ಶಿಕ್ಷಣದ ಉತ್ಸಾಹವು ವ್ಯಕ್ತಿಯಲ್ಲಿ ದೈಹಿಕ , ಮಾನಸಿಕ, ಭಾವನಾತ್ಮಕ, ಸಾಮಾಜಿಕ ವಿಕಾಸಕ್ಕೆ ಪೂರಕವಾಗಿರಬೇಕು ತನ್ಮೂಲಕ ಮಕ್ಕಳಲ್ಲಿ ಔಚಿತ್ಯ ಪ್ರಜ್ಞೆ ಬೆಳೆಯಬೇಕು. ಶಾಲೆಯಲ್ಲಿ ಮಗು ಕಲಿತ ದಿನಗಳು ಸ್ಮರಣೀಯ ಎಂದು ಡಾ. ಎಚ್. ಮಾಧವ ಭಟ್ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯ 10ನೇ ತರಗತಿಯ ಮಕ್ಕಳ ದೀಪಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರು ಶಾಲೆಯೊಂದಿಗೆ ಸದಾ ನಿಮ್ಮ ಭಾವನಾತ್ಮಕ ಸಂಬಂಧವಿರಲಿ ಎಂದು ಹೇಳಿದರು.










ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣ ಗೌಡ, ಶೋಭಾ ಕೊಳತ್ತಾಯ, ರೂಪಲೇಖಾ ಪಾಣಾಜೆ ಉಪಸ್ಥಿತರಿದ್ದು ಮಕ್ಕಳನ್ನು ಹಾರೈಸಿದರು. ಈ ಸಂದರ್ಭದಲ್ಲಿ 10ನೇ ತರಗತಿಯ ಮಕ್ಕಳು 9ನೇ ತರಗತಿಯ ಮಕ್ಕಳಿಗೆ ದೀಪ ಪ್ರದಾನ ಮಾಡಿ ಶಾಲೆಗೆ ತಮ್ಮ ದೇಣಿಗೆ ನೀಡಿದರು. ಮಕ್ಕಳೇ ನಿರೂಪಿಸಿ ಪ್ರಸ್ತಾಅವನೆಗೈದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದು ಶುಭ ಹಾರೈಸಿದರು.