ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಹಲವು ಪ್ರಶಸ್ತಿ

’ಶಾಂತಿವನಟ್ರಸ್ಟ್’ಇದರ ಆಶ್ರಯದಲ್ಲಿ ನಡೆದ ’ಜ್ಞಾನಸಿಂಧು’ ಮತ್ತು’ಜ್ಞಾನ ಬಂಧು’ ಪುಸ್ತಕಾಧಾರಿತವಾಗಿ ವಿವಿಧ ಸ್ಪರ್ಧೆಗಳನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿರುತ್ತಾರೆ.

vkm-comp

ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ- ಗೌತಮ್.ಎಸ್ (ದ್ವಿತೀಯ) ಇವರು ನೆಹರೂನಗರ ನಿವಾಸಿಯಾದ ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ, ಭಾಷಣ – ಪೃಥಾ(ದ್ವಿತೀಯ) ಇವರು ದಕ್ಷ ಕನ್‌ಸ್ಟ್ರಕ್ಷನ್‌ನ ಮಾಲಕರಾದ ರವೀಂದ್ರ ಪಿ. ಮತ್ತು ಉಷಾ ದಂಪತಿಗಳ ಪುತ್ರಿ, ಶ್ಲೋಕ ಕಂಠಪಾಠ – ಸಂಸ್ಕೃತಿ ಶಾಸ್ತ್ರೀ (ತೃತೀಯ) ಇವರು ಕೆದಿಲ ನಿವಾಸಿಯಾದ ದಿ.ಶ್ಯಾಮ ಪ್ರಸಾದ್ ಶಾಸ್ತ್ರೀ ಮತ್ತು ಸಂಧ್ಯಾಲಕ್ಷ್ಮೀ ದಂಪತಿಗಳ ಪುತ್ರಿ.

ಪ್ರೌಢ ಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ-ರಾಮ್ ಪ್ರಸಾದ್(ದ್ವಿತೀಯ) ಇವರು ಪುತ್ತೂರು ನಿವಾಸಿ ಮಲ್ಲೇಶ್ ಮತ್ತು ಅನುರಾಧ ದಂಪತಿಗಳ ಪುತ್ರ. ಶ್ಲೋಕ ಕಂಠಪಾಠ-ಅರ್ಪಿತಾ ಸಿ.ಪಿ(ದ್ವಿತೀಯ) ಇವರು ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.

Highslide for Wordpress Plugin