’ಮಕ್ಕಳು ಹೆತ್ತ ತಾಯ್ತತಂದೆಯರನ್ನು ಪ್ರೀತಿ ಗೌರವದಿಂದ ಕಂಡಾಗ ಮುಂದೆ ಅವರಿಗೆ ತಮ್ಮ ಸುತ್ತಲಿನ ಪರಿಸರ, ಸಮಾಜ, ದೇಶ ಎಲ್ಲವನ್ನೂ ಪ್ರೀತಿಸುವ ಗೌರವಿಸುವ, ಅಭಿಮಾನ ಬೆಳೆಸಿಕೊಳ್ಳುವ ಅಭ್ಯಾಸ ತಾನೇ ತಾನಾಗಿ ರೂಢಿಯಾಗುತ್ತದೆ. ಜೈ ಜವಾನ್ ಜೈ ಕಿಸಾನ್‌ನೊಂದಿಗೆ ಜೈ ವಿಜ್ಞಾನ್ ಎಂಬ ಘೋಷವಾಕ್ಯದಂತೆ ನಡೆದು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು’ ಎಂದು ಭಾರತೀಯ ಭೂಸೇನಾ ಮಾಜಿ ಸೈನಿಕರಾದ ರಾಧಾಕೃಷ್ಣ ರೈಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.









ಮೆಕಾಲೆ ಶಿಕ್ಷಣ ಪದ್ದತಿಯನ್ನು ಅನುಸರಿಸದೆ ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಗುರುಕುಲ ಪದ್ಧತಿಯ ಪೂರ್ವ ಪ್ರಾಥಮಿಕ ಶಾಲಾ ಪರಿಕಲ್ಪನೆಯ ಈ ಪ್ರಯತ್ನ ಅತ್ಯಂತ ಶ್ಲಾಘನೀಯ ಎಂದು ಪ್ರಗತಿಪರ ಕೃಷಿಕರಾದ ಶ್ರೀ ಅಶೋಕ ಭಟ್ರವರು ಪೂರ್ವಪ್ರಾಥಮಿಕ ತರಗತಿ ಕೊಠಡಿ ಶ್ರೀನಂದನದ ಉದ್ಫಾಟನೆಗೈದು ಶುಭಾಷಯದ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತನಾಯಕ್, ಸಂಚಾಲಕರಾದ ಶ್ರೀ ವಿನೋದ್ ಕುಮಾರ್ ರೈ ಗುತ್ತು, ಬೆಟ್ಟಂಪಾಡಿ, ಪದಾಧಿಕಾರಿಗಳು, ಶಾಲಾ ಮುಖ್ಯಗುರುಗಳು, ಶಿಕ್ಷಕ-ರಕ್ಷಕ ಸಂಘ ಮತ್ತು ’ಮಾತೃಭಾರತಿ’ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಂದೇ ಮಾತರಂ ಪ್ರಾರ್ಥನೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಸ್ವಾತಿ ಮಾತಾಜಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.