ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 16 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2015-16 ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ.

vkms-sports

14 ರ ವಯೋಮಾನದ 8 ನೇತರಗತಿಯ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ:

ದೀಕ್ಷಾ -80 ಮೀ ಹರ್ಡಲ್ಸ್, 400 ಮೀ ,ರಿಲೇಯಲ್ಲಿ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ, ಯುಕ್ತಿಕಾ -100 ಮೀ, 200 ಮೀ ರಿಲೇ(ಪ್ರಥಮ) ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ, ಚೈತ್ರಾ.ಪಿ- 600 ಮೀ(ಪ್ರಥಮ), 400 ಮೀ (ತೃತೀಯ), ರಿಲೇ (ಪ್ರಥಮ) ಇವರು ಹಳೆನೆರೇಂಕಿಯ ಲಕ್ಷಣ ಗೌಡ ಮತ್ತು ಹೇಮಾಲತಾರವರ ಪುತ್ರಿ, ಮೋಕ್ಷಿತಾ- ಚಕ್ರ ಎಸೆತ(ಪ್ರಥಮ) ಇವರು ಪರ್ಲಡ್ಕದ ಬೀರಮಲೆಯ ಶಿವಪ್ರಸಾದ್ ಮತ್ತು ವನಿತಾರ ಪುತ್ರಿ, ಕೀರ್ತಿ ಕುಮಾರಿ- ಎತ್ತರ ಜಿಗಿತ(ದ್ವಿತೀಯ) ಇವರು ಮೂಂಡೂರು ರವಿಕುಮಾರ್ ಮತ್ತು ರೇಣುಕಾರವರ ಪುತ್ರಿ, ಧನುಷಾ ಶೆಟ್ಟಿ- ರಿಲೇ(ಪ್ರಥಮ) ಇವರು ದರ್ಬೇತ್ತಡ್ಕದ ಉದಯ ಕುಮಾರ್ ಶೆಟ್ಟಿ ಮತ್ತು ವೈಶಾಲತಾರವರ ಪುತ್ರಿ, ಮತ್ತು ಬಾಲಕರ ವಿಭಾಗದಲ್ಲಿ ತೇಜಸ್- ಚಕ್ರ ಎಸೆತ(ದ್ವಿತೀಯ), ದೂರ ಜಿಗಿತ (ಪ್ರಥಮ), 100 ಮೀ(ತೃತೀಯ)ಇವರು ದರ್ಬೆತಡ್ಕ ಶೀನ ಮತ್ತು ಜಯಂತಿಯವರ ಪುತ್ರ.

17 ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ:
ಅನುಷಾ.ಜಿ – 100 ಮೀ, 200 ಮೀ(ಪ್ರಥಮ), ರಿಲೇ (ದ್ವಿತೀಯ) ಇವರು ಪೆಲತ್ತಿಂಜ ಗೋಪಾಲ ಸಪಲ್ಯ ಮತ್ತು ನಳಿನಿಯವರ ಪುತ್ರಿ. ರಕ್ಷಿತಾ ಐ – 3000 ಮೀ ನಡಿಗೆ )ಪ್ರಥಮ) ಇವರು ಅಜೇಯನಗರದ ಈಶ್ವರ ಗೌಡ ಮತ್ತು ದೇವಕಿಯವರ ಪುತ್ರಿ, ಜಯಶ್ರೀ.ಬಿ – ಪೋಲ್ ವಾಲ್ಟ್(ಪ್ರಥಮ), ಎತ್ತರ ಜಿಗಿತ (ತೃತೀಯ) ಇವರು ನರಿಮೊಗರು ಬಾಬುಗೌಡ ಮತ್ತು ಲಲಿತಾರವರ ಪುತ್ರಿ, ಸಂಧ್ಯಾ – ಉದ್ದಜಿಗಿತ(ದ್ವಿತೀಯ), ತ್ರಿವಿಧ ಜಿಗಿತ(ಪ್ರಥಮ), ಇವರು ಸಂಪ್ಯ ಕರಿಯ ಮತ್ತು ಲಲಿತಾರವರ ಪುತ್ರಿ. ರೇಖಾ.ಕೆ – ಉದ್ದ ಜಿಗಿತ (ಪ್ರಥಮ), 400 ಮೀ(ಪ್ರಥಮ), 800 ಮೀ(ದ್ವಿತೀಯ), ರಿಲೇ(ದ್ವಿತೀಯ) ಇವರು ಕಾವು ನಾಗೇಶ್ ಮತ್ತು ಕುಸುಮರವರ ಪುತ್ರಿ, ನವ್ಯಶ್ರೀ – ಹರ್ಡಲ್ಸ್(ದ್ವಿತೀಯ), ತ್ರಿವಿಧ ಜಿಗಿತ(ತೃತೀಯ), ರಿಲೇ (ದ್ವಿತೀಯ) ಇವರು ಕಾವು ಪಿಲಿಪಂಜದ ಅಣ್ಣು ಪೂಜಾರಿ ಮತ್ತು ಲೀಲಾವತಿಯವರ ಪುತ್ರಿ, ಪೂಜಾಲಕ್ಷ್ಮೀ – ಎತ್ತರ ಜಿಗಿತ(ಫ್ರಥಮ), ಪೋಲ್ ವಾಲ್ಟ್(ದ್ವಿತೀಯ) ಇವರು ಕಾವು ಚಾಕೋಟೆಯ ಸಂಕಪ್ಪ ಪೂಜಾರಿ ಮತ್ತು ತಾರಾ ರವರ ಪುತ್ರಿ. ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್ ಕುಮಾರ್ ಮತ್ತು ಅನುರಾಧರವರ ಪುತ್ರಿ, ಮತ್ತು ಬಾಲಕರ ವಿಭಾಗದಲ್ಲಿ ಪ್ರಜ್ವಲ್- 100 ೦ಮೀ, 200 ಮೀ (ಪ್ರಥಮ) ಇವರು ಬಲ್ನಾಡು ಜನಾರ್ಧನ ಮತ್ತು ಕುಸುಮವತಿಯವರ ಪುತ್ರ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ಕು.ಮಮತಾ ತರಬೇತಿ ನೀಡಿದ್ದರು ಎಂದು ಶಾಲಾ ಮುಖ್ಯಗುರುಗಳಾದ ಆಶಾಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Highslide for Wordpress Plugin