ಬಾಲ ಉದ್ಯಾನವನಕ್ಕೆ ಶಂಕುಸ್ಥಾಪನೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಬಾಲ ಉದ್ಯಾನವನಕ್ಕೆ ಪುತ್ತೂರು ಸಚಿನ್ ಟ್ರೇಡಿಂಗ್ ಕಂ. ಇದರ ಮಾಲಕರಾದ ಶ್ರೀಯುತ ಸಚಿನ್ ಇವರು ಭೂಮಿ ಪೂಜೆಯೊಂದಿಗೆ ಚಾಲನೆ ನೀಡಿದರು. ಪ್ರಾಥಮಿಕ ವಿಭಾಗದ ಮಕ್ಕಳ ಶ್ಲೋಕದೊಂದಿಗೆ ದೀಪ ಪ್ರಜ್ವಲಿಸಿದ ಅವರು ಉದ್ಯಾನವನವು ಆಟದೊಂದಿಗೆ ಪಾಠದ ಸಂತೋಷವನ್ನು ನೀಡುವಂತೆ ಶುಭ ಹಾರೈಸಿದರು.

Bhoomi poojan (2)

Bhoomi poojan

Bhoomi poojan (1)

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ, ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಇ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ ರವೀಂದ್ರ.ಪಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕ್, ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಸದಸ್ಯರಾದ ಶ್ರೀಮತಿ ಭಾಗ್ಯಲಕ್ಷ್ಮೀ ಅರ್ತಿಕಜೆ, ಶ್ರೀ ರಮೇಶ್ಚಂದ್ರ, ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಸುನೀತಾ ರವೀಂದ್ರ ಶೆಟ್ಟಿ, ಶಾಲಾ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತ್ಯಪ್ರಸಾದ್, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಶುಭ ಹಾರೈಸಿದರು.

Highslide for Wordpress Plugin