ವಿದ್ಯೆ ಮತ್ತು ಸಂಸ್ಕಾರ ಜೀವನದ ಪ್ರಮುಖ ಘಟ್ಟವಿದ್ದಂತೆ. ಅವು ನಮ್ಮ ಜೀವನದ ಜೊತೆಗೇ ಇರಬೇಕು. ಅಂತಹ ವಿದ್ಯೆ ಮತ್ತು ಸಂಸ್ಕಾರವು ನಮ್ಮ ಶಾಲೆಯಲ್ಲಿ ದೊರಕುತ್ತಿದೆ ಎಂದು ವಿವೇಕಾನಂದ ಕನ್ನಡ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ – ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸಾಯಿಗೀತಾ ನುಡಿದರು. ವಿವೇಕಾನಂದ ಜಯಂತಿಯ ಪ್ರಯುಕ್ತ ಶಾಲಾ ವಿದ್ಯಾರ್ಥಿನಿ ಅಪೂರ್ವ ವಿವೇಕಾನಂದ ಬಾಲ್ಯ, ಆದರ್ಶಗಳ ಬಗ್ಗೆ ಮಾತನಾಡಿದರು. ಶ್ರೀಮತಿ ಉಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣ, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ನಳಿನಿ ಉಪಸ್ಥಿತರಿದ್ದರು. ಶ್ರೀಮತಿ ರೇಷ್ಮಾ ಸ್ವಾಗತಿಸಿ, ಶ್ರೀಮತಿ ಕವಿತಾ ಧನ್ಯವಾದವಿತ್ತು, ಶ್ರೀಮತಿ ವೀಣಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.




