ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 25 ರ ಸಾಮಿಪ್ಯ – ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ 2017-18 ನೇ ಇಸವಿಗೆ 25 ವರುಷದ ಸಂಭ್ರಮಾಚರಣೆ ನಡೆಯಲಿದ್ದು, ಬೆಳ್ಳಿಹಬ್ಬದ ಸಂಭ್ರಮದ ಕೊಡುಗೆಯಾಗಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಎ. 25 ರಂದು ನಡೆಯಿತು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಶಂಕು ಸ್ಥಾಪನೆ ಮಾಡಿ ಮಾತನಾಡಿ, ’ದೇಶ, ಭಾಷೆ […]
ಶಿಕ್ಷಣದ ಉತ್ಸಾಹವು ವ್ಯಕ್ತಿಯಲ್ಲಿ ದೈಹಿಕ , ಮಾನಸಿಕ, ಭಾವನಾತ್ಮಕ, ಸಾಮಾಜಿಕ ವಿಕಾಸಕ್ಕೆ ಪೂರಕವಾಗಿರಬೇಕು ತನ್ಮೂಲಕ ಮಕ್ಕಳಲ್ಲಿ ಔಚಿತ್ಯ ಪ್ರಜ್ಞೆ ಬೆಳೆಯಬೇಕು. ಶಾಲೆಯಲ್ಲಿ ಮಗು ಕಲಿತ ದಿನಗಳು ಸ್ಮರಣೀಯ ಎಂದು ಡಾ. ಎಚ್. ಮಾಧವ ಭಟ್ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯ 10ನೇ ತರಗತಿಯ ಮಕ್ಕಳ ದೀಪಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರು ಶಾಲೆಯೊಂದಿಗೆ ಸದಾ ನಿಮ್ಮ ಭಾವನಾತ್ಮಕ ಸಂಬಂಧವಿರಲಿ ಎಂದು ಹೇಳಿದರು. ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣ ಗೌಡ, ಶೋಭಾ ಕೊಳತ್ತಾಯ, ರೂಪಲೇಖಾ […]
2017-18 ನೇ ಸಾಲಿನಲ್ಲಿ ಬೆಳ್ಳಿಹಬ್ಬ ಆಚರಿಸಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬೆಳ್ಳಿಹಬ್ಬ ರಚನಾ ಸಮಿತಿ ಸಭೆಯು ದಿನಾಂಕ 9-4-2016 ರಂದು ಜರುಗಿತು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹರಿಣಿ ಪುತ್ತೂರಾಯ, ಉಪಾಧ್ಯಕ್ಷರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಮಣಿಲ ಮಹಾದೇವ ಶಾಸ್ತ್ರೀ, ತ್ರಿವೇಣಿ ಪೆರ್ವೋಡಿ, ಜಯಂತ ನಡುಬೈಲು, ಶಿವರಂಜನ್, ಅನೀಶ್ ಬಡೆಕ್ಕಿಲ, ವಸಂತ ಸುವರ್ಣ ಆಯ್ಕೆಯಾಗಿರುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಸ್.ಆರ್. ರಂಗಮೂರ್ತಿ, ಕಾರ್ಯದರ್ಶಿ ಶಿವಪ್ರಸಾದ್ ಇ., ಹಿರಿಯರಾದ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕಾರ್ಯಾಗಾರವು ದಿನಾಂಕ 7-4-2016 ರಂದು ಸಮಾರೋಪಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಟ್ಯಗುರು ಶ್ರೀ ಬಾಲಕೃಷ್ಣ ಉಡ್ಡಂಗಳರವರು ಮಾತನಾಡಿ, ನಿರಂತರ ಕಲಿಕೆಯಿಂದ ಮಾತ್ರ ಕಲೆಯನ್ನು ಒಲಿಸಿಕೊಳ್ಳು ಸಾಧ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಪೋಷಕರಾದ ಶ್ರೀ ಬಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಚಂದ್ರಶೇಖರವರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಶ್ರೀ ಹರೀಶ್ ನೆರವೇರಿಸಿದ್ದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕಾರ್ಯಾಗಾರದಲ್ಲಿ ಮುಖವರ್ಣಿಕೆ ತರಬೇತಿಯನ್ನು ಖ್ಯಾತ ಕಿರೀಟ ವೇಷದಾರಿ ಶ್ರೀ ಜನಾರ್ಧನ ಬದಿಯಡ್ಕ ನೀಡಿದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆಯಲ್ಲಿ ಶಿಬಿರಾರ್ಥಿಗಳ ಪೋಷಕರು ಮತ್ತು ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗದಿಂದ ನಡೆಯುತ್ತಿರುವ ಯಕ್ಷಗಾನ ಕಾರ್ಯಾಗಾರದಲ್ಲಿ ಕಲಾವಿದ ಶ್ರೀ ಮಾಧವ ನೆಟ್ಟಣಿಗೆಯವರು ಭಾಗವಹಿಸಿ ವೇಷಭೂಷಣವನ್ನು ತೊಡುವ ಕ್ರಮ ಮತ್ತು ಯಕ್ಷಗಾನ ಬೆಳೆದು ಬಂದ ದಾರಿಯ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಯಕ್ಷ ಶಿಬಿರದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.
ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ವಾಕ್ಪಟುತ್ವ ಮುಂತಾದ ಕಲೆಗಳ ಸಮಾಗಮದಿಂದ ರೂಪುಗೊಂಡ ಕಲಾ ಪರಿಕರವೇ ಯಕ್ಷಗಾನ. ಇದು ಸುದೀರ್ಘ ತಪಸ್ಸು ಎಂದು ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ಚಂಬಲ್ತಿಮಾರ್‌ರವರು ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರ ಮತ್ತು ’ಛತ್ರಪತಿ ಶಿವಾಜಿ’ ಎಂಬ ಮಕ್ಕಳ ಯಕ್ಷಗಾನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಮಾತನ್ನು ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಹಾಸ್ಯ ಕಲಾವಿದರಾದ […]
ದಿನಾಂಕ 12-03-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಹದಿಹರೆಯದ ಹೆಣ್ಣು ಮಕ್ಕಳಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಶ್ರೀ ವಾಣಿ ವಿಜಯ ಪ್ರೌಢ ಶಾಲೆ, ಕೊಡ್ಲಮೊಗರು, ಮಂಜೇಶ್ವರದ ಸಹಶಿಕ್ಷಕಿಯಾದ ಶ್ರೀಮತಿ ಕೃಷ್ಣವೇಣಿಯವರು ಮಾಹಿತಿ ನೀಡಿದ್ದಾರೆ. ಹದಿಹರೆಯದ ಮಕ್ಕಳ ಶಾರೀರಿಕ ಸ್ವಚ್ಛತೆಗೆ ಆದ್ಯತೆ ಹೇಗೆ ಕೊಡಬೇಕೆಂದು ಸಂವಾದ ನಡೆಸಿ ಮಾಹಿತಿ ನೀಡಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-03-2016 ರಂದು ಎಲ್.ಐ.ಸಿ ಇದರ ಪುತ್ತೂರು ಶಾಖೆಯ ವತಿಯಿಂದ 2015 ನೇ ಸಾಲಿನಲ್ಲಿ ತರಗತಿವಾರು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ’ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ’ ನೀಡಲಾಯಿತು. ಶಾಖಾವತಿಯಿಂದ ಶ್ರೀಮತಿ ರಾಜಶ್ರೀ, ಶ್ರೀ ಜಯರಾಮ ನೆಲ್ಲಿತ್ತಾಯ, ಶ್ರೀ ಸೋಮ ಸುಂದರ್‌ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳು ಸ್ಮರಣಿಕೆ ನೀಡಿ ಗೌರವಿಸಿದರು.
ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ 2015-16 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ARSH ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆ ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯದ ಬಗೆಗಿನ ಸತ್ಯ ಮತ್ತು ಮಿಥ್ಯ ಈ ವಿಷಯದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಹತ್ತನೆಯ ತರಗತಿಯ ವಿದ್ಯಾರ್ಥಿನಿ ಅಶ್ವಿನಿ. ಯು. ನಾಯಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಸಂಪ್ಯ ನಿವಾಸಿ ಉಪೇಂದ್ರ ನಾಯಕ್ ಹಾಗೂ ವಿವೇಕಾನಂದ ಕನ್ನಡ […]
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರು ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ನಿಂದ ಹಲವು ಸ್ಪರ್ಧೆಗಳನ್ನು ನಡೆಸಲಾಗಿತ್ತು. ‘ಜ್ಞಾನಸಿಂಧು/ ಜ್ಞಾನ ಬಂಧು’ ನೈತಿಕ ಮೌಲ್ಯಧಾರಿತ ಪುಸ್ತಕದ ಅಧ್ಯಯನದ ಆಧಾರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಬಂದಿವೆ. ಜ್ಞಾನ ಸಿಂಧು ಪುಸ್ತಕ ಆಧಾರಿತ ಭಾಷಣ ಸ್ಪರ್ಧೆಯಲ್ಲಿ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಠಾರದಲ್ಲಿ ಇತ್ತೀಚೆಗೆ ಸಿಯಾಚಿನ್‌ನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಹುತಾತ್ಮರಾಗಿ ಅಮರರಾದ ವೀರ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರನ್ನು ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆ ಸಲ್ಲಿಸಿ ಅಮರ ವೀರರೆಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಶ್ರಯದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ) ಸಾಧನಾ ಸಂಗೀತ ಶಾಲೆ ಹಾಗೂ ತೆಂಕಿಲ ಯಕ್ಷ ಚಿಣ್ಣರ ಬಳಗದ ಸಹಯೋಗದೊಂದಿಗೆ ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ವಠಾರದಲ್ಲಿಗಾನ – ನೃತ್ಯ- ಯಕ್ಷ ಸಂಭ್ರಮ- 2016 ಕಾರ್ಯಕ್ರಮ ನಡೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀಧರ ಮಯ್ಯ ಕಾರ್ಯಕ್ರಮದ ದೀಪ ಪ್ರಜ್ವಲನೆಗೈದು ಪ್ರತಿಭೆಗಳನ್ನು ಗುರುತಿಸಿ ಸೂಕ್ತವಾದ ತರಬೇತಿಯನ್ನು ನೀಡಿ ಸಮರ್ಥವಾದ ವೇದಿಕೆಯನ್ನು ಒದಗಿಸುವಲ್ಲಿ ಸಂಸ್ಥೆಯ ಕಾರ್ಯ ಅಭಿನಂದನಾರ್ಹವಾದುದು ಈ ಪ್ರತಿಭೆಗಳಿಗೆ ಭವಿಷ್ಯ ಉತ್ತಮವಾಗಿ ಬೆಳಗಲಿ ಎಂದು […]
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ ಬಂದಿದ್ದು ಹೈಯರ್ ಗ್ರೇಡ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಚಿಂತನಾ- ವೇಣುಗೋಪಾಲ್ ಮತ್ತು ಶಕುಂತಳಾ ದಂಪತಿಯ ಪುತ್ರಿ, ದೀಕ್ಷಾ ಕೆ.ಎಸ್ – ಕೃಷ್ಣಪ್ಪ ಗೌಡ ಮತ್ತು ಶೋಭಾ ದಂಪತಿಯ ಪುತ್ರಿ, ಧನುಷ್ ಡಿ. – ದಾಮೋದರ್ ಆಚಾರ್ಯ ಮತ್ತು ಹರಿಣಿ ಆಚಾರ್ಯ ದಂಪತಿಗಳ ಪುತ್ರ, ಧನುಷ್ ಎನ್ – ನಾಮದೇವ ಆಚಾರ್ಯ ಮತ್ತು ಜಯಲಕ್ಷ್ಮೀ ಎನ್ ದಂಪತಿಗಳ […]
ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪುತ್ತೂರಿನ ಖ್ಯಾತ ನ್ಯಾಯವಾದಿಗಳಾದಕುಂಬ್ರ ದುರ್ಗಾಪ್ರಸಾದ್ ರೈ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಸ್ವಾಮಿವಿವೇಕಾನಂದರು ವಿದೇಶಗಳಲ್ಲಿ ಹೆಸರುಗಳಿಸಿದ ನಂತರ ರಾಮಕೃಷ್ಣ ಪರಮಹಂಸರು ಅತ್ಯಂತ ಸಂತೋಷಪಟ್ಟರು. ಅದೇ ರೀತಿ ವಿದ್ಯಾರ್ಥಿಗಳಾದ ನೀವೆಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿಸಾಧನೆ ಮಾಡಿ, ಭಾರತ ದೇಶದ ಸಂಪನ್ಮೂಲಗಳಾಗಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ| ಕೆ.ಎಂ. ಕೃಷ್ಣ ಭಟ್ ಕೊಂಕೋಡಿ, ಖಜಾಂಜಿ ಅಚ್ಚುತ ನಾಯಕ್, ಸದಸ್ಯೆ ರೂಪಲೇಖ […]
ದಿನಾಂಕ 26-01-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುಮಾರು 400 ಮಕ್ಕಳು ಶಿಸ್ತು ಬದ್ಧ ದಂಡ ವ್ಯಾಯಾಮ, ಯೋಗ ವ್ಯಾಯಾಮ ಮತ್ತು ವಂದೇ ಮಾತರಂ ಹಾಡಿಗೆ ನೃತ್ಯ ಮಾಡಿ ರಂಜಿಸಿದರು. ಶಿಕ್ಷಕರು ಸಹಕರಿಸಿದರು.
ಲೋವರ್‌ಗ್ರೇಡ್ ವಿಭಾಗದಲ್ಲಿ 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , ಮತ್ತು 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಮತ್ತು ಹೈಯರ್‌ಗ್ರೇಡ್ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ಇವರು ಮಕ್ಕಳಿಗೆ ತರಬೇತು ನೀಡಿರುತ್ತಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ವಿವೇಕಾನಂದ ಜಯಂತಿಯಂದು ನಡೆಯುವ ಕಾರ್ಯಕ್ರಮದ ಅಂಗವಾಗಿ ಹೊರಟ ವಿವೇಕ ರಥ ಜ.11 ರಂದು ಮಧ್ಯಾಹ್ನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಆಗಮಿಸಿತು. ತೆಂಕಿಲದ ಪ್ರಮುಖ ರಸ್ತೆಯಲ್ಲಿ ಆಗಮಿಸಿದ ರಥವನ್ನು ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರೋಹಿಣಾಕ್ಷರವರು ಮಾತನಾಡಿ, ಭಾರತೀಯ ಸಂಸ್ಕೃತಿಯೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರೊಂದಿಗೆ ಆರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂರರ ಸಂಭ್ರಮಾಚರಣೆ ಸಡಗರದಿಂದ ಆಚರಿಸುತ್ತಿರುವ […]
ವಿದ್ಯಾರ್ಥಿಗಳು ಉರಿಯುವ ಜ್ವಾಲೆಗಳಾಗಬೇಕು – ಸತೀಶ್‌ಕುಮಾರ್ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಹೊಳೆಯುವ ಚುಕ್ಕೆಗಳಾಗಬಾರದು. ಹೊಳೆಯಲು ಬೇಕಾದ ಜ್ವಾಲೆಯಾಗಿ ಉರಿಯುವ ಬೆಂಕಿಯಾಗಬೇಕು. ಬಳಿಕ ಅದು ಶುಭ್ರವಾಗಿ ಹೊಳೆಯಬೇಕು ಎಂದು ಸಹಾಯಕ ಕಮಿಷನರ್ ಸತೀಶ್‌ಕುಮಾರ್ ಡಿ. ಎಮ್. ಹೇಳಿದರು. ತೆಂಕಿಲ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ. 10 ರಂದು ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಹಬ್ಬ’ವಿವೇಕೋತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧೆ ಸಾಮಾನ್ಯ. ಪೋಷಕರು ಇದಕ್ಕೆ ಮಾರು ಹೋಗಬಾರದು. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಮಾತ್ರವೇ ಸೀಮಿತವಾಗಿಡಬೇಡಿ. […]
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದ ರಾಜ್ಯಮಟ್ತದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಾದ ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ -ದೀಕ್ಷಾ, ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ- ಯುಕ್ತಿಕಾ, ಹಳೆನೆರೇಂಕಿಯ ಲಕ್ಷಣ ಗೌಡ ಮತ್ತು ಹೇಮಾಲತಾರವರ ಪುತ್ರಿ ಚೈತ್ರಾ.ಪಿ, ತಿಂಗಳಾಡಿಯ ಅಬ್ದುಲ್ ರಜಾಕ್ ಮತ್ತು ಅಸ್ಮ.ಕೆ ಟಿ. ರವರ ಪುತ್ರಿ ಇವರ ಆಯಿಷತ್‌ಲ್ ಆಸಿಫಾ ಇವರು 4×100 ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜನವರಿಯಲ್ಲಿ ಮಹಾರಾಷ್ಟ್ರದ […]
’ವಿಜ್ಞಾನ ಮತ್ತು ಗಣಿತದ ಸಮನ್ವಯ ಈ ತತ್ವದ ಆಧಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಾರಾಡಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ’ಆರೋಗ್ಯ ಪೌಷ್ಠಿಕತೆ ಸ್ವಚ್ಛತೆ’ ಈ ವಿಷಯದ ಮಾದರಿ ತಯಾರಿಯಲ್ಲಿ ಅಬಕಾರಿ ಉಪನಿರೀಕ್ಷಕ ವಿಶ್ವನಾಥ ಪಿ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ .ಪಿ.ವಿ ಮತ್ತು ನಿರ್ಪಾಡಿ ನಿವಾಸಿ […]
ದಿನಾಂಕ 1-12-2015 ನೇ ಮಂಗಳವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ- 2015 ನಡೆಯಿತು. ಕಾರ್ಯಕ್ರಮವನ್ನು ಬಲೂನ್ ಹಾರಿಸುವುದರ ಮೂಲಕ ಉದ್ಫಾಟಿಸಿದ ಪುತ್ತೂರುದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸುಂದರಗೌಡ ಇವರು ಸಂಸ್ಥೆಯ ಕ್ರೀಡಾಪ್ರತಿಭೆಗಳ ಕೀರ್ತಿ ಎತ್ತರೆತ್ತರಕ್ಕೆ ಹಾರುತ್ತಿರಲಿ ಸಂಸ್ಥೆಯ ಹೆಸರನ್ನು ಬೆಳಗುವ ಕ್ರೀಡಾಪ್ರತಿಭೆಗಳಿಗೆ ಈ ಕ್ರೀಡಾಂಗಣ ಅವಕಾಶ ಮಾಡಿಕೊಡಲಿ. ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆ ಅಭಿನಂದನಾರ್ಹ ಎಂದು ನುಡಿದರು. ಕಾರ್ಯಕ್ರಮದ ಆರಂಭದಲ್ಲಿ ಬ್ಯಾಂಡ್ ಸೆಟ್, ಸ್ಕೌಟ್ಸ್‌ಗೈಡ್‌ತಂಡ, ರಾಷ್ಟ್ರ- ರಾಜ್ಯಮಟ್ಟದ ಕ್ರೀಡಾಪಟುಗಳೊಂದಿಗೆ ಶಾಲಾ ವಿದ್ಯಾರ್ಥಿಗಳ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ 2015-16 ನೇ ಸಾಲಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸಿದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶಾಲಿನಿ ಶೆಟ್ಟಿ ಇವರು ನೆರವೇರಿಸಿ ಪ್ರತಿಭೆಗಳಿಗೆ ಶುಭ ಹಾರೈಸಿ ನಿರಂತರವಾದ ಕಲಿಕೆ ವಿಕಾಸದ ಹಾದಿಯನ್ನು ತೆರೆಯುವುದರ ಮೂಲಕ ಉತ್ತಮ ಭವಿಷ್ಯ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಸ್ಪರ್ಧೆಗಳಲ್ಲಿ ನಿರಂತರ ಭಾಗವಹಿಸಿ ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಿಯದರ್ಶಿನಿ […]
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯುಕ್ತಿಕಾ 14 ರ ವಯೋಮಾನದ ವಿಭಾಗದ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ 17 ರ ವಯೋಮಾನದ ವಿಭಾಗದಲ್ಲಿ ರಕ್ಷಿತಾ ಐ – 3000 ಮೀ ನಡಿಗೆ (ಪ್ರಥಮ) ಇವರು ಅಜೇಯನಗರದ ಈಶ್ವರಗೌಡ ಮತ್ತು ದೇವಕಿಯವರ ಪುತ್ರಿ, ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್‌ಕುಮಾರ್ ಮತ್ತು ಅನುರಾಧರವರ ಪುತ್ರಿ, ಪ್ರಜ್ವಲ್- 100 ಮೀ(ದ್ವಿತೀಯ), 200 ಮೀ (ತೃತೀಯ) ಇವರು ಬಲ್ನಾಡುಜನಾರ್ಧನ ಮತ್ತು ಕುಸುಮವತಿಯವರ ಪುತ್ರ, […]
ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕು. ಕೀರ್ತಿ ಕುಡ್ವ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೂರ್ನಡ್ಕ ವಾಸುದೇವ ಕುಡ್ವ ಮತ್ತು ಶ್ರೀಮತಿ ವಂದನಾ ಕುಡ್ವ ದಂಪತಿ ಪುತ್ರಿ.
ಮಂಗಳೂರು ವಿಶ್ವವಿದ್ಯಾನಿಲಯ(ಡಾ|| ಎನ್.ಜಿ. ಪಾವಂಜೆ ಲಲಿತಾ ಕಲಾ ಪೀಠ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಗಮ್ಯ – ಕಿರಿಯ ಪ್ರಾಥಮಿಕ ವಿಭಾಗದಲ್ಲಿ (ಪ್ರಥಮ) ಇವರು ಬನ್ನೂರು ನೆಕ್ಕಿಲ ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳ ದಂಪತಿಗಳ ಪುತ್ರಿ, ಮತ್ತು ಪ್ರೌಢಶಾಲಾ ವಿಭಾಗದಲ್ಲಿ ರಾಮ್ ಪ್ರಸಾದ್ (ದ್ವಿತೀಯ) ಇವರು ಪುತ್ತೂರು ನಿವಾಸಿ ಮಲ್ಲೇಶ್ ಮತ್ತು ಅನುರಾಧ ದಂಪತಿಗಳ ಪುತ್ರ. ಇವರಿಗೆ ಶಾಲಾ ಚಿತ್ರಕಲಾ […]
ದಿನಾಂಕ 7-11-2015 ರಿಂದ 8-11-2015 ರವರೆಗೆ ಸುರತ್ಕಲ್‌ನ ರಾಮಾನುಗ್ರಹ ಸಭಾಭವನದಲ್ಲಿ ನಡೆದ 26 ನೇ ರಾಜ್ಯಮಟ್ಟದ ಇಂಟರ್ ದೋಜೊ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ 2 ಚಿನ್ನ 1 ಕಂಚು ಪಡೆದಿರುತ್ತಾನೆ. ಬ್ರೌನ್ ಬೆಲ್ಟ್ 14 ರ ವಯೋಮಾನದ ಟೀಮ್‌ಕಟಾ ಪ್ರಥಮ, ವೈಯಕ್ತಿಕ ಕುಮಿಟೆ 30-35 ಕೆ.ಜಿ ವಿಭಾಗದಲ್ಲಿ ಪ್ರಥಮ, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾನೆ. ಈತ ಇನ್ಸ್‌ಸ್ಟಿಟ್ಯೂಟ್ ಆಫ್ ಬುಡೋಕಾನ್ ಕರಾಟೆ ಎಲೈಡ್ ಆರ್ಟಸ್ ಪುತ್ತೂರಿನ ಕೋಚ್‌ಎಮ್. ಸುರೇಶ್‌ರವರಲ್ಲಿ ತರಬೇತಿ […]
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2015-16 ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ. 14 ರ ವಯೋಮಾನದ 8 ನೇತರಗತಿಯ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ: ದೀಕ್ಷಾ -80 ಮೀ ಹರ್ಡಲ್ಸ್, 400 ಮೀ ,ರಿಲೇಯಲ್ಲಿ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು […]
’ಶಾಂತಿವನಟ್ರಸ್ಟ್’ಇದರ ಆಶ್ರಯದಲ್ಲಿ ನಡೆದ ’ಜ್ಞಾನಸಿಂಧು’ ಮತ್ತು’ಜ್ಞಾನ ಬಂಧು’ ಪುಸ್ತಕಾಧಾರಿತವಾಗಿ ವಿವಿಧ ಸ್ಪರ್ಧೆಗಳನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿರುತ್ತಾರೆ. ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ- ಗೌತಮ್.ಎಸ್ (ದ್ವಿತೀಯ) ಇವರು ನೆಹರೂನಗರ ನಿವಾಸಿಯಾದ ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ, ಭಾಷಣ – ಪೃಥಾ(ದ್ವಿತೀಯ) ಇವರು ದಕ್ಷ ಕನ್‌ಸ್ಟ್ರಕ್ಷನ್‌ನ ಮಾಲಕರಾದ ರವೀಂದ್ರ ಪಿ. ಮತ್ತು ಉಷಾ ದಂಪತಿಗಳ ಪುತ್ರಿ, ಶ್ಲೋಕ ಕಂಠಪಾಠ – ಸಂಸ್ಕೃತಿ […]
2015 ನೇ ಸಾಲಿನಲ್ಲಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷಾ ಶಿಬಿರವು ದಾವಣಗೆರೆಯ ಕೊಂಡಜ್ಜಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಜರುಗಿದ್ದು ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಂಕಿತಾ ಎ.ಆರ್, ಅಂಕಿತಾ ವಿ.ಕೆ, ಅಶ್ವಿನಿ ಯು. ನಾಯಕ್, ಶ್ವೇತಾ.ಎಸ್. ಭಟ್, ವರಶ್ರೀ.ಕೆ.
ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ವಿಕಾಸ ಪ್ರೌಢಶಾಲೆ ಶಿವಮೊಗ್ಗ ಇಲ್ಲಿ ನಡೆದ ಪ್ರಾಂತೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಅಬಕಾರಿ ಉಪನೀರಿಕ್ಷಕ ವಿಶ್ವನಾಥ ಪಟ್ಟೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ ಪಿ.ವಿ. ಮತ್ತು ಬಲ್ನಾಡು ಗಿರಿಯಪ್ಪ ಬಿ. ಮತ್ತು ಲಲಿತಾ ದಂಪತಿಗಳ ಪುತ್ರ ಧನುಷ್.ಬಿ ಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಎಂದು ಶಾಲಾ […]
ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳಿಯೂರುಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವೃತ್ತ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ- 2015-16 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. ಸ್ಪರ್ಧಾ ವಿಜೇತರು: ಅಶ್ವಿನಿ.ಯು.ನಾಯಕ್ -ಕನ್ನಡ ಭಾಷಣ(ಪ್ರಥಮ), ಆಶಿಕಾ ರೈ.ಬಿ.ಜಿ- ತುಳು ಭಾಷಣ(ಪ್ರಥಮ), ಮಿಥುನ್‌ರಾಜ್- ಯೋಗಾಸನ(ದ್ವಿತೀಯ), ಅರ್ಪಿತಾ ಸಿ.ಪಿ – ಜನಪದಗೀತೆ(ದ್ವಿತೀಯ), ಕೀರ್ತಿಕುಡ್ವ – ಭಾವಗೀತೆ(ಪ್ರಥಮ), […]
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವುದು ನಾಣ್ಣುಡಿ. ವಿವೇಕಾನಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೋಶ ಓದುವುದರ ಮೂಲಕ ದೇಶ ವಿದೇಶಗಳ ಪರಿಸರ ವಿಶೇಷಗಳ ಅರಿಯುವಿಕೆಗೆ ಸುಜ್ಞಾನ -ಓದುವ ಯಜ್ಞ ಉತ್ತಮ ವೇದಿಕೆ ಕಲ್ಪಿಸಿತು. ಅಕ್ಟೋಬರ್ 8 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸುಜ್ಞಾನ – ಓದುವ ಯಜ್ಞ ನಡೆಯಿತು. ಮಕ್ಕಳಲ್ಲಿ ವಾಚನಾಸಕ್ತಿ ಬೆಳೆಸುವ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಗುವಿನ ಜ್ಞಾನದ ರಚನೆಯಲ್ಲಾಗುವ ಧನಾತ್ಮಕ ಬೆಳವಣಿಗೆಗೆ ವಾಚನಾಸಕ್ತಿ ಪ್ರಮುಖ ಸಾಧನವೆಂದು ಕೊಂಡು ಶಿಕ್ಷಕ – […]
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೆಮ್ಮಿಂಜೆ ಇದರ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗ: ಲಘು ಸಂಗೀತ -ಆಕಾಂಕ್ಷ ಪಾರ್ವತಿ (ಪ್ರಥಮ), ಚಿತ್ರಕಲೆ – ಅಗಮ್ಯ (ಪ್ರಥಮ), ಕೋಲಾಟ – ಪ್ರಾಪ್ತಿ ಮತ್ತು ತಂಡ(ಪ್ರಥಮ), ಹಿಂದಿ ಕಂಠಪಾಠ […]
ದಿನಾಂಕ 6-10-2015 ರಂದು ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು ಈಗ ನಿವೃತ್ತ ಶಿಕ್ಷಕರಾಗಿರುವ ಶ್ರೀಯುತ ಜನಾರ್ದನ ಪೂಜಾರಿಯವರಿಗೆ ಅವರ ವಸತಿಗೆ ತೆರಳಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 10 ನೇ ತರಗತಿ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ಬಳಗ ಗುರುವಂದನೆಯನ್ನು ಸಲ್ಲಿಸಿದರು. ಗುರುವಂದನೆ ಸ್ವೀಕರಿಸಿದ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ವಾರ್ತಾಪತ್ರಿಕೆ ಓದಿ ಪ್ರಚಲಿತ ವಿಷಯದ ಜ್ಞಾನ ಸಂಪನ್ನತೆಯನ್ನು ಪಡೆಯಿರಿ, ಕಲಿಕೆಯನ್ನು ವೇಳಾಪಟ್ಟಿಯೊಂದಿಗೆ ಜೋಡಿಸಿಕೊಂಡಾಗ ಕಲಿಕಾ ಫಲಿತಾಂಶ ಉತ್ತಮವಾಗುವುದು. ದುಶ್ಚಟಕ್ಕೆ ಬಲಿಯಾಗಬೇಡಿ ನಿಮ್ಮನ್ನು ಸಾಕಿ ಸಲಹಿ ನಿಮ್ಮ […]
ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್ 2015-16’ ರಲ್ಲಿ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ, ಕೃತಿ, ಶ್ವೇತಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಮಮತಾತರಬೇತಿ ನೀಡಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವರು ಆಯೋಜಿಸಿದ ತಾಲೂಕು ಮಟ್ಟದ ಮಕ್ಕಳಲ್ಲಿ ಪ್ರಾಚ್ಯ ಪ್ರಜ್ಞೆಯ ಅರಿವು ಮೂಡಿಸಲು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ವಿ.ಕೆ. ’ನಾನು ನೋಡಿದ ಐತಿಹಾಸಿಕ ಸ್ಥಳ’ ಎಂಬ ವಿಷಯದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Click on image to view the details
ರೋಟರಿಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಎಂಬ ವಿಷಯದ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾದ ರೋನಾಲ್ಡ್ ಪಿಂಟೋ ಇವರು ಹತ್ತನೇ ತರಗತಿಯ ಮಕ್ಕಳಿಗೆ ಮಾಹಿತಿ ನೀಡಿದರು. ಅವರು ಕನ್ನಡ ಮಾಧ್ಯಮ ಕಲಿಕೆಯ ಹೆಮ್ಮೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಸಾಧನೆಯನ್ನು ಮಾಡಬೇಕು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ನಂತರದ ವಿವಿಧ ಶಿಕ್ಷಣ ಅವಕಾಶಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ವಿವಿಧ ಕ್ಷೇತ್ರದ ಹುದ್ದೆಗಳ ಪರಿಚಯವನ್ನು […]
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮಕ್ಕಳು ನೀಡಿದ ನೃತ್ಯ ಕಾರ್ಯಕ್ರಮ ವೈವಿಧ್ಯ.