ ನಿರ್ದೇಶನದಲ್ಲಿ ನಡೆಯಿತು.

ಶಾಲೆಗೆ ಸರಸ್ವತಿ ದೇವಿಯ ವಿಗ್ರಹ ಆಗಮನ

ಶಾಲೆಗೆ ಸರಸ್ವತಿ ದೇವಿಯ ವಿಗ್ರಹ ಆಗಮನ

Thursday, September 28th, 2017

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರತಿಷ್ಠಾಪಿಸಲಿರುವ ಸರಸ್ವತಿ ದೇವಿ ವಿಗ್ರಹದ ಮೆರವಣಿಗೆಯು ಸೆ.೨೮ರಂದು ನಡೆಯಿತು. ಕಾರ್ಕಳದಲ್ಲಿ ತಯಾರಿಸಲ್ಪಟ್ಟ ವಿಗ್ರಹವು ಸೆ. 28 ರಂದು ನೆಹರು ನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಛೇರಿ ನರೇಂದ್ರಕ್ಕೆ ಆಗಮಿಸಿದೆ. ಸೆ. 28 ರಂದು ಬೊಳುವಾರು ವೃತ್ತದ ಬಳಿಯಿಂದ ಹೊರಟು ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಹಮ್ಮಾಯಿ ದೇವಸ್ಥಾನ ಹಾಗೂ ಭವಾನಿ ಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ತೆಂಕಿಲ ವಿದ್ಯಾಸಂಸ್ಥೆಗೆ ಆಗಮಿಸಿತು. ಬಳಿಕ […]

ಯಕ್ಷಗಾನ ಬಯಲಾಟ

ಯಕ್ಷಗಾನ ಬಯಲಾಟ

Saturday, September 23rd, 2017

ದಿನಾಂಕ 22-9-2017 ರಂದು ಮಂಗಳೂರಿನ ಕದ್ರಿ ಮಂಜುನಾಥೇಶ್ವರದೇವಸ್ಥಾನದ ವಠಾರದಲ್ಲಿ ನವರಾತ್ರಿಯ ಅಂಗವಾಗಿ ಕದಳಿ ಕಲಾ ಕೇಂದ್ರದವರು ನಡೆಸಲ್ಪಡುವ ಮಕ್ಕಳ ಯಕ್ಷಗಾನ ಪ್ರದರ್ಶನದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಯಕ್ಷಚಿಣ್ಣರ ಬಳಗ ಶ್ರೀರಾಮಕಾರುಣ್ಯ ಎಂಬ ಪುಣ್ಯಕಥಾ ಭಾಗವನ್ನು ಆಡಿ ತೋರಿಸಿದರು. ಯಕ್ಷ ಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಶ್ರೀ ಚಂದ್ರಶೇಖರ ಸುಳ್ಯ ಪದವುರವರ ಸಂಯೋಜನೆಯಲ್ಲಿ ನಡೆಯಿತು.

ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ

ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ

Thursday, September 14th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಡವರ ಬಂಧು ಶೈಕ್ಷಣಿಕ ಕಾಳಜಿಯುಳ್ಳ ಶ್ರೀಯುತ ಅಶೋಕ್‌ ರೈ ಕೋಡಿಂಬಾಡಿಯವರು ಉಪಸ್ಥಿತರಿದ್ದು ಯಕ್ಷಗಾನವು ಕರಾವಳಿ ಭಾಗದ ಶ್ರೇಷ್ಠ ಕಲೆಯಾಗಿದೆ ಅದನ್ನು ಉಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಈ ರೀತಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು, ಅಲ್ಲದೇ ತಮ್ಮ ಬಾಲ್ಯದ ನೆನಪುಗಳ ಪುಟವನ್ನು ತೆರೆದಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಣಿಪುರಯಕ್ಷಗಾನ ಪತ್ರಿಕೆಯ ಸಂಪಾದಕರಾದ ಶ್ರೀನಾರಾಯಣ ಚಂಬಲ್ತಿಮಾರ್ ಮಾತನಾಡಿ’ ಮಕ್ಕಳಲ್ಲಿ ಎಳವೆಯಲ್ಲಿಯೇ […]

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ- ಶಾಲಾ ಕವ್ವಾಲಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ- ಶಾಲಾ ಕವ್ವಾಲಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Thursday, September 14th, 2017

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಾರ್ವರಿ, ಪ್ರಜ್ಞಾ ನಿಡ್ವಣ್ಣಾಯ, ವಂಶಿ, ತನ್ಮಯಿ ವಾಗ್ಲೆ, ಇಶಾ, ಶ್ರೀಲಕ್ಷ್ಮೀ ಇವರ ಕವ್ವಾಲಿ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

Media Reports Sept 2017

Media Reports Sept 2017

Wednesday, September 13th, 2017
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಗುರುವಂದನೆ’

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಗುರುವಂದನೆ’

Wednesday, September 13th, 2017

ನಮ್ಮ ಭಾರತದೇಶದಲ್ಲಿ ಗುರುಗಳ ಮಹತ್ವವನ್ನು ಅರಿತು ಗೌರವಿಸುವ, ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಭವ್ಯಪರಂಪರೆಯೇ ಇದೆ. ಪುರಾಣ ಪುರುಷರ ಮಹಾನ್ ಸಾಧಕರ ಸಾಧನೆಯ ಹಿಂದೆ ಉತ್ತಮ ಗುರುಗಳ ಮಾರ್ಗದರ್ಶನವನ್ನು ನಾವು ಕಾಣಬಹುದು. ಶೃಂಗೇರಿಯ ಶಾರಾದಾಪೀಠದ ಸ್ಥಾಪಕರಾದ ಶಂಕರಾಚಾರ್ಯರು ಆದರ್ಶ ಶಿಷ್ಯ ಕೋಟಿಯನ್ನು ಹೊಂದಿದ್ದು, ದೇಶದಾದ್ಯಂತ ಶಾಖಾಪೀಠಗಳ ಮೂಲಕ ಸಮಾಜದ ಜನರ ಸಂಸ್ಕಾರ ಸಂಸ್ಕೃತಿಗಳನ್ನು ಔನ್ನತ್ಯದೆಡೆಗೆ ಕೊಂಡೊಯ್ಯುವ ಸಾರ್ಥಕ ಕಾರ್ಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿವೇಕಾನಂದ ಸಂಸ್ಥೆಯು ಗುರುಗಳನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ಎಂದು […]

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ : ಚಿತ್ರಕಲೆಯಲ್ಲಿ ಮುಖೇಶ್ ಕೃಷ್ಣನಿಗೆ ತೃತೀಯ

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ : ಚಿತ್ರಕಲೆಯಲ್ಲಿ ಮುಖೇಶ್ ಕೃಷ್ಣನಿಗೆ ತೃತೀಯ

Wednesday, September 13th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯಲ್ಲಿ ನಡೆದ ಹಿರಿಯ ಪ್ರಾಥಮಿಕ ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಮುಖೇಶ್ ಕೃಷ್ಣ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಪೂಜಾರಿ ಶೇರಾ ಇವರು ತರಬೇತಿ ನೀಡಿರುತ್ತಾರೆ.

ಖೋ - ಖೋ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಖೋ – ಖೋ ವಿಭಾಗೀಯ ಮಟ್ಟಕ್ಕೆ ಆಯ್ಕೆ

Wednesday, September 13th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 14 ರ ವಯೋಮಾನದ ಬಾಲಕರ ವಿಭಾಗದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಗುರುಪ್ರಸಾದ್ ಮತ್ತು ಪವನ್‌ಕುಮಾರ್ ಭಾಗವಹಿಸಿ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಕಬಡ್ಡಿ-ಜಿಲ್ಲಾಮಟ್ಟಕ್ಕೆ ಆಯ್ಕೆ

ಕಬಡ್ಡಿ-ಜಿಲ್ಲಾಮಟ್ಟಕ್ಕೆ ಆಯ್ಕೆ

Wednesday, September 13th, 2017

ಸುಳ್ಯ ತಾಲೂಕಿನ ಜ್ಞಾನ ದೀಪ ಎಲಿಮಲೆ ಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ತೃಪ್ತಿ ಮತ್ತು ಅಂಕಿತಾ ಇವರು ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲಾ ತಂಡಕ್ಕೆ ಆಯ್ಕೆಯಾಗಿರುತ್ತಾರೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - ಕವ್ವಾಲಿ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ – ಕವ್ವಾಲಿ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Friday, September 8th, 2017

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಾರ್ವರಿ, ಪ್ರಜ್ಞಾ ನಿಡ್ವಣ್ಣಾಯ, ವಂಶಿ, ತನ್ಮಯಿ ವಾಗ್ಲೆ, ಇಶಾ, ಶ್ರೀಲಕ್ಷ್ಮೀ ಇವರ ಕವ್ವಾಲಿ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ತಾಲೂಕು ಮಟ್ಟದ ಪ್ರತಿಭಾಕಾರಂಜಿ - ಯಕ್ಷಗಾನ ಸ್ಪರ್ಧೆ : ಪರೀಕ್ಷಿತ್ - ಪ್ರಥಮ

ತಾಲೂಕು ಮಟ್ಟದ ಪ್ರತಿಭಾಕಾರಂಜಿ – ಯಕ್ಷಗಾನ ಸ್ಪರ್ಧೆ : ಪರೀಕ್ಷಿತ್ – ಪ್ರಥಮ

Friday, September 8th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯ ಹಿರಿಯ ಪ್ರಾಥಮಿಕ ವಿಭಾಗದ ಯಕ್ಷಗಾನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪರೀಕ್ಷಿತ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಿಕ್ಷಕರಾದ ಚಂದ್ರಶೇಖರ್ ಸುಳ್ಯಪದವು ಮತ್ತು ನೃತ್ಯ ಗುರುಗಳಾದ ಬಾಲಕೃಷ್ಣ ಉಡ್ಡಂಗಲ ತರಬೇತಿ ನೀಡಿರುತ್ತಾರೆ.

ಯೋಗ ಸ್ಪರ್ಧೆ

ಯೋಗ ಸ್ಪರ್ಧೆ

Friday, September 8th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪುನೀತ್ (ಪ್ರಥಮ), ಲಿಖಿತ್ (ದ್ವಿತೀಯ), ಭರತ್ (ಪಂಚಮ) ಸ್ಥಾನವನ್ನು ಪಡೆದಿರುತ್ತಾರೆ. ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ (ದ್ವಿತೀಯ), ವೈಶಾಲಿ(ತೃತೀಯ) ಹಾಗೂ ಮಧುಶ್ರೀ (ಪಂಚಮ) ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಯೋಗಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಜಿಲ್ಲಾ ಮಟ್ಟದ ಜ್ಞಾನ - ವಿಜ್ಞಾನ ಮೇಳ - ಶಾಲೆಗೆ ಹಲವು ಪ್ರಶಸ್ತಿ

ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ – ಶಾಲೆಗೆ ಹಲವು ಪ್ರಶಸ್ತಿ

Friday, September 8th, 2017

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. ವಿಜ್ಞಾನ ಪ್ರದರ್ಶನ ಸ್ಪರ್ಧೆ : ಶಿಶುವರ್ಗ – ಪ್ರಮಥ ಎಂ ಭಟ್ – ತೃತೀಯ, ಧಾತ್ರಿ ಆರ್ ರೈ – ತೃತೀಯ ಕಿಶೋರ ವರ್ಗ – ಆಶ್ರಯ್ ಪಿ.ವಿ ಮತ್ತು ರಕ್ಷಿತಾ ಡಿ – ಪ್ರಥಮ, ಧನುಷ್ ಮತ್ತು ಸ್ವಸ್ತಿಕ್ ಬಿ.ವಿ – ಪ್ರಥಮ, ಪ್ರತೀಕ್ […]

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ- 2017 : ದೃಶ್ಯ ಕಲೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ- 2017 : ದೃಶ್ಯ ಕಲೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ

Thursday, September 7th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ದೃಶ್ಯ ಕಲಾ ವಿಭಾಗದಲ್ಲಿ ಗೌತಮ್- ಚಿತ್ರಕಲೆ, ಅಮಿತಾ ಎಸ್.ಎನ್-ಕ್ಲೇ ಮಾಡೆಲ್, ಜನನಿ.ಬಿ – ಪೇಪರ್‌ಕ್ರಾಫ್ಟ್, ಧನ್ಯಕುಮಾರ್-ಕರಕುಶಲ ಕಲೆ ಈ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಪೂಜಾರಿ ಶೇರಾ ಇವರು ತರಬೇತಿ ನೀಡಿರುತ್ತಾರೆ.

ಜೆ.ಎಸ್.ಕೆ.ಎ ರಾಜ್ಯಮಟ್ಟದ ಕರಾಟೆ : ಸಾತ್ವಿಕ್‌ಗೆ ಬೆಸ್ಟ್ ಫೈಟರ್ ಅವಾರ್ಡ್

ಜೆ.ಎಸ್.ಕೆ.ಎ ರಾಜ್ಯಮಟ್ಟದ ಕರಾಟೆ : ಸಾತ್ವಿಕ್‌ಗೆ ಬೆಸ್ಟ್ ಫೈಟರ್ ಅವಾರ್ಡ್

Wednesday, September 6th, 2017

ದಿನಾಂಕ 3-9-2017 ರಂದು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸಭಾಭವನ ಸುಕಂದಕಟ್ಟೆ, ಮಂಗಳೂರು ಇಲ್ಲಿ ನಡೆದ 2ನೇ ರಾಜ್ಯಮಟ್ಟದ ಜೆ.ಎಸ್.ಕೆ.ಎ ಕರಾಟೆ ಚಾಂಪಿಯನ್ ಷಿಪ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಿ.ಎಸ್ ’ಬೆಸ್ಟ್ ಫೈಟರ್’ (Grand Champion Kumite) ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಇವರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್‌ನ ಮಂಗಳೂರಿನ ನಿತಿನ್ ಎನ್ ಸುವರ್ಣ (Black Belt 4th DAN) , ಸಂಪತ್ ಕುಮಾರ್ ಹಾಗೂ ಶಿವಪ್ರಸಾದ್‌ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. […]

ಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರದರ್ಶನ

Monday, August 28th, 2017

ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿಗಣೇಶ ಚತುರ್ಥಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮದ ಯಕ್ಷಚಿಣ್ಣರ ಬಳಗದವರಿಂದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರ ನಿರ್ದೇಶನದಲ್ಲಿ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ಸಂಯೋಜನೆಯಲ್ಲಿ ಶ್ರೀ ರಾಮಾಂಜನೇಯ ಎಂಬ ಪುಣ್ಯಕಥಾ ಭಾಗ ಪ್ರದರ್ಶನ ನಡೆಯಿತು.

ಯಕ್ಷ ವೈಭವ

ಯಕ್ಷ ವೈಭವ

Monday, August 28th, 2017

ಕಡಬದ ದುರ್ಗಾಂಬಾ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಯಕ್ಷ ಚಿಣ್ಣರ ಬಳಗದವರಿಂದ ’ಶ್ರೀರಾಮದರ್ಶನಂ’ ಎಂಬ ಯಕ್ಷಗಾನ ಪ್ರದರ್ಶನವು ಶ್ರೀ ಚಂದ್ರಶೇಖರ್ ಸುಳ್ಯಪದವುರವರ ನಿರ್ದೇಶನದಲ್ಲಿ ನಡೆಯಿತು.

ಕರಾಟೆ ಸ್ಪರ್ಧೆ - ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

ಕರಾಟೆ ಸ್ಪರ್ಧೆ – ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

Monday, August 28th, 2017

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ಮಂಗಳೂರು, ಜಿಲ್ಲಾಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯು ರೆಡ್ ಕ್ಯಾಮಲ್ಸ್ ಇಸ್ಲಾಮಿಕ್ ಶಾಲೆ ಮಂಗಳೂರು ಇಲ್ಲಿ ನಡೆದಿದ್ದು, ಇದರಲ್ಲಿ ಕರಾಟೆ 30-35 ಕೆ.ಜಿ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಹಿತೇಶ್.ಪಿ.ಬಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಪಿ. ಬಾಲಕೃಷ್ಣ ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರ.

ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ - ಶಾಲೆಗೆ ಪ್ರಶಸ್ತಿ

ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ – ಶಾಲೆಗೆ ಪ್ರಶಸ್ತಿ

Thursday, August 24th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ ಶ್ರೀ ಸೀತಾರಾಘವ ಪದವಿಪೂರ್ವ ವಿದ್ಯಾಲಯ ಪೆರ್ನಾಜೆ ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಗೌತಮ್, ಅಮಿತಾ ಎಸ್.ಎನ್, ಜನನಿ. ಬಿ, ಧನ್ಯ ಕುಮಾರ್ ಇವರು ದೃಶ್ಯ ಕಲೆಯಲ್ಲಿ ಪ್ರಥಮ ಸ್ಥಾನ ಮತ್ತು ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪೃಥಾ ಆರ್ ರೈ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

Wednesday, August 23rd, 2017

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ-ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂತ ವಿಕ್ಟರ್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ. ವಿಜೇತರ ವಿವರ : ಕಿರಿಯ ಪ್ರಾಥಮಿಕ ವಿಭಾಗ : ಸುಶ್ಮಿತಾ- ಚಿತ್ರಕಲೆ(ಪ್ರಥಮ), ಭವಿಷ್ -ಸಂಸ್ಕೃತ ಕಂಠಪಾಠ (ದ್ವಿತೀಯ), ಸಿಂಚನಾ -ಧಾರ್ಮಿಕ ಪಠಣ- ಸಂಸ್ಕೃತ (ದ್ವಿತೀಯ), ತಶ್ವಿತ್ ರಾಜ್-ಕ್ಲೇ ಮಾಡೆಲಿಂಗ್ (ದ್ವಿತೀಯ), ಮಂಗಳಾ […]

ಈಜು ಸ್ಪರ್ಧೆ - ಪ್ರಶಸ್ತಿ

ಈಜು ಸ್ಪರ್ಧೆ – ಪ್ರಶಸ್ತಿ

Monday, August 21st, 2017

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಮಂಗಳೂರು ಇವರ ಆಶ್ರಯದಲ್ಲಿ ಲೇಡಿಹಿಲ್ ವಿಕ್ಟೋರಿಯ ಹೆಣ್ಮಕ್ಕಳ ಪ್ರೌಢಶಾಲೆ, ಉರ್ವ ಇಲ್ಲಿ ನಡೆದ ಜಿಲ್ಲಾಮಟ್ಟದ ಮಕ್ಕಳ ಆಟೋಟ ಸ್ಪರ್ಧೆ 2017-18 ಇದರ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಶಿಶಿಲ್ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ, 200 ಮೀ ಫ್ರೀಸ್ಟೈಲ್‌ನಲ್ಲಿ ದ್ವಿತೀಯ, 100 ಮೀ ಫ್ರೀಸ್ಟೈಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವನು ಪರ್ಲಡ್ಕ ನಿವಾಸಿ ಶಿವ ಗೌಡ ಮತ್ತು ನಳಿನಿ ದಂಪತಿಗಳ ಪುತ್ರ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ’ಕಾವ್ಯವಾಚನ’

ಸ್ವಾತಂತ್ರ್ಯೋತ್ಸವದ ಅಂಗವಾಗಿ ’ಕಾವ್ಯವಾಚನ’

Monday, August 21st, 2017

ಷಣ್ಮುಖದೇವ ಪ್ರೌಢಶಾಲೆ, ಪೆರ್ಲಂಪಾಡಿ ಇಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದು ’ಕರ್ಣಪರ್ವ’ದಿಂದ ಆಯ್ದ ವಿಷಯದಲ್ಲಿ ’ಕಾವ್ಯ ವಾಚನ’ ನಡೆಯಿತು. ವಾಚನವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು, ಪ್ರವಚನವನ್ನು ಕಟೀಲು ಮೇಳದ ಹಿರಿಯ ಕಲಾವಿದ ಅಪ್ಪಕುಂಞ ಯಾದವ್ ರವರು ಗೈದರು. ಶೃತಿಯಲ್ಲಿ ಶ್ರೀ ಲಿಂಗಪ್ಪ ಗೌಡ ಪುತ್ತೂರು ಸಹಕರಿಸಿದರು.

ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು- ಶ್ರೀ ಜನಾರ್ಧನ ರೈ ಆನಾಜೆ

ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು- ಶ್ರೀ ಜನಾರ್ಧನ ರೈ ಆನಾಜೆ

Saturday, August 19th, 2017

ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಸೋಲು – ಗೆಲುವುಗಳ ಬಗೆಗೆ ಚಿಂತಿಸದೆ ಮುಂದೆ ಗೆಲ್ಲುವುವೆಂಬ ಭರವಸೆಯನ್ನು ಇಟ್ಟುಕೊಳ್ಳುವುದು ಅತೀ ಅಗತ್ಯ. ಎಂದು ಪುತ್ತೂರಿನ ಪಿ.ಡಬ್ಲ್ಯೂ.ಡಿ. ಕನ್ಸಲ್‌ಟೇಟರ್ ಶ್ರೀ ಜನಾರ್ದನ ರೈ ಆನಾಜೆ ಇವರು ವಿದ್ಯಾಭಾರತಿ ಕರ್ನಾಟಕ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ’ಜಿಲ್ಲಾಮಟ್ಟದ ಕಬಡ್ಡಿ’ ಪಂದ್ಯಾಟವನ್ನು ಉದ್ಫಾಟಿಸಿ ಶುಭ ಹಾರೈಸಿದರು. ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಶಾರೀರಕ ಪ್ರಮುಖ್ ಆಗಿರುವ ಶ್ರೀಯುತ ಕರುಣಾಕರ್ […]

Highslide for Wordpress Plugin