Author Archive

ವೆಂಕಟೇಶ್ವರ ಅಮೈ ಅವರಿಗೆ ಶ್ರದ್ಧಾಂಜಲಿ ಸಭೆ

ವೆಂಕಟೇಶ್ವರ ಅಮೈ ಅವರಿಗೆ ಶ್ರದ್ಧಾಂಜಲಿ ಸಭೆ

Monday, February 25th, 2019

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕಿನ ಸಂಘಚಾಲಕರೂ ಆಗಿದ್ದ ಶ್ರೀ ವೆಂಕಟೇಶ್ವರ ಅಮೈ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ ಮಾತನಾಡಿ ಹಿರಿಯರಾದ ವೆಂಕಟೇಶ್ವರ ಅಮೈ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿತ್ತು. ತಾಯಿ ಪ್ರೀತಿಯನ್ನು ಪ್ರತಿಯೊಬ್ಬರಲ್ಲೂ ತೋರಿಸುತ್ತಿದ್ದರು. ತನ್ನ ಪ್ರೀತಿಯ ಮಾತಿನಿಂದಲೇ ಇತರರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ […]

ರಥಸಪ್ತಮಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿದೆ- ಶ್ರೀಮತಿ ಪೂರ್ಣಿಮಾ

ರಥಸಪ್ತಮಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿದೆ- ಶ್ರೀಮತಿ ಪೂರ್ಣಿಮಾ

Wednesday, February 13th, 2019

’ಜಗತ್ತಿನ ಎಲ್ಲಾ ಜೀವಿರಾಶಿಗೂ ಶಕ್ತಿಯ ಪ್ರಧಾನ ಮೂಲ ಸೂರ್ಯ. ಉತ್ತರಾಯಣದಲ್ಲಿ ಬರುವ ಮಾಘ ಶುದ್ಧ ಸಪ್ತಮಿಯಂದು ಆಚರಿಸುವ ರಥ ಸಪ್ತಮಿ ಹಬ್ಬವು ಅತ್ಯಂತ ಅರ್ಥಪೂರ್ಣವಾಗಿದೆ. ಮಹಾವಿಷ್ಣುವೇ ಸೂರ್ಯನಾರಾಯಣನೆಂದು ಪ್ರಾಚೀನ ಕಾಲದಿಂದಲೂ ಭಕ್ತಿಯಿಂದ ಆರಾಧಿಸುತ್ತಾ ಬಂದಿದ್ದೇವೆ. ಮಾಲಿನ್ಯರಹಿತವಾದ ಮುಗಿಯದ ಇಂಧನ ಮೂಲವಾಗಿ ಸೌರಶಕ್ತಿಯನ್ನು ನಾವು ಬಳಸುತ್ತಿದ್ದೇವೆ. ರೋಗರುಜಿಗಳಿಂದ ದೂರವಿರಲು ಸೂರ್ಯನ ಬೆಳಕು ಮತ್ತು ಶಾಖ ಅಗತ್ಯ. ಪ್ರಾಣಿ ಪ್ರಪಂಚಕ್ಕೆ ಆಹಾರ ಪೂರೈಸುವ ಹಸಿರು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೂ ಸೂರ್ಯನ ಕಿರಣಗಳು ಅವಶ್ಯಕ. ಪೂರ್ವಜನ್ಮದ ಪಾಪರೂಪವಾದ ಗುಣಪಡಿಸಲಾಗದ ವ್ಯಾಧಿಗಳ ಶಮನಕ್ಕೂ […]

ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ

ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ

Friday, February 8th, 2019

ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಅಟಲ್‌ ಟಿಂಕರಿಂಗ್ ಫೆಸ್ಟ್‌ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ಸಂಬಂಧಿಸಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಣೀತ್, ಗೌತಮ್, ಧನುಷ್, ಅಜಿತೇಶ್, ಮನೀಶ್‌ ಇವರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ.

ಬಿ.ಎಸ್ಸಿ (ಇಂಟೀರಿಯರ್ ಡಿಸೈನ್) - ಪ್ರಥಮ ರ್‍ಯಾಂಕ್

ಬಿ.ಎಸ್ಸಿ (ಇಂಟೀರಿಯರ್ ಡಿಸೈನ್) – ಪ್ರಥಮ ರ್‍ಯಾಂಕ್

Thursday, February 7th, 2019

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಎಸ್ಸಿ (ಇಂಟಿರಿಯರ್ ಡಿಸೈನ್)ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಶನ್, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಕು. ವಾಣಿ ಶ್ರೀ ಇವರು 88.38% ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಇವರು ಬಡೆಕಿಲ ಸುಬ್ಬಣ್ಣ ಭಟ್ ಮತ್ತು ಸಂಧ್ಯಾ ಭಟ್ ದಂಪತಿಗಳ ಪುತ್ರಿ. ಇವರು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ.

ಕವಿ ಕಾವ್ಯ ಸಮನ್ವಯ

ಕವಿ ಕಾವ್ಯ ಸಮನ್ವಯ

Tuesday, February 5th, 2019

ಮನುಷ್ಯ ಜನ್ಮವು ಅತ್ಯಂತ ಅಮೂಲ್ಯ. ಹಲವು ಪುಣ್ಯಗಳನ್ನು ತೆತ್ತು ಈ ಜನ್ಮ ಪ್ರಾಪ್ತವಾಗುತ್ತದೆ. ಮಾನವ ತನ್ನ ಜೀವನವನ್ನು ಸತ್ಕಾರ್ಯಗಳಿಗೆ ಮೀಸಲಿಡಬೇಕು. ಅಜ್ಞಾನವನ್ನು ತೊರೆದು ಮೌಢ್ಯಾಅಚರಣೆಗಳ ಬಲೆಗೆ ಸಿಲುಕದೆ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುವ ಸಂತ ಶಿಶುನಾಳ ಶರೀಫ ಹಾಗೂ ಗೋಪಾಲಕೃಷ್ಣ ಅಡಿಗರ ಹಾಡುಗಳ ಸಿಂಚನ ಸ್ಫುರಣವಾದುದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ| ಶೋಭಿತಾ ಸತೀಶ್ ಇವರು ಸಂತಶಿಶುನಾಳ ಶರೀಫರ ದ್ವಿಜನ್ಮ ಶತಾಬ್ಧಿ ಹಾಗೂ ಕವಿ ಶ್ರೀ ಗೋಪಾಲಕೃಷ್ಣ […]

ನಾಟಕೋತ್ಸವ- 2019

ನಾಟಕೋತ್ಸವ- 2019

Friday, February 1st, 2019

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಶ್ರಯದಲ್ಲಿ ನಾಟಕೋತ್ಸವ – 2019 ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಂಟನೇಯ ಮಕ್ಕಳ ನಾಟಕೋತ್ಸವದ ಉದ್ಫಾಟಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಶ್ರೀ ಮೂರ್ತಿ ದೇರಾಜೆ ಮಾತನಾಡಿ 40 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನುಭವಗಳನ್ನು ವಿವರಿಸಿದರು. ವೇದಿಕೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಸ್ಥಾಪಕ […]

70 ನೇ ಗಣರಾಜ್ಯೋತ್ಸವ ದಿನಾಚರಣೆ

70 ನೇ ಗಣರಾಜ್ಯೋತ್ಸವ ದಿನಾಚರಣೆ

Saturday, January 26th, 2019

ಸಂವಿಧಾನ ಜನತೆಗೆ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ದೇಶದ ಒಗ್ಗಟ್ಟನ್ನು ಸಾಧಿಸಿದಾಗ ಗಣರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ | ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ 70 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನಿರ್ವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಪ್ರಾರಂಭದಲ್ಲಿ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮತ್ತು ಕನ್ನಡ […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 96% ಫಲಿತಾಂಶ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 96% ಫಲಿತಾಂಶ

Thursday, January 24th, 2019

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲ ವಿದ್ಯಾರ್ಥಿಗಳು ಲೋವರ್ ಗ್ರೇಡ್ ವಿಭಾಗದಲ್ಲಿ 10 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 3 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಭಾಗವಹಿಸಿದ್ದು 2 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 15 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಶೇರಾ ಇವರು ತರಬೇತಿ ನೀಡಿದ್ದರು. ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು: ಮುಖೇಶ್ ಕೃಷ್ಣ (ಕೃಷ್ಣಪ್ಪಗೌಡ ಮತ್ತು ಭಾರತಿ ಕೆ ದಂಪತಿಗಳ […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

Saturday, January 12th, 2019

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರೌಢ ವಿಭಾಗದ ’ಜ್ಞಾನತುಂಗೆ’ ಪುಸ್ತಕಾಧಾರಿತ ಸ್ಪರ್ಧೆಯ ಭಾಷಣದಲ್ಲಿ ಪೃಥಾ ಆರ್‌. ರೈ (ಶ್ರೀ ರವೀಂದ್ರ ರೈ ಪಿ. ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ)- ಪ್ರಥಮ, ಚಿತ್ರಕಲಾ ಸ್ಪರ್ಧೆಯಲ್ಲಿ ಗೌತಮ್‌ ಎಸ್. (ಗಣೇಶ್ ಪೂಜಾರಿ ಮತ್ತು ಮಮತಾ […]

ವಿವೇಕಾನಂದ ಜಯಂತಿ-2019

ವಿವೇಕಾನಂದ ಜಯಂತಿ-2019

Saturday, January 12th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ವಿವೇಕಾನಂದ ಜಯಂತಿ’ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪುಟಾಣಿ ಮಕ್ಕಳು ವಿವೇಕಾನಂದ ಉಡುಗೆ ಧರಿಸಿ ವಿವೇಕವಾಣಿ ಹೇಳಿದರು. ನಂತರ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿಯವರು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕತೆಗೊಳಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರು. ಅನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ 2018

ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ 2018

Wednesday, December 19th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ದೇಶವನ್ನು ಮುನ್ನಡೆಸಬಲ್ಲರು – ನಳಿನ್ ದೇಶದಲ್ಲಿನ ಮಹಾನ್ ಸಾಧಕರೆಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಲ್ಲ. ಪ್ರಧಾನಿ ಮೋದಿ ಗುಜರಾತಿ ಮಾತೃಭಾಷೆ ಗುಜರಾತಿಯಲ್ಲಿ ಕಲಿತರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಟಾಟಾ ಸಂಸ್ಥೆಯ ಚಂದ್ರಶೇಖರ್ ತಮಿಳುನಾಡಿನ ಮಾತೃಭಾಷೆ ತಮಿಳಿನಲ್ಲಿ ವಿದ್ಯಾಭ್ಯಾಸ ಪಡೆದು ದೇಶದ ಮಹಾನ್ ಸಾಧಕರೆನಿಸಿದ್ದಾರೆ. ಮುಂದೊಂದು ದಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶವನ್ನು ಮುನ್ನಡೆಸಬಲ್ಲ ಶಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ತೆಂಕಿಲ […]

ವಿವೇಕೋತ್ಸವ - ಸಾಂಸ್ಕೃತಿಕ ಹಬ್ಬ 2018-19

ವಿವೇಕೋತ್ಸವ – ಸಾಂಸ್ಕೃತಿಕ ಹಬ್ಬ 2018-19

Thursday, December 6th, 2018
ಆಟದೊಂದಿಗೆ ಪಾಠಕ್ಕೂ ಪ್ರಾಮುಖ್ಯತೆ ಇರಲಿ - ಶ್ರೀಮತಿ ಓಮನ

ಆಟದೊಂದಿಗೆ ಪಾಠಕ್ಕೂ ಪ್ರಾಮುಖ್ಯತೆ ಇರಲಿ – ಶ್ರೀಮತಿ ಓಮನ

Friday, November 30th, 2018

ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಿ ಸಾಧನೆಗೈಯುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ವಾರ್ಷಿಕ ಕ್ರೀಡಾಕೂಟ -2018’ರ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ನಗರ ಮಹಿಳಾ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಶ್ರೀಮತಿ ಓಮನ ಶುಭ ನುಡಿಗಳನ್ನಾಡಿದರು. ಇನ್ನೋರ್ವ ಅತಿಥಿಗಳಾದ ಅಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರಹಾಸರು ಧ್ವಜವಂದನೆ ಸ್ವೀಕರಿಸುತ್ತಾ ಕ್ರೀಡೆಯಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸಿ. […]

ಕನಕ ಜಯಂತಿ ಆಚರಣೆ

ಕನಕ ಜಯಂತಿ ಆಚರಣೆ

Tuesday, November 27th, 2018

ಕನಕ ಜಯಂತಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನಕದಾಸರ ಜೀವನ ವೃತ್ತಾಂತವನ್ನು ಹರಿಕಥೆ ಮೂಲಕ ಶ್ರೀ ರಾಧಾಕೃಷ್ಣ ಅಡ್ಯಂತಾಯ ಮತ್ತು ಬಳಗ ಇವರ ನೇತೃತ್ವದಲ್ಲಿ ನಡೆಸಲಾಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಶ್ರೀಯುತ ಬಾಲಕೃಷ್ಣ ಆಳ್ವ, ತಬಲದಲ್ಲಿ ಶ್ರೀಯುತ ದಿನೇಶ್ ಕುಕ್ಕಿಲ ಸಹಕರಿಸಿದರು.

ವಿದ್ಯಾರ್ಥಿಗಳು ಗುರಿ ತಲುಪಲು ಶ್ರಮಿಸಬೇಕು - ಗಣೇಶ್ ವಾಗ್ಲೆ

ವಿದ್ಯಾರ್ಥಿಗಳು ಗುರಿ ತಲುಪಲು ಶ್ರಮಿಸಬೇಕು – ಗಣೇಶ್ ವಾಗ್ಲೆ

Wednesday, November 14th, 2018

ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ಶ್ರಮಿಸಿದರೆ ಉತ್ತಮ ಭವಿಷ್ಯವು ಅವರದಾಗುತ್ತದೆ. ಸಂಸ್ಕಾರಯುತ ವಿದ್ಯಾರ್ಥಿಗಳಿಂದ ನಮ್ಮ ದೇಶವು ವಿಶ್ವಗುರು ಎನಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶ್ರೀರಾಮ ಪ್ರೌಢಶಾಲೆ ನೆಲ್ಯಾಡಿ ಇಲ್ಲಿನ ಮುಖ್ಯ ಗುರುಗಳಾದ ಶ್ರೀಯುತ ಗಣೇಶ್ ವಾಗ್ಲೆ ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ, ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಫಾಟನೆಯನ್ನು ಶ್ರೀಮತಿ ಶ್ರೀಲಕ್ಷ್ಮೀ ಸುರೇಂದ್ರ ಕಿಣಿ ನೆರವೇರಿಸಿದರು. ವೇದಿಕೆಯಲ್ಲಿ ಶಾಲಾ […]

ಸಂಸ್ಕೃತ ಸಂಭಾಷಣಾ ಶಿಬಿರ

ಸಂಸ್ಕೃತ ಸಂಭಾಷಣಾ ಶಿಬಿರ

Tuesday, November 13th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ದಿವಸಗಳ ಕಾಲ ಕು. ನಾಗರತ್ನರವರ ಸಹಕಾರದೊಂದಿಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಕಾರ್ಯಕ್ರಮ ಸಂಪನ್ನಗೊಂಡಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಅಮೈ ಅಧ್ಯಕ್ಷತೆಯನ್ನು ವಹಿಸಿ ಸಂಸ್ಕೃತ ಭಾಷೆಯನ್ನು ಕಲಿಯಲು ಯಾವುದೇ ಹಿಂಜರಿಕೆ ಬೇಡ ಎಂದರು. ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಲಯ ನರಿಮೊಗರು ಇದರ ಸಂಚಾಲಕರಾದ ಶ್ರೀ ಅವಿನಾಶ್ ಕೊಡೆಂಕಿರಿಯವರು ಮಾತನಾಡಿ ಸಂಸ್ಕೃತ ಭಾಷೆಯ ಹಿರಿಮೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. […]

ಸಚಿವ ಅನಂತ್ ಕುಮಾರ್ ವಿಧಿವಶ - ಸಂತಾಪ ಸಭೆ

ಸಚಿವ ಅನಂತ್ ಕುಮಾರ್ ವಿಧಿವಶ – ಸಂತಾಪ ಸಭೆ

Tuesday, November 13th, 2018

ಕೇಂದ್ರ ಕೈಗಾರಿಕೆ ಮತ್ತು ರಸಗೊಬ್ಬರ ಸಚಿವರಾಗಿದ್ದ ಶ್ರೀ ಎಚ್. ಎನ್. ಅನಂತ್ ಕುಮಾರ್ ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೌನ ಪ್ರಾರ್ಥನೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಹೇರಳೆ ಮೃತರಿಗೆ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್, ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

’ಕಲಾಶ್ರೀ’ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

’ಕಲಾಶ್ರೀ’ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 5th, 2018

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಇವರುರಾಮಕೃಷ್ಣ ಸೇವಾ ಆಶ್ರಮ, ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ನಡೆಸಿದ ತಾಲೂಕು ಮಟ್ಟದ ’ಕಲಾಶ್ರೀ’ ಆಯ್ಕೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಜನನಿ (ಸೃಜನಾತ್ಮಕ ಕಲೆ – ಪ್ರಥಮ), ಮುಖೇಶ್ ಕೃಷ್ಣ (ಸೃಜನಾತ್ಮಕ ಕಲೆ- ದ್ವಿತೀಯ), ಸಂಜನಾ (ಸೃಜನಾತ್ಮಕ ಬರವಣಿಗೆ- ಪ್ರಥಮ), ಹೇಮಶ್ರೀ (ಸೃಜನಾತ್ಮಕ ಬರವಣಿಗೆ- ದ್ವಿತೀಯ), ಪ್ರತೀಕ ಗಣಪತಿ (ವಿಜ್ಞಾನ ವಸ್ತು ಪ್ರದರ್ಶನ – ಪ್ರಥಮ), ಸ್ಕಂದಕುಮಾರ (ಸೃಜನಾತ್ಮಕ ಪ್ರದರ್ಶನ ಕಲೆ – ದ್ವಿತೀಯ) ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ : ಶಾಲೆಗೆ ಹಲವು ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ : ಶಾಲೆಗೆ ಹಲವು ಪ್ರಶಸ್ತಿ

Monday, November 5th, 2018

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ತಾಲೂಕು ಮಟ್ಟದ ’ಜ್ಞಾನ ಗಂಗೆ’ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ (ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳಾ ಗಣೇಶ್‌ರವರ ಪುತ್ರಿ) – ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ-ಪ್ರಥಮ ಹಾಗೂ ಉದಯವಾಣಿ ಚಿಣ್ಣರ ಬಣ್ಣ […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, October 26th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಕೃತಿ ಶೆಟ್ಟಿ ತ್ರಿವಿಧ ಜಿಗಿತ ಮತ್ತು ರಿಲೇಯಲ್ಲಿ- ಕು. ವಿಭಾ- 3000 ಮೀ ನಡಿಗೆ, ರುತ್ವಿಕ್ 100 ಮೀ ಅಡೆತಡೆ ಓಟ, ತೇಜಸ್ ತ್ರಿವಿಧ ಜಿಗಿತ, ಗಾಯತ್ರಿ ತ್ರಿವಿಧ ಜಿಗಿತ, ರುಚಿತ ಮತ್ತು ಶಿಲ್ಪಾಶ್ರೀ 4×100 ಮೀ. ರಿಲೇ, ಮಹಮ್ಮದ್ ಅಮೀರ್ ಮತ್ತು ಮಹಮ್ಮದ್ ಆದಿಲ್ 4×100 ಮೀ. ರಿಲೇ ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ […]

ವಾಲ್ಮೀಕಿ ಜಯಂತಿ ಕಾರ್ಯಕ್ರಮ

ವಾಲ್ಮೀಕಿ ಜಯಂತಿ ಕಾರ್ಯಕ್ರಮ

Thursday, October 25th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 24-10-2018 ರಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ನಿವೃತ್ತ ಉಪನ್ಯಾಸಕರಾದ ಶ್ರೀಯುತ ರಾಧಾಕೃಷ್ಣ ಕಲ್ಚಾರು ಮಾತನಾಡಿ ವಾಲ್ಮೀಕಿ ಮಹರ್ಷಿಯ ಇತಿಹಾಸ ಮತ್ತು ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತಾ ಅವರ ಆದರ್ಶಗಳನ್ನು ತಾವೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್ ಉಪಸ್ಥಿತರಿದ್ದರು.

ಶಾರದಾಪೂಜೆ, ಅಕ್ಷರಾಭ್ಯಾಸ

ಶಾರದಾಪೂಜೆ, ಅಕ್ಷರಾಭ್ಯಾಸ

Monday, October 22nd, 2018

ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 18-10-2018 ಗುರುವಾರದಂದು ಕುಂಟಾರು ಶ್ರೀ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಶಾರದಾಪೂಜೆ, ಅಕ್ಷರಾಭ್ಯಾಸ ಪೂಜಾ ವಿಧಿ-ವಿಧಾನಗಳನ್ನು ನೆರವೇರಿತು. ಈ ಸಂದರ್ಭದಲ್ಲಿ ಶಾರದಾ ಪೂಜೆಯ ಬಳಿಕ ಪುಟಾಣಿಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಚ್ಛ ಪರಿಸರದಿಂದ, ಸ್ವಾಸ್ಥ್ಯ ಸಮಾಜದ ನಿರ್ಮಾಣ - ಅಚ್ಯುತ ನಾಯಕ್

ಸ್ವಚ್ಛ ಪರಿಸರದಿಂದ, ಸ್ವಾಸ್ಥ್ಯ ಸಮಾಜದ ನಿರ್ಮಾಣ – ಅಚ್ಯುತ ನಾಯಕ್

Wednesday, October 3rd, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಮಕ್ಕಳ ಸಾಹಿತಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಇವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಗಾಂಧೀಜಿ ಮತ್ತು ಶಾಸ್ತ್ರಿಗಳ ವಿಚಾರಗಳು ನಮಗೆ ಸ್ಫೂರ್ತಿದಾಯಕವಾಗಲಿ ಎಂದರು. ಮತ್ತು ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರವರ ವಿದ್ಯಾರ್ಥಿಗಳೊಂದಿಗಿನ ಅವಿನಾಭಾವ ಸಂಬಂಧವನ್ನು ನೆನಪಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್ ಮಾತಾನಾಡಿ ಪರರ ಹಿತಕ್ಕಾಗಿ, ಏಳಿಗೆಗಾಗಿ ಅವಿರತ ಶ್ರಮಿಸಿದ ಮಹಾತ್ಮ […]

ಶಾಲೆಯ 8 ವಿದ್ಯಾರ್ಥಿಗಳು ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

ಶಾಲೆಯ 8 ವಿದ್ಯಾರ್ಥಿಗಳು ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

Friday, September 28th, 2018

ಉಡುಪಿ ಜಿಲ್ಲೆಯ ಅಲೆವೂರು ಪ್ರಗತಿ ನಗರದ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಭವನ ಮತ್ತು ಮಂಗಳೂರಿನ ಪಿಲಿಕುಳದ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ರಾಜ್ಯಪುರಸ್ಕಾರ ಆಯ್ಕೆ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೈಡ್ಸ್ ವಿಭಾಗದಲ್ಲಿ ಶೈಲಶ್ರೀ ವಿ.ಯಸ್ (ವಿಠಲ ಎಂ. ಮತ್ತು ಸಾವಿತ್ರಿ ದಂಪತಿಗಳ ಪುತ್ರಿ), ಜನನಿ (ಕೃಷ್ಣಪ್ಪ ಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ), ಪೃಥಾ ಆರ್ ರೈ (ರವೀಂದ್ರ ರೈ.ಪಿ ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ), ಪ್ರಣಮ್ಯ (ಗಣಪತಿ ನಾಯಕ್ ಮತ್ತು ಸುಲೋಚನ ದಂಪತಿಗಳ […]

ತಾಲೂಕು ಮಟ್ಟದ ಕ್ರೀಡಾಕೂಟ :  3 ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ಕ್ರೀಡಾಕೂಟ :  3 ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, September 27th, 2018

ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ಪಂದ್ಯಾಟಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ಬಾಲಕಿಯರ ಕಬಡ್ಡಿತಂಡ, ಪ್ರೌಢಶಾಲಾ ಬಾಲಕಿಯರ ಖೋ ಖೋತಂಡ, ಹಾಗೂ ಪ್ರೌಢ ಶಾಲಾ ಬಾಲಕರ ತ್ರೋಬಾಲ್ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು 10 ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಂಸ್ಕಾರ ಸಂಪನ್ನ ಕುಟುಂಬ ವ್ಯವಸ್ಥೆಯೇ ದೇಶದ ಬೆನ್ನೆಲುಬು - ವೆಂಕಟೇಶ್ ಹೆಗ್ಡೆ

ಸಂಸ್ಕಾರ ಸಂಪನ್ನ ಕುಟುಂಬ ವ್ಯವಸ್ಥೆಯೇ ದೇಶದ ಬೆನ್ನೆಲುಬು – ವೆಂಕಟೇಶ್ ಹೆಗ್ಡೆ

Tuesday, September 18th, 2018

ದಾಂಪತ್ಯ ಎಂಬುದು ಎರಡು ಕುಟುಂಬಗಳ ಗಂಡು ಮತ್ತು ಹೆಣ್ಣುಗಳ ಮನೆ ಮನಗಳನ್ನು ಜೋಡಿಸುವ ಪವಿತ್ರ ಬಂಧನವಾಗಿದೆ. ಪ್ರಜ್ಞಾಪೂರ್ವಕವಾಗಿ ಜವಾಬ್ದಾರಿಗಳನ್ನು ಹಂಚಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿಯೇ ವಿವಾಹ ಜೀವನದ ಸಾರ್ಥಕ್ಯವಿದೆ. ಇಂತಹ ಸಂಸ್ಕೃತಯುತ ಕುಟುಂಬ ವ್ಯವಸ್ಥೆಯೇ ಸದೃಢ ದೇಶದ ಬೆನ್ನೆಲುಬಾಗಿದೆ. ಸುಸಂಸ್ಕೃತ ತಾಯಿಯ ಮಾರ್ಗದರ್ಶನದಿಂದ ಮನೆಯ ಮಕ್ಕಳು ಸತ್ಪ್ರಜೆಗಳಾಗಿ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದು ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಬಾಲ್ಯದ ಪ್ರೇರಣಾದಾಯಿ ಘಟನೆಗಳನ್ನು ಉದಾಹರಿಸುತ್ತಾ ಕುಟುಂಬ ಪ್ರಭೋದನ ಕರ್ನಾಟಕ ದಕ್ಷಿಣ ಪ್ರಾಂತದ […]

ಪ್ರಾಂತ ಜ್ಞಾನ-ವಿಜ್ಞಾನ ಮೇಳ : ಪ್ರಣವ ಭಟ್ - ದ್ವಿತೀಯ

ಪ್ರಾಂತ ಜ್ಞಾನ-ವಿಜ್ಞಾನ ಮೇಳ : ಪ್ರಣವ ಭಟ್ – ದ್ವಿತೀಯ

Monday, September 17th, 2018

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ 17 ನೇ ಪ್ರಾಂತ ಜ್ಞಾನ-ವಿಜ್ಞಾನ ಮೆಳವು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್ ಕಲಬುರಗಿ ಜಿಲ್ಲೆ, ಇಲ್ಲಿ ನಡೆದಿದ್ದು ಜಲಶುದ್ಧೀಕರಣ ವಿಧಾನಗಳ ಆಧಾರಿತ ಪ್ರತಿರೂಪ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಣವ ಎಮ್ ಭಟ್ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ರವಿನಾರಾಯಣ ಎಮ್ ಮತ್ತು ಶ್ರೀಮತಿ ಶರಾವತಿ ರವಿನಾರಾಯಣ ದಂಪತಿಗಳ ಪುತ್ರ.

52 ನೇ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ

52 ನೇ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ

Friday, September 14th, 2018

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 52 ನೇ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಶಾಲಾ ಮಕ್ಕಳು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ - ಚಿತ್ರಕಲೆಯಲ್ಲಿ ದ್ವಿತೀಯ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ – ಚಿತ್ರಕಲೆಯಲ್ಲಿ ದ್ವಿತೀಯ

Friday, September 14th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಸುರತ್ಕಲಿನ ವಿದ್ಯಾಭೋದಿನಿ ಶಾಲೆಯಲ್ಲಿ ನಡೆದಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಹಿರಿಯ ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ನೆಕ್ಕಿಲ, ಬನ್ನೂರು ನಿವಾಸಿ ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳಾ ಗಣೇಶ್‌ರವರ ಪುತ್ರಿ.

ಪ್ರತಿಭಾಕಾರಂಜಿ - ಜಿಲ್ಲಾಮಟ್ಟದಲ್ಲಿ ಶ್ರೇಯಾ ದ್ವಿತೀಯ

ಪ್ರತಿಭಾಕಾರಂಜಿ – ಜಿಲ್ಲಾಮಟ್ಟದಲ್ಲಿ ಶ್ರೇಯಾ ದ್ವಿತೀಯ

Friday, September 14th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಸುರತ್ಕಲಿನ ವಿದ್ಯಾಭೋದಿನಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯ ಪ್ರೌಢಶಾಲಾ ವಿಭಾಗದ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರೇಯಾ (9ನೇ ತರಗತಿ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಶ್ರೀ ಯೋಗಿಶ್ ಆಚಾರ್ಯ ಮತ್ತುಶ್ಯಾಮಲ ರವರ ಪುತ್ರಿಯಾಗಿದ್ದು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ಶಿಷ್ಯನಾಗಿದ್ದು ಶ್ರೀ ಚಂದ್ರಶೇಖರ ಸುಳ್ಯಪದವುರವರ ಸಂಯೋಜನೆಯಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರತಿಭಾಕಾರಂಜಿ - ಜಿಲ್ಲಾಮಟ್ಟದಲ್ಲಿ ಪರೀಕ್ಷಿತ್ ದ್ವಿತೀಯ

ಪ್ರತಿಭಾಕಾರಂಜಿ – ಜಿಲ್ಲಾಮಟ್ಟದಲ್ಲಿ ಪರೀಕ್ಷಿತ್ ದ್ವಿತೀಯ

Friday, September 14th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಸುರತ್ಕಲಿನ ವಿದ್ಯಾಭೋದಿನಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯ ಹಿರಿಯರ ವಿಭಾಗದ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪರೀಕ್ಷಿತ್ (7ನೇ ತರಗತಿ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಶ್ರೀ ಪದ್ಮನಾಭ ಮತ್ತು ವನಿತಾರವರ ಪುತ್ರನಾಗಿದ್ದು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ಶಿಷ್ಯನಾಗಿದ್ದು ಶ್ರೀಚಂದ್ರಶೇಖರ ಸುಳ್ಯಪದವುರವರ ಸಂಯೋಜನೆಯಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ.

ಸೆ. 16 : ನವದಂಪತಿ ಸಮಾವೇಶ

ಸೆ. 16 : ನವದಂಪತಿ ಸಮಾವೇಶ

Tuesday, September 11th, 2018
ಯೋಗ ಸ್ಪರ್ಧೆ - ಪ್ರಶಸ್ತಿ

ಯೋಗ ಸ್ಪರ್ಧೆ – ಪ್ರಶಸ್ತಿ

Wednesday, September 5th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ ಮುಡಿಪು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್.ಪಿ (ರಿದಮಿಕ್ ಯೋಗ)ದ್ವಿತೀಯ ಸ್ಥಾನ ಮತ್ತು ಕಾರ್ತಿಕ್ ಕೆ. (ಆರ್ಟಿನೈಕ್ ಯೋಗ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜ್ಞಾನ-ವಿಜ್ಞಾನ ಮೇಳ : ಶಾಲೆಗೆ ಹಲವು ಪ್ರಶಸ್ತಿ

ಜ್ಞಾನ-ವಿಜ್ಞಾನ ಮೇಳ : ಶಾಲೆಗೆ ಹಲವು ಪ್ರಶಸ್ತಿ

Tuesday, September 4th, 2018

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಶು ವರ್ಗ  1. ವಾಯುವಿನ ಉಪಯೋಗ ಆಧಾರಿತ ಪ್ರತಿರೂಪದಲ್ಲಿ – ಪ್ರಮಥ ಭಟ್ (ಪ್ರಥಮ ಸ್ಥಾ) 2. ಪ್ರಥಮೋಪಚಾರ ಆಧಾರಿತ ಪ್ರತಿರೂಪ – ಅರ್ಜುನ್, ಭವಿಷ್ (ಪ್ರಥಮ ಸ್ಥಾನ) 3. ಮಾನವನ ಜೀವನದಲ್ಲಿ ಸರಳ ಯಂತ್ರ ಆಧಾರಿತ ಪ್ರತಿರೂಪ – ಕೌಶಿಕ್ (ತೃತೀಯ ಸ್ಥಾನ) ಬಾಲವರ್ಗ […]

ಚೆಸ್ - ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್ – ರಾಜ್ಯಮಟ್ಟಕ್ಕೆ ಆಯ್ಕೆ

Monday, September 3rd, 2018

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸೈಂಟ್ ಜೋಸೆಪ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಸುಳ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಚೆಸ್ ಪಂದ್ಯಾಟದ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಹಿತಾ ಶರ್ಮ ಬಿ.ಎಸ್ ಪ್ರಥಮ ಸ್ಥಾನ ಪಡೆದು ಮದುಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರು ರಾಜೇಶ್ ಶರ್ಮ ಮತ್ತಿ ಸೀಮಾ ಶರ್ಮ ದಂಪತಿಗಳ ಪುತ್ರಿ.

ಹೃದಯ ವೈಶಾಲ್ಯತೆ ಮೆರೆದ ’ಪಲ್ಲವಿ’

ಹೃದಯ ವೈಶಾಲ್ಯತೆ ಮೆರೆದ ’ಪಲ್ಲವಿ’

Monday, September 3rd, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ಕು. ಪಲ್ಲವಿ ಕೊಡಗು ಜಿಲ್ಲೆಯ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತನ್ನ ತಾತ, ಅಜ್ಜಿ, ಅತ್ತೆ, ಮಾವ ಹಿರಿಯರೆಲ್ಲ ನೀಡಿದ್ದ ಸುಮಾರು 1,102 ರೂ. ಹಣ (ಪಾಕೆಟ್ ಮನಿ)ವನ್ನು ಕೂಡಿಟ್ಟಿದ್ದ ಪಲ್ಲವಿ ಆ ಎಲ್ಲಾ ಹಣವನ್ನು ದೇಣಿಗೆಯಾಗಿ ನೀಡಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಮೂಲಕ ಕೊಡಗಿನ ಪ್ರಾಕೃತಿಕ ವಿಕೋಪಗಳ ಬಗ್ಗೆ ತಿಳಿದುಕೊಂಡಿದ್ದ ಪುಟಾಣಿಗೆ ಅವರ ಕಷ್ಟ, ನೋವುಗಳು ಮನ ಕಲುಕಿದ್ದು ತಾನು […]

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ -ಚಿತ್ರಕಲೆಯಲ್ಲಿ - ಪ್ರಥಮ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ -ಚಿತ್ರಕಲೆಯಲ್ಲಿ – ಪ್ರಥಮ

Thursday, August 30th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ -ಹಿರಿಯ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ - ’ವಿಜ್ಞಾನಿ’ ಶಂಕರ ಭಟ್

ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ – ’ವಿಜ್ಞಾನಿ’ ಶಂಕರ ಭಟ್

Monday, August 27th, 2018

ಭಾರತೀಯರ ವೈಜ್ಞಾನಿಕ ಪರಂಪರೆ ಪುರಾತನ ಹಾಗೂ ಶ್ರೇಷ್ಠವಾದುದು. ವಿಜ್ಞಾನಕ್ಷೇತ್ರದಲ್ಲಿ ಭಾರತೀಯರ ಗಣನೀಯ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಐ.ಆರ್.ಎಸ್ ಸರಣಿ ಉಪಗ್ರಹ – 1ಸಿ ಯಲ್ಲಿ ಪ್ರೋಜೆಕ್ಟ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಶ್ರೀಯುತ ಶಂಕರ ಭಟ್‌ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಟಲ್‌ಟಿಂಕರಿಂಗ್ ಪ್ರಯೋಗಾಲಯ ’ಸೃಜನ’ವನ್ನು ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಉದ್ಘಾಟಿಸಿ ’ಬಾಹ್ಯಾಕಾಶ ಒಂದು ವಿಸ್ಮಯ’ವಿದ್ಯಾರ್ಥಿ-ವಿಜ್ಞಾನ ಸಂವಾದ ನಡೆಸಿಕೊಟ್ಟರು. ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರು […]

ಪ್ರತಿಭಾ ಕಾರಂಜಿ - ಯಕ್ಷಗಾನ ವೈಯಕ್ತಿಕದಲ್ಲಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಪ್ರತಿಭಾ ಕಾರಂಜಿ – ಯಕ್ಷಗಾನ ವೈಯಕ್ತಿಕದಲ್ಲಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

Monday, August 27th, 2018

ಸರಕಾರಿ ಉನ್ನತೀಕರಿಸಿದ ಹಿರಿಯಪ್ರಾಥಮಿಕ ಶಾಲೆ, ಹಾರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರು ಜಿಲ್ಲಾಮಟ್ಟಕ್ಕೆ ಆಯ್ಜೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಧನುಷ್(3ನೇ ತರಗತಿ), ಹಿರಿಯ ವಿಭಾಗದಲ್ಲಿ ಪರೀಕ್ಷಿತ್ (7ನೇ ತರಗತಿ) ಮತ್ತು ಪ್ರೌಢ ವಿಭಾಗದಲ್ಲಿ ಕು.ಶ್ರೇಯಾ ಪ್ರಥಮ ಸ್ಥಾನ ಪಡೆದು ಸುರತ್ಕಲ್‌ನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಇವರೆಲ್ಲರೂ ನಾಟ್ಯಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ತರಬೇತಿ ಪಡೆಯುತ್ತಿದ್ದು, ಭಾಗವತಿಕೆಯಲ್ಲಿ ಶ್ರೀ […]

ಆಮಂತ್ರಣ : ‘ಸೃಜನ’ ಆಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಆಮಂತ್ರಣ : ‘ಸೃಜನ’ ಆಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Monday, August 20th, 2018
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ

Saturday, August 18th, 2018

ಇತ್ತೀಚೆಗೆ ನಿಧನರಾದ ರಾಷ್ಟ್ರ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಅಧ್ಯಕ್ಷರಾದ ಅಚ್ಯುತ್ ನಾಯಕ್ ಹಾಡಿನ ಮೂಲಕ ಶ್ರೀಯುತರಿಗೆ ನಮನ ಸಲ್ಲಿಸಿ, ಬಳಿಕ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಗಣಪತಿ ಭಟ್ ಅವರು ವಾಜಿಪೇಯಿಯವರ ಬಾಲ್ಯ, ಜೀವನ ಮತ್ತು ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ ವೃಂದ ಮತ್ತು […]

ತಾಯಿತಂದೆಯರನ್ನು ಗೌರವಿಸಿ, ತಾಯ್ನಾಡನ್ನು ಪ್ರೀತಿಸಿ : ರಾಧಾಕೃಷ್ಣ ರೈ

ತಾಯಿತಂದೆಯರನ್ನು ಗೌರವಿಸಿ, ತಾಯ್ನಾಡನ್ನು ಪ್ರೀತಿಸಿ : ರಾಧಾಕೃಷ್ಣ ರೈ

Thursday, August 16th, 2018

’ಮಕ್ಕಳು ಹೆತ್ತ ತಾಯ್ತತಂದೆಯರನ್ನು ಪ್ರೀತಿ ಗೌರವದಿಂದ ಕಂಡಾಗ ಮುಂದೆ ಅವರಿಗೆ ತಮ್ಮ ಸುತ್ತಲಿನ ಪರಿಸರ, ಸಮಾಜ, ದೇಶ ಎಲ್ಲವನ್ನೂ ಪ್ರೀತಿಸುವ ಗೌರವಿಸುವ, ಅಭಿಮಾನ ಬೆಳೆಸಿಕೊಳ್ಳುವ ಅಭ್ಯಾಸ ತಾನೇ ತಾನಾಗಿ ರೂಢಿಯಾಗುತ್ತದೆ. ಜೈ ಜವಾನ್ ಜೈ ಕಿಸಾನ್‌ನೊಂದಿಗೆ ಜೈ ವಿಜ್ಞಾನ್ ಎಂಬ ಘೋಷವಾಕ್ಯದಂತೆ ನಡೆದು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು’ ಎಂದು ಭಾರತೀಯ ಭೂಸೇನಾ ಮಾಜಿ ಸೈನಿಕರಾದ ರಾಧಾಕೃಷ್ಣ ರೈಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೆಕಾಲೆ ಶಿಕ್ಷಣ […]

ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

Thursday, August 9th, 2018

ದಿನಾಂಕ 11-8-2018 ರಿಂದ 16-8-2018 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ದಕ್ಷಿಣ ಕ್ಷೇತ್ರೀಯ ಮಟ್ಟದ ಕಬಡ್ಡಿ ಹಾಗೂ ಖೋ-ಖೋ ಸ್ಪರ್ಧೆಗಳಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡ, 17 ರ ವಯೋಮಾನದ ಬಾಲಕಿಯರ ಕಬಡ್ಡಿ, 17 ರ ವಯೋಮಾನದ ಬಾಲಕಿಯರ ಖೋ ಖೋ ಹಾಗೂ 17 ರ ವಯೋಮಾನದ ಬಾಲಕರ ಖೋ ಖೋ ತಂಡಗಳು ಆಯ್ಕೆಯಾಗಿರುತ್ತವೆ.

ಶಾಲಾ ಶಿಕ್ಷಕ -ರಕ್ಷಕ ಸಂಘಕ್ಕೆ ಆಯ್ಕೆ

ಶಾಲಾ ಶಿಕ್ಷಕ -ರಕ್ಷಕ ಸಂಘಕ್ಕೆ ಆಯ್ಕೆ

Tuesday, August 7th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ 2018-19 ನೇ ಸಾಲಿನ ಶಿಕ್ಷಕ -ರಕ್ಷಕ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ವರ್ಷದ ಅಧ್ಯಕ್ಷರಾಗಿ ಶ್ರೀ ಹರಿಕೃಷ್ಣ, ಉಪಾಧ್ಯಕ್ಷರಾಗಿ ಶ್ರೀಮತಿ ಮಂಜುಳಾ, ಕಾರ್ಯದರ್ಶಿಯಾಗಿ ಶ್ರೀ ಶಂಕರ ಭಟ್, ಉಪಕಾರ್ಯದರ್ಶಿಯಾಗಿ ಶ್ರೀ ಸತೀಶ್‌ರವರು ಆಯ್ಕೆಗೊಂಡರು. ಸಮಾರಂಭದಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಚುತ ನಾಯಕ್ ಮಾತನಾಡಿ ’ಪೋಷಕರು ಶಾಲೆಯ ಆಸ್ತಿ. ಪೋಷಕರ ಬಲದಿಂದಲೇ ಈ ಸಂಸ್ಥೆ ಇಷ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು. ಸಮಾರಂಭದ ವೇದಿಕೆಯಲ್ಲಿ […]

ಗುರುಪೂರ್ಣಿಮೆ

ಗುರುಪೂರ್ಣಿಮೆ

Saturday, July 28th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ ಇವರು ಗುರು- ಶಿಷ್ಯರ ನಡುವಿನ ಸಂಬಂಧವನ್ನು ಧೌಮ್ಯ ಮಹರ್ಷಿ ಮತ್ತು ಉಪಮನ್ಯುವಿನ ಕಥೆಯನ್ನು ಹೇಳುವ ಮೂಲಕ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಮಕ್ಕಳು ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರತತ್ಪದಂ ದರ್ಶಿತಂ ಏನ ತಸ್ಮೈಶ್ರೀ ಗುರವೇ ನಮಃ ಎಂಬ ಸುಭಾಷಿತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾದೇವಿ ಉಪಸ್ಥಿತರಿದ್ದರು. […]

Highslide for Wordpress Plugin