Author Archive

ಸ್ವಾತಂತ್ರ್ಯ ಯೋಧರ ಉಡುಗೆ - ತೊಡುಗೆ ಸ್ಪರ್ಧೆಯಲ್ಲಿ - ದ್ವಿತೀಯ

ಸ್ವಾತಂತ್ರ್ಯ ಯೋಧರ ಉಡುಗೆ – ತೊಡುಗೆ ಸ್ಪರ್ಧೆಯಲ್ಲಿ – ದ್ವಿತೀಯ

Saturday, August 19th, 2017

ರೋಟರಿ ಕ್ಲಬ್ ಪುತ್ತೂರು EAST ಇವರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಾತ್ರಂತ್ರ್ಯ ಯೋಧರ ಉಡುಗೆ – ತೊಡುಗೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ವಿನೀಲ್ ವಿಶ್ವಕರ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಸಂಸ್ಕಾರವು ಬೆಳೆಯಲು ಭಜನೆಯು ಸಹಕಾರಿ - ಶಶಾಂಕ್ ನೆಲ್ಲಿತ್ತಾಯ

ಉತ್ತಮ ಸಂಸ್ಕಾರವು ಬೆಳೆಯಲು ಭಜನೆಯು ಸಹಕಾರಿ – ಶಶಾಂಕ್ ನೆಲ್ಲಿತ್ತಾಯ

Saturday, August 19th, 2017

ಭಜನೆಯಿಂದ ನಮ್ಮಲ್ಲಿ ಧರ್ಮಜಾಗೃತಿಯುಂಟಾಗಿ ದೇವರಲ್ಲಿ ಭಕ್ತಿಭಾವ ಉಂಟಾಗಿ ಸುಸಂಸ್ಕಾರ ಸಂಪನ್ನರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರು ಮಕ್ಕಳನ್ನು ತಿದ್ದಿ ತೀಡಿ ಬೆಳೆಸಿದಲ್ಲಿ ಕಿರಿವಯಸ್ಸಿನಿಂದಲೇ ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ಹೀಗೆಂದವರು ಶ್ರೀ ಶಶಾಂಕ ನೆಲ್ಲಿತ್ತಾಯರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪುತ್ತೂರಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಭಜನಾ ಸ್ಪರ್ಧೆಯ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಈ ಮೇಲಿನ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಫಾಟಿಸಿ […]

ರಕ್ಷಾಬಂಧನ ಕಾರ್ಯಕ್ರಮ

ರಕ್ಷಾಬಂಧನ ಕಾರ್ಯಕ್ರಮ

Friday, August 18th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಇಲ್ಲಿ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸಲಾಯಿತು. ಪ್ರತಿ ತರಗತಿಯಲ್ಲಿ ಮಕ್ಕಳೇ ಪರಸ್ಪರ ರಕ್ಷೆ ಕಟ್ಟಿಕೊಳ್ಳುವ ಮೂಲಕ ಸಹೋದರತ್ವ ಭಾವವನ್ನು ತರಗತಿಯಿಂದಲೇ ಬೆಳೆಸಬೇಕೆಂಬ ಅರಿವನ್ನು ಮಾಡಿಕೊಂಡರು. ಶಾಲಾ ಶಿಕ್ಷಕರು ’ರಕ್ಷಾ ಬಂಧನದ’ ಮಹತ್ವದ ಬಗ್ಗೆ ತರಗತಿವಾರು ತಿಳಿಸಿದರು.

ಚಿತ್ರಕಲೆ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

ಚಿತ್ರಕಲೆ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

Thursday, August 17th, 2017

ರೋಟರಿ ಕ್ಲಬ್ ಪುತ್ತೂರು EAST ಇವರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ ಚಿತ್ರಸ್ಪರ್ಧೆಯಲ್ಲಿ 5 ರಿಂದ 7 ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖೇಶ್ ಕೃಷ್ಣ -ಪ್ರಥಮ ಮತ್ತು ಬೃಜೇಶ್ -ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಚಿತ್ರಕಲೆ-  ಶಾಲೆಗೆ ಹಲವು ಪ್ರಶಸ್ತಿ

ಚಿತ್ರಕಲೆ- ಶಾಲೆಗೆ ಹಲವು ಪ್ರಶಸ್ತಿ

Thursday, August 17th, 2017

ರೋಹಿಣಿ ಟೈಲರಿಂಗ್ ಮತ್ತು ಕ್ರಾಪ್ಟ್ ಸೆಂಟರ್ ಪುತ್ತೂರು ಲಯನ್ಸ್, ಲಯನೆಸ್ ಕ್ಲಬ್ ಪುತ್ತೂರು ಇವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 1 ರಿಂದ 5 ನೇ ತರಗತಿ ವಿಭಾಗದಲ್ಲಿ ಅಗಮ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. 6 ರಿಂದ 10 ನೇ ತರಗತಿ ವಿಭಾಗದಲ್ಲಿ ಗೌತಮ್ – ದ್ವಿತೀಯ ಸ್ಥಾನ, ಆದಿತ್ಯ ನಾರಾಯಣ – ತೃತೀಯ ಸ್ಥಾನವನ್ನು ಪಡೆದಿದ್ದಾರೆ

ಖೋ - ಖೋ - ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ಖೋ – ಖೋ – ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Wednesday, August 16th, 2017

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಶ್ರೀರಾಮ ಪ್ರೌಢ ಶಾಲೆ, ಕಲ್ಲಡ್ಕ ಇಲ್ಲಿ ನಡೆದ ಕ್ಷೇತ್ರೀಯ ಮಟ್ಟದ ಕಿಶೋರ ವರ್ಗದ ಖೋ – ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಆಗಸ್ಟ್ 26 ರಿಂದ 28 ರವರೆಗೆ ಆಂಧ್ರಪ್ರದೇಶದಲ್ಲಿ ನಡೆಯುವ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

71 ನೇ ಸ್ವಾತಂತ್ರ್ಯ ದಿನಾಚರಣೆ - ಚೀನಾ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲು ಪ್ರತಿಜ್ಞೆ

71 ನೇ ಸ್ವಾತಂತ್ರ್ಯ ದಿನಾಚರಣೆ – ಚೀನಾ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲು ಪ್ರತಿಜ್ಞೆ

Wednesday, August 16th, 2017

ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 71 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಧ್ವಜಾರೋಹಣ ಗೈದು ಮಾತನಾಡಿದ ಶ್ರೀ ರಮಾನಂದ ನಾಯಕ್‌ರವರು, ನಾವು ಇಂದು ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವಂಥ ದಿನ. ಆದ್ದರಿಂದ ಭವಿಷ್ಯತ್ತಿನ ಮಕ್ಕಳಾದ ನೀವು ನಮ್ಮ ದೇಶವನ್ನು ರಕ್ಷಿಸಲು ಪಣತೊಡಬೇಕು ಎಂದು ಕರೆಯಿತ್ತರು. ಶ್ರೀಮತಿ ವಿಜಯರಮಾನಂದರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ಚೀನಾ ವಸ್ತುಗಳನ್ನು ನಿರ್ಬಂಧಿಸುವ ಪ್ರತಿಜ್ಞೆ ಮಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವಸದಸ್ಯರು, […]

ಸೋಲಿಗೆ ಕುಗ್ಗದ ಗೆಲುವಿಗೆ ಹಿಗ್ಗದ ಸ್ಪರ್ಧಾ ಮನೋಭಾವವಿರಬೇಕು- ಐತ್ತಪ್ಪ ನಾಯ್ಕ

ಸೋಲಿಗೆ ಕುಗ್ಗದ ಗೆಲುವಿಗೆ ಹಿಗ್ಗದ ಸ್ಪರ್ಧಾ ಮನೋಭಾವವಿರಬೇಕು- ಐತ್ತಪ್ಪ ನಾಯ್ಕ

Friday, August 11th, 2017

ಸ್ಪರ್ಧೆಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ, ಸೇಲು – ಗೆಲುವುಗಳ ಅಂಜಿಕೆ ಇಲ್ಲದೆ ಆತ್ಮ ವಿಶ್ವಾಸದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ನಡೆದ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಯುತ ಐತ್ತಪ್ಪ ನಾಯ್ಕರವರು ಹೇಳಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕೋಶಾಧಿಕಾರಿಯಾದ ಶ್ರೀಯುತ ವಸಂತ ಸುವರ್ಣರವರು ಅಧ್ಯಕ್ಷ ಸ್ಥಾನವನ್ನು ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ […]

ಆಗಸ್ಟ್ 11 ರಂದು ವಿವೇಕಾನಂದದಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳು

Wednesday, August 9th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ತನ್ನ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಿನಾಂಕ 11-8-2017  ರಂದು ಶಾಲಾ ಆವರಣದಲ್ಲಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದ್ದು, ಭಾಷಣ ಮತ್ತು ಪ್ರಬಂಧ, ಕವನ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕೋಶಾಧಿಕಾರಿ ಶ್ರೀ ವಸಂತ ಸುವರ್ಣ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ […]

ಯೋಗ ಸ್ಪರ್ಧೆ-ರಾಜ್ಯಮಟ್ಟಕ್ಕೆ ಆಯ್ಕೆ 

ಯೋಗ ಸ್ಪರ್ಧೆ-ರಾಜ್ಯಮಟ್ಟಕ್ಕೆ ಆಯ್ಕೆ 

Friday, August 4th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಮೂರು ಸಮಗ್ರ ಪ್ರಶಸ್ತಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಾಲವರ್ಗದ ಬಾಲಕಿಯರ ತಂಡ, ಕಿಶೋರ ವರ್ಗದ ಬಾಲಕರ ತಂಡ ಮತ್ತು ಬಾಲಕಿಯರ ತಂಡ ಸಮಗ್ರ ಪ್ರಶಸ್ತಿ ಪಡೆದಿದ್ದು, ಹುಬ್ಬಳ್ಳಿಯಲ್ಲಿ ಜರಗುವ ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ (ಪ್ರಥಮಾ), ಸುಚಿತ (ತೃತೀಯ) ಸ್ಥಾನವನ್ನು ಪಡೆದಿರುತ್ತಾರೆ. […]

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ - ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ – ರಾಜ್ಯಮಟ್ಟಕ್ಕೆ ಆಯ್ಕೆ

Thursday, August 3rd, 2017

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಸರಸ್ವತಿ ವಿದ್ಯಾಸಂಸ್ಥೆ ಕಡಬ ಇಲ್ಲಿ ನಡೆದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕಿಶೋರ ವರ್ಗದ ಬಾಲಕಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ - ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ – ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

Monday, July 24th, 2017

ವಿದ್ಯಾಭಾರತಿ ಕರ್ನಾಟಕ ಪ್ರಾಯೋಜಿತ ಜಿಲ್ಲಾಮಟ್ಟದ ಕ್ರೀಡಾಕೂಟ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಶಾಲೆಯ ಕಿಶೋರ ವರ್ಗದ ಬಾಲಕಿಯರ ವಿಭಾಗ ಮತ್ತು ಬಾಲವರ್ಗದ ಬಾಲಕರ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು ಒಟ್ಟು 25 ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಹಿರಿಯ ವಿದ್ಯಾರ್ಥಿಗಳ ಸಭೆ

ಹಿರಿಯ ವಿದ್ಯಾರ್ಥಿಗಳ ಸಭೆ

Saturday, July 22nd, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಈ ವರ್ಷ ನಡೆಯುವ ’ಬೆಳ್ಳಿಹಬ್ಬ’ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಹೊಸ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ವಿರೂಪಾಕ್ಷ, ಉಪಾಧ್ಯಕ್ಷರಾಗಿ ಶ್ರೀಮತಿ ದೀಪಿಕಾ, ಕಾರ್ಯದರ್ಶಿಯಾಗಿ ಶ್ರೀ ವಿನೋದ್­ರವನ್ನು ಸರ್ವಾನುಮತದಿಂದ ನೇಮಿಸಲಾಯಿತು. ಈ ಹಿಂದಿನ ಅಧ್ಯಕ್ಷರಾದ ಶ್ರೀ ಅನೀಶ್ ಬಡೆಕ್ಕಿಲರವರನ್ನು ಗೌರವ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಶಾಲೆಯ ಪ್ರಗತಿಗೆ ಸಹಾಯಕರಾಗಿರುವವರು […]

ಗುರುವಂದನಾ ಕಾರ್ಯಕ್ರಮ

ಗುರುವಂದನಾ ಕಾರ್ಯಕ್ರಮ

Friday, July 14th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಬೌದ್ಧಿಕ್ ಅನ್ನು ನೀಡಲು ಮೈತ್ರೀಯಿ ಗುರುಕುಲದ ಪದ್ಮ ಮಾತಾಜಿಯವರು ಆಗಮಿಸಿದರು. ಇವರು ಕಥೆಯ ಮುಖಾಂತರ ಮಕ್ಕಳಿಗೆ ಗುರುಗಳ ಮಹತ್ವವನ್ನು ಸಾರುತ್ತಾ ನಮ್ಮ ಜೀವನದಲ್ಲಿ ಗುರುಗಳ ಪ್ರಾಮುಖ್ಯತೆಯನ್ನು ಮನಮುಟ್ಟುವಂತೆ ತಿಳಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ಮಾತಾಜಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ದೇಶಭಕ್ತಿಗೀತೆಯನ್ನು ಹಾಡಿದರು. ಶ್ರೀಮತಿ ಗೀತಾ ಮಾತಾಜಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶ್ರೀಲತಾ ಮಾತಾಜಿಯವರು ಧನ್ಯವಾದ ಸಮರ್ಪಿಸಿದರು.

ಗುರುಪೂಜಾ ಕಾರ್ಯಕ್ರಮ

ಗುರುಪೂಜಾ ಕಾರ್ಯಕ್ರಮ

Friday, July 14th, 2017

ವಿದ್ಯಾರ್ಥಿ ಜೀವನದಲ್ಲಿ ಸಮರ್ಪಣಾ ಭಾವ ಬಂದಾಗ ದೇಶದ ಪ್ರಗತಿ ಸಾಧ್ಯ ಗುರುವೇದವ್ಯಾಸರ ಗುರುತ್ವ ನೆಲೆ ಸರ್ವವ್ಯಾಪ್ತಿಯಾದುದು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮಾತನಾಡುತ್ತಾ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ನುಡಿದರು. ಗುರುಪೂಜಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಚುತ ನಾಯಕ್, ಸಂಚಾಲಕರಾದ ಶ್ರೀ ವಿನೋದ್ ಕುಮಾರ್ ರೈಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವುರವರು ನೆರವೇರಿಸಿದರು.

ಗುರುವಂದನೆ

ಗುರುವಂದನೆ

Friday, July 14th, 2017

ಗುರುಪೂರ್ಣಿಮೆಯ ಪ್ರಯುಕ್ತ ಕಾಡುಮನೆಯಲ್ಲಿ ಇರುವ ನಿವೃತ್ತ ಶಿಕ್ಷಕರಾದ ಶ್ರೀ ಯಶವಂತ ಬೇಕಲ್ ರವರ ಮನೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಭೇಟಿಯಿತ್ತು ಅವರನ್ನು ಅಭಿನಂದಿಸಿ ಅವರ ಆಶೀರ್ವಾದ ಪಡೆದರು. ಕಾರ್ಯಕ್ರಮದಿಂದ ಸಂತೋಷರಾದ ಯಶವಂತ ಬೇಕಲ್ ರವರು ಗುರುಪೂರ್ಣಿಮೆಯ ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾ ಹಿಂದಿನ ಗುರುಕುಲ ಶಿಕ್ಷಣದ ಶ್ರೇಷ್ಟತೆ ಹಾಗೂ ಈಗಿನ ಮೆಕಾಲೆ ಶಿಕ್ಷಣ ಪದ್ಧತಿಯ ಇತಿಮಿತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಅಲ್ಲದೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ಸನಾತನ […]

ಸಮಾಜಮುಖಿಯಾಗಿ ಬಾಳೋಣ -ಕಮಲಾಕ್ಷಿ ಟೀಚರ್

ಸಮಾಜಮುಖಿಯಾಗಿ ಬಾಳೋಣ -ಕಮಲಾಕ್ಷಿ ಟೀಚರ್

Wednesday, July 12th, 2017

ಗುರು ಪೂರ್ಣಿಮೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕರ್ಕುಂಜ ನಿವಾಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿಯವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಅವರಿಂದ ಆಶೀರ್ವಾದವನ್ನು ಪಡೆದರು. ಶಾಲೆಯ ಮಕ್ಕಳಿಂದ ವಿಶಿಷ್ಟ ರೀತಿಯ ಗುರುಪೂರ್ಣಿಮೆ ಆಚರಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ ಇವರು ನಾವು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳೋಣ. ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಬಾಳೋಣ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಮಲಾಕ್ಷಿಟೀಚರ್‌ರವರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶ್ರೀಮತಿ ವೀಣಾ […]

ಗುರುಪೂರ್ಣಿಮೆ 2017

ಗುರುಪೂರ್ಣಿಮೆ 2017

Tuesday, July 11th, 2017

ಗುರುಗಳು ತಾಯಿಗೆ ಸಮಾನ. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಸಾಗಿಸುವವನೇ ನಿಜವಾದ ಗುರು. ಇಂತಹ ಗುರುಗಳನ್ನು ಸದಾಸ್ಮರಿಸಿ, ಆರಾಧಿಸಬೇಕು ಎಂಬುದಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಗುರುಪೂರ್ಣಿಮೆ’ ಆಚರಣೆಯ ಕುರಿತಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ಶ್ರೀಯುತ ರಘುರಾಜ್ ಉಬರಡ್ಕ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು ಗುರು-ಶಿಷ್ಯ ಪರಂಪರೆಯನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾ ಮಾತಾಜಿ ಉಪಸ್ಥಿತರಿದ್ದರು. ಶ್ರೀಮತಿ ನಮಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಲು ಪ್ರಾರ್ಥಿಸಿದರು. […]

2017-18 ನೇ ಸಾಲಿನ ರಕ್ಷಕ - ಶಿಕ್ಷಕ ಸಂಘಕ್ಕೆ ಆಯ್ಕೆ

2017-18 ನೇ ಸಾಲಿನ ರಕ್ಷಕ – ಶಿಕ್ಷಕ ಸಂಘಕ್ಕೆ ಆಯ್ಕೆ

Wednesday, July 5th, 2017

2017-18 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ಸತ್ಯಪ್ರಸಾದ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ದಿವ್ಯಲಕ್ಷ್ಮೀ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಜಯಂತ್ ಹಾಗೂ ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಶಶಿಕಲಾ ಆಯ್ಕೆಯಾದರು. ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರ ಮತ್ತು ಆಯ್ದ ಪೋಷಕರ ಹಾಗೂ ನಿಕಟಪೂರ್ವ ಶಿಕ್ಷಕ -ರಕ್ಷಕ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಮಾತೃ ಭಾಷೆಯ ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳು ಸತ್ಪ್ರಜೆಗಳಾಗುವರು - ಶ್ರೀ ಅಚ್ಯುತ ನಾಯಕ್

ಮಾತೃ ಭಾಷೆಯ ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳು ಸತ್ಪ್ರಜೆಗಳಾಗುವರು – ಶ್ರೀ ಅಚ್ಯುತ ನಾಯಕ್

Wednesday, July 5th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ 8 ಮತ್ತು 9 ನೇ ತರಗತಿಯ ಮಕ್ಕಳ ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ್ ನಾಯಕ್ ರವರು ಮಾತೃಭಾಷೆಯ  ಶಿಕ್ಷಣದ ಅಗತ್ಯ ಹಾಗೂ ಪ್ರಯೋಜನಗಳನ್ನು ವಿವರಿಸುತ್ತಾ ಈ ಮೇಲಿನ ಮಾತುಗಳನ್ನು ಹೇಳಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ರಮೇಶ್ಚಂದ್ರ ಮತ್ತು ಶಾಲಾ ಮುಖ್ಯಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಶಾಲಾ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಹಾಗೂ ಆಟೋಟ ವಿಷಯಗಳ ಬಗ್ಗೆ […]

ವೃಕ್ಷೋ ರಕ್ಷತಿ ರಕ್ಷಿತಃ - ಡಾ. ಸುರೇಶ್ ಪುತ್ತೂರಾಯ

ವೃಕ್ಷೋ ರಕ್ಷತಿ ರಕ್ಷಿತಃ – ಡಾ. ಸುರೇಶ್ ಪುತ್ತೂರಾಯ

Monday, July 3rd, 2017

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಪರಿಸರದಲ್ಲಿ ಶುದ್ಧ ನೀರು, ಗಾಳಿ, ಮಣ್ಣಿನ ಅವಶ್ಯಕತೆ ಅರಿತವರಾಗಿದ್ದು ಗಿಡ ಮರಗಳನ್ನು ಆಯಾ ರಾಶಿ, ನಕ್ಷತ್ರಗಳಿಗೆ ಸಂಬಂಧ ಕಲ್ಪಿಸಿ ಆ ನೆಪದಲ್ಲಿ ಪ್ರಕೃತಿ ಆರಾಧನೆ ಮಾಡುತ್ತಿದ್ದರು. ಆದರೆ ಈಗ ಅಭಿವೃದ್ಧಿಯ ಹೆಸರಿನಲ್ಲಿ ಮಾನವ ನಡೆಸುವ ಚಟುವಟಿಕೆಗಳಿಂದ ಶೇಕಡಾ 73 ರಷ್ಟು ಇರಬೇಕಾದ ಕಾಡಿನ ಪ್ರಮಾಣವು ಶೇಕಡಾ 21 ಕ್ಕೆ ಇಳಿದಿದೆ. ಆದುದರಿಂದ ಪರಿಸರದ ಉಳಿವಿಗಾಗಿ ಭಾವೀ ಪ್ರಜೆಗಳಾದ ಮಕ್ಕಳಿಗೆ ಯಾವುದೇ ಗಿಡವಾದರೂ ಸರಿ ನೆಟ್ಟು ಬೆಳೆಸುವ ತಿಳಿವಳಿಕೆ ನೀಡಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸೋಣ […]

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ

Friday, June 30th, 2017

ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ದಾಖಲೆಗಳನ್ನು ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಯು ನಡೆಸಿದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ದಕ್ಷಿಣಕನ್ನಡ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್, ಮುಖೇಶ್ ಕೃಷ್ಣ, ಅನಘಾ ಭಟ್, ಪೂಜಾ ಬಿ.ಎ ಮತ್ತು ಅಮಿತಾ ಎಸ್‌.ಎನ್. ಆಯ್ಕೆಯಾಗಿದ್ದು ಇವರಲ್ಲಿ 9 ನೇ ತರಗತಿ ವಿದ್ಯಾರ್ಥಿ ಗೌತಮ್‌ ಎಸ್. ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. […]

10ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

10ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Thursday, June 29th, 2017

ದಿನಾಂಕ 29-6-2017 ರಂದು ಅಪರಾಹ್ನ 2.30 ಕ್ಕೆ 10 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಕರೆಯಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸುತ್ತಾ ಮುಂದಿನ ಪೀಳಿಗೆಗೆ ಅದನ್ನು ವರ್ಗಾಯಿಸುವ ಮಹತ್ತರ ಜವಾಬ್ದಾರಿ ಇಂದಿನ ಪೋಷಕರ ಮೇಲಿದೆ ಎಂದು ಹೇಳಿದರು. ಅಲ್ಲದೆ ಅದೇ ಸಂಸ್ಕೃತಿಯ ಕಾರಣಕ್ಕೆ ಈ ಸಂಸ್ಥೆ ಸ್ಥಾಪನೆಯಾದುದು ಎಂಬುವುದನ್ನು ಔಚಿತ್ಯಪೂರ್ಣವಾಗಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಪಠ್ಯ ಹಾಗೂ […]

5 ಮತ್ತು 6 ನೇ ವಿದ್ಯಾರ್ಥಿಗಳ ಪೋಷಕರ ಸಭೆ

5 ಮತ್ತು 6 ನೇ ವಿದ್ಯಾರ್ಥಿಗಳ ಪೋಷಕರ ಸಭೆ

Thursday, June 29th, 2017

2017-18 ನೇ ಸಾಲಿನ 5 ನೇ ತರಗತಿ ಹಾಗೂ 6 ನೇ ತರಗತಿ ಮಕ್ಕಳ ಪೋಷಕರ ಸಭೆಯನ್ನು ದಿನಾಂಕ 29-06-2017 ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯು ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಮೊದಲಿಗೆ ಶಿಕ್ಷಕರು ಮತ್ತು ಪೋಷಕರು ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡರು. ಶಾಲೆ ಪಠ್ಯ ಹಾಗೂ ಪಠ್ಯಪೂರಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಮಕ್ಕಳನ್ನು ಓರ್ವ ಸತ್ಪ್ರಜೆಯಾಗಿ ಬೆಳೆಸುವಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಎನ್ನುತ್ತಾ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ […]

3 ಮತ್ತು 4ನೇ ತರಗತಿಯ ಪೋಷಕರ ಸಭೆ

Wednesday, June 28th, 2017

3 ಮತ್ತು 4 ನೇ ತರಗತಿಯ ಪೋಷಕರ ಸಭೆಯನ್ನು ದಿನಾಂಕ 28-6-2017 ರ  ಬುಧವಾರದಂದು ಪೋಷಕರ ಸಭೆಯನ್ನು ನಡೆಸಲಾಯಿತು. ಪ್ರೌಢಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆಯವರು ಮಾತನಾಡಿ ಮಾತೃಭಾಷಾ ಶಿಕ್ಷಣದ ಜೊತೆಗೆ ಪೋಷಕರ ಮಾರ್ಗದರ್ಶನದಿಂದ ಮಕ್ಕಳು ಉತ್ತಮ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು. ಅಂತೆಯೇ ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತನಾಯಕ್ ರವರು ಮಾತನಾಡಿ ನಮ್ಮ ದೇಶದ ಸಂಸ್ಕೃತಿಯ ಜೊತೆಗೆ ಸಂಸ್ಕಾರಯುತವಾದ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕೆಂದು ಹೆಳಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ರಮೇಶ್ಚಂದ್ರ ನಾಯಕ್ ಉಪಸ್ಥಿತರಿದ್ದರು. ವೀಣಾಸರಸ್ವತಿ […]

ಒಳಮೊಗ್ರು ಗ್ರಾಮದಲ್ಲಿ ಕೋಟಿ ವೃಕ್ಷ ಆಂದೋಲನ

ಒಳಮೊಗ್ರು ಗ್ರಾಮದಲ್ಲಿ ಕೋಟಿ ವೃಕ್ಷ ಆಂದೋಲನ

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಇವರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ನೇತೃತ್ವದಲ್ಲಿ ಒಳಮೊಗ್ರು ಗ್ರಾಮದ ಪರ್ಪುಂಜ ರುದ್ರಭೂಮಿಯ ಆವರಣದಲ್ಲಿ ಕೋಟಿವೃಕ್ಷ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಳಮೊಗ್ರು ಗ್ರಾಮಕ್ಕೆ ತೆರಳಿ ಆಂದೋಲನದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಂಡು ಮುಂಂದಿನ ಜನಾಂಗಕ್ಕೆ ಸಂಪದ್ಬರಿತ ಭವ್ಯ ಭಾರತವನ್ನು ನೀಡುವಲ್ಲಿ ಇಂದಿನ ವಿದ್ಯಾರ್ಥಿಗಳ ಪಾಲುದಾರಿಕೆ ಮಹತ್ವದ್ದು ಎಂಬುದಾಗಿ ಜಿಲ್ಲಾ […]

ಕೆದಂಬಾಡಿ ಗ್ರಾಮ ಪಂಚಾಯತ್ - ಕೋಟಿವೃಕ್ಷ ಆಂದೋಲನ

ಕೆದಂಬಾಡಿ ಗ್ರಾಮ ಪಂಚಾಯತ್ – ಕೋಟಿವೃಕ್ಷ ಆಂದೋಲನ

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ಕೆದಂಬಾಡಿ ಬಿ.ಜೆ.ಪಿ. ಪಂಚಾಯತ್ ಸಮಿತಿ ಇದರ ಸಹಯೋಗದಲ್ಲಿ ಕೋಟಿವೃಕ್ಷ ಆಂದೋಲನ ಕಾರ್ಯಕ್ರಮ ಕೆದಂಬಾಡಿ ಶ್ರಿ ರಾಮ ಮಂದಿರ ಮತ್ತು ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು. ನಾವಿರುವುದು ಪ್ರಕೃತಿ ಮಡಿಲಲ್ಲಿ – ಕಡಮಜಲು ಸುಭಾಷ್‌ ರೈ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಫಾಟಿಸಿದ ಪ್ರಗತಿಪರಕೃಷಿಕರು ಹಾಗೂ ’ಪರಿಸರ ಮಿತ್ರ’ ಪ್ರಶಸ್ತಿ ವಿಜೇತರಾದ ಕಡಮಜಲು ಸುಭಾಷ್ ರೈಯವರು ಮಾತನಾಡಿ’ನಾವಿರುವುದು ಪ್ರಕೃತಿ ಮಡಿಲಲ್ಲಿ’. […]

ಕೋಟಿವೃಕ್ಷ ಆಂದೋಲನ - ಅರಿಯಡ್ಕ ಗ್ರಾಮ ಪಂಚಾಯತ್

ಕೋಟಿವೃಕ್ಷ ಆಂದೋಲನ – ಅರಿಯಡ್ಕ ಗ್ರಾಮ ಪಂಚಾಯತ್

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ಅರಿಯಡ್ಕ ಗ್ರಾಮಪಂಚಾಯತ್ ಸಹಯೋಗದಲ್ಲಿ ಕೋಟಿವೃಕ್ಷ ಆಂದೋಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಫಾಟನೆಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮುಕುಂದ ಶಾಂತಿವನ ನೆರವೇರಿಸಿ ಮರಗಿಡಗಳು ಜೀವದ ಉಸಿರು ಅದನ್ನು ಕಾರ್ಯಕ್ರಮವಾಗಿ ಆಯೋಜಿಸಿ ಭವಿಷ್ಯತ್ತಿಗಾಗಿ ಒಳಿತನ್ನು ಬಯಸುವ ನರೇಂದ್ರ ಮೋದಿಯವರ ಯೋಜನೆ ಉತ್ತಮವಾದದ್ದು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್‌ ಕೋಟಿವೃಕ್ಷ ಆಂದೋಲನದ ಮೂಲಕ […]

ಕುರಿಯ ಗ್ರಾಮದಲ್ಲಿ ಕೋಟಿವೃಕ್ಷ ಆಂದೋಲನ

ಕುರಿಯ ಗ್ರಾಮದಲ್ಲಿ ಕೋಟಿವೃಕ್ಷ ಆಂದೋಲನ

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಇವರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳ ನೇತೃತ್ವದಲ್ಲಿ ಕುರಿಯ ಗ್ರಾಮದಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಕುರಿಯ ಗ್ರಾಮಕ್ಕೆ ತೆರಳಿ ಆಂದೋಲನದಲ್ಲಿ ಭಾಗವಹಿಸಿದರು. ಎ.ಪಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೂಡಿಯಾರ್ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ ಇವರ ಮುಂದಾಳ್ವತದಲ್ಲಿ ಕಾರ್ಯಕ್ರಮ ನಡೆಯಿತು. ಕುರಿಯ ದ.ಕ.ಜಿ.ಪಂಉನ್ನತ ಹಿರಿಯ ಪ್ರಾಥಮಿಕ ಶಾಲೆಯ […]

ವಿವಿಧ ಗ್ರಾಮಗಳಲ್ಲಿ ಕೋಟಿವೃಕ್ಷ ಆಂದೋಲನ

ವಿವಿಧ ಗ್ರಾಮಗಳಲ್ಲಿ ಕೋಟಿವೃಕ್ಷ ಆಂದೋಲನ

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ, ಸಮರ್ಥ ಭಾರತ ಪುತ್ತೂರು ಘಟಕದ ಸಂಯುಕ್ತಾಶ್ರಯದಲ್ಲಿ ಕೋಟಿವೃಕ್ಷ ಆಂದೋಲನ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೂನ್ 23 ರಂದು ಆಯೋಜಿಸಲಾಗಿದ್ದು ಆ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಅರಿಯಡ್ಕ , ಒಳಮೊಗ್ರು, ಕೆದಂಬಾಡಿ ಮತ್ತು ಕುರಿಯದಲ್ಲಿ ಸಸಿ ನೆಡಲು ತಯಾರಾಗಿ ವೃಕ್ಷಆಂದೋಲನದ ಘೋಷಣೆಗಳೊಂದಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡಗಳು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಶಿಕ್ಷಕರೊಂದಿಗೆ ಶಾಲಾ ಆವರಣದಲ್ಲಿ ಸೇರಿದ ಕ್ಷಣ.

ಸತತ ಪರಿಶ್ರಮದಿಂದಲೇ ನೃತ್ಯದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ : ಅಚ್ಯುತ ನಾಯಕ್

ಸತತ ಪರಿಶ್ರಮದಿಂದಲೇ ನೃತ್ಯದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ : ಅಚ್ಯುತ ನಾಯಕ್

Thursday, June 22nd, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀ ರಾಜೇಶ್ ವಿಟ್ಲ ನೇತೃತ್ವದಲ್ಲಿ ನಡೆಯಲಿರುವ ನೃತ್ಯತರಗತಿಯು ದಿನಾಂಕ 19-6-2017 ರಂದು ಶಾಲಾ ವಠಾರದಲ್ಲಿ ಉದ್ಫಾಟನೆಗೊಂಡಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯ್ಕ್ರು ವಹಿಸಿ, ನೃತ್ಯ ಎಂಬುದು ತಪಸ್ಸು ಇದ್ದ ಹಾಗೆ ಸತತ ಪ್ರರಿಶ್ರಮವಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹೆಳಿದರು. ನೃತ್ಯ ಗುರು ರಾಜೇಶ್ ವಿಟ್ಲ ಮಾತನಾಡಿ ಮಕ್ಕಳಿಗೆ ಸಮಯಪಾಲನೆ ಮಾಡುವ ಜೊತೆಗೆ ಶ್ರದ್ಧೆಯಿಂದ ಕಲಿಯುವಂತೆ ಕಿವಿಮಾತು ಹೇಳಿದರು. ನೃತ್ಯ ತರಗತಿಗಳು ಪ್ರತೀ […]

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Wednesday, June 21st, 2017

ನಮ್ಮ ಶಾಲೆಯಲ್ಲಿ ಯೋಗಾಸನ ಅಭ್ಯಾಸವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ, ಯೋಗಾಭ್ಯಾಸವನ್ನು ಕಲಿಕಾ ಅವಧಿಯಲ್ಲಿ ಜೋಡಿಸಿರುವುದು ವಿದ್ಯಾರ್ಥಿ ಜೀವನದಲ್ಲಿ ನಮಗೆ ಏಕಾಗ್ರತೆ ಮತ್ತು ಶಿಸ್ತನ್ನು ಅಳವಡಿಸಲು ಸಹಕಾರಿಯಾಗಿತ್ತು ಎಂದು ವಿವೇಕಾನಂದ ಕನ್ನಡ ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಮಾನಸ ಇವರು ನುಡಿದರು. ಪ್ರಸ್ತುತ ಚಿಕಿತ್ಸಾತ್ಮಕ ಯೋಗದಲ್ಲಿ ಎಂ.ಎಸ್ಸಿ ಪದವಿ ಪಡೆದು ಮಂಗಳೂರಿನಲ್ಲಿ ಚಿಕಿತ್ಸಾತ್ಮಕ ಯೋಗ ತರಗತಿಗಳನ್ನು ನಡೆಸುತ್ತಿರುವ ಇವರು ನೆನಪಿನ ಶಕ್ತಿಗೆ ಸರಳ ಪ್ರಾಣಾಯಾಮ ಹೇಗೆ ಸಹಕಾರಿ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು. ಮಂಜುನಾಥೇಶ್ವರ ಯೋಗ ಮತ್ತು […]

ಉನ್ನತ ಸಾಧನೆಗೆ ಮಾತೃ ಭಾಷೆ ಮಾಧ್ಯಮವು ಉತ್ತಮ ಸಾಧನ - ಹರಿಣಿ ಪುತ್ತೂರಾಯ

ಉನ್ನತ ಸಾಧನೆಗೆ ಮಾತೃ ಭಾಷೆ ಮಾಧ್ಯಮವು ಉತ್ತಮ ಸಾಧನ – ಹರಿಣಿ ಪುತ್ತೂರಾಯ

Friday, June 16th, 2017

’ಸಮಾಜದ ಹಿರಿಯರು ಉನ್ನತ ಉದ್ಯೋಗವನ್ನು ಪಡೆದು ಹೆಚ್ಚಿನ ಸಾಧನೆಗೈಯಲು ಅವರಿಗೆ ಕನ್ನಡ ಮಾಧ್ಯಮ ಶಿಕ್ಷಣವೇ ತಳಹದಿಯಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರು ಇಂದು ಜಗತ್ತಿನ ನಾನಾ ಸ್ಥಳಗಳಲ್ಲಿ ಮಿಂಚುತ್ತಿದ್ದಾರೆ. ಮಾತೃ ಸಂಸ್ಕೃತಿಯ ಶಿಕ್ಷಣ ಪಡೆದ ನೀವು ಧನ್ಯರು. ಇದರ ಋಣವನ್ನು ಎಂದೂ ಮರೆಯಬಾರದು ಹಾಗೂ ಶಾಲೆಯ ಉನ್ನತಿಗಾಗಿ ಸಹಕರಿಸಬೇಕು’ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ವಿದ್ಯಾಲಯದ ಉಪನ್ಯಾಸಕಿ ಹರಿಣಿ ಪುತ್ತೂರಾಯ ನುಡಿದರು. […]

ಯಕ್ಷಗಾನ ನಾಟ್ಯ ತರಬೇತಿ ಆರಂಭ

ಯಕ್ಷಗಾನ ನಾಟ್ಯ ತರಬೇತಿ ಆರಂಭ

Wednesday, June 14th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 9-6-2017 ರಂದು 2017-18 ನೇ ಸಾಲಿನ ಯಕ್ಷಗಾನ ನಾಟ್ಯ ತರಗತಿಯು ಉದ್ಫಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್ ರವರು ದೀಪ ಬೆಳಗಿಸುವುದರ ಮೂಲಕ ನಾಟ್ಯ ತರಗತಿಗೆ ಚಾಲನೆ ನೀಡಿ ಶುಭ ಹಾರೈಸಿದರು. ನಾಟ್ಯಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರು ಮತನಾಡಿ ಕರಾವಳಿಯ ಗಂಡುಕಲೆಯನ್ನು ಉಳಿಸಿ ಬೆಳೆಸಿ ಜೀವಂತವಾಗಿರಿಸಿ ಎಂದು ಕರೆಯಿತ್ತರು. ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿಯ ನಿರ್ದೇಶಕರಾದ […]

ಬಾಲಕರ್ಮಿಕ ಪದ್ದತಿ ತಡೆಯಲು ಕಾನೂನು ಮಾಹಿತಿ

ಬಾಲಕರ್ಮಿಕ ಪದ್ದತಿ ತಡೆಯಲು ಕಾನೂನು ಮಾಹಿತಿ

Wednesday, June 14th, 2017

ಓದುವ ವಯಸ್ಸಿನಲ್ಲಿರುವ ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸುವುದು ಶೋಷಣೆ ಮಾಡಿದಂತೆ. ಅದಕ್ಕೆ ಕಾನೂನಿನಲ್ಲಿ ಶಿಕ್ಷೆಯೂ ಇದೆ. ಅದಕ್ಕಾಗಿ ಮಕ್ಕಳೂ ಕಾನೂನು ಜ್ಞಾನ ಅರಿತುಕೊಳ್ಳಬೇಕು ಎಂದು ಪುತ್ತೂರು ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಎಸಿಜೆಎಂ ಸಿ.ಕೆ ಬಸವರಾಜ್ ರವರು ಹೇಳಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ ಜೂನ್ 12 ರಂದು ನಡೆದ, ಅಂತರ್ ರಾಷ್ಟ್ರೀಯ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಕುರಿತು ಕಾನೂನು ಮಾಹಿತಿ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು […]

ಶಾಲಾ ಮಂತ್ರಿಮಂಡಲ

ಶಾಲಾ ಮಂತ್ರಿಮಂಡಲ

Tuesday, June 13th, 2017

ಪ್ರೌಢಶಾಲಾ ನಾಯಕಿ – ಸಾತ್ವಿಕ್ ಶರ್ಮ ಬಿ.ಎಸ್. ಪ್ರೌಢಶಾಲಾ ಉಪನಾಯಕ – ಆಶ್ರಯ್ ಪಿ.ವಿ. ಪ್ರಾಥಮಿಕ ಶಾಲಾ ನಾಯಕ – ಆದಿತ್ಯ ನಾರಾಯಣ ಪಿ.ಎಸ್. ಪ್ರಾಥಮಿಕ ಶಾಲಾ ಉಪನಾಯಕ – ಮುಖೇಶ್ ಕೃಷ್ಣ ಪ್ರತಿಪಕ್ಷ ನಾಯಕ – ಮೋಹಿತ್ ರಾಜ್ ಪ್ರತಿಪಕ್ಷ ನಾಯಕಿ – ಅಮಿತಾ ಎಸ್. ಎನ್. ಸ್ಪೀಕರ್ – ಮೋಕ್ಷಿತಾ ಸಾಂಸ್ಕೃತಿಕ ಮಂತ್ರಿ – ಭವಿತ ವಿದ್ಯಾಮಂತ್ರಿ – ತೃಷಾ ಭಟ್ ನೀರಾವರಿ ಮಂತ್ರಿ – ಕಾರ್ತಿಕ್ ಗೃಹ ಮಂತ್ರಿ – ಧನುಷ್ ಕ್ರೀಡಾಮಂತ್ರಿ […]

ಜೀವ ವೈವಿಧ್ಯತೆ ಕಾಪಾಡಲು ಪರಿಸರ ಸಂರಕ್ಷಣೆ ಅಗತ್ಯ - ಜೆಡ್ಡು ಗಣಪತಿ ಭಟ್

ಜೀವ ವೈವಿಧ್ಯತೆ ಕಾಪಾಡಲು ಪರಿಸರ ಸಂರಕ್ಷಣೆ ಅಗತ್ಯ – ಜೆಡ್ಡು ಗಣಪತಿ ಭಟ್

Tuesday, June 13th, 2017

ಹೆಚ್ಚು ವಿಧದ ಸಸ್ಯ ಸಂಕುಲಗಳನ್ನು ಬೆಳಿಸಿ ಪೋಷಿಸಿದಾಗ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಗೆ ಅವಕಾಶ ಉಂಟಾಗುವುದರಿಂದ ನಿಸರ್ಗ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗುತ್ತದೆ. ನಾವಿರುವ ಪರಿಸರವು’ಶೂನ್ಯಕಾರ್ಬನ್ ಎನಿಸಿಕೊಂಡು’ ಸ್ವಸ್ಥ ಸುಂದರ ತಾಣವಾಗಿ ಬದಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಿರಿಯರು ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಳ್ಳಲು ’ವಿಶ್ವ ಪರಿಸರ ದಿನ’ದಂತಹ ಆಚರಣೆಗಳು ಸಹಕಾರಿಎಂದು ಆರ್ಯುವೇದ ತಜ್ಞ ಹಾಗೂ ಪರಿಸರ ಪ್ರೇಮಿಯು ಆಗಿರುವ ಜೆಡ್ಡು ಗಣಪತಿ ಭಟ್‌ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದ ’ವೃತಿಕಾ’ ವಿಜ್ಞಾನ ಸಂಘವು ಹಮ್ಮಿಕೊಂಡ ವಿಶ್ವ ಪರಿಸರ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Friday, June 9th, 2017

ವಿವೇಕಾನಂದಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2017-18 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಸಾತ್ವಿಕ್ ಶರ್ಮ ಬಿ.ಎಸ್ ಮತ್ತು ಉಪನಾಯಕನಾಗಿ ಆಶ್ರಯ್ ಪಿ.ವಿ. ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಆದಿತ್ಯ ನಾರಾಯಣ ಪಿ.ಎಸ್. ಮತ್ತು ಉಪನಾಯಕನಾಗಿ ಮುಖೇಶ್ ಕೃಷ್ಣ ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ವಿಶ್ವನಾಥ ಮುಡೂರು ವಹಿಸಿದರು ಎಲ್ಲಾ ಶಿಕ್ಷಕರು ಸಹಕರಿಸಿದರು.

ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ

ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ

Wednesday, June 7th, 2017

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 7-6-2017 ರಂದು ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ ದೇಶದ ಹೆಮ್ಮೆಯ ಪ್ರತೀಕ, ಭವ್ಯ ಭಾರತದ ದಿವ್ಯ ಪುರುಷನಾದ ಶಿವಾಜಿಯವರ ಪಟ್ಟಾಭಿಷೇಕ ದಿನಾಚರಣೆಯ ನೆನಪಿಗಾಗಿ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಮತ್ತು ಅವರು ನೀಡಿದ ಆದರ್ಶಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ನುಡಿದರು. ಶಿಕ್ಷಕಿ ಕು. ಲೀಲಾವತಿ ಹಂದ್ರಟ್ಟ ಮಾತಾನಾಡಿ ಶಿವಾಜಿಯವರ ಜೀವನ ಚರಿತ್ರೆ, ಅವರ ಸಾಹಸಮಯ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಮುಖ್ಯಗುರುಗಳಾದ […]

ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ಸ್ವಾಗತ

ವಿಶಿಷ್ಟ ರೀತಿಯಲ್ಲಿ ಮಕ್ಕಳಿಗೆ ಸ್ವಾಗತ

Monday, June 5th, 2017

ಬೆಳ್ಳಿಹಬ್ಬ ಆಚರಣೆಯ ಹೊಸ್ತಿಲಲ್ಲಿರುವ ಸಂಸ್ಥೆಯ ಸಂಭ್ರಮದ ಕ್ಷಣಗಳ ಆರಂಭವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಆರಂಭೋತ್ಸವ ನಡೆಯಿತು. 1993 ರಲ್ಲಿ 7 ಮಕ್ಕಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಕಳೆದ ಶೈಕ್ಷಣಿಕ ವರ್ಷ 871 ಮಕ್ಕಳಿದ್ದು 2017-18 ನೇ ಸಾಲಿನಲ್ಲಿ ಸುಮಾರು 950 ಮಕ್ಕಳ ಕಲಿಕಾ ಕೇಂದ್ರವಾಗಿ ’ಶೇಷಾದ್ರಿ’ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಸಕ್ತ ವರ್ಷ 70 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಆಡಳಿತ ಮಂಡಳಿ ಮತ್ತು ಪೋಷಕ ವೃಂದ ಕನ್ನಡ ಭಾಷಾ ಶಾಲೆಯಾಗಿ ವಿವೇಕಾನಂದ ಕನ್ನಡ ಶಾಲೆ ಒಂದು ಪ್ರಗತಿಪರ […]

ಬೆಳ್ಳಿ ಹಬ್ಬ ಹಾಗೂ ನೂತನ ಕಟ್ಟಡ ಉದ್ಘಾಟನೆ

Friday, May 19th, 2017

ಮಾತೃಭಾಷಾ ಪ್ರೇಮದೇಶವನ್ನು ಅಭಿವೃದ್ಧಿಗೊಳಿಸುತ್ತದೆ: ಅರ್ಜುನ್‌ರಾಮ್ ಮೇಘ್ವಾಲ್ ಪುತ್ತೂರು: ಹತ್ತೊಂಬತ್ತನೇ ಶತಮಾನಯುರೋಪ್‌ ಅದರಲ್ಲೂ ಇಂಗ್ಲೆಂಡಿನದಾಗಿತ್ತು. ಇಪ್ಪತ್ತನೆಯ ಶತಮಾನ ಉತ್ತರ ಅಮೇರಿಕಾದ ಪಾಲಾಯಿತು. ಇಪ್ಪತೊಂದನೆಯ ಶತಮಾನ ಯಾರದ್ದೆಂಬ ಚರ್ಚೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಾಕಿದರು. ಅವರು ಈ ಶತಮಾನ ಏಷ್ಯಾಕ್ಕೆ ಸೇರಿದ್ದು ಎಂದರು. ಪರಿಣಾಮ ಬಹು ದೊಡ್ಡ ಚರ್ಚೆ ಆರಂಭವಾಯಿತು. ಯಾವ ದೇಶದಲ್ಲಿ ವಿವೇಕಾನಂದರ ಆದರ್ಶ ಹಾಗೂ ಮಾತೃ ಭಾಷಾ ಶಿಕ್ಷಣದ ಪ್ರೇಮ ಇದೆಯೋ ಅಂತಹ ಭಾರತವೇ ವಿಶ್ವಗುರು ಆಗಲು ಸಾಧ್ಯ ಎಂಬ ಸತ್ಯ ಈಗ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ - ಎಸ್.ಎಸ್.ಎಲ್.ಸಿ. ಫಲಿತಾಂಶ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಎಸ್.ಎಸ್.ಎಲ್.ಸಿ. ಫಲಿತಾಂಶ

Friday, May 12th, 2017

2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅರ್ಪಿತಾ ಸಿ.ಪಿ – 613 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕುಂಜೂರು ಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ. ಉಳಿದಂತೆ ಚಿಂತನಾ ಕೆ- 609 (ವೇಣುಗೋಪಾಲ್ ಮತ್ತು ಶಕುಂತಳ ದಂಪತಿ ಪುತ್ರಿ), ವಿಭಾ ಆಚಳ್ಳಿ – 602 (ಬೆದ್ರಾಳ ನಿವಾಸಿ ರವಿಶಂಕರ್ ಎ. ಎನ್. ಮತ್ತು ಸವಿತಾ ಎ ಆರ್ ದಂಪತಿಗಳ ಪುತ್ರಿ) , ತೀರ್ಥರಾಜ್- 599, ಶ್ರೀಪ್ರದ – 599, ದೀಕ್ಷಾ ಬಿ – 595, ಸ್ಕಂದ […]

ಶಾಲೆಯ ಬೆಳ್ಳಿಹಬ್ಬದ ಆಮಂತ್ರಣ ಪತ್ರ ಬಿಡುಗಡೆ - ಪ್ರಮುಖರ ಸಭೆ

ಶಾಲೆಯ ಬೆಳ್ಳಿಹಬ್ಬದ ಆಮಂತ್ರಣ ಪತ್ರ ಬಿಡುಗಡೆ – ಪ್ರಮುಖರ ಸಭೆ

Friday, April 21st, 2017

ಮೇ 18 ರಂದು ಬೆಳ್ಳಿಹಬ್ಬ, ನೂತನಕಟ್ಟಡ ಲೋಕಾರ್ಪಣೆ | ಏ 30 ರೊಳಗೆ ಗ್ರಾಮ ಮಟ್ಟದ ಸಭೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿ ತೆಂಕಿಲದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಮತ್ತು ನೂತನ ಶಾಲಾ ಕಟ್ಟಡದ ಲೋಕಾರ್ಪಣಾ ಸಮಾರಂಭ ಮೇ 18 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಗ್ರಾಮ ಸಮಿತಿ ಪ್ರಮುಖರ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಏ 20 ರಂದು ಅಪರಾಹ್ನ ಶಾಲೆಯಲ್ಲಿ ನಡೆಯಿತು. ವಿವೇಕಾನಂದ ಬಿ.ಎಡ್‌. ಕಾಲೇಜಿನ ಅಧ್ಯಕ್ಷರಾದ ಪ್ರೊ. ಎ.ವಿ.ನಾರಾಯಣ ಇವರು ದೀಪ ಬೆಳಗಿಸಿ ಆಮಂತ್ರಣ ಪತ್ರವನ್ನು […]

ಶಾರದಾ ಪೂಜೆ

ಶಾರದಾ ಪೂಜೆ

Friday, March 31st, 2017

ಪ್ರತಿವರ್ಷದಂತೆ ಶಾಲೆಯಲ್ಲಿ ದಿನಾಂಕ 14-3-2017 ರಂದು ಶಾರದಾ ಪೂಜೆಯನ್ನು ನಡೆಸಲಾಯಿತು.

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ

Tuesday, March 14th, 2017

ದಿನಾಂಕ 13-3-2017 ರಂದು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಆಯೋಜಿಸಿದ ಶಿಕ್ಷಣದಲ್ಲಿ ನವೀನ ಪರಿಕಲ್ಪನೆಯ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಗತಿ ತರುವ ದೃಷ್ಟಿಯಿಂದ ಪುತ್ತೂರು ಶಿಕ್ಷಣ ಇಲಾಖೆಯು ಆರಂಭಿಸಿದ ಮಿಷನ್ 95+ ಯೋಜನೆಯನ್ನು ಮಂಡಿಸಿ, ನ್ಯಾಶನಲ್ ಕಾನ್ಫರೆನ್ಸ್ ಆನ್ ಇನ್ನೋವೇಶನ್ಸ್ ಇನ್ ಎಜ್ಯುಕೇಶನಲ್ ಅಡ್ಮಿನಿಸ್ಟ್ರೇಶನ್ ಅಂಡ್ ಪ್ರೆಸೆಂಟೇಶನ್ ಆಫ್ ಅವಾರ್ಡ್, ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವೆಡ್ಕರ್ ಅವರಿಂದ ಸ್ವೀಕರಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಜಿ.ಎಸ್. ಶಶಿಧರ್ […]

Highslide for Wordpress Plugin