ವಿವೇಕಾನಂದ ಕನ್ನಡ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ

ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ, ಜಿಗಣಿ, ಬೆಂಗಳೂರು ಇಲ್ಲಿ ಎಂ.ಎಸ್ಸಿ ಯೋಗ ಮಾಡುತ್ತಿರುವ ಸಂಜಯ್.ಪಿ ಇವರು ಪ್ರಸ್ತುತ ಬಿ.ಸಿ.ರೋಡ್‌ನಲ್ಲಿ ಯೋಗ ಸಂಜೀವಿನಿ ಯೋಗ ತರಬೇತಿ ಸಂಸ್ಥೆಯ ಮುಖಾಂತರ ಯೋಗ ತರಗತಿಗಳನ್ನು ಒಂದು ವರ್ಷದಿಂದ ನಡೆದಿಕೊಂಡು ಬರುತ್ತಿದ್ದು ಮುಖ್ಯವಾಗಿ ಖಾಯಿಲೆಗಳಿಗೆ ಚಿಕಿತ್ಸಾರೂಪವಾಗಿ ಯೋಗದ ಕೆಲವು ಅಭ್ಯಾಸಗಳನ್ನು ಜೋಡಿಸುತ್ತಾ ತರಗತಿಗಳನ್ನು ನಡೆಸುತ್ತಿದ್ದಾರೆ. ವೈದ್ಯರ್‍ಸ್ ಆರ್ಯುವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ 10 ದಿನಗಳ ಯೋಗ ತರಗತಿಗಳನ್ನು ನಡೆಸುತ್ತಿರುವ ಇವರು ಅಭ್ಯಾಸದ ವೈಜ್ಞಾನಿಕ ಆಯಾಮಗಳು, ಅಭ್ಯಾಸ ಕ್ರಮಗಳು ಸೂರ್ಯನಮಸ್ಕಾರ ಮುಂತಾದವುಗಳ ಬಗ್ಗೆ ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕರು ಹಾಗೂ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.

20150119_111500

20150119_111358

Highslide for Wordpress Plugin