ಗುರುಪೂರ್ಣಿಮೆ ಕಾರ್ಯಕ್ರಮ

ಗುರುಗಳನ್ನು ಗೌರವಿಸುವುದರಿಂದ ಗುರು – ಶಿಷ್ಯರಲ್ಲಿ ಉತ್ತಮ ಬಾಂಧವ್ಯ ಬೆಸೆದು ಶಾಲೆಯಲ್ಲಿ ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇದು ವಿದ್ಯಾರ್ಥಿಗಳ ಸಮಾಜಮುಖಿ ಜೀವನಕ್ಕೆ ಪೂರಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿಯವರು ನುಡಿದರು. ಜೊತೆಗೆ ಗುರುಪೂರ್ಣಿಮೆ ಆಚರಣೆಯ ಮಹತ್ವವನ್ನು ಹಲವು ವಿಚಾರ, ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು.

IMG_20160719_113125

IMG_20160719_113042

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ಗುರುವೃಂದದವರಿಗೆ ವಂದಿಸುತ್ತಾ ಗುರುಪೂರ್ಣಿಮೆ ಆಚರಣೆಗೆ ಮೆರುಗು ನೀಡಿದರು.

Highslide for Wordpress Plugin