ವಾರ್ಷಿಕ ಕ್ರೀಡಾಕೂಟ

ದಿನಾಂಕ 1-12-2015 ನೇ ಮಂಗಳವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ- 2015 ನಡೆಯಿತು. ಕಾರ್ಯಕ್ರಮವನ್ನು ಬಲೂನ್ ಹಾರಿಸುವುದರ ಮೂಲಕ ಉದ್ಫಾಟಿಸಿದ ಪುತ್ತೂರುದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸುಂದರಗೌಡ ಇವರು ಸಂಸ್ಥೆಯ ಕ್ರೀಡಾಪ್ರತಿಭೆಗಳ ಕೀರ್ತಿ ಎತ್ತರೆತ್ತರಕ್ಕೆ ಹಾರುತ್ತಿರಲಿ ಸಂಸ್ಥೆಯ ಹೆಸರನ್ನು ಬೆಳಗುವ ಕ್ರೀಡಾಪ್ರತಿಭೆಗಳಿಗೆ ಈ ಕ್ರೀಡಾಂಗಣ ಅವಕಾಶ ಮಾಡಿಕೊಡಲಿ. ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆ ಅಭಿನಂದನಾರ್ಹ ಎಂದು ನುಡಿದರು.

sports3

sports2

sports1

ಕಾರ್ಯಕ್ರಮದ ಆರಂಭದಲ್ಲಿ ಬ್ಯಾಂಡ್ ಸೆಟ್, ಸ್ಕೌಟ್ಸ್‌ಗೈಡ್‌ತಂಡ, ರಾಷ್ಟ್ರ- ರಾಜ್ಯಮಟ್ಟದ ಕ್ರೀಡಾಪಟುಗಳೊಂದಿಗೆ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದ ವಂದನಾ ಸ್ವೀಕಾರವನ್ನು ಶಾಲಾ ಶಿಕ್ಷಕ -ರಕ್ಷಕ ಸಂಘದಅಧ್ಯಕ್ಷ ವಿನೋದ್‌ಕುಮಾರ್‌ರೈ ಬೆಟ್ಟಂಪಾಡಿಗುತ್ತು ವಹಿಸಿದ್ದರು. ಕ್ರೀಡಾಧ್ವಜಾರೋಹಣಗೈದ ರಾಷ್ಟ್ರೀಯ ಕ್ರೀಡಾಪಟು ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಮಂಗಳೂರು ವಿಶ್ವವಿದ್ಯಾಲಯದ ಬಿ.ಪಿ.ಎಡ್ ಪ್ರಶಿಕ್ಷಣಾರ್ಥಿ ಕು.ರಮ್ಯ ಸೋಲಿನಿಂದಲೇ ಗೆಲುವಿನ ಆರಂಭವಾಗುವುದು. ನಿರಂತರ ಅಭ್ಯಾಸ ಸತತ ಪ್ರಯತ್ನದಿಂದ ಗುರಿಮುಟ್ಟುವಛಲ ಕ್ರೀಡಾರ್ಥಿಗಳಲ್ಲಿರಬೇಕೆಂದು ತಿಳಿಸಿದರು. ಕ್ರೀಡಾಜ್ಯೋತಿಯನ್ನು ಸಂಸ್ಥೆಯ ಇನ್ನೋರ್ವ ಹಿರಿಯ ವಿದ್ಯಾರ್ಥಿನಿ ರಾಷ್ಟ್ರೀಯ ಕ್ರೀಡಾಪಟು ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕು. ಶ್ರದ್ಧಾ ಶೆಟ್ಟಿ ಬೆಳಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದಡಾ.ಕೃಷ್ಣ ಭಟ್.ಕೆ.ಎಂ ಪಾಠದೊಂದಿಗೆ ಆಟ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಆಡಳಿತ ಮಂಡಳಿಯ ಸದಸ್ಯರಾದ ಡಾ| ಸುಲೇಖಾ ವರದರಾಜ್, ಶೋಭಾ ಕೊಳತ್ತಾಯ, ಮುಖ್ಯಗುರುಗಳಾದ ಆಶಾಬೆಳ್ಳಾರೆ, ನಳಿನಿ ವಾಗ್ಲೆ, ಬಿ.ಎಡ್ ಪ್ರಾಂಶುಪಾಲರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಆಶಾಬೆಳ್ಳಾರೆ ಸ್ವಾಗತಿಸಿ ಶಿಕ್ಷಕಿಯರಾದ ಶ್ರೀಮತಿ ಭವ್ಯಾ ಮತ್ತು ಕು. ಅನುಷಾ ಎಸ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ಕಾರ್ಯಕ್ರಮವನ್ನು ಸಂಘಟಿಸಿದರು.

Highslide for Wordpress Plugin