ದಿನಾಂಕ 7-11-2015 ರಿಂದ 8-11-2015 ರವರೆಗೆ ಸುರತ್ಕಲ್‌ನ ರಾಮಾನುಗ್ರಹ ಸಭಾಭವನದಲ್ಲಿ ನಡೆದ 26 ನೇ ರಾಜ್ಯಮಟ್ಟದ ಇಂಟರ್ ದೋಜೊ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ 2 ಚಿನ್ನ 1 ಕಂಚು ಪಡೆದಿರುತ್ತಾನೆ. ಬ್ರೌನ್ ಬೆಲ್ಟ್ 14 ರ ವಯೋಮಾನದ ಟೀಮ್‌ಕಟಾ ಪ್ರಥಮ, ವೈಯಕ್ತಿಕ ಕುಮಿಟೆ 30-35 ಕೆ.ಜಿ ವಿಭಾಗದಲ್ಲಿ ಪ್ರಥಮ, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾನೆ. ಈತ ಇನ್ಸ್‌ಸ್ಟಿಟ್ಯೂಟ್ ಆಫ್ ಬುಡೋಕಾನ್ ಕರಾಟೆ ಎಲೈಡ್ ಆರ್ಟಸ್ ಪುತ್ತೂರಿನ ಕೋಚ್‌ಎಮ್. ಸುರೇಶ್‌ರವರಲ್ಲಿ ತರಬೇತಿ ಪಡೆದಿರುತ್ತಾನೆ. ಈತ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿ ಪುತ್ರ.