ವಿಶ್ವ ಯೋಗ ದಿನಾಚರಣೆ

ನಮ್ಮ ಶಾಲೆಯಲ್ಲಿ ಯೋಗಾಸನ ಅಭ್ಯಾಸವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ, ಯೋಗಾಭ್ಯಾಸವನ್ನು ಕಲಿಕಾ ಅವಧಿಯಲ್ಲಿ ಜೋಡಿಸಿರುವುದು ವಿದ್ಯಾರ್ಥಿ ಜೀವನದಲ್ಲಿ ನಮಗೆ ಏಕಾಗ್ರತೆ ಮತ್ತು ಶಿಸ್ತನ್ನು ಅಳವಡಿಸಲು ಸಹಕಾರಿಯಾಗಿತ್ತು ಎಂದು ವಿವೇಕಾನಂದ ಕನ್ನಡ ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಮಾನಸ ಇವರು ನುಡಿದರು. ಪ್ರಸ್ತುತ ಚಿಕಿತ್ಸಾತ್ಮಕ ಯೋಗದಲ್ಲಿ ಎಂ.ಎಸ್ಸಿ ಪದವಿ ಪಡೆದು ಮಂಗಳೂರಿನಲ್ಲಿ ಚಿಕಿತ್ಸಾತ್ಮಕ ಯೋಗ ತರಗತಿಗಳನ್ನು ನಡೆಸುತ್ತಿರುವ ಇವರು ನೆನಪಿನ ಶಕ್ತಿಗೆ ಸರಳ ಪ್ರಾಣಾಯಾಮ ಹೇಗೆ ಸಹಕಾರಿ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು.

VKMS yoga day (1)

VKMS yoga day (2)

VKMS yoga day (3)

VKMS yoga day (4)

VKMS yoga day

ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ| ಸ್ವಾತಿಯವರು ಯೋಗ ಒಂದುಜೀವನ ವಿಧಾನ ನಮ್ಮ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅಷ್ಟಾಂಗ ಯೋಗ ಮಾರ್ಗದ ಪಾತ್ರವನ್ನು ತಿಳಿಯಪಡಿಸುತ್ತಾ, ತಮ್ಮ ಅತಿಥೇಯ ಮಾತುಗಳನ್ನು ನುಡಿದರು.

ರಾಷ್ಟ್ರಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಂದ ಪ್ರದರ್ಶನದೊಂದಿಗೆ 5 ರಿಂದ 10 ನೇ ತರಗತಿಯ ಮಕ್ಕಳಿಂದ ಸರಳ ಆಸನ ಮತ್ತು ಪ್ರಾಣಾಯಾಮ ಅಭ್ಯಾಸ ನಡೆಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಚ್ಯುತ ನಾಯಕ್, ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯಗುರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪೃಥಾ ಮತ್ತು ಕು.ಅಪೂರ್ವ ಪ್ರಾರ್ಥಿಸಿ, ಹರೀಶ್.ಕೆ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ಮಾತಾಜಿ ಧನ್ಯವಾದ ಸಮರ್ಪಿಸಿ, ಶ್ರೀಮತಿ ಸಹನಶ್ರೀ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin