ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ಅರಿಯಡ್ಕ ಗ್ರಾಮಪಂಚಾಯತ್ ಸಹಯೋಗದಲ್ಲಿ ಕೋಟಿವೃಕ್ಷ ಆಂದೋಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಫಾಟನೆಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮುಕುಂದ ಶಾಂತಿವನ ನೆರವೇರಿಸಿ ಮರಗಿಡಗಳು ಜೀವದ ಉಸಿರು ಅದನ್ನು ಕಾರ್ಯಕ್ರಮವಾಗಿ ಆಯೋಜಿಸಿ ಭವಿಷ್ಯತ್ತಿಗಾಗಿ ಒಳಿತನ್ನು ಬಯಸುವ ನರೇಂದ್ರ ಮೋದಿಯವರ ಯೋಜನೆ ಉತ್ತಮವಾದದ್ದು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್ ಕೋಟಿವೃಕ್ಷ ಆಂದೋಲನದ ಮೂಲಕ ಈ ನಾಡನ್ನು ಹಸಿರಾಗಿಸೋಣ, ಭವಿಷ್ಯತ್ತಿನ ಉಸಿರಾಗಿಸೋಣ ಎಂದರು. ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾರವರು ಕಾರ್ಯಕ್ರಮದ ಯೋಚನೆ, ಯೋಜನೆ ಶ್ಲಾಘನೀಯ ಎಂದರು. ಪಾಪೆಮಜಲು ಶಾಲಾಭಿವೃದ್ಧಿ ಕಾರ್ಯಾಧ್ಯಕ್ಷರಾದ ಶ್ರೀ ಅಮ್ಮಣ್ಣ ರೈಯವರು ಮಾತನಾಡಿರಾಷ್ಟ್ರದ ಒಳಿತಿಗಾಗಿ, ಜನರ ಉಳಿವಿಗಾಗಿ ಇಂತಹ ಉತ್ತಮ ಕೆಲಸಗಳನ್ನು ಮಾಡಬೇಕು, ವಿದ್ಯಾರ್ಥಿಗಳು ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.


ವಿವೇಕಾನಂದಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ರಮೇಶ್ ನಾಯಕ್ ನಿಧಿ ಮುಂಡರವರು ಕಾರ್ಯಕ್ರಮದ ಯೋಚನೆ, ಯೋಜನೆ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಶ್ರೀ ತಿಲಕ್ ರೈಯವರು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಾಪೆಮಜಲು ಶಾಲಾ ಮುಖ್ಯಗುರು ಮೋನಪ್ಪ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಅರಿಯಡ್ಕ ಗ್ರಾಮಪಂಚಾಯತ್ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಊರ ಹಿರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿವೇಕಾನಂದಕನ್ನಡ ಮಾಧ್ಯಮ ಶಾಲಾ ಪರವಾಗಿ ಶ್ರೀ ಚಂದ್ರಶೇಖರ್ ಸುಳ್ಯಪದವು, ವಿಶ್ವನಾಥ ಮೂಡೂರು, ಶ್ರೀಮತಿ ರೇಶ್ಮಾ ಹಾಗೂ 15 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಸುಮಾರು 150 ಸಸಿಗಳನ್ನು ನೆಡುವ ಮೂಲಕ ಕೋಟಿವೃಕ್ಷ ಆಂದೋಲನವನ್ನು ಯಶಸ್ವಿ ಕಾರ್ಯಕ್ರಮವನ್ನಾಗಿಸಿದರು.