Author Archive

ಈಜು ಸ್ಪರ್ಧೆ-ರಾಜ್ಯಮಟ್ಟಕ್ಕೆ ಆಯ್ಕೆ

ಈಜು ಸ್ಪರ್ಧೆ-ರಾಜ್ಯಮಟ್ಟಕ್ಕೆ ಆಯ್ಕೆ

Wednesday, September 21st, 2016

2016-17 ನೇ ಸಾಲಿನಲ್ಲಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯು ಮಂಗಳೂರಿನ ಮಂಗಳ ಈಜು ಕೊಳದಲ್ಲಿ ನಡೆಯಿತು. ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿತ್ರಿಶೂಲ್ 800  ಮೀಟರ್, ಫ್ರೀ ಸ್ಟೈಲ್‌ನಲ್ಲಿ ಪ್ರಥಮ ಮತ್ತು 100 ಮೀಟರ್ ಬ್ರ್ಶೆಸ್ಟ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಗಳಿಸಿರುತ್ತನೆ. ಇವನು ಪರ್ಲಡ್ಕ ನಿವಾಸಿ ಶಿವಗೌಡ ಮತ್ತು ನಳಿನಿ ದಂಪತಿಗಳ ಪುತ್ರನಾಗಿದ್ದಾನೆ.

ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ’ಪ್ರತಿಭಾ’ ಸ್ಪರ್ಧೆಯಲ್ಲಿ ಪ್ರಶಸ್ತಿ

ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ’ಪ್ರತಿಭಾ’ ಸ್ಪರ್ಧೆಯಲ್ಲಿ ಪ್ರಶಸ್ತಿ

Thursday, September 15th, 2016

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಒಂದು ದಿನದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಯಶಸ್ವಿ, ಸ್ಪೂರ್ತಿ, ಶುಭಾ, ವಿಭಾ, ಕಾವ್ಯಶ್ರೀ, ಶುಚಿತಾ, ಅರ್ಪಿತಾ, ಭವಿತ ಇವರ ಕಂಸಾಳೆ ನೃತ್ಯ ತಂಡ ಪ್ರಥಮ ಸ್ಥಾನ ಗಳಿಸಿದೆ. ಮತ್ತು ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಅಮಿತಾ ಎಸ್.ಎನ್ – ತೃತೀಯ ಸ್ಥಾನ ಪಡೆದಿದ್ದಾರೆ.

ಚದುರಂಗ ಸ್ಪರ್ಧೆಯಲ್ಲಿ ಪ್ರಶಸ್ತಿ

ಚದುರಂಗ ಸ್ಪರ್ಧೆಯಲ್ಲಿ ಪ್ರಶಸ್ತಿ

Thursday, September 15th, 2016

ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಬೆಳ್ತಂಗಡಿ ಇದರ ಸಂಯುಕ್ತ  ಆಶ್ರಯದಲ್ಲಿ ಎಸ್.ಡಿ.ಎಂ. ಪೆರಿಂಜೆಯಲ್ಲಿ ನಡೆದ ದ. ಕ. ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ  ವಿಭಾಗದ ಚದುರಂಗ ಸ್ಪರ್ಧೆ- 2016 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಹಿತಾ ಶರ್ಮ ಮೂರನೇ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹಳಾಗಿದ್ದಾಳೆ. ಇವಳು ರಾಜೇಶ್ ಶರ್ಮ ಮತ್ತು ಶ್ರೀಮತಿ ಸೀಮಾ ದಂಪತಿಗಳ ಪುತ್ರಿ.

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ – ಗಝಲ್­ನಲ್ಲಿ ದ್ವಿತೀಯ

Thursday, September 1st, 2016

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇದರ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾವಳಪಡೂರು ವಗ್ಗ, ಬಂಟ್ವಾಳ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ. ಪ್ರೌಢಶಾಲಾ ವಿಭಾಗ ಗಝಲ್­ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.

ಪ್ರತಿಭಾಕಾರಂಜಿ-ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ

Tuesday, August 30th, 2016

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇದರ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜು ಕಾವಳಪಡೂರು ವಗ್ಗ, ಬಂಟ್ವಾಳ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಕು. ಅಗಮ್ಯ ಕಿರಿಯ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಬನ್ನೂರು ಗಣೇಶ್ ಆಚಾರ್ಯ ಮತ್ತು ಮಂಜುಳ ಗಣೇಶ್ ದಂಪತಿಗಳ ಪುತ್ರಿ. ಇವರಿಗೆ […]

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Thursday, August 25th, 2016

ಉಪ್ಪಿನಂಗಡಿಯ ಸೈಂಟ್ ಮೇರಿಸ್ ಮತ್ತು ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕಿರಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಜೇತರ ವಿವರ: ಕಿರಿಯರ ವಿಭಾಗ : ಅಗಮ್ಯ – ಚಿತ್ರಕಲೆ – ಪ್ರಥಮ ಸ್ಥಾನ , ತನ್ಮಯಿ ವಾಗ್ಲೆ – ಕಥೆ ಹೇಳುವುದು […]

ಗಝಲ್­ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಗಝಲ್­ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, August 25th, 2016

ಉಪ್ಪಿನಂಗಡಿಯ ಸೈಂಟ್ ಮೇರಿಸ್ ಮತ್ತು ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ. ಪ್ರೌಢಶಾಲಾ ವಿಭಾಗ ಗಝಲ್­ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.

ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳ-ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳ-ರಾಜ್ಯಮಟ್ಟಕ್ಕೆ ಆಯ್ಕೆ

Tuesday, August 23rd, 2016

ಅಖಿಲ ಭಾರತೀಯ ಜ್ಞಾನ ವಿಜ್ಞಾನ ಮೇಳ, ವಿದ್ಯಾಭಾರತಿಕರ್ನಾಟಕಇದರ ವತಿಯಿಂದ ಶಾರದಾ ವಿದ್ಯಾಲಯ, ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಕಿಶೋರ ವರ್ಗದ ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಬಲ್ನಾಡು ನಿವಾಸಿ ಚಂದ್ರಶೇಖರ ಭಟ್ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಸ್ಕಂದ ನಾರಾಯಣ, ಆನಡ್ಕ ನಿವಾಸಿ ವಿಜಯ ಪೂಜಾರಿ ಮತ್ತು ಶ್ರೀಮತಿ ವಿಜಯ ದಂಪತಿಗಳ ಪುತ್ರ ವಿಶ್ರಾಂತ್ ಮತ್ತು ಕೆದಿಲ ನಿವಾಸಿ ಕೇಶವಪ್ರಸಾದ ಮತ್ತು ಪ್ರತಿಮಾ ದಂಪತಿಗಳ ಪುತ್ರ ಪ್ರಣವ ಇವರ ತಂಡ ಪ್ರಥಮ […]

ಪ್ರತಿಭಾಕಾರಂಜಿ- ಚಿತ್ರಕಲೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಪ್ರತಿಭಾಕಾರಂಜಿ- ಚಿತ್ರಕಲೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, August 23rd, 2016

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಉಪ್ಪಿನಂಗಡಿ ಇದರ ಸಹಯೋಗದಲ್ಲಿ ಸೈಂಟ್ ಮೇರಿಸ್ ಮತ್ತು ಸಂತ ಫಿಲೋಮಿನಾ ವಿದ್ಯಾಸಂಸ್ಥೆ (ರಿ) ಉಪ್ಪಿನಂಗಡಿಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಬನ್ನೂರು ಗಣೇಶ್ ಆಚಾರ್ಯ ಮತ್ತು ಮಂಜುಳ ಗಣೇಶ್ ದಂಪತಿಗಳ ಪುತ್ರಿ.

ಅಖಿಲ ಭಾರತ ಮಟ್ಟಕ್ಕೆ ಆಯ್ಕೆ

ಅಖಿಲ ಭಾರತ ಮಟ್ಟಕ್ಕೆ ಆಯ್ಕೆ

Tuesday, August 23rd, 2016

ವಿದ್ಯಾಭಾರತಿ ಕರ್ನಾಟಕ ಮತ್ತು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಸಹಯೋಗದಲ್ಲಿ ಕಲ್ಲಡ್ಕದಲ್ಲಿ ನಡೆದ ಪ್ರಾಂತೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲವರ್ಗದ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡು ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ಅವಾಸ್ ನಲ್ಲಿ ವಿದ್ಯಾಭಾರತಿ ಅಖಿಲ ಸಂಸ್ಥಾನ್ ನಡೆಸುವ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಕಲ್ಲಾಗಿರುವ ಹೃದಯವನ್ನು ಕರಗಿಸುವ ಶಕ್ತಿ ’ರಕ್ಷೆ’ಗೆ ಇದೆ - ಶ್ರೀ ಜನಾರ್ಧನ ಮಂಜೇಶ್ವರ

ಕಲ್ಲಾಗಿರುವ ಹೃದಯವನ್ನು ಕರಗಿಸುವ ಶಕ್ತಿ ’ರಕ್ಷೆ’ಗೆ ಇದೆ – ಶ್ರೀ ಜನಾರ್ಧನ ಮಂಜೇಶ್ವರ

Saturday, August 20th, 2016

ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲ, ಇಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ವತಿಯಿಂದ ’ರಕ್ಷಾಬಂಧನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೌದ್ಧಿಕ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹ ಕಾರ್ಯವಾಹರಾದ ಶ್ರೀ ಜನಾರ್ಧನ ಮಂಜೇಶ್ವರವರು ಉಪಸ್ಥಿತರಿದ್ದು, ಅಣ್ಣತಂಗಿಯರ ಮಧುರ ಸಂಬಂಧವನ್ನು ಬಲಪಡಿಸುವುದೇ ರಕ್ಷಾಬಂಧನ ಮತ್ತು ಕಲ್ಲಾಗಿರುವ ಹೃದಯವನ್ನು ಕರಗಿಸುವ ಶಕ್ತಿ ರಕ್ಷೆಗೆ ಇದೆ ಎಂಬ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ವಾಹನ ಚಾಲಕರಿಗೆ ರಕ್ಷೆಯನ್ನು ಕಟ್ಟಿ ಗೌರವಿಸುವುದರ ಮೂಲಕ ವಿಶೇಷವಾಗಿ ರಕ್ಷಾಬಂಧನವನ್ನು ಆಚರಿಸಲಾಯಿತು. ವೇದಿಕೆಯಲ್ಲಿ ಆಡಳಿತ […]

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಲೆಗೆ ಸಮಗ್ರ ಪ್ರಶಸ್ತಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಲೆಗೆ ಸಮಗ್ರ ಪ್ರಶಸ್ತಿ

Friday, August 19th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಪುತ್ತೂರು ನಗರಸಭಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತರಾದ ವಿದ್ಯಾರ್ಥಿಗಳ ವಿವರ: ಕಿರಿಯರ ವಿಭಾಗ (1-4) : ಆರ್ಯಕಾಮತ್ : ಹಿಂದಿ ಕಂಠಪಾಠ – ಪ್ರಥಮ, ಶ್ರೀಶ -ಧಾರ್ಮಿಕ ಪಠಣ ಸಂಸ್ಕೃತ – ದ್ವಿತೀಯ, ಅಮಲ್‌ಜಿತ್- ಛದ್ಮವೇಷ – ದ್ವಿತೀಯ, ಅಗಮ್ಯ- ಚಿತ್ರಕಲೆ- ಪ್ರಥಮ, ತನ್ಮಯಿ ವಾಗ್ಲೆ-ಕಥೆ […]

ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

Friday, August 19th, 2016

ಪ್ರತಿಭೆ ಎಂಬುದು ಮಕ್ಕಳಲ್ಲಿ ಹುದುಗಿರುತ್ತದೆ ಅದು ಕಾರಂಜಿಯಂತೆ ಚಿಮ್ಮಲು ಪ್ರತಿಭಾ ಕಾರಂಜಿಯ ಈ ವೇದಿಕೆಯು ಸಹಕರಿಸುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ನಗರ ಸಭಾಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದಕ ನ್ನಡ ಮಾಧ್ಯಮ ಶಾಲಾ ಸಂಚಾಲಕ ಶ್ರೀ ರವೀಂದ್ರ ಪಿ. ಇವರು ನುಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಉಷಾ ಭಟ್, ನಗರಸಭಾ ಸದಸ್ಯರಾದ […]

ವಿವಿಧ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

ವಿವಿಧ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

Wednesday, August 17th, 2016

ಶಾರದಾ ವಿದ್ಯಾಲಯದಲ್ಲಿ ಶಾರದಾ ಮಹೋತ್ಸವದ ಅಂಗವಾಗಿ ಮಲ್ಟಿ ಡಿಸ್ಟಿಕ್ ಲೆವೆಲ್‌ನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ರಾಮ ಪ್ರಸಾದ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾನೆ. ಮತ್ತು ರೋಹಿಣಿ ಟೈಲರಿಂಗ್ ಮತ್ತು ಕ್ರಾಪ್ಟ್ ಸೆಂಟರ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಇಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ರಾಮ ಪ್ರಸಾದ್  ಅಗಮ್ಯ  ಆದಿತ್ಯ ನಾರಾಯಣ ಪಿ.ಎಸ್. ಈತ ರಾಧಾಕೃಷ್ಣ ಮಂದಿರದ ಬಳಿಯ ನಿವಾಸಿ ಕೆ.ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ […]

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Wednesday, August 17th, 2016

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾ ಘಟಕ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಾಲವರ್ಗದ ವಿಭಾಗದಲ್ಲಿ ಕೃಷ್ಣಪ್ಪ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ – ವೈಶಾಲಿ – ಪ್ರಥಮ, ಬಾಬು ಗೌಡ ಮತ್ತು ರೇವತಿ ದಂಪತಿಗಳ ಪುತ್ರ ರಾಜೇಶ್ -ತೃತೀಯ ಹಾಗೂ ಕಿಶೋರ ವರ್ಗದ ವಿಭಾಗದಲ್ಲಿ ದಾಮೋದರ್ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ -ನವಮಿ. ಡಿ-ನಾಲ್ಕನೇ ಸ್ಥಾನ ಮತ್ತು ಪುಷ್ಪರಾಜ್ ಮತ್ತು […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Tuesday, August 16th, 2016

ವಿದ್ಯಾಭಾರತಿ ಕರ್ನಾಟಕ ಮತ್ತು ಜ್ಞಾನದೀಪ ಪ್ರೌಢಶಾಲೆ ಎಲಿಮಲೆ ಸುಳ್ಯ ತಾಲೂಕು ಇಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ಸಂಯೋಜಿತ ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಸೆಪ್ಟೆಂಬರ್ 19 ರಂದು ಶ್ರೀರಾಮ ವಿದ್ಯಾಸಂಸ್ಥೆ ಕಲ್ಲಡ್ಕ ಇಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಫ್ರೀಡಂ ರನ್ - ಯಾದ್ ಕರೋ ಕುರುಬಾನಿ

ಫ್ರೀಡಂ ರನ್ – ಯಾದ್ ಕರೋ ಕುರುಬಾನಿ

Monday, August 15th, 2016

70 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಫ್ರೀಡಂ ರನ್ – ಯಾದ್ ಕರೋ ಕುರುಬಾನಿ ಕಾರ್ಯಕ್ರಮವನ್ನು ಸಂಯೋಜಿಸಿತು.

’ಪೂ’ - ಇಂಗ್ಲಿಷ್ ಅನುವಾದಿತ ಪುಸ್ತಕ ಬಿಡುಗಡೆ

’ಪೂ’ – ಇಂಗ್ಲಿಷ್ ಅನುವಾದಿತ ಪುಸ್ತಕ ಬಿಡುಗಡೆ

Saturday, August 13th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಕನ್ನಡ ಸಂಘದ ಆಶ್ರಯದಲ್ಲಿ ಹಾ.ಸ.ಬ್ಯಾಕೋಡ ರವರು ಬರೆದ ’ಪೂ’ ಕನ್ನಡ ಕೃತಿಯನ್ನು ಶ್ರೀ ರಾಮಚಂದ್ರ ಭಟ್ ರವರು ಇಂಗ್ಲಿಷ್‌ಗೆ ಅನುವಾದಿಸಿದ ಪುಸ್ತಕವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯುವ ಸಾಹಿತಿ ಶ್ರೀ ಹಾ.ಸ.ಬ್ಯಾಕೋಡ, ಶಿಶು ಸಾಹಿತಿ ಶ್ರೀ ಉಲ್ಲಾಸಣ್ಣ ಮತ್ತು ಉಪನ್ಯಾಸಕರಾದ ಶ್ರೀ ರಾಮಚಂದ್ರ ಭಟ್ ರವರು ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ಹಿರಿಯ ಶಿಕ್ಷಕಿ ಕು. ಲೀಲಾವತಿ ಹಂದ್ರಟ್ಟರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಸ್ವಾಗತ, ಪ್ರಾಸ್ತಾವಿಕ, ಧನ್ಯವಾದ, ನಿರೂಪಣೆಯನ್ನು […]

ಉತ್ತಮ ಭವಿಷ್ಯ ನಿರ್ಮಾಣ ಕ್ರೀಡೆಯಿಂದಲೂ ಸಾಧ್ಯ - ಶ್ರೀ ಭುಜಂಗ ಆಚಾರ್ಯ

ಉತ್ತಮ ಭವಿಷ್ಯ ನಿರ್ಮಾಣ ಕ್ರೀಡೆಯಿಂದಲೂ ಸಾಧ್ಯ – ಶ್ರೀ ಭುಜಂಗ ಆಚಾರ್ಯ

Saturday, August 13th, 2016

ವಿದ್ಯಾಭಾರತಿ ದಕ್ಷಿಣ ಕನ್ನಡ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಸುದಾನ ಒಳಾಂಗಣ ಸಾಮೆತ್ತಡ್ಕ ಇಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಫಾಟಿಸಿದ ಸುದಾನ ಸ್ಪೋರ್ಟ್ಸ್ ಕ್ಲಬ್ ಸಾಮೆತ್ತಡ್ಕ ಇದರ ಅಧ್ಯಕ್ಷರಾದ ಶ್ರೀ ಭುಜಂಗ ಆಚಾರ್ಯ ಇವರು ಕಾರ್ಯಕ್ರಮವನ್ನು ಉದ್ಫಾಟಿಸಿ ಉತ್ತಮ ಭವಿಷ್ಯ ನಿರ್ಮಾಣ ಕ್ರೀಡೆಯಿಂದಲೂ ಸಾಧ್ಯ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಕಠಿಣ ಅಭ್ಯಾಸದ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

ರಕ್ಷಕ - ಶಿಕ್ಷಕ ಸಂಘಕ್ಕೆ ಆಯ್ಕೆ

ರಕ್ಷಕ – ಶಿಕ್ಷಕ ಸಂಘಕ್ಕೆ ಆಯ್ಕೆ

Thursday, August 11th, 2016

2016-17 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಉಷಾ ಭಟ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಮೇಶ್ಚಂದ್ರ ಎಂ. ಹಾಗೂ ಸದಸ್ಯರಾಗಿ ಶ್ರೀ ಶೈಲೇಶ್, ಶ್ರೀಮತಿ ಯಶೋಧ, ಶ್ರೀಮತಿ ಮಾಲತಿ, ಶ್ರೀ ಬಾಲಕೃಷ್ಣ ಡಿ.ಎನ್ ಮತ್ತು ಶ್ರೀ ಕೃಷ್ಣ ಭಟ್ ಆಯ್ಕೆಯಾದರು. ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರ ಮತ್ತು ಆಯ್ದ ಪೋಷಕರ ಹಾಗೂ ನಿಕಟಪೂರ್ವ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರ […]

ಹುತಾತ್ಮ ವೀರ ಯೋಧರ ನೆನಪು ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಪುಣ್ಯಸ್ಮರಣೆ

ಹುತಾತ್ಮ ವೀರ ಯೋಧರ ನೆನಪು ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಪುಣ್ಯಸ್ಮರಣೆ

Thursday, August 4th, 2016

ಭಾರತವು ಯಾವುದೇ ರಾಷ್ಟ್ರವನ್ನು ವೈರತ್ವದಿಂದ ಕಾಣದೇ ಮಿತ್ರನಂತೆ ನಂಬಿದ ಇತಿಹಾಸ ಭಾರತದ್ದು ಇಂತಹ ಪುಣ್ಯ ನೆಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಕಾರ್ಗಿಲ್ ವಿಜಯ’ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಭವ್ಯ ನುಡಿದರು. ಕಾರ್ಗಿಲ್‌ನಲ್ಲಿ ಹುತಾತ್ಮ ವೀರ ಯೋಧರ ಹೋರಾಟ ಮತ್ತು ಪಾಕಿಸ್ತಾನದ ಗಡಿರೇಖೆಯ ಉಲ್ಲಂಘನೆ, ಕಾರ್ಗಿಲ್ ಬೆಟ್ಟಕ್ಕೆ ದಾಳಿಯಾದ ಸಂದರ್ಭ ಹುತಾತ್ಮರಾದ ವೀರ ಯೋಧರ ಕಾರ್ಯಕ್ಷಮತೆಯನ್ನು ವಿವರಿಸುತ್ತಾ ಅಬ್ದುಲ್ ಕಲಾಂ ರವರು ತಮ್ಮ ಜೀವನ ಪಯಣದಿಂದ ನಮಗೆ […]

ಪದಗ್ರಹಣ ಹಾಗೂ ಗಮಕ ವಾಚನ ಕಾರ್ಯಕ್ರಮ

ಪದಗ್ರಹಣ ಹಾಗೂ ಗಮಕ ವಾಚನ ಕಾರ್ಯಕ್ರಮ

Friday, July 29th, 2016

ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಬೆಂಗಳೂರು ಪುತ್ತೂರು ತಾಲೂಕು ಘಟಕ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಪದಗ್ರಹಣ ಹಾಗೂ ಗಮಕ ವಾಚನ ಕಾರ್ಯಕ್ರಮ ನಡೆಯಿತು. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಪುಸ್ತಕ ನೀಡಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಉಪನ್ಯಾಸಕರಾದ ಉದಯಕುಮಾರ್, ಕೋಶಾಧಿಕಾರಿ ಶ್ರೀ ರಂಗನಾಥರಾವ್, ಸಂಚಾಲಕಿ ನ್ಯಾಯವಾದಿ ಹರಿಣಾಕ್ಷಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರೂಪಲೇಖಾ ಪಾಣಾಜೆ ದೀಪ […]

ಡಾ| ಅಬ್ದುಲ್ ಕಲಾಂರವರ ಜೀವನದ ಆದರ್ಶಗಳು ನಮಗೆ ಪಾಠವಾಗಲಿ - ಚಂದ್ರಶೇಖರ ಸುಳ್ಯಪದವು

ಡಾ| ಅಬ್ದುಲ್ ಕಲಾಂರವರ ಜೀವನದ ಆದರ್ಶಗಳು ನಮಗೆ ಪಾಠವಾಗಲಿ – ಚಂದ್ರಶೇಖರ ಸುಳ್ಯಪದವು

Thursday, July 28th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ಡಾ| ಅಬ್ದುಲ್ ಕಲಾಂರವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಮಾತನಾಡುತ್ತಾ, ಕಲಾಂರವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಆದರ್ಶಗಳನ್ನು ಮೈಗೂಡಿಸುವುದರ ಜೊತೆಗೆ ಈ ದೇಶದ ಬಗ್ಗೆ ಕನಸುಗಳನ್ನು ಹೊತ್ತಿರುವ ಒರ್ವ ಶ್ರೇಷ್ಠ ವಿಜ್ಞಾನಿ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಾದ ಶ್ರೀಪ್ರದ, ತೀರ್ಥರಾಜ್, ಸ್ಕಂದನಾರಾಯಣ, ಕು. ಪೃಥಾ ರವರು ಕಲಾಂರವರ ಬಾಲ್ಯ ಜೀವನ, ವಿದ್ಯಾಭ್ಯಾಸ ಮತ್ತು ಆದರ್ಶತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ […]

ಮಕ್ಕಳ ಮಂಟಪದಲ್ಲಿ ಗುರುವಂದನೆ

ಮಕ್ಕಳ ಮಂಟಪದಲ್ಲಿ ಗುರುವಂದನೆ

Wednesday, July 27th, 2016

ಶಿಕ್ಷಕರನ್ನು ಸಕ್ರಿಯರನ್ನಾಗಿಸಲು ಮಕ್ಕಳು ಪ್ರಶ್ನೆ ಕೇಳಬೇಕು. ಸಹಜತೆ ಮತ್ತು ಕುತೂಹಲದ ಪ್ರಶ್ನೆಗಳು ನಮ್ಮಲ್ಲಿ ವಿಷಯ ಜ್ಞಾನದ ಆಳ ಹೆಚ್ಚಿಸುವಲ್ಲಿ ಸಹಕಾರಿ. ಶಿಕ್ಷಕರು ನಮಗೆ ಮಾರ್ಗದರ್ಶಕರು. ನಿಜವಾದ ಕಲಿಕಾ ಆಸಕ್ತಿ ಹಾಗೂ ಕಾರ್ಯಪ್ರವೃತ್ತಿ ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಕಲಿಸುತ ಕಲಿಯುವ, ಕಲಿಯುತ ಕಲಿಸುವ ಪರಮ ಧರ್ಮವು ಶಿಕ್ಷಕನದಾಗಿದ್ದು ಆತ ನಿರಂತರ ಅಧ್ಯಯಶೀಲತೆ ಹೊಂದಿರಬೇಕು. ಸಮಾಜದಲ್ಲಿ ಸನ್ಮಾರ್ಗ ತೋರುವ ಎಲ್ಲರೂ ಗುರುಗಳಾಗಿರುತ್ತಾರೆ ಎಂದು ಡಾ. ಎನ್. ಸುಕುಮಾರ್ ಗೌಡ ಮಕ್ಕಳೊಂದಿಗೆ ಸಂವಾದ ನಡೆಸುತ್ತ ನುಡಿದರು. ವಿವೇಕಾನಂದ ಕನ್ನಡ ಶಾಲಾ ಮಕ್ಕಳು ಹಾಗೂ […]

ಗುರುಪೂರ್ಣಿಮೆ ಕಾರ್ಯಕ್ರಮ

ಗುರುಪೂರ್ಣಿಮೆ ಕಾರ್ಯಕ್ರಮ

Tuesday, July 26th, 2016

ಗುರುಗಳನ್ನು ಗೌರವಿಸುವುದರಿಂದ ಗುರು – ಶಿಷ್ಯರಲ್ಲಿ ಉತ್ತಮ ಬಾಂಧವ್ಯ ಬೆಸೆದು ಶಾಲೆಯಲ್ಲಿ ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇದು ವಿದ್ಯಾರ್ಥಿಗಳ ಸಮಾಜಮುಖಿ ಜೀವನಕ್ಕೆ ಪೂರಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿಯವರು ನುಡಿದರು. ಜೊತೆಗೆ ಗುರುಪೂರ್ಣಿಮೆ ಆಚರಣೆಯ ಮಹತ್ವವನ್ನು ಹಲವು ವಿಚಾರ, ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ಗುರುವೃಂದದವರಿಗೆ […]

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಗೆ ಹಲವು ಪ್ರಶಸ್ತಿ

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಗೆ ಹಲವು ಪ್ರಶಸ್ತಿ

Tuesday, July 12th, 2016

ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದು ಮದಕ ನಿವಾಸಿ ರಾಜೇಶ್ ರೈ ಮತ್ತು ಪ್ರಫುಲ್ಲ ಆರ್. ರೈ ದಂಪತಿಗಳ ಪುತ್ರಿ ಪ್ರತೀಕ್ಷಾ ಆರ್. ರೈ – ಪ್ರಥಮ, ಬಪ್ಪಳಿಗೆ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ ನವಮಿ – ತೃತೀಯ, ತಾರಿಗುಡ್ಡೆ ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ವೀಣಾ ದಂಪತಿಗಳ ಪುತ್ರ ಭವಿಷ್ – ದ್ವಿತೀಯ, ಬಲ್ನಾಡು ನಿವಾಸಿ ಬಾಬು ಗೌಡ […]

ಪ್ರಕೃತಿಯ ಕಣಕಣದಲ್ಲಿಯೂ ಗುರು ನೆಲೆಸಿದ್ದಾನೆ - ಅಮೃತ ವರ್ಷಿಣಿ

ಪ್ರಕೃತಿಯ ಕಣಕಣದಲ್ಲಿಯೂ ಗುರು ನೆಲೆಸಿದ್ದಾನೆ – ಅಮೃತ ವರ್ಷಿಣಿ

Friday, July 8th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಗುರುಪೂಜಾ’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೂರ್ಕಜೆ ಗುರುಕುಲದ ಮಾತಾಜಿಯವರಾದ ಶ್ರೀಮತಿ ಅಮೃತವರ್ಷಿಣಿಯವರು ಬೌದ್ಧಿಕ್ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ಮಾತನಾಡುತ್ತಾ ಶಿಲ್ಪಿಯು ಕಲ್ಲನ್ನು ಸುಂದರವಾದ ಮೂರ್ತಿಯನ್ನಾಗಿ ಮಾಡಿದಂತೆ ಗುರುವು ಶಿಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ನಮ್ಮೊಳಗಿನ ಭಗವಂತನನ್ನು ಕಾಣಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ವೇದಿಕೆಯಲ್ಲಿ ಸಭಾಧ್ಯಕ್ಷರಾದ ಶಾಲಾ ಪೋಷಕರಾದ ಯೋಗೀಶ್ವರಿ ಜಯಪ್ರಕಾಶ್, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕುಡ್ವ ಪ್ರಾರ್ಥಿಸಿ, ದಾಕ್ಷಾಯಿಣಿ […]

ಯಶಸ್ವಿ ಕಲಿಕೆಯಲ್ಲಿ ಶಾಲೆ ಹಾಗೂ ಮನೆಯು ಪರಸ್ಪರ ಪೂರಕ

ಯಶಸ್ವಿ ಕಲಿಕೆಯಲ್ಲಿ ಶಾಲೆ ಹಾಗೂ ಮನೆಯು ಪರಸ್ಪರ ಪೂರಕ

Tuesday, July 5th, 2016

ಶಾಲೆ ಮತ್ತು ಮನೆಯ ವಾತಾವರಣ ಪರಸ್ಪರ ಪೂರಕವಾಗಿದ್ದಲ್ಲಿ ಕಲಿಕೆ ಸುಗಮವಾಗಿ ಸಾಗುತ್ತದೆ ಎಂದು ಶ್ರೀಯುತ ರವಿನಾರಾಯಣರವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆದ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು. ಅಂತೆಯೇ ಸಭೆಯಲ್ಲಿ ಉಪಸ್ಥಿತರಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಮಾತೃಭಾಷಾ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸಭೆಯಲ್ಲಿ […]

ಕಾವ್ಯವಾಚನ ಮತ್ತು ಪ್ರವಚನ

ಕಾವ್ಯವಾಚನ ಮತ್ತು ಪ್ರವಚನ

Tuesday, July 5th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿಸಾಹಿತ್ಯ ಸಂಘದ ಆಶ್ರಯದಲ್ಲಿ ಕುಮಾರವ್ಯಾಸ ಭಾರತದ ಮತ್ತು ಹರಿಶ್ಚಂದ್ರ ಕಾವ್ಯದ ಕೆಲವು ಭಾಗಗಳನ್ನು ಆಯ್ದು ಕಾವ್ಯವಾಚನ ಮತ್ತು ಪ್ರವಚನವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಾಚನವನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ವ್ಯಾಖ್ಯಾನವನ್ನು ಕಟೀಲು ಮೇಳದ ಪ್ರಸಿದ್ಧ ಕಲಾವಿದರಾದ ಶ್ರೀ ಅಪ್ಪಕುಂಞ ಯಾದವ್ ಮಿಂಚಿಪದವುರವರು ಪ್ರಸ್ತುತ ಪಡಿಸಿದರು. ಹಾರ್ಮೋನಿಯಂನಲ್ಲಿ ಶ್ರೀ ಲಿಂಗಪ್ಪಗೌಡ ಪುತ್ತೂರುರವರು ಸಹಕರಿಸಿದ್ದರು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಂತರ್ ಪ್ರೌಢಶಾಲಾ ಲಘು ಸಂಗೀತ ಸ್ಪರ್ಧೆ

ಅಂತರ್ ಪ್ರೌಢಶಾಲಾ ಲಘು ಸಂಗೀತ ಸ್ಪರ್ಧೆ

Monday, July 4th, 2016

ಶ್ರೀ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಅಂತರ್ ಪ್ರೌಢಶಾಲಾ ಮಟ್ಟದ ಲಘು ಸಂಗೀತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿಕುಡ್ವ ತೃತೀಯ ಬಹುಮಾನವನ್ನು ಮತ್ತು ಕು.ಅರ್ಪಿತಾ ಸಿ.ಪಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ಕೀರ್ತಿಕುಡ್ವ ಅರ್ಪಿತಾ

ಮೌಲ್ಯಯುತ ಶಿಕ್ಷಣ ಜೀವನಕ್ಕೆ ಪೂರಕ

ಮೌಲ್ಯಯುತ ಶಿಕ್ಷಣ ಜೀವನಕ್ಕೆ ಪೂರಕ

Saturday, July 2nd, 2016

ಮಕ್ಕಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಿರಂತರವಾಗಿ ನಡೆಯುತ್ತಿರುತ್ತದೆ, ಅದಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ, ಎಂದು ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಮಂಕುಡೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 1 ಮತ್ತು 2 ನೇ ತರಗತಿಯ ಪೋಷಕ – ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂತೆಯೇ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದ ಶ್ರೀಮತಿ ಪೂರ್ಣಿಮಾ ಇವರು ಪೋಷಕರು ತಮ್ಮ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಭಾವನಾತ್ಮಕ ಸಂಬಂಧ ಗಟ್ಟಿಯಾಗಲು ಸಾಧ್ಯ ಎಂದು […]

ಶಿಕ್ಷಕ - ಪೋಷಕರ ಸಭೆ

ಶಿಕ್ಷಕ – ಪೋಷಕರ ಸಭೆ

Tuesday, June 28th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 28-06-2016 ರಂದು 8 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಾದ ಶ್ರೀ ರಘುರಾಜ ಉಬರಡ್ಕರವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಮಾತೃ ಭಾಷೆಯಲ್ಲಿ ಕಲಿಕೆ ಉನ್ನತ ಶಿಕ್ಷಣಕ್ಕೆ ಎಂದೂ ತೊಡಕಾಗುವುದಿಲ್ಲ ಮತ್ತು ಮಾತೃಭಾಷೆಯಲ್ಲಿ ಕಲಿತ ಮಗು ಸರ್ವಾಂಗೀಣವಾಗಿ ಪ್ರಗತಿ ಹೊಂದುವುದಲ್ಲದೇ ಎಲ್ಲಾ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯರವರು […]

ಮಕ್ಕಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು -ರಾಮಚಂದ್ರ ಭಟ್

ಮಕ್ಕಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು -ರಾಮಚಂದ್ರ ಭಟ್

Friday, June 24th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುವ ಪೋಷಕರ ಸಭೆಯು ಮಕ್ಕಳ ವೈಯಕ್ತಿಕ ಸಾಮರ್ಥ್ಯ ಬೆಳೆಸುವಲ್ಲಿ ಸಹಕಾರಿಯಾಗಿದೆ, ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ರಾಮಚಂದ್ರ ಭಟ್ ಇವರು ವಿದ್ಯಾರ್ಥಿಗಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು. ಹಾಗೆಯೇ ಅಂತರ್ಜಾಲ ಸಂಪರ್ಕ ಹೊಂದಿರುವ ಮೊಬೈಲ್‌ನಂತಹ ಮಾಧ್ಯಮಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಸದಾ ಎಚ್ಚರವಿರುವಂತೆ ಕರೆ ನೀಡುತ್ತಾ 9ನೇ ತರಗತಿಯ ಪೋಷಕರ ಜವಾಬ್ದಾರಿಗಳ ಬಗ್ಗೆ ಸಂವಾದ ನಡೆಸಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣ ಭಟ್ ಕೊಂಕೋಡಿ, ಸದಸ್ಯೆ […]

ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ - ಪದ್ಮನಾಭ ಜಿ.

ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ – ಪದ್ಮನಾಭ ಜಿ.

Thursday, June 23rd, 2016

ಪ್ರತಿ ಶಾಲೆಗಳಲ್ಲಿ ಶೈಕ್ಷಣಿಕ ವಿಷಯಗಳ ಜೊತೆಗೆ ನಡೆಯುವ ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಉತ್ತೇಜನ ನೀಡುತ್ತದೆ ಎಂದು ಪದ್ಮನಾಭ ಜಿ. ಯವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 5 ಮತ್ತು 6 ನೇ ತರಗತಿಯ ಪೋಷಕ- ಶಿಕ್ಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು. ಅಂತೆಯೇ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಸಂದರ್ಭೋಚಿತವಾಗಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು […]

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Tuesday, June 21st, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 21-06-2016 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.

SSLC ವಿದ್ಯಾರ್ಥಿಗಳಿಗೆ ಅಭಿನಂದನೆಗಳು

SSLC ವಿದ್ಯಾರ್ಥಿಗಳಿಗೆ ಅಭಿನಂದನೆಗಳು

Monday, June 13th, 2016
ಶಾಲಾ ಮಂತ್ರಿಮಂಡಲ

ಶಾಲಾ ಮಂತ್ರಿಮಂಡಲ

Saturday, June 11th, 2016

ಪ್ರೌಢಶಾಲಾ ನಾಯಕಿ ಶುಭಾ ಆಚಳ್ಳಿ ಪ್ರೌಢಶಾಲಾ ಉಪನಾಯಕ ಯೋಗಿತ್ ಪ್ರಾಥಮಿಕ ಶಾಲಾ ನಾಯಕ ರಾಮನಾಥ ಪ್ರಾಥಮಿಕ ಶಾಲಾ ಉಪನಾಯಕ ಸಾತ್ವಿಕ್ ಪ್ರತಿಪಕ್ಷ ನಾಯಕ ತೀರ್ಥರಾಜ್ ಪ್ರತಿಪಕ್ಷ ನಾಯಕಿ ಅಪರ್ಣ ಸ್ಪೀಕರ್ ಸ್ಕಂದ ಸಾಂಸ್ಕೃತಿಕ ಮಂತ್ರಿ ಯಶಸ್ವಿ ವಿದ್ಯಾಮಂತ್ರಿ ಅರ್ಪಿತಾ ನೀರಾವರಿ ಮಂತ್ರಿ ಅಶ್ವಿನ್ ಗೃಹ ಮಂತ್ರಿ ಶಿವಪ್ರಸಾದ್ ಕ್ರೀಡಾಮಂತ್ರಿ ಶ್ರದ್ಧಾ ಆರೋಗ್ಯ ಮಂತ್ರಿ ಪ್ರಣವ ನೈರ್ಮಲ್ಯ ಮಂತ್ರಿ ದೀಕ್ಷಿತಾ ಕಾನೂನು ಮಂತ್ರಿ ಶ್ರೀಪ್ರದ ಸಾರಿಗೆ ಮಂತ್ರಿ ಚಿರಾಗ್ ವಾರ್ತಾಮಂತ್ರಿ ವಿಭಾ ಆಚಳ್ಳಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ […]

ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ -  ಶ್ರೀ ಲೋಹಿತ್ ಎಸ್. ಕೆ.

ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ – ಶ್ರೀ ಲೋಹಿತ್ ಎಸ್. ಕೆ.

Saturday, June 11th, 2016

ಜ್ಞಾನ, ಓದುವ ಹವ್ಯಾಸ , ಏಕಾಗ್ರತೆ, ಭಾಷಾ ಪ್ರೌಢಿಮೆ, ಶಬ್ಧ ಭಂಡಾರ, ವಿಮರ್ಶತ್ಮಾಕ ಗುಣ, ನೆನಪು ಶಕ್ತಿ, ಜೀವನ ಮೌಲ್ಯ, ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಇವೆಲ್ಲವನ್ನು ನೀಡುವ ಏಕೈಕ ಕಲೆಯೇ ಯಕ್ಷಗಾನ ಮತ್ತು ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-06-2016 ರಂದು ಉದ್ಘಾಟನೆಗೊಂಡ ಯಕ್ಷಗಾನ ಅರ್ಥಗಾರಿಕೆ ತರಬೇತಿ ಸಭಾಕಾರ್ಯಕ್ರಮದಲ್ಲಿ ಕಲಾವಿದ, ಉಪನ್ಯಾಸಕರಾದ ಶ್ರೀ ಲೋಹಿತ್.ಎಸ್.ಕೆ ಹೇಳಿದರು. ಕಲೆಯಲ್ಲಿ ಸಾಧನೆ ಮಾಡಿದರೆ ನಮ್ಮ ಪರಿಚಯ ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ […]

ಯಕ್ಷ-ಶಿಕ್ಷಣ ತರಗತಿ ಪ್ರಾರಂಭ

ಯಕ್ಷ-ಶಿಕ್ಷಣ ತರಗತಿ ಪ್ರಾರಂಭ

Saturday, June 11th, 2016

ದಿನಾಂಕ 10-06-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೃತ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರು ಯಕ್ಷ- ಶಿಕ್ಷಣ ತರಗತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯಕ್ಷ- ಶಿಕ್ಷಣ ನಿಂತ ನೀರಲ್ಲ ಅದು ಸದಾ ಪ್ರವಹಿಸುತ್ತಿರುವ ಸಾಗರ ಎಂದು ನುಡಿದರು. ತರಬೇತಿ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮವನ್ನು ನೇರವೇರಿಸಿದರು.

ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ(Rescue) ಸ್ಪರ್ಧೆಯಲ್ಲಿ - ಪ್ರಥಮ

ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ(Rescue) ಸ್ಪರ್ಧೆಯಲ್ಲಿ – ಪ್ರಥಮ

Thursday, June 9th, 2016

ಮುಂಬಯಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ತ್ರಿಶೂಲ್ 50ಮೀ ಮ್ಯಾನಿಕಿನ್ ಕ್ಯಾರಿ(Manikin Carry) ನಲ್ಲಿ ಪ್ರಥಮ ಸ್ಥಾನ, 100 ಮೀ ಒಬ್‌ಸ್ಟ್ಯಾಕಲ್ ಈಜು(Obstacle Swim) – ದ್ವಿತೀಯ, ಬೀಚ್ ರನ್ – ತೃತೀಯ, ಮತ್ತು ಸರ್ಫ್ ರೇಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ಪರ್ಲಡ್ಕ ಬಾಲವನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಈತ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಶಿವಗೌಡ ಮತ್ತು ನಳಿನಿ.ಟಿ ದಂಪತಿಗಳ ಪುತ್ರ.

ಶಾಲಾ ಚುನಾವಣೆ

ಶಾಲಾ ಚುನಾವಣೆ

Tuesday, June 7th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2016-17 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಕು. ಶುಭ ಆಚಳ್ಳಿ ಮತ್ತು ಉಪನಾಯಕನಾಗಿ ಯೋಗಿತ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ರಾಮನಾಥ ಮತ್ತು ಉಪನಾಯಕನಾಗಿ ಸಾತ್ವಿಕ್ ಎ.ಎಂ. ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ವಿಶ್ವನಾಥ ಮುಡೂರು ವಹಿಸಿದರು ಎಲ್ಲಾ ಶಿಕ್ಷಕರು ಸಹಕರಿಸಿದರು.

ಸೋತವರಿಂದ ಸೋಲಿನ ಪಾಠವನ್ನು ಕಲಿಯಬೇಕು- ರಾಕೇಶ್ ಕಮ್ಮಾಜೆ

ಸೋತವರಿಂದ ಸೋಲಿನ ಪಾಠವನ್ನು ಕಲಿಯಬೇಕು- ರಾಕೇಶ್ ಕಮ್ಮಾಜೆ

Tuesday, May 31st, 2016

ಮಾತೃ ಭಾಷಾ ಶಿಕ್ಷಣವು ಮಗುವಿನಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸಿ, ಜೀವನ್ಮುಖಿಯಾಗುವಂತೆ ಮಾಡುತ್ತದೆ. ಮಗು ಸಂಸ್ಕಾರವಂತನಾಗಿ ಬೆಳೆಯಬೇಕಾದರೆ; ಮನೆ, ಶಾಲೆ, ಹಾಗೂ ಸಮಾಜದಲ್ಲಿಗುಣಾತ್ಮಕವಾದ ಪೂರಕ ವಾತಾವರಣವಿರಬೇಕು. ನಾವು ಯಶಸ್ಸಿನ ಗುಟ್ಟನ್ನು ತಿಳಿಯಬೇಕಾದರೆ ಸೋತವರಿಂದ ಗೆಲುವಿನ ಪಾಠವನ್ನು, ಗೆದ್ದವರಿಂದ ಗೆಲುವಿನ ಅನುಭವವನ್ನು ಆಲಿಸಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀ ರಾಕೇಶ್‌ಕುಮಾರ್ ಕಮ್ಮಾಜೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರವೇಶೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಯಶಸ್ವಿ ಜೀವನಕ್ಕೆ ಅವಶ್ಯಕವಾದ ಜೀವನ ಕೌಶಲವನ್ನು […]

ವಿವೇಕಾನಂದ ಶಾಲಾ ಪ್ರಾರಂಭೋತ್ಸವ

ವಿವೇಕಾನಂದ ಶಾಲಾ ಪ್ರಾರಂಭೋತ್ಸವ

Thursday, May 26th, 2016

ವಿವೇಕಾನಂದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ 26-05-2016 ರಂದು ಮುಂಜಾನೆ ಗಣಹೋಮ ನಡೆಸಿ 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಯ ಮಕ್ಕಳನ್ನು ಮಾತಾಜಿಯವರು ತಿಲಕವಿಟ್ಟು ಸಿಹಿ ನೀಡಿ ಸ್ವಾಗತಿಸಿದರು. ಎಲ್ಲಾ ಮಕ್ಕಳೂ ಭಾರತಾಂಬೆಯ ಚರಣಗಳಿಗೆ ನಮಸ್ಕರಿಸಿ ಪುಷ್ಪಾರ್ಚನೆಗೈದು ತಮ್ಮ ಮುಂದಿನ ವಿದ್ಯಾರ್ಜನೆಗೆ ಶುಭಾರಂಭಗೈದರು. ಶಾಲಾ ಆಡಳಿತ ಮಂಡಳಿ ಸಂಚಾಲಕರು, ಸದಸ್ಯರು, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು – ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇಂಗ್ಲಿಷ್ ಭಾಷೆಯ ಕಲಿಕೆ ಜೀವನ ಸುಧಾರಣೆಗೆ ಪೂರಕ - ಶ್ರೀಮತಿ ಸುಜನಿ ಬೋರ್ಕರ್

ಇಂಗ್ಲಿಷ್ ಭಾಷೆಯ ಕಲಿಕೆ ಜೀವನ ಸುಧಾರಣೆಗೆ ಪೂರಕ – ಶ್ರೀಮತಿ ಸುಜನಿ ಬೋರ್ಕರ್

Wednesday, May 25th, 2016

ಇಂಗ್ಲಿಷ್ ಭಾಷೆಯನ್ನು ಕಲಿತು ಮನನ ಮಾಡಿಕೊಂಡಾಗ ವ್ಯಾವಹಾರಿಕವಾಗಿ ಅಗತ್ಯವಿದ್ದಲ್ಲಿ ಬಳಸಿಕೊಂಡು ಜೀವನವನ್ನು ಸುಧಾರಿಸಿಕೊಳ್ಳಬಹುದು ಎಂದು ಅಂಬಿಕಾ ಬಾಲ ವಿದ್ಯಾಲಯದ ಮುಖ್ಯಗುರುಗಳಾದ ಶ್ರೀಮತಿ ಸುಜನಿ ಬೋರ್ಕರ್‌ರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ 7 ಮತ್ತು 8 ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 5 ದಿನಗಳ ’ಸುಲಭ – ಸರಳ, ಇಂಗ್ಲಿಷ್ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಶಿಬಿರಾರ್ಥಿಗಳಿಗೆ ಹಿತನುಡಿಗಳನ್ನಾಡಿದರು. ಶಿಬಿರದಲ್ಲಿ ಆಂಗ್ಲ ಭಾಷೆಗೆ ಸಂಬಂಧಿಸಿ, ಪರಿಣಾಮಕಾರಿ ಸಂವಹನ, ಚಟುವಟಿಕಾತ್ಮಕ ಕಲಿಕೆ ವ್ಯಾಕರಣ, ಮನೋರಂಜನಾ ಆಟಗಳು, ಕರಕುಶಲ ಕಲೆ […]

ಮಾತೃ ಭಾಷೆ ಮರೆಯುವುದು ಅಕ್ಷಮ್ಯ ಅಪರಾಧ - ಕಜಂಪಾಡಿ ಸುಬ್ರಹ್ಮಣ್ಯ ಭಟ್

ಮಾತೃ ಭಾಷೆ ಮರೆಯುವುದು ಅಕ್ಷಮ್ಯ ಅಪರಾಧ – ಕಜಂಪಾಡಿ ಸುಬ್ರಹ್ಮಣ್ಯ ಭಟ್

Tuesday, May 24th, 2016

ನಮ್ಮ ಮಾತೃ ಭಾಷೆ ಕನ್ನಡ ಅತ್ಯಂತ ಸುಂದರವಾದದ್ದು, ವೈಜ್ಞಾನಿಕವಾಗಿ ವ್ಯವಸ್ಥಿತವಾದ ಲಿಪಿಯಿಂದ ಕೂಡಿದೆ. ಆದ್ದರಿಂದ ದೇಶಿಯ ಭಾಷೆಯಲ್ಲಿ ಧರ್ಮಯೋಗ್ಯವಾದ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವಂತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಅರ್ಥ ಮತ್ತು ಕಾಮಗಳನ್ನು ಧರ್ಮದಿಂದ ಅನುಷ್ಠಾನ ಮಾಡಿದಾಗ ಮೋಕ್ಷ ಸಾಧನೆಯಾಗುತ್ತದೆ. ಇದು ಗುಣಾತ್ಮಕ ಶಿಕ್ಷಣದಿಂದ ಸಾಧ್ಯವಾಗುತ್ತದೆ ಎಂದು ಅಖಿಲಭಾರತೀಯ ಕುಟುಂಬ ಪ್ರಬೋಧನಾ ಪ್ರಮುಖರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2015-16 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿದ […]

Highslide for Wordpress Plugin