ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಸುರತ್ಕಲಿನ ವಿದ್ಯಾಭೋದಿನಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯ ಪ್ರೌಢಶಾಲಾ ವಿಭಾಗದ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರೇಯಾ (9ನೇ ತರಗತಿ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಶ್ರೀ ಯೋಗಿಶ್ ಆಚಾರ್ಯ ಮತ್ತುಶ್ಯಾಮಲ ರವರ ಪುತ್ರಿಯಾಗಿದ್ದು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ಶಿಷ್ಯನಾಗಿದ್ದು ಶ್ರೀ ಚಂದ್ರಶೇಖರ ಸುಳ್ಯಪದವುರವರ ಸಂಯೋಜನೆಯಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ.
