ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಬೌದ್ಧಿಕ್ ಅನ್ನು ನೀಡಲು ಮೈತ್ರೀಯಿ ಗುರುಕುಲದ ಪದ್ಮ ಮಾತಾಜಿಯವರು ಆಗಮಿಸಿದರು. ಇವರು ಕಥೆಯ ಮುಖಾಂತರ ಮಕ್ಕಳಿಗೆ ಗುರುಗಳ ಮಹತ್ವವನ್ನು ಸಾರುತ್ತಾ ನಮ್ಮ ಜೀವನದಲ್ಲಿ ಗುರುಗಳ ಪ್ರಾಮುಖ್ಯತೆಯನ್ನು ಮನಮುಟ್ಟುವಂತೆ ತಿಳಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ಮಾತಾಜಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ದೇಶಭಕ್ತಿಗೀತೆಯನ್ನು ಹಾಡಿದರು. ಶ್ರೀಮತಿ ಗೀತಾ ಮಾತಾಜಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶ್ರೀಲತಾ ಮಾತಾಜಿಯವರು ಧನ್ಯವಾದ ಸಮರ್ಪಿಸಿದರು.

