ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ 17 ರ ವಯೋಮಾನದ ವಿಭಾಗದಲ್ಲಿ ರಕ್ಷಿತಾ ಐ – 3000 ಮೀ ನಡಿಗೆ (ಪ್ರಥಮ) ಇವರು ಅಜೇಯನಗರದ ಈಶ್ವರಗೌಡ ಮತ್ತು ದೇವಕಿಯವರ ಪುತ್ರಿ, ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್‌ಕುಮಾರ್ ಮತ್ತು ಅನುರಾಧರವರ ಪುತ್ರಿ, ಪ್ರಜ್ವಲ್- 100 ಮೀ(ದ್ವಿತೀಯ), 200 ಮೀ (ತೃತೀಯ) ಇವರು ಬಲ್ನಾಡುಜನಾರ್ಧನ ಮತ್ತು ಕುಸುಮವತಿಯವರ ಪುತ್ರ, ನವ್ಯಶ್ರೀ – ಹರ್ಡಲ್ಸ್(ದ್ವಿತೀಯ) ಇವರು ಕಾವು ಪಿಲಿಪಂಜದ ಅಣ್ಣು ಪೂಜಾರಿ ಮತ್ತು ಲೀಲಾವತಿಯವರ ಪುತ್ರಿ, ರೇಖಾ.ಕೆ – ಉದ್ದಜಿಗಿತ (ತೃತೀಯ), ಇವರು ಕಾವು ನಾಗೇಶ್ ಮತ್ತು ಕುಸುಮರವರ ಪುತ್ರಿ, ಸಂಧ್ಯಾ -ತ್ರಿವಿಧಜಿಗಿತ (ತೃತೀಯ), ಇವರು ಸಂಪ್ಯ ಕರಿಯ ಮತ್ತು ಲಲಿತಾರವರ ಪುತ್ರಿ.

ಮತ್ತು 14 ರ ವಯೋಮಾನದ ವಿಭಾಗದಲ್ಲಿ ದೀಕ್ಷಾ -80ಮೀ ಹರ್ಡಲ್ (ದ್ವಿತೀಯ), 400 ಮೀ (ದ್ವಿತೀಯ), ರಿಲೇ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ , ಚೈತ್ರಾ.ಪಿ- ರಿಲೇ (ಪ್ರಥಮ) ಇವರು ಹಳೆನೆರೇಂಕಿಯ ಲಕ್ಷಣಗೌಡ ಮತ್ತು ಹೇಮಾಲತಾರವರ ಪುತ್ರಿ,ಯುಕ್ತಿಕಾ – ರಿಲೇ(ಪ್ರಥಮ) ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ, ಆಯಿಷತ್‌ಲ್ ಆಸಿಫಾ -ರಿಲೇ (ಪ್ರಥಮ) ಇವರು ತಿಂಗಳಾಡಿಯ ಅಬ್ದುಲ್‌ರಜಾಕ್ ಮತ್ತು ಅಸ್ಮ.ಕೆ ಟಿ. ರವರ ಪುತ್ರಿ. ಇವರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ನವಂಬರ್ 24 ಮತ್ತು 25 ರಂದು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ.

sports

Highslide for Wordpress Plugin