ಮಾಹಿತಿ ಕಾರ್ಯಾಗಾರ
Wednesday, May 6th, 2015ದಿನಾಂಕ 5-5-2015 ರಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀಯುತ ನಾ.ಕಾರಂತ ಪೆರಾಜೆ ಇವರು ನಮ್ಮ ಮಕ್ಕಳಿಗೆ ‘ಅನ್ನದ ಬಟ್ಟಲಿನಲ್ಲಿ ವಿಷ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ದಿನಾಂಕ 5-5-2015 ರಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀಯುತ ನಾ.ಕಾರಂತ ಪೆರಾಜೆ ಇವರು ನಮ್ಮ ಮಕ್ಕಳಿಗೆ ‘ಅನ್ನದ ಬಟ್ಟಲಿನಲ್ಲಿ ವಿಷ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ದಿನಾಂಕ 14-04-2015 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರು, ಸಂಚಾಲಕರು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಹತ್ತನೇ ತರಗತಿಯ ಮಕ್ಕಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿ 59,287 ರೂ. ಶಾಲೆಗೆ ದೇಣಿಗೆ ರೂಪದಲ್ಲಿ ನೀಡಿರುತ್ತಾರೆ.
ಸುಕನ್ಯ ಸಮೃದ್ಧಿ ಯೋಜನೆಯ ಕುರಿತು ಅಂಚೆ ಕಛೇರಿ ಸಿಬ್ಬಂದಿಯವರು ಶಾಲೆಗೆ ಭೇಟಿನೀಡಿ 1 ರಿಂದ 4 ನೇ ತರಗತಿಯವರೆಗಿನ ಹೆಣ್ಣು ಮಕ್ಕಳ ಪೋಷಕರಿಗೆ ಮಾಹಿತಿ ನೀಡಿದರು.
ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ಮಕ್ಕಳಿಗೆ ವರ್ಲಿ ಆರ್ಟ್ ತರಬೇತಿ ನೀಡಿದರು.
ಮಿಷನ್ 95+ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಹತ್ತನೇತರಗತಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ದ.ಕ. ಜಿಲ್ಲಾ ಪಂಚಾಯತು, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು. ತಾಲೂಕುದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ಮತ್ತು ನಮ್ಮ ಶಾಲಾ ಸಂಯುಕ್ತ ಆಶ್ರಯದಲ್ಲಿ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಾದಗೊಬ್ಬುದ ಪುತ್ತೂರ್ದ ಮುತ್ತುಲು ಯೋಜನೆಯಡಿಯಲ್ಲಿ ದಿನಾಂಕ 1-4-2015 ರಿಂದ 5-4-2015 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ ಶಿಬಿರ ಉದ್ಫಾಟನೆಗೊಂಡಿತು.
ವಿವೇಕಾನಂದ ಕನ್ನಡ ಶಾಲೆಯಲ್ಲಿ ದಿನಾಂಕ 17-03-2015 ರಂದು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಸಂವಹನದ ಸುಲಭ ಸೂತ್ರಗಳ ಬಗ್ಗೆ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ಬಿ.ವಿ ಸೂರ್ಯನಾರಾಯಣ ಇವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಭಾಷಾಜ್ಞಾನವನ್ನು ಬಳಸುತ್ತಾ ಬೆಳೆಸುವ ಪ್ರಕ್ರಿಯೆಯನ್ನು ಮಕ್ಕಳಿಗೆ ಮನದಟ್ಟು ಮಾಡಿ ಯಾವುದೇ ಭಾಷೆಯನ್ನು ಮಿತ್ರನಂತೆ ಕಾಣುವ ಕಿವಿಮಾತನ್ನು ಹೇಳಿದರು.
ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಮೇಳ ಮಾ. 14 ರಂದು ನಡೆಯಿತು. ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು, ಹಾಳೆಯಾಟ ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ಭಾಗವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ.ಕೃಷ್ಣ ಭಟ್, […]
ಮಾರ್ಚ್ 13 ರಂದು ಶಾಲೆಯಲ್ಲಿ ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕು. ಆಶಿಕಾ ರೈ ಬಿ.ಜಿ ಇವರ ಪೋಷಕರಾದ ಶ್ರೀ ವಿನೋದ್ ರೈ ಇವರು ಶಾಲಾ ಗ್ರಂಥಾಲಯಕ್ಕೆ ಸುಮಾರು 3800 ರೂ. ಗಳ ಕಪಾಟುಗಳನ್ನು ನೀಡಿರುತ್ತಾರೆ.
ಶಾಲಾ ಹಿರಿಯ ವಿದ್ಯಾರ್ಥಿಗಳಾದ ಕು. ಸ್ವಾತಿ ಮತ್ತು ಶ್ರೀಮತಿ ಶ್ವೇತಾ ಇವರು ಸುಮಾರು 1060 ರೂ. ಗಳ ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ನೀಡಿರುತ್ತಾರೆ.
ಸಾಹಿತ್ಯ ಕಲಾಕುಶಲೋಪರಿ – ಇದರ ಅಂಗವಾಗಿ ಪುತ್ತೂರಿನ ಅನುರಾಗ ವಠಾರದಲ್ಲಿ ನಮ್ಮ ಶಾಲಾ ಮಕ್ಕಳಿಂದ ನೃತ್ಯವೈವಿಧ್ಯ ಕಾರ್ಯಕ್ರಮ ನಡೆದಿರುತ್ತದೆ.
ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಿದ ಪುತ್ತೂರು ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಅಕ್ಷಯ್, ವಿಶಾಲ್, ಸ್ಕಂದನಾರಾಯಣ ಇವರ ತಂಡ ತೃತೀಯ ಬಹುಮಾನವನ್ನು ಪಡೆದಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಜಯಶ್ರೀ ಬಿ. ಇವರು ಲೋವರ್ ಗ್ರೇಡ್ ವಿಭಾಗದಲ್ಲಿ ಪುತ್ತೂರು ತಾಲೂಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಬಿ. ತರಬೇತಿ ನೀಡಿರುತ್ತಾರೆ. ಇವರು ನರಿಮೊಗರು – ಬಜಪ್ಪಾಳ ಬಾಬು ಗೌಡ ಮತ್ತು ಶ್ರೀಮತಿ ಲಲಿತಾ ದಂಪತಿಯ ಪುತ್ರಿ.
ರೋಗ ವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಲೇರಿಯಾ ನಿಯಂತ್ರಣದಲ್ಲಿ ಮಕ್ಕಳ ಪಾತ್ರ ವಿಷಯದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳು ಫೆ. 13 ರಂದು ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ 9 ನೇ ತರಗತಿಯ ಕು. ಅಶ್ವಿನಿ ಯು. ನಾಯಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ವಿವೇಕಾನಂದ ಕನ್ನಡ ಶಾಲೆ, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ‘ಸುಜ್ಞಾನ ಪುಸ್ತಕ ಜಾಥಾ-2015’ ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಸದಸ್ಯರಾದ ಶೋಭಾ ಕೊಳತ್ತಾಯ, ಸುನೀತಾ ಚಂದು ಶೆಟ್ಟಿ, ಅಚ್ಚುತ ಭಟ್ ಸುಳ್ಯಪದವು, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಅಂಬಿಕಾ, ಸದಸ್ಯರಾದ ಸುರೇಖಾ, ಪೋಷಕರಾದ ಮಹಾದೇವಶಾಸ್ತ್ರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕರಾದ […]
ಪುಸ್ತಕ ಜಾಥಾ ಕಾರ್ಯಕ್ರಮದಂಗವಾಗಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಯಿತು.
ಪುಸ್ತಕ ಸಪ್ತಾಹದ ಉದ್ಫಾಟನಾ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರೂ ಶಿಕ್ಷಕ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರೂ ಆದ ಶ್ರೀಮತಿ ಪೂರ್ಣಿಮಾ ತಮ್ಮ ಸಂಸ್ಥೆಯಿಂದ ಸಂಗ್ರಹಿಸಿದ ರೂ. 4168 ಮತ್ತು ಪುಸ್ತಕಗಳನ್ನು ಶಾಲೆಗೆ ನೀಡಿರುತ್ತಾರೆ. ಮತ್ತು ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಇವರು ಈ ಸಂದರ್ಭದಲ್ಲಿ ಶಾಲೆಗೆ ಕವಾಟು ದೇಣಿಗೆ ನೀಡಿ ಸಹಕರಿಸಿರುತ್ತಾರೆ.
ಮಕ್ಕಳಲ್ಲಿ ಬೆಳಗಲು ಜ್ಞಾನದೀವಿಗೆ, ಹಿರಿಯರೇ ನೀಡಿರಿ ನಿಮ್ಮಯ ಕೊಡುಗೆ ಎಂಬ ಧ್ಯೇಯ ವಾಕ್ಯದೊಂದಿಗೆ 16-02-2015 ರಿಂದ 22-02-2015 ರವರೆಗೆ ನಡೆಯಲಿರುವ ಪುಸ್ತಕ ಸಪ್ತಾಹ ಕಾರ್ಯಕ್ರಮಕ್ಕೆ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ದೀಪಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಿದರು. ಶಾಲಾ ಅಧ್ಯಕ್ಷರಾದ ಡಾ| ಕೃಷ್ಣ ಭಟ್, ಸಂಚಾಲಕರಾದ ರವೀಂದ್ರ ಪಿ., ಶಿಕ್ಷ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರಾದ ಶ್ರೀಮತಿ ವಂದನಾ, ಶ್ರೀಮತಿ ಉಷಾಕಿರಣ, ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ್ ಬಡೆಕ್ಕಿಲ, ಪೋಷಕ ಸಮಿತಿಯ ಅಧ್ಯಕ್ಷರಾದ […]
ಶಾಲಾ ಪೋಷಕರಾದ ಶ್ರೀ ಉಪೇಂದ್ರ ಬಲ್ಯಾಯ ಪುತ್ತೂರು ಇವರು ರೂ. 500 ರ ಪುಸ್ತಕವನ್ನು ‘ಪುಸ್ತಕ ಜಾಥ’ಕ್ಕಾಗಿ ಶಿಕ್ಷಕರಾದ ಶ್ರೀ ವಿಶ್ವನಾಥ ಮುಡೂರು ಹಾಗೂ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.
ಶ್ರೀ ದುರ್ಗಾ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪದಡ್ಕ ಇದರ ಅಧ್ಯಕ್ಷರಾದ ಶ್ರೀ ಜನಾರ್ಧನ ಪೂಜಾರಿ ಪದಡ್ಕ ಮತ್ತು ಸದಸ್ಯರು ‘ ಪುಸ್ತಕ ಜಾಥಾ’ ಕ್ಕೆ ರೂ 2,000 ದ ಪುಸ್ತಕವನ್ನು ಶಿಕ್ಷಕರಾದ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.
ಪುಸ್ತಕ ಸಪ್ತಾಹದ ಅಂಗವಾಗಿ ಶಾಲಾ ಹಿರಿಯ ಪೋಷಕರಾದ ಶ್ರೀ ಗಣಪತಿ ಭಟ್ ಇವರು ಶಾಲಾ ಗ್ರಂಥಾಲಯಕ್ಕೆ ‘ಮಕ್ಕಳ ರಾಮಾಯಣ ಮತ್ತು ಮಕ್ಕಳಿಗಾಗಿ ಮಹಾಭಾರತ ಭಾಗ – 2’ ಎಂಬ ಸುಮಾರು 2,000 ರೂ. ಗಳ ಪುಸ್ತಕವನ್ನು ನೀಡಿ ಸಹಕರಿಸಿದ್ದಾರೆ.
ಪುಸ್ತಕ ಸಪ್ತಾಹದ ಅಂಗವಾಗಿ ದಿ.ಶೀನ ಹಂದ್ರಟ್ಟ ಇವರ ಸ್ಮರಣಾರ್ಥ ಇವರ ಮಕ್ಕಳಾದ ಧನಂಜಯ ಹಂದ್ರಟ್ಟ ಮತ್ತು ಕು.ಲೀಲಾವತಿ ಹಂದ್ರಟ್ಟ (ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ಶಿಕ್ಷಕಿ) ಇವರು ಸುಮಾರು 10,000 ರೂ. ಗಳ ಕಪಾಟು ನೀಡಿ ಸಹಕರಿಸಲಿರುವರು.
ಕಲಾ ಸಂಸ್ಕೃತಿಯು ಮನಸ್ಸನ್ನು ಅರಳಿಸುತ್ತದೆ ಭಾರತೀಯ ಕಲೆಯಲ್ಲಿ ಮಗುವಿನ ಬೌದ್ಧಿಕ ಜ್ಞಾನವನ್ನು ಪ್ರೇರೇಪಿಸುವ ತತ್ವ ಅಡಗಿದೆ. ಈ ನಿಟ್ಟಿನಲ್ಲಿ ಈ ಶಾಲೆಯು ಸಂಗೀತ, ಭರತನಾಟ್ಯ ಯಕ್ಷಗಾನದಂತಹ ಕಲೆಗಳ ಸಾಂಸ್ಕೃತಿಕ ಉತ್ಸವ ಆಚರಿಸುವ ಮೂಲಕ ಕಲಾ ಪೋಷಣೆ ಮಾಡುತ್ತಿದೆ ಎಂದು ನೂಪುರ ಭ್ರಮರಿಯ ನೃತ್ಯ ಸಂಶೋಧಕರು ಹಾಗೂ ಸಂಪಾದಕರಾಗಿರುವ ಶ್ರೀಮತಿ ಮನೋರಮ ಬಿ.ಎನ್ ನುಡಿದರು. ಇವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಡಾ| ಕೃಷ್ಣಭಟ್ ಕೊಂಕೋಡಿ ಸಭಾಧ್ಯಕ್ಷತೆ ವಹಿಸಿ ಗುರುವೃಂದದವರಿಗೆ ಹಾಗೂ ಮಕ್ಕಳ ಪೋಷಕರಿಗೆ ಅಭಿವಂದಿಸಿದರು. ಶಾಲಾ […]
ಪರೀಕ್ಷೆಯನ್ನು ಶತ್ರುವಾಗಿ ಕಾಣದೆ ಮಿತ್ರನಾಗಿ ಕಾಣಬೇಕು, ಈ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಅತೀ ಅಗತ್ಯ ಎಂದು ಮಕ್ಕಳ ತಜ್ಞೆ ಡಾ| ಸುಲೇಖ ವರದರಾಜ್ ಅವರು ವಿವೇಕಾನಂದ ಕನ್ನಡ ಶಾಲೆಯ ೧೦ನೇ ತರಗತಿಯ ಮಕ್ಕಳಿಗೆ ‘ಪರೀಕ್ಷೆ – ಆಹಾರ – ಆರೋಗ್ಯ’ ಎಂಬ ವಿಷಯದ ಕುರಿತಾಗಿ ಮಾಹಿತಿ ನೀಡಿದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2014-15 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳು ಅಕ್ಷಯ್ ಡಿ. , ಚಿಂತನಾ .ಕೆ, ಧನುಷ್ ಎನ್, ಧನುಷ್.ಡಿ, ದೀಕ್ಷಾ.ಕೆ.ಎಸ್, ಜೀವನ್ ಕುಮಾರ್ ಕೆ, ಜಯಶ್ರೀ.ಬಿ, ಕಾರ್ತಿಕ್, ರಾಮ್ ಪ್ರಸಾದ್, ಅರ್ಪಿತಾ ಸಿ.ಪಿ, ಆಶಿಕ್, ಸ್ಕಂದ ನಾರಾಯಣ, ವಿಭಾ ಆಚಳ್ಳಿ, ವಿಶಂತಿ ಶೆಟ್ಟಿ, ಯಶಸ್ವಿ. ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಿತಾ.ಎ.ಆರ್, ಆಶಿಕಾ ರೈ.ಬಿ.ಜಿ, ದೀಕ್ಷಾ […]
ಭಾರತ ಸಂಸ್ಕೃತಿ ಪ್ರತಿಷ್ಠಾನ ಇವರು ನಡೆಸಿದ ಭಾರತ ಸಂಸ್ಕೃತಿ ರಾಮಾಯಣ ಪರಿಚಯ ಪರೀಕ್ಷೆಯ ಪ್ರೌಢಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಕು. ಶುಭಾ ಆಚಳ್ಳಿ ತಾಲ್ಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಶಾಂತಿವನ ಟ್ರಸ್ಟ್ (ರಿ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಖಂಡ ದ.ಕ ಜಿಲ್ಲಾ ಶ್ರೀ ಗುರು ಯೋಗ ಸಂಘದ ಸಹಕಾರದೊಂದಿಗೆ ನಡೆಸಿದ ಜ್ಞಾನ ಸಿಂಧೂರ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾರ್ಥನಾ ಶ್ಲೋಕ ಕಂಠಪಾಠ […]
ಶಾಲಾ ಹಿರಿಯ ಕ್ರೀಡಾಪಟು ಪ್ರಸ್ತುತ ಬೆಂಗಳೂರಿನ ಮೈಕ್ರೋ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅಶ್ವಥ್ ಇವರು 9 ಮತ್ತು ಹತ್ತನೇ ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಮಾಡಿದ ಸಾಧನೆಗಳಿಗೆ ಶಿಕ್ಷಕರು ನೀಡಿದ ಪ್ರೋತ್ಸಾಹವನ್ನು ಸ್ಮರಿಸುತ್ತಾ ಮುಂದಿನ ಕಾಲೇಜು ಮತ್ತು ವೃತ್ತಿ ಜೀವನದಲ್ಲಿ ಬೆಳೆಸಿಕೊಂಡ ನಾಯಕತ್ವ ಮತ್ತು ಸ್ಫೂರ್ತಿದಾಯಕ ಮನೋಭಾವವು ಈ ಸಂದರ್ಭದಲ್ಲಿ ಸಹಾಯಕವಾಯಿತು ಎಂದರು. ವೃತ್ತಿಗಾಗಿ ನಡೆಸಿದ ಹುಡುಕಾಟ ಮತ್ತು ಆ ಸಂದರ್ಭದಲ್ಲಿ ಎದುರಾದ ಕಷ್ಟಕರ ಸನ್ನಿವೇಶಗಳನ್ನು ಹೇಳುತ್ತಾ ಈಗ ದೊರೆತಿರುವ ಒಳ್ಳೆಯ ಕೆಲಸ ಆ […]
ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ, ಜಿಗಣಿ, ಬೆಂಗಳೂರು ಇಲ್ಲಿ ಎಂ.ಎಸ್ಸಿ ಯೋಗ ಮಾಡುತ್ತಿರುವ ಸಂಜಯ್.ಪಿ ಇವರು ಪ್ರಸ್ತುತ ಬಿ.ಸಿ.ರೋಡ್‌ನಲ್ಲಿ ಯೋಗ ಸಂಜೀವಿನಿ ಯೋಗ ತರಬೇತಿ ಸಂಸ್ಥೆಯ ಮುಖಾಂತರ ಯೋಗ ತರಗತಿಗಳನ್ನು ಒಂದು ವರ್ಷದಿಂದ ನಡೆದಿಕೊಂಡು ಬರುತ್ತಿದ್ದು ಮುಖ್ಯವಾಗಿ ಖಾಯಿಲೆಗಳಿಗೆ ಚಿಕಿತ್ಸಾರೂಪವಾಗಿ ಯೋಗದ ಕೆಲವು ಅಭ್ಯಾಸಗಳನ್ನು ಜೋಡಿಸುತ್ತಾ ತರಗತಿಗಳನ್ನು ನಡೆಸುತ್ತಿದ್ದಾರೆ. ವೈದ್ಯರ್‍ಸ್ ಆರ್ಯುವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ 10 ದಿನಗಳ ಯೋಗ ತರಗತಿಗಳನ್ನು ನಡೆಸುತ್ತಿರುವ ಇವರು ಅಭ್ಯಾಸದ ವೈಜ್ಞಾನಿಕ ಆಯಾಮಗಳು, ಅಭ್ಯಾಸ ಕ್ರಮಗಳು ಸೂರ್ಯನಮಸ್ಕಾರ ಮುಂತಾದವುಗಳ ಬಗ್ಗೆ ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕರು […]
ಯುವ ಒಕ್ಕಲಿಗ ಗೌಡ ಸೇವಾ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ರಾಮಕುಂಜೇಶ್ವರ ಪ.ಪೂ ಕಾಲೇಜು ರಾಮಕುಂಜ ಇಲ್ಲಿ ನಡೆದ ಯುವ ಒಕ್ಕಲಿಗರ ಕ್ರೀಡಾ ಸಂಭ್ರಮ – 2015 ರ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು.ಪೂಜಾ 100 ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನಮ್ಮ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇದೀಗ ಮದುವೆಯಾಗಿ ಜವಾಬ್ದಾರಿಯಿಂದ ತೆರಳಿರುವ ಕು.ಪೃಥ್ವಿ ಸುವರ್ಣ ಇವರು ‘ಪುಸ್ತಕ ಸಪ್ತಾಹದ ಅಂಗವಾಗಿ ಸುಮಾರು 1500 ರೂ. ಗಳ ಪುಸ್ತಕವನ್ನು ತಮ್ಮ ತರಗತಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.
ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿ, ಭಾರತ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಹಾಗೂ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ, ಶ್ರೀ ವೇದವ್ಯಾಸ ಯೋಗ ಫೌಂಡೇಶನ್ ಮೈಸೂರು, ಉಡುಪಿ ಜಿಲ್ಲಾ ಯೋಗ ವೆಲ್ನೆಸ್ ಸೆಂಟರ್ ವತಿಯಿಂದ ನಡೆದ ಯೋಗ ಭೂಷಣ ಪ್ರಬೋಧ ಪರೀಕ್ಷೆಯಲ್ಲಿ ಶ್ರೀಮತಿ ಹರಿಣಾಕ್ಷಿ ಅವರು ಭೂಷಣ ಪ್ರಬೋಧ ಪತ್ರ ಹಾಗೂ ಬೆಳ್ಳಿ […]
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು 2014 ರಲ್ಲಿ ಏರ್ಪಡಿಸಿದ ಸಂಗೀತ, ನೃತ್ಯ ಪರೀಕ್ಷೆ ಭರತನಾಟ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ವತಿಯಿಂದ ನಡೆಯುತ್ತಿರುವ ತರಗತಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಪಂಚಮಿ ಎಸ್., ಅಮಿತಾ ಎಸ್.ಎನ್, ಚೈತ್ರ.ಬಿ, ಸ್ಪೂರ್ತಿ.ಬಿ.ವಿ., ಮೋಕ್ಷಿತಾ.ಎಸ್, ಶ್ರಾವ್ಯ ಕೆ.ಎಸ್, ಕಾವ್ಯಶ್ರೀ ಮತ್ತು ಸೀನಿಯರ್ ವಿಭಾಗದಲ್ಲಿ ಸಿಂಚನಾದೇವ, ಪ್ರಜ್ಞಾ.ಪಿ.ಆರ್, ಅಶ್ವಿನಿ ನಾಯಕ್ ಆಶ್ರಯ್ ನಾಯಕ್, ಅಪೂರ್ವ ಗೌರಿ, ಕವನ ಬಿ.ಎಸ್, ಭುವನ ಸಿಂಚನ, ಸ್ವಾತಿ ಎನ್.ವಿ, ಅಂಕಿತಾ ವಿ.ಕೆ, ಆಶಿತಾ ಎಮ್, ಆಶಿತಾ ಬಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಇವರೆಲ್ಲಾ ಶ್ರೀ […]
ವಿದ್ಯೆ ಮತ್ತು ಸಂಸ್ಕಾರ ಜೀವನದ ಪ್ರಮುಖ ಘಟ್ಟವಿದ್ದಂತೆ. ಅವು ನಮ್ಮ ಜೀವನದ ಜೊತೆಗೇ ಇರಬೇಕು. ಅಂತಹ ವಿದ್ಯೆ ಮತ್ತು ಸಂಸ್ಕಾರವು ನಮ್ಮ ಶಾಲೆಯಲ್ಲಿ ದೊರಕುತ್ತಿದೆ ಎಂದು ವಿವೇಕಾನಂದ ಕನ್ನಡ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ – ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸಾಯಿಗೀತಾ ನುಡಿದರು. ವಿವೇಕಾನಂದ ಜಯಂತಿಯ ಪ್ರಯುಕ್ತ ಶಾಲಾ ವಿದ್ಯಾರ್ಥಿನಿ ಅಪೂರ್ವ ವಿವೇಕಾನಂದ ಬಾಲ್ಯ, ಆದರ್ಶಗಳ ಬಗ್ಗೆ ಮಾತನಾಡಿದರು. ಶ್ರೀಮತಿ ಉಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. […]
ವಿವೇಕಾನಂದ ಕನ್ನಡ ಶಾಲೆಯ – ಅಪೂರ್ವ ಮತ್ತು ವಿಶಿಷ್ಟ ಕಾರ್ಯಕ್ರಮ ಗಾನ -ನೃತ್ಯ – ಯಕ್ಷ ಸಂಭ್ರಮ 2013-14 ರಿಂದ ಶಾಲೆಯಲ್ಲಿ ಆರಂಭವಾದ ಸಂಗೀತ ಭರತನಾಟ್ಯ ಯಕ್ಷಗಾನ ತರಗತಿಗಳ ಸಮನ್ವಯ ವಾರ್ಷಿಕೋತ್ಸವವು ನಡೆಯುತ್ತಾ ಬಂದಿದ್ದು ಪ್ರಸ್ತುತ ವರ್ಷದ ಕಾರ್ಯಕ್ರಮ ಸಂಬಂಧಿ ಪೂರ್ವಭಾವಿ ಸಭೆಯು ದಿನಾಂಕ 6-1-2015 ರಂದು ನಡೆಯಿತು. ಈ ಸಂದರ್ಭದಲ್ಲಿ ಸಂಗೀತ , ಭರತನಾಟ್ಯ ಜ್ಯೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ ಮಕ್ಕಳ 100% ಫಲಿತಾಂಶ ವಿವಿಧ ವೇದಿಕೆಯಲ್ಲಿ ನೀಡಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಾಂಭವೀ ವಿಜಯ […]
ಪ್ರಸ್ತುತ ಸಾಲಿನ ಹತ್ತನೇ ತರಗತಿಯ ಮಕ್ಕಳೊಂದಿಗೆ ಕಲಿಕಾ ಪ್ರಕ್ರಿಯೆ ಹಾಗೂ ವಾತಾವರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಶಾಲಾ ಸಂಚಾಲಕರಾದ ರವೀಂದ್ರ ಪಿ. ಇವರು ಸಂವಾದ ನಡೆಸಿದರು. ಕಾರ್ಯತತ್ಪರತೆ ಸೃಜನಶೀಲತೆ, ಕಲಾತ್ಮತೆಗಳಿಗೆ ಜೀವನದಲ್ಲಿ ಒತ್ತು ನೀಡಬೇಕಾದ ಅವಶ್ಯಕತೆಯನ್ನು ಮಕ್ಕಳೊಂದಿಗೆ ಚರ್ಚಿಸಿದರು.
ದಿನಾಂಕ 25-12-2014 ರಂದು ‘ಶ್ರೀ ನಿಲಯ’ ಬೊಳ್ಳಂದೂರು ಇಲ್ಲಿ ಗೃಹಪ್ರವೇಶದ ಪ್ರಯುಕ್ತ ಯಕ್ಷ ಚಿಣ್ಣರ ಬಳಗ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇವರಿಂದ ಶಾಂಭವಿ ವಿಜಯ ಎಂಬ ಯಕ್ಷಗಾನ ಬಯಲಾಟವು ಗುರುಗಳಾದ ಶ್ರೀ ಬಾಲಕೃಷ್ಣ ಉಪ್ಪಂಗಳ ಮತ್ತು ಶ್ರೀ ಚಂದ್ರಶೇಖರ ಇವರ ನಿರ್ದೇಶನದಲ್ಲಿ ನಡೆಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿನ ಶಾಲಾ ಸ್ಥಾಪಕಾಧ್ಯಕ್ಷರಾದ ಶಿವರಾಮ ಭಟ್ ಕರಿಯಾಲ ಇವರು ಶಾಲಾ ಗ್ರಂಥಾಲಯಕ್ಕೆ ಸುಮಾರು 5,000 ರೂ. ಗಳ ಪುಸ್ತಕಗಳ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಚ್ಯುತ ನಾಯಕ್, ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-12-2014 ರಂದು ನಡೆದಿದ್ದ ಶಾಲಾ ವಾರ್ಷಿಕೋತ್ಸವ ‘ವಿವೇಕೋತ್ಸವ’ದ ಕುರಿತು ಅವಲೋಕನ ನಡೆಯಿತು. ಈ ಸಂದರ್ಭದಲ್ಲಿ ಸಮಾಜಕ್ಕೆ ಸಂದೇಶವನ್ನು ಕೊಡುವ ಕಾರ್ಯಕ್ರಮಗಳನ್ನು ನೀಡಿದ್ದು ಇನ್ನು ಮುಂದೆಯೂ ಇದರ ಕಡೆ ಹೆಚ್ಚಿನ ಗಮನ ನೀಡುವಂತೆ ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕರು ಹಾಗು ಆಯ್ದ ಪೋಷಕರ ಸಭೆಯಲ್ಲಿ ಚರ್ಚಿಸಲಾಯಿತು.
ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮಕ್ಕಳ ಪ್ರಗತಿಯ ಬಗ್ಗೆ ಪೋಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಶಿಕ್ಷಕರು ಮಕ್ಕಳು ಹಾಗೂ ಪೋಷಕರ ಜವಾಬ್ದಾರಿಯನ್ನು ನೆನಪಿಸಲಾಯಿತು.