ಕಲ್ಲಾಗಿರುವ ಹೃದಯವನ್ನು ಕರಗಿಸುವ ಶಕ್ತಿ ’ರಕ್ಷೆ’ಗೆ ಇದೆ – ಶ್ರೀ ಜನಾರ್ಧನ ಮಂಜೇಶ್ವರ

ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲ, ಇಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ವತಿಯಿಂದ ’ರಕ್ಷಾಬಂಧನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೌದ್ಧಿಕ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹ ಕಾರ್ಯವಾಹರಾದ ಶ್ರೀ ಜನಾರ್ಧನ ಮಂಜೇಶ್ವರವರು ಉಪಸ್ಥಿತರಿದ್ದು, ಅಣ್ಣತಂಗಿಯರ ಮಧುರ ಸಂಬಂಧವನ್ನು ಬಲಪಡಿಸುವುದೇ ರಕ್ಷಾಬಂಧನ ಮತ್ತು ಕಲ್ಲಾಗಿರುವ ಹೃದಯವನ್ನು ಕರಗಿಸುವ ಶಕ್ತಿ ರಕ್ಷೆಗೆ ಇದೆ ಎಂಬ ಸಂದೇಶವನ್ನು ನೀಡಿದರು.

20160820_100237

ಕಾರ್ಯಕ್ರಮದಲ್ಲಿ ಶಾಲಾ ವಾಹನ ಚಾಲಕರಿಗೆ ರಕ್ಷೆಯನ್ನು ಕಟ್ಟಿ ಗೌರವಿಸುವುದರ ಮೂಲಕ ವಿಶೇಷವಾಗಿ ರಕ್ಷಾಬಂಧನವನ್ನು ಆಚರಿಸಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ಮತ್ತು ಉಭಯ ವಿದ್ಯಾಸಂಸ್ಥೆಗಳು ಮುಖ್ಯಗುರುಗಳು ಉಪಸ್ಥಿತರಿದ್ದರು. ರಕ್ಷಾಬಂಧನದ ಸಂದೇಶವನ್ನು ಶಿಕ್ಷಕ ದೀಪಕ್ ಕುಮಾರ್ ಓದಿದರು.ಸ್ವಾಗತವನ್ನು ಆಂಗ್ಲಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ , ಧನ್ಯವಾದವನ್ನು ಶ್ರೀಮತಿ ಉಮಾಮೋಹನ್ ನೆರವೇರಿಸಿದರು.

Highslide for Wordpress Plugin