ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ – ’ವಿಜ್ಞಾನಿ’ ಶಂಕರ ಭಟ್

ಭಾರತೀಯರ ವೈಜ್ಞಾನಿಕ ಪರಂಪರೆ ಪುರಾತನ ಹಾಗೂ ಶ್ರೇಷ್ಠವಾದುದು. ವಿಜ್ಞಾನಕ್ಷೇತ್ರದಲ್ಲಿ ಭಾರತೀಯರ ಗಣನೀಯ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಐ.ಆರ್.ಎಸ್ ಸರಣಿ ಉಪಗ್ರಹ – 1ಸಿ ಯಲ್ಲಿ ಪ್ರೋಜೆಕ್ಟ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಶ್ರೀಯುತ ಶಂಕರ ಭಟ್‌ ಇವರು ನುಡಿದರು.

ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಟಲ್‌ಟಿಂಕರಿಂಗ್ ಪ್ರಯೋಗಾಲಯ ’ಸೃಜನ’ವನ್ನು ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಉದ್ಘಾಟಿಸಿ ’ಬಾಹ್ಯಾಕಾಶ ಒಂದು ವಿಸ್ಮಯ’ವಿದ್ಯಾರ್ಥಿ-ವಿಜ್ಞಾನ ಸಂವಾದ ನಡೆಸಿಕೊಟ್ಟರು.

Atal Tinkering lab (2)

Atal Tinkering lab (3)

Atal Tinkering lab (1)

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರು ’ಪ್ರತಿಯೊಂದು ಮಗುವೂ ವಿಜ್ಞಾನಿಯೇ ಜೈ ಜವಾನ್‌ ಜೈ ಕಿಸಾನ್ ಲಾಲ್ ಬಹದ್ದೂರ್ ಶಾಸ್ತ್ರಿಯವರ ಘೋಷವಾಕ್ಯವಾಗಿದ್ದರೆ, ಅದಕ್ಕೆ ’ಜೈ ವಿಜ್ಞಾನ್’ ಎಂದು ಸೇರಿಸಿದ ಅಜಾತಶತ್ರು, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಮತ್ತು ಪ್ರಯೋಗಗಳನ್ನು ಉಂಟುಮಾಡುವ ದೃಷ್ಟಿಯಿಂದ ಅಟಲ್‌ ಟಿಂಕರಿಂಗ್ ಪ್ರಯೋಗಾಲಯದ ಯೋಜನೆಯು ಜಾರಿಗೆ ಬಂದಿದೆ’ ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರಿಯುತ ಅಚ್ಯುತ ನಾಯಕ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ, ಶಾಲಾ ಸಂಚಾಲಕರಾದ ಶ್ರೀ ವಿನೋದ್‌ಕುಮಾರ್‌ ರೈಗುತ್ತು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಹಾಗೂ ಶಾಲಾ ಮುಖ್ಯಗುರುಗಳು ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ಮಾತೃ ಭಾರತಿಯ ಅಧ್ಯಕ್ಷರು, ವಿವಿಧ ಶಾಲೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದ, ಶಾಲಾ ಪೋಷಕವೃಂದ, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಪೌಷ್ಠಿಕ ಆಹಾರ, ಹೆಸರು ಕಾಳು, ಬೆಲ್ಲ ಪಾನಕವನ್ನು ನೀಡುವ ಮೂಲಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಲಾಯಿತು. ಶಾಲಾ ಮಕ್ಕಳ ತಂಡವು ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶಾಲಿನಿ ಮಾತಾಜಿ ವಂದಿಸಿದರು.

Highslide for Wordpress Plugin