ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾ ಘಟಕ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಾಲವರ್ಗದ ವಿಭಾಗದಲ್ಲಿ ಕೃಷ್ಣಪ್ಪ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ – ವೈಶಾಲಿ – ಪ್ರಥಮ, ಬಾಬು ಗೌಡ ಮತ್ತು ರೇವತಿ ದಂಪತಿಗಳ ಪುತ್ರ ರಾಜೇಶ್ -ತೃತೀಯ ಹಾಗೂ ಕಿಶೋರ ವರ್ಗದ ವಿಭಾಗದಲ್ಲಿ ದಾಮೋದರ್ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ -ನವಮಿ. ಡಿ-ನಾಲ್ಕನೇ ಸ್ಥಾನ ಮತ್ತು ಪುಷ್ಪರಾಜ್ ಮತ್ತು ವಾರಿಜ ದಂಪತಿಗಳ ಪುತ್ರ ಭರತ್ – ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತು ಕಿಶೋರವರ್ಗದಲ್ಲಿ ದ್ವಿತೀಯ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

20160816_164920

Highslide for Wordpress Plugin