ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳಿಯೂರುಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವೃತ್ತ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ- 2015-16 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಸ್ಪರ್ಧಾ ವಿಜೇತರು: ಅಶ್ವಿನಿ.ಯು.ನಾಯಕ್ -ಕನ್ನಡ ಭಾಷಣ(ಪ್ರಥಮ), ಆಶಿಕಾ ರೈ.ಬಿ.ಜಿ- ತುಳು ಭಾಷಣ(ಪ್ರಥಮ), ಮಿಥುನ್‌ರಾಜ್- ಯೋಗಾಸನ(ದ್ವಿತೀಯ), ಅರ್ಪಿತಾ ಸಿ.ಪಿ – ಜನಪದಗೀತೆ(ದ್ವಿತೀಯ), ಕೀರ್ತಿಕುಡ್ವ – ಭಾವಗೀತೆ(ಪ್ರಥಮ), ಅಮಿತಾ-ಕ್ಲೇಮಾಡಲಿಂಗ್ (ದ್ವಿತೀಯ), ಅಂಕಿತಾ.ವಿ.ಕೆ -ಆಶುಭಾಷಣ(ಪ್ರಥಮ), ಅಕ್ಷಯ್ ರೈ- ಮಿಮಿಕ್ರಿ(ತೃತೀಯ), ಅಂಕಿತಾ.ವಿ.ಕೆ- ಚರ್ಚಾಸ್ಪರ್ಧೆ (ದ್ವಿತೀಯ), ರಾಮಪ್ರಸಾದ್.ಕೆ-ಚಿತ್ರಕಲೆ(ಪ್ರಥಮ), ಅರ್ಪಿತಾ ಸಿ.ಪಿ – ಗಝಲ್ (ಪ್ರಥಮ), ಅಕ್ಷಯ್ ಕುಮಾರ್ ಮತ್ತುತಂಡ-ರಸಪ್ರಶ್ನೆ (ದ್ವಿತೀಯ), ಲಿಖಿತಾ ಮತ್ತುತಂಡ- ಕವ್ವಾಲಿ(ಪ್ರಥಮ), ವೀಕ್ಷಾ ಮತ್ತುತಂಡ- ಜನಪದ ನೃತ್ಯ(ಪ್ರಥಮ), ಯಶಸ್ವಿ ಮತ್ತು ತಂಡ-ಕೋಲಾಟ(ದ್ವಿತೀಯ) ಸ್ಥಾನ ಪಡೆದಿದ್ದಾರೆ. ಇದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತುತಂಡ ಕಾಣಿಯೂರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.