ಕಲಾ ಸಂಸ್ಕೃತಿಯು ಮನಸ್ಸನ್ನು ಅರಳಿಸುತ್ತದೆ ಭಾರತೀಯ ಕಲೆಯಲ್ಲಿ ಮಗುವಿನ ಬೌದ್ಧಿಕ ಜ್ಞಾನವನ್ನು ಪ್ರೇರೇಪಿಸುವ ತತ್ವ ಅಡಗಿದೆ. ಈ ನಿಟ್ಟಿನಲ್ಲಿ ಈ ಶಾಲೆಯು ಸಂಗೀತ, ಭರತನಾಟ್ಯ ಯಕ್ಷಗಾನದಂತಹ ಕಲೆಗಳ ಸಾಂಸ್ಕೃತಿಕ ಉತ್ಸವ ಆಚರಿಸುವ ಮೂಲಕ ಕಲಾ ಪೋಷಣೆ ಮಾಡುತ್ತಿದೆ ಎಂದು ನೂಪುರ ಭ್ರಮರಿಯ ನೃತ್ಯ ಸಂಶೋಧಕರು ಹಾಗೂ ಸಂಪಾದಕರಾಗಿರುವ ಶ್ರೀಮತಿ ಮನೋರಮ ಬಿ.ಎನ್ ನುಡಿದರು. ಇವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಡಾ| ಕೃಷ್ಣಭಟ್ ಕೊಂಕೋಡಿ ಸಭಾಧ್ಯಕ್ಷತೆ ವಹಿಸಿ ಗುರುವೃಂದದವರಿಗೆ ಹಾಗೂ ಮಕ್ಕಳ ಪೋಷಕರಿಗೆ ಅಭಿವಂದಿಸಿದರು.



ಶಾಲಾ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಪ್ರಾರ್ಥನಾ ಕರ್ಗಲ್ಲು ದೀಪಪ್ರಜ್ವಲಿಸಿ ಪ್ರಾರ್ಥಿಸಿದರು. ಗಾನ ನೃತ್ಯ ಯಕ್ಷಗಾನದ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಭೋಜರಾಜ್ ವಂದಿಸಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಕೊಳತ್ತಾಯ ಸ್ವಾಗತಿಸಿ ಪ್ರಸ್ತಾಪಿಸಿದರು. ಶ್ರೀಮತಿ ಸವಿತಾ ಆಚಳ್ಳಿ ಕಾರ್ಯಕ್ರಮ ನಿರೂಪಿಸಿದರು.